ಸಂಪಾದಕೀಯ
ನಗರಗಳ ಮಿತಿಮೀರಿದ ಬೆಳವಣಿಗೆ ಮತ್ತು ಅದಕ್ಕಾಗಿ ಮಿತಿಮೀರಿದ ಮರಗಳನ್ನು ಕಡಿಯುವುದು, ಮನೆ-ಕಟ್ಟಡಗಳನ್ನು ಕಟ್ಟುವಾಗ ನೈಸರ್ಗಿಕ ಚರಂಡಿ-ನದಿಗಳನ್ನು ಮುಚ್ಚಿ ಅವುಗಳಲ್ಲಿ ಕಸ ಕಡ್ಡಿ, ಮಣ್ಣು ಇತ್ಯಾದಿ ತುಂಬುವುದು, ವಿವಿಧ ಕಾರಣಗಳಿಂದ ಭೂಗತ ಚರಂಡಿಗಳು ಮುಚ್ಚಿ ಹೋಗುವುದು, ಗಾಜುಗಳಿಂದ ಹೊಳೆಯುವ ಕಟ್ಟಡಗಳು, ಮಾನವನಿರ್ಮಿತ ಅನೇಕ ವಿಧಗಳ ಕಾರಣಗಳಿಂದ ಜಗತ್ತಿನಾದ್ಯಂತ ಕಲ್ಪನೆಗೂ ಸಿಗದ ತಾಪಮಾನದಲ್ಲಿನ ಹೆಚ್ಚಳ ಮುಂತಾದ ಕಾರಣಗಳಿಂದ ದೊಡ್ಡ ಪರಿಸರದ ಬದಲಾವಣೆ ನೋಡಲು ಸಿಗುತ್ತಿದೆ. ದೇಶದ ‘ಸಿಲಿಕಾನ್ ಸಿಟಿ’ ಎಂದು ಗೌರವಿಸಲಾಗುವ ಬೆಂಗಳೂರು ನಗರವು ಕೆಲವು ದಿನಗಳ ಹಿಂದೆ ಬಿದ್ದ ಮಳೆಯಲ್ಲಿ ಅಕ್ಷರಶಃ ಮುಳುಗಿತು. ಬಹುತೇಕ ಮನೆಗಳು, ಅಂಗಡಿಗಳು, ಕಟ್ಟಡಗಳು ನೀರಿನಲ್ಲಿ ಮುಳುಗಿದ್ದವು. ‘ವಿಪ್ರೋ’, ‘ಇನ್ಫೋಸಿಸ್’ ಇವುಗಳಂತಹ ಪ್ರಮುಖ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಕಳೆದ ೯೦ ವರ್ಷಗಳಲ್ಲಿ ಬೀಳದಷ್ಟು ಮಳೆ ಅಲ್ಲಿ ಬಿದ್ದಿತು.
ಬೆಂಗಳೂರಿನಲ್ಲಿ ಕೇವಲ ಶೇ. ೩ ರಷ್ಟು ಭೂಮಿಯ ಮೇಲೆ ಮರಗಳು !
ಬೆಂಗಳೂರು ನಗರವನ್ನು ಗಮನಿಸಿದರೆ ಇತ್ತೀಚೆಗಷ್ಟೇ ಬಿದ್ದ ಮಳೆಯಿಂದ ಬಂದ ನೆರೆಯಿಂದ ಈ ನಗರದ ಅಭಿವೃದ್ಧಿ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಗಮನಕ್ಕೆ ಬಂದಿದೆ. ಈ ನಗರವು ಒಂದು ಎತ್ತರದ ಪರ್ವತದ ಮೇಲೆ ಸ್ಥಿತವಾಗಿದ್ದು ಅಕ್ಕಪಕ್ಕದಲ್ಲಿ ಕಣಿವೆಗಳಿವೆ. ಎರಡು ನದಿಗಳ ಜಲಾನಯನ ಪ್ರದೇಶಗಳಿವೆ. ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದರೆ ಈ ನಗರದ ಮೇಲೆ ಯಾವ ಪರಿಣಾಮವಾಗಬಹುದು ?’, ಎಂಬ ಬಗ್ಗೆ ಯಾವುದೇ ವಿಚಾರ ಅಭಿವೃದ್ಧಿ ಯೋಜನೆಯಲ್ಲಿ ಆಗಿಲ್ಲ. ನಗರದ ಭೂಗತ ಚರಂಡಿಗಳ ಯೋಜನೆ ನಿರುಪಯೋಗಿ ಆಗಿದ್ದು ಅನೇಕ ಸ್ಥಳಗಳಲ್ಲಿ ಕಾನೂನುಬಾಹಿರ ಕಾಮಗಾರಿಯೂ ಆಗಿದೆ. ೧೯೭೩ ರಲ್ಲಿ ಇಲ್ಲಿ ಶೇ. ೬೮ ರಷ್ಟು ಗಿಡಮರಗಳು ಭೂಮಿಯ ಮೇಲಿದ್ದವು ಮತ್ತು ೨೦೨೦ ರಲ್ಲಿ ಅವುಗಳ ಪ್ರಮಾಣ ಕೇವಲ ಶೇ. ೩ ಕ್ಕೆ ಇಳಿದಿದೆ. ಇದರಿಂದ ‘ನಗರೀಕರಣದ ವಿಸ್ತರಣೆಯ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಯಿತು ?’ ಎಂಬ ವಿಚಾರವನ್ನು ನಾವು ಮಾಡಬಹುದು. ನಗರದಲ್ಲಿ ಎಲ್ಲೆಡೆ ಸಿಮೆಂಟ್‌ನ ಅರಣ್ಯಗಳನ್ನು ನಿರ್ಮಿಸಲಾಗಿದ್ದು ೨೦೨೦ ರಲ್ಲಿ ಶೇ. ೯೪ ರಷ್ಟು ಭಾಗದಲ್ಲಿ ಕಾಂಕ್ರೀಟ್ ಮನೆಗಳನ್ನು ಕಟ್ಟಲಾಗಿದೆ. ಈ ಹಿಂದೆ ನಗರದಲ್ಲಿ ೨೦೪ ಚರಂಡಿಗಳಿದ್ದವು. ಇವುಗಳಲ್ಲಿನ ೧೮೦ ಕ್ಕಿಂತ ಹೆಚ್ಚು ಚರಂಡಿಗಳು ಅತಿಕ್ರಮಣಗೊಂಡಿವೆ. ಈ ರೀತಿಯ ಬಹಳಷ್ಟು ಕಟ್ಟಡಗಳಾಗುತ್ತಿರುವಾಗ ಯಾವ ರೀತಿ ಕಾನೂನುಗಳ ಉಲ್ಲಂಘನೆಯಾಗಿರಬಹುದು ?’, ಎಂಬುದರ ವಿಚಾರವನ್ನೇ ನಾವು ಮಾಡಲು ಸಾಧ್ಯವಿಲ್ಲ ! ಪ್ರಾಥಮಿಕ ಅಂದಾಜಿಗನುಸಾರ ನಗರದ ಶೇ. ೭೫ ರಷ್ಟು ಭಾಗವು ನೀರಿನಡಿಯಲ್ಲಿ ಹೋಗಿದೆ ಮತ್ತು ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಟ್ರಾಕ್ಟರ್, ಬುಲ್ಡೋಜರ್‌ಗಳನ್ನು ಬಳಸಬೇಕಾಯಿತು. ನಗರದಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿರುವ ಮತ್ತು ಬರುವ ವಾಹನಗಳು, ಕಟ್ಟಡಗಳನ್ನು ವೈಭವೀಕರಿಸಲು ಗಾಜುಗಳ ಮತ್ತು ದೀಪಗಳ ಅತಿ ಬಳಕೆ, ಬಾಳಿಕೆಯ ದೃಷ್ಟಿಯಿಂದ ಪ್ಲಾಸ್ಟಿಕ್‌ನ ಮಿತಿಮೀರಿದ ಬಳಕೆ ಇವುಗಳೊಂದಿಗೆ ಇತರ ವಿಷಯಗಳೂ ನಗರದ ವಾತಾವರಣವನ್ನು ಹದಗೆಡಿಸಲು ಕಾರಣವಾಗಿವೆ.
ನಗರದ ಈ ಗಂಭೀರ ಸ್ಥಿತಿಯ ಬಗ್ಗೆ ‘ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಶನ್’ ಇದು ೨೦೧೭ ರಲ್ಲಿಯೇ ಸರಕಾರಕ್ಕೆ ಪತ್ರ ಬರೆದು ಚರಂಡಿಗಳ ದುಃಸ್ಥಿತಿ, ನೀರು ಹೊರ ಹೋಗುವ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಕಡೆಗೆ ಗಮನ ಸೆಳೆದಿತ್ತು; ಆದರೆ ಮುಂದೆ ಆ ಬಗ್ಗೆ ಯಾವುದೇ ಕೃತಿಯಾಗಲಿಲ್ಲ. ನಗರೀಕರಣವನ್ನು ಮಾಡುವಾಗ ನಿಯಮಾವಳಿಗಳ ಉಲ್ಲಂಘನೆಯಾಗಿರುವುದು ಆಡಳಿತಕ್ಕೂ ಗೊತ್ತಿದೆ; ಆದರೆ ಭ್ರಷ್ಟ ವ್ಯವಸ್ಥೆಯಿಂದಾಗಿ ಆಡಳಿತವು ಈ ಬಗ್ಗೆ ಧ್ವನಿ ಎತ್ತುವುದಿಲ್ಲ; ಏಕೆಂದರೆ ಇದರಲ್ಲಿನ ಹೆಚ್ಚಿನ ಅಧಿಕಾರಿಗಳ-ಸಿಬ್ಬಂದಿಗಳ ಕೈಗಳು ಭ್ರಷ್ಟಾಚಾರದಿಂದ ಕೊಳಕಾಗಿವೆ.
ಹಿಂದೂ ರಾಷ್ಟ್ರವೇ ಎಲ್ಲ ಸಮಸ್ಯೆಗಳಿಗೆ ಉತ್ತರ !
ವೈಜ್ಞಾನಿಕ ಪ್ರಗತಿಯಾಗುತ್ತಾ ಹೋದಂತೆ, ಸಮಾಜ ಮತ್ತು ರಾಜ ಧರ್ಮಪಾಲನೆಯಿಂದ ದೂರ ಸರಿದರು. ಇದರಿಂದ ಮನುಷ್ಯನ ಮೇಲೆ ಸಂಕಟಗಳು ಬರುವ ಪ್ರಮಾಣ ಹೆಚ್ಚಾಯಿತು. ಧರ್ಮಶಾಸ್ತ್ರಕ್ಕನುಸಾರ ವಾತಾವರಣದಲ್ಲಿ ಹೆಚ್ಚುತ್ತಿರುವ ರಜ-ತಮವು ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿರುತ್ತದೆ. ಹೆಚ್ಚುತ್ತಿರುವ ವೈಜ್ಞಾನಿಕ ಪ್ರಗತಿಯು ಸಂಪೂರ್ಣ ಮಾನವ ಜನಾಂಗದ ಮೂಲಕ್ಕೇ ಆಘಾತವನ್ನುಂಟು ಮಾಡಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಹೇಳಿಕೆಗನುಸಾರ, ‘ಸಾವಿರಾರು ವರ್ಷಗಳ ಕಾಲ ಮಾಲಿನ್ಯಮುಕ್ತವಾಗಿದ್ದ ಭೂಮಿಯನ್ನು ವಿಜ್ಞಾನವು ಕೇವಲ ೧೦೦ ವರ್ಷಗಳಲ್ಲಿ ಮಾಲಿನ್ಯಯುಕ್ತ ಮಾಡಿ ಪ್ರಾಣಿಮಾತ್ರರ ವಿನಾಶವನ್ನು ಹತ್ತಿರ ತಂದಿದೆ.’ ವಿಜ್ಞಾನದ ಪ್ರಗತಿಯನ್ನು ಕೊಂಡಾಡುವ ವಿಜ್ಞಾನಿಗಳು ಇದಕ್ಕೆ ಉತ್ತರ ನೀಡುವುದು ಆವಶ್ಯಕವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅತಿ ವೇಗದಿಂದ ಪ್ರಗತಿಯಾಗುತ್ತಿದ್ದರೂ ಮನುಷ್ಯನಿಗೆ ನೈಸರ್ಗಿಕ ಆಪತ್ತುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಏಕೆ ? ಎಂಬ ಉತ್ತರವು ವಿಜ್ಞಾನದ ಕಡೆಗೆ ಇದೆಯೇ ? ಆದುದರಿಂದ ಜಾಗತಿಕ ತಾಪಮಾನದ ಹೆಚ್ಚಳದೊಂದಿಗೆ ಇರುವ ಇತರ ಸಮಸ್ಯೆಗಳ ನಿವಾರಣೆಗಾಗಿ ಹಿಂದೂ ರಾಷ್ಟ್ರವು ಕೇವಲ ಭಾರತಕಷ್ಟೇ ಸೀಮಿತವಾಗಿರದೇ, ಮನುಕುಲದ ಕಲ್ಯಾಣ ಮತ್ತು ರಕ್ಷಣೆಗಾಗಿ ಅದು ಇಡೀ ಜಗತ್ತಿಗೆ ಬರುವುದು ಅತ್ಯಾವಶ್ಯಕವಾಗಿದೆ !