ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿನ ಸೂಕ್ಷ್ಮಯುದ್ಧದ ಮಹತ್ವವನ್ನು ಗಮನಕ್ಕೆ ತಂದು ಕೊಡುವ ಮಹಾನ ಅವತಾರಿ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಸೂಕ್ಷ್ಮಜಗತ್ತಿನ ವಿಷಯದ ಅನುಭವವನ್ನು ನಾವು ಈ ಲೇಖನ ಮಾಲಿಕೆಯಿಂದ ನೋಡುತ್ತಿದ್ದೇವೆ. ೨೫/೫೧ ರ ಸಂಚಿಕೆಯಲ್ಲಿ ಈ ಲೇಖನ ಮಾಲಿಕೆಯ ಕೆಲವು ಭಾಗಗಳನ್ನು ನೋಡಿದೆವು. ಈ ವಾರದ ಅದರ ಮುಂದಿನ ಭಾಗವನ್ನು ನೋಡೋಣ.

(ಭಾಗ ೧೩)

೧. ಧರ್ಮಯುದ್ಧದಲ್ಲಿ ದೇವತೆಗಳ ಸಹಾಯದ ಆವಶ್ಯಕತೆ ಇರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ದೇವರ ಬಗ್ಗೆ ಭಾವವನ್ನು ಹೆಚ್ಚಿಸಲು ಹೇಳುವುದು.

‘ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಸಪ್ತಲೋಕಗಳ ಪರೀಕ್ಷಣೆ ಮಾಡುವಾಗ ಅನೇಕ ವಿಷಯಗಳನ್ನು ಕಲಿಸಿದರು. ಅವರು, ”ನಮಗೆ ಈ ಧರ್ಮಯುದ್ಧದಲ್ಲಿ ಅನೇಕ ದೇವ-ದೇವತೆಗಳ ಸಹಾಯ ಬೇಕಾಗುವುದು. ಅವರೊಂದಿಗೆ ನಾವು ಆದಷ್ಟು ಹೆಚ್ಚೆಚ್ಚು ಆತ್ಮೀಯತೆಯನ್ನು ಬೆಳೆಸಬೇಕು. ‘ಒಂದೇ ಕರೆಗೆ ದೇವತೆಗಳು ನಮ್ಮ ಸಹಾಯಕ್ಕೆ ಬರುವಂತಹ’, ಭಾವವನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಿರಿ’’ ಎಂದು ಹೇಳುತ್ತಿದ್ದರು. ಸಾಧಾರಣ ೨೦೦೧ ರಿಂದ ಗುರುದೇವರು ನಮ್ಮೆಲ್ಲ ಸಾಧಕರ ಮನಸ್ಸಿನಲ್ಲಿ ದೇವರ ಬಗ್ಗೆ ಭಾವದ ಮಹತ್ವವನ್ನು ಬಿಂಬಿಸಲು ಪ್ರಾರಂಭಿಸಿದರು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೨. ಆಧ್ಯಾತ್ಮಿಕ ಭಾವದ ಮಹತ್ವ ತಿಳಿದಿದ್ದರಿಂದ ಸಾಧಕರಿಗೆ ‘ಕೆಟ್ಟ ಶಕ್ತಿಗಳ ತೊಂದರೆಗಳೊಂದಿಗೆ ಹೇಗೆ ಹೋರಾಡಬೇಕು ?’ ಎನ್ನುವುದು ತಿಳಿಯಲು ಪ್ರಾರಂಭವಾಯಿತು. 

ಆ ಸಮಯದಲ್ಲಿ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿತ್ತು. ಅವರಿಗೆ ಕಲಿಸುವಾಗ ಗುರುದೇವರು, ‘ದೇವರ ಬಗೆಗಿನ ಭಾವವೇ ನಮ್ಮ ನಿಜವಾದ ಶಸ್ತ್ರವಾಗಿದೆ. ಆ ಭಾವವನ್ನು ಹೆಚ್ಚಿಸಿರಿ’ ಎಂದು ಹೇಳುತ್ತಿದ್ದರು. ಗುರುದೇವರು ಆಧ್ಯಾತ್ಮಿಕ ಭಾವದ ಮಹತ್ವವನ್ನು ಸತತವಾಗಿ ಹೇಳಿದ್ದರಿಂದ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಗಳೊಂದಿಗೆ ಹೇಗೆ ಹೋರಾಡಬೇಕು ?’, ಎನ್ನುವುದು ತಿಳಿಯತೊಡಗಿತು. ಇದರಿಂದ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿರುವಾಗಲೂ ಸಾಧಕರಿಗೆ ‘ತಮ್ಮ ಒಂದು ರೂಪ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿದೆ’, ಎನ್ನುವ ಅನುಭೂತಿ ಬರತೊಡಗಿತು.

೩. ಗುರುವಿನ ಆಧಾರ ಸಿಗಲು ಪ್ರಾರಂಭವಾಗಿದ್ದರಿಂದ ತೊಂದರೆಯಿರುವ ಸಾಧಕರಲ್ಲಿ ಸಕಾರತ್ಮಕತೆ ಬರಲು ಪ್ರಾರಂಭವಾಗುವುದು ಮತ್ತು ಅವರಿಗೆ ಜಾಗರೂಕತೆಯಿಂದ ಸ್ವತಃ ತಮ್ಮ ದೇಹದ ಪರೀಕ್ಷಣೆ ಮಾಡಲು ಬರುವುದು.

ತೊಂದರೆಯಿರುವ ಸಾಧಕರಿಗೆ ಈ ರೀತಿ ಗುರುಗಳ ಆಧಾರ ಸಿಗಲು ಪ್ರಾರಂಭವಾಗಿದ್ದರಿಂದ, ಅವರಲ್ಲಿ ಸಕಾರಾತ್ಮಕತೆ ಬರಲು ಪ್ರಾರಂಭವಾಯಿತು. ಸಾಧಕರು ತಮಗೆ ತೊಂದರೆ ನೀಡುವ ಕೆಟ್ಟ ಶಕ್ತಿಗಳೊಂದಿಗೆ ನಡೆಯುತ್ತಿರುವ ಹೋರಾಟವನ್ನು ಜಾಗರೂಕತೆಯಿಂದ ನೋಡಲು ಪ್ರಾರಂಭಿಸಿದರು. ಇದರಿಂದ, ಅವರಿಗೆ ತಮ್ಮ ದೇಹದ ಪರೀಕ್ಷಣೆಯನ್ನು ಮಾಡಲು ಬರತೊಡಗಿತು. ಈ ರೀತಿ ಸೂಕ್ಷ್ಮವನ್ನು ಅರಿಯಬಲ್ಲ ಸಾಧಕರು ಮಾಡಿದ ಪರೀಕ್ಷಣೆಗಳು ಮತ್ತು ತೊಂದರೆಯಿರುವ ಸಾಧಕರು ತಮ್ಮನ್ನು ತಾವೇ ಪರೀಕ್ಷಿಸಿ ಕೊಂಡ ಸೂಕ್ಷ್ಮ ಜಗತ್ತಿನ ವಿಷಯಗಳ ಅನೇಕ ಮಗ್ಗಲುಗಳು ನಮಗೆ ತಿಳಿಯಲು ಪ್ರಾರಂಭವಾಯಿತು.

೪. ತೊಂದರೆಯಿರುವ ಸಾಧಕರ ಜೀವನವು ಬಹಳ ಕಠಿಣವಾಗಿರುತ್ತದೆ ಎಂಬುದು ಗಮನಕ್ಕೆ ಬಂದಿದ್ದರಿಂದ, ಅವರ ಬಗೆಗಿನ ಪ್ರೇಮಭಾವ ಹೆಚ್ಚಾಗುವುದು.

ಇದರಿಂದಲೇ ‘ತೊಂದರೆಯಿರುವ ಸಾಧಕರ ಜೀವನ ಹೇಗಿರುತ್ತದೆ ಮತ್ತು ಈ ತೊಂದರೆಯಲ್ಲಿ ಸಾಧನೆ ಮಾಡುವುದು ಎಷ್ಟು ಕಠಿಣವಾಗಿರುತ್ತದೆ ?’ ಎಂಬುದನ್ನು ನಮಗೆ ಅನುಭವಿಸಲು ಬರತೊಡಗಿತು. ಇದರಿಂದ ನಮಗೆ ತೊಂದರೆಯಿರುವ ಸಾಧಕರ ವಿಷಯದಲ್ಲಿ ವಿಶೇಷ ಆತ್ಮೀಯತೆ ಅನಿಸತೊಡಗಿತು. ‘ನಮಗೆ ಇಂತಹ ಸಾಧಕರನ್ನು ತೊಂದರೆಯಿಂದ ಹೊರಗೆ ತರಬೇಕಾಗಿದೆ’, ಎನ್ನುವ ತಳಮಳ ನಮ್ಮಲ್ಲಿ ಉತ್ಪನ್ನವಾಯಿತು. ತೊಂದರೆಯಿರುವ ಸಾಧಕರ ವಿಷಯದಲ್ಲಿ ನಮ್ಮ ಮನಸ್ಸಿನಲ್ಲಿ ಪ್ರೇಮಭಾವ ಹೆಚ್ಚಾಯಿತು.

೫. ‘ಯಾವುದೇ ಸೇವೆಯನ್ನು ಮಾಡುವಾಗ ನಮ್ಮಲ್ಲಿ ಈಶ್ವರನ ಗುಣಗಳು ಬರುವುದು’ ಎಂದರೆ ಸಾಧನೆಯಾಗಿದೆ ಎಂದು ಪರಾತ್ಪರ ಗುರು ಡಾಕ್ಟರರು ಹೇಳುವುದು.

ಪರಾತ್ಪರ ಗುರು ಡಾಕ್ಟರರು, ‘ಈಶ್ವರನು ಸಾಧಕರ ತೊಂದರೆಗಳನ್ನು ಯಾವ ರೀತಿಯಿಂದಲಾದರೂ ಕಡಿಮೆ ಮಾಡಬಲ್ಲನು; ಆದರೆ ಈ ಸೇವೆಯನ್ನು ಮಾಡುವಾಗ ನಮ್ಮಲ್ಲಿ ಯಾವ ಈಶ್ವರಿ ಗುಣಗಳು ಬಂದಿವೆ ?’ ಎನ್ನುವುದಕ್ಕೆ ಹೆಚ್ಚು ಮಹತ್ವವಿದೆ ಮತ್ತು ಇದಕ್ಕೇ ‘ಸಾಧನೆ’ ಎಂದು ಹೇಳುತ್ತಾರೆ. ದೇವರಿಗೆ ಇದೇ ಅಪೇಕ್ಷಿತವಿದೆ. ‘ಯಾವುದೇ ಸೇವೆ ಮೇಲು ಅಥವಾ ಕೀಳು ಎಂದಿರುವುದಿಲ್ಲ. ಆ ಸೇವೆಯಿಂದ ಸಾಧನೆಯಾಗುವುದು ಮಹತ್ವದ್ದಾಗಿದೆ ಎಂದು ಹೇಳುತ್ತಿದ್ದರು

೬. ‘ಯಾವುದಾದರೊಂದು ಮಗು ಆಕಸ್ಮಿಕವಾಗಿ ವಿಚಿತ್ರ ರೀತಿಯಲ್ಲಿ ವರ್ತಿಸುವುದರ ಹಿಂದೆ ಅದಕ್ಕಿರುವ ಕೆಟ್ಟ ಶಕ್ತಿಗಳ ತೊಂದರೆ’ಯೇ ಮೂಲ ಕಾರಣವಾಗಿರುತ್ತದೆ’, ಎನ್ನುವುದು  ಸಂಶೋಧನೆಯಿಂದ ತಿಳಿದು ಬಂದಿತು

‘ತೊಂದರೆಯಿರುವ ಸಾಧಕರು ಚಿಕ್ಕಂದಿನಿಂದಲೂ ವಿವಿಧ ರೀತಿಯ ತೊಂದರೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ’, ಎನ್ನುವುದು ಕಾಲಾಂತರದಿಂದ ನಮಗೆ ಅರ್ಥವಾಗಲು ಪ್ರಾರಂಭವಾಯಿತು. ‘ಯಾವುದಾದರು ಚಿಕ್ಕ ಮಗು ಅಕಸ್ಮಿಕವಾಗಿ ಏಕೆ ಆಕ್ರಮಣಕಾರಿ ಆಗುತ್ತದೆ ? ಅದೇಕೆ ವಿಚಿತ್ರವಾಗಿ ವರ್ತಿಸುತ್ತದೆ ? ಸಮಾಜದಲ್ಲಿರುವ ಸಾಮಾನ್ಯ ಮನುಷ್ಯನೊಂದಿಗೆ ಹೋಲಿಕೆ ಮಾಡಿದಾಗ, ಅವನ ನಡುವಳಿಕೆ ಏಕೆ ವಿಚಿತ್ರವೆನಿಸುತ್ತದೆ ?’, ಎನ್ನುವುದನ್ನು ನಾವು ಅಧ್ಯಯನ ಮಾಡಿದೆವು. ಆಗ ನಮಗೆ ‘ಅವನಿಗೆ ಇರುವ ಕೆಟ್ಟ ಶಕ್ತಿಗಳ ತೊಂದರೆಯೇ ಅದರ ಮೂಲ ಕಾರಣವಾಗಿರುತ್ತದೆ’ ಎಂಬುದು ತಿಳಿದು ಬಂದಿತು.

೭. ‘ಜೀವನದಲ್ಲಿ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತವೆ’ ಇದರ ಬಗ್ಗೆ ಜನಜಾಗೃತಿ ಮಾಡಬೇಕು ಎಂದು ಪರಾತ್ಪರ ಗುರು ಡಾಕ್ಟರರು ಹೇಳುವುದು

ಇದರ ವಿವರಣೆಯನ್ನು ಹೇಳುವಾಗ ಪರಾತ್ಪರ ಗುರು ಡಾಕ್ಟರರು ಮುಂದಿನಂತೆ ಹೇಳಿದರು, ‘ಪ್ರಸ್ತುತ ಕಲಿಯುಗದಲ್ಲಿ ದುಷ್ಟ ಶಕ್ತಿಗಳ ಕಾಟ ಅಧಿಕವಾಗಿರುವುದರಿಂದ ಮನುಷ್ಯನ ಜೀವನದಲ್ಲಿ ಉದ್ಭವಿಸುವ ಸರಿಸುಮಾರು ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತವೆ. ಮಕ್ಕಳು ವಿಚಿತ್ರವಾಗಿ ವರ್ತಿಸುವುದನ್ನು ನೋಡಿ ಅನೇಕ ಜನರು ತಕ್ಷಣವೇ ಆ ಮಗುವನ್ನು ಮನೋವೈದ್ಯರ ಬಳಿಗೆ ಕರೆದೊಯ್ಯುತ್ತಾರೆ ಮತ್ತು ಅವನ ಔಷಧೋಪಚಾರಕ್ಕೆ ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಾರೆ. ಕೆಲವು ಸಮಸ್ಯೆಗಳು ಮಾನಸಿಕ ಸ್ವರೂಪದಲ್ಲಿಯೂ ಇರುತ್ತವೆ; ಆದರೆ ‘ಈ ಸಮಸ್ಯೆ ಯಾವ ಸ್ವರೂಪದ್ದಾಗಿದೆ ?’, ಎನ್ನುವುದನ್ನು ಸಂತರೇ ಹೇಳಬಲ್ಲರು. ಈ ಎಲ್ಲ ವಿಷಯಗಳ ಬಗ್ಗೆ ಸಮಾಜಕ್ಕೆ ಅರಿವಿಲ್ಲ. ಈ ವಿμÀಯದಲ್ಲಿ ನಾವು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ’, ಎಂದರು. ಪರಾತ್ಪರ ಗುರು ಡಾಕ್ಟರರ ಪ್ರತಿಯೊಂದು ಕೃತಿ ಮತ್ತು ವಿಚಾರದಿಂದ ‘ಅವರಿಗೆ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆನ್ನುವ ಸೆಳೆತ ಎಷ್ಟಿದೆ’ ಎನ್ನುವುದು ನಮ್ಮ ಗಮನಕ್ಕೆ ಬರುತ್ತಿತ್ತು. ನಿಜವಾದ ಗುರುಗಳು ಹೀಗೆಯೇ ಇರುತ್ತಾರೆ. ಅಲ್ಲವೇ ?

೮. ಸಪ್ತಪಾತಾಳದ ವಿರುದ್ಧ ಸೂಕ್ಷ್ಮ ಯುದ್ಧವನ್ನು ಮಾಡುವ ಪರಾತ್ಪರ ಗುರು ಡಾ.ಆಠವಲೆ !

೮ ಅ. ಪರಾತ್ಪರ ಗುರು ಡಾಕ್ಟರರು ‘ಸೂಕ್ಷ್ಮ ಜಗತ್ತಿನಲ್ಲಿನ ದುಷ್ಟುಶಕ್ತಿಗಳೊಂದಿಗೆ ಹೇಗೆ ಮಾತನಾಡಬೇಕು ?’ ಮುಂತಾದ ಅಂಶಗಳನ್ನು ಕಲಿಸುವುದು : ಗುರುದೇವರು ನಮಗೆ ‘ಸೂಕ್ಷ್ಮ ಜಗತ್ತಿನ ಕೆಟ್ಟ ಶಕ್ತಿಗಳೊಂದಿಗೆ ಹೇಗೆ ಮಾತನಾಡಬೇಕು ?’ ‘ಅವು ನಮ್ಮನ್ನು ಮೋಸಗೊಳಿಸುತ್ತಿಲ್ಲವಲ್ಲ ಎನ್ನುವುದನ್ನು ಹೇಗೆ ಗುರುತಿಸಬೇಕು?’ ಎನ್ನುವುದನ್ನೂ ಕಲಿಸಿದರು. ಇದರಿಂದ ಮಾಯಾವಿ ಕೆಟ್ಟ ಶಕ್ತಿಗಳ ಸ್ವರೂಪ ಬಹಿರಂಗವಾಗಲು ಪ್ರಾರಂಭವಾಯಿತು. ಬಹಳಷ್ಟು ಸಲ ಮಾಯಾವಿ ಕೆಟ್ಟ ಶಕ್ತಿಗಳು ದೇವತೆಗಳ ರೂಪವನ್ನು ಧರಿಸಿ ಸಾಧಕರಿಗೆ ಒಳಗಿನಿಂದ ಮಾರ್ಗದರ್ಶನ ಮಾಡುತ್ತಿರುತ್ತವೆ ಮತ್ತು ಅವರ ದಾರಿ ತಪ್ಪಿಸುತ್ತಿರುತ್ತವೆ. ಆಗ ನಮಗೆ ಪರಾತ್ಪರ ಗುರು ಡಾಕ್ಟರರು ಮುಂದಿನಂತೆ ಹೇಳಿದರು, ”ನಾವು ದೇವರಲ್ಲಿಯೇ ಈ ಕೆಟ್ಟ ಶಕ್ತಿಯ ನಿಜವಾದ ರೂಪ ನಮ್ಮೆದುರಿಗೆ ಬರಲಿ ಎಂದು ಪ್ರಾರ್ಥಿಸಬೇಕು’ ಹೀಗೆ ಪ್ರಾರ್ಥಿಸಿದಾಗ ಕೆಲವೊಮ್ಮೆ ಸಾಧಕರಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳು ಮತ್ತಷ್ಟು ಸಿಟ್ಟಿನಿಂದ ಸಾಧಕರಿಗೆ ಮತ್ತಷ್ಟು ಅಧಿಕ ತೊಂದರೆಗಳನ್ನು ಕೊಡುತ್ತಿದ್ದವು.

೮ ಆ. ‘ಸೂಕ್ಷ್ಮದಲ್ಲಿ ನಡೆಯುತ್ತಿರುವ ಯುದ್ಧವೇ ಹಿಂದೂ ರಾಷ್ಟ್ರ ಸ್ಥಾಪನೆಯ ನಿಜವಾದ ಯುದ್ಧವಾಗಿದೆ’ ಎಂದು ಗುರುದೇವರು ಹೇಳುವುದು : ಕೆಟ್ಟ ಶಕ್ತಿಗಳ ಮಾತಿನಿಂದ ನಮಗೆ ಮುಂದಿನ ವಿಷಯ ತಿಳಿಯತೊಡಗಿತು, ‘ನಾವು ಸಂಪೂರ್ಣ ಜಗತ್ತಿನಲ್ಲಿ ಹಿಂದೂ ರಾಷ್ಟ್ರ ಬರಬೇಕು ಎಂದು ಹೇಳುತ್ತೇವೆ; ಆದರೆ ಹಿಂದೂ ರಾಷ್ಟ್ರ ನಿರ್ಮಾಣವನ್ನು ವಿರೋಧಿಸುವ ಶಕ್ತಿಗಳು ಕೆಟ್ಟ ಶಕ್ತಿಗಳ ರೂಪದಲ್ಲಿ ಪಾತಾಳದಲ್ಲಿ ಅಡಗಿವೆ. ಅವುಗಳ ಶಕ್ತಿಯನ್ನು ಮೊದಲು ಕಡಿಮೆ ಮಾಡಬೇಕು.’ ಪ್ರಾಮುಖ್ಯತೆಯಿಂದ ಪರಾತ್ಪರ ಗುರು ಡಾಕ್ಟರರು ನಮಗೆ ಇದನ್ನೇ ಕಲಿಸುವಾಗ, ”ಸೂಕ್ಷ್ಮದಲ್ಲಾಗುವ ಯುದ್ಧವೇ ನಿಜವಾದ ಯುದ್ಧವಾಗಿದೆ’’ ಎಂದು ಹೇಳುತ್ತಿದ್ದರು.

೮ ಇ. ‘ದೇವರ ಕೃಪೆಯಿಂದ ಏಳನೆಯ ಪಾತಾಳದ ಮೇಲೆ ಜಯವನ್ನು ಪಡೆದ ಬಳಿಕ ಹಿಂದೂ ರಾಷ್ಟ್ರವು ಪ್ರತ್ಯಕ್ಷ ಸ್ಥಾಪನೆ ಆಗಲಿದೆ’ ಎಂದು ಗುರುದೇವರು ಹೇಳುವುದು : ಕೆಟ್ಟ ಶಕ್ತಿಗಳ  ಮಾತಿನಿಂದ ನಮಗೆ ಮುಂದಿನ ವಿಷಯ ತಿಳಿಯತೊಡಗಿತು, ‘ನಾವು  ಸಂಪೂರ್ಣ ಜಗತ್ತಿನಲ್ಲಿ ಹಿಂದೂ ರಾಷ್ಟ್ರ ಬರಬೇಕು ಎಂದು ಹೇಳುತ್ತೇವೆ; ಆದರೆ ಹಿಂದೂ ರಾಷ್ಟ್ರ ನಿರ್ಮಾಣವನ್ನು ವಿರೋಧಿಸುವ ಶಕ್ತಿಗಳು ಕೆಟ್ಟ ಶಕ್ತಿಗಳ ರೂಪದಲ್ಲಿ ಪಾತಾಳದಲ್ಲಿಯೇ ಅಡಗಿವೆ. ಅವುಗಳ ಶಕ್ತಿಯನ್ನು ಮೊದಲು ಕಡಿಮೆ ಮಾಡಬೇಕು.’ ಪ್ರಾಮುಖ್ಯತೆಯಿಂದ ಪರಾತ್ಪರ ಗುರು ಡಾಕ್ಟರರು ನಮಗೆ ಇದನ್ನೇ ಕಲಿಸುತ್ತಿದ್ದರು. ಅವರು, ”ನಿಜವಾದ ಯುದ್ಧವೆಂದರೆ ಸೂಕ್ಷ್ಮದಲ್ಲಿ ನಡೆಯುತ್ತಿರುವ ಸೂಕ್ಷ್ಮ ಯುದ್ಧವೇ ಆಗಿದೆ’’ ಎಂದು ಹೇಳುತ್ತಿದ್ದರು.

೮ ಇ. ‘ದೇವರ ಕೃಪೆಯಿಂದ  ಏಳನೆಯ ಪಾತಾಳದ ಮೇಲೆ ಜಯವನ್ನು ಪಡೆದ ಬಳಿಕ ಹಿಂದೂ ರಾಷ್ಟ್ರವು ಪ್ರತ್ಯಕ್ಷ ಸ್ಥಾಪನೆಯಾಗಲಿದೆ’ ಎಂದು ಗುರುದೇವರು ಹೇಳುವುದು : ಪಾತಾಳದಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ದೇವತೆಗಳ ಕೃಪೆಯಿಂದ ನಷ್ಟಗೊಳಿಸಿದ ಬಳಿಕ ಭೂಮಿಯು ತನ್ನಿಂತಾನೇ ‘ಸುಜಲಾಮ್‌ ಸುಫಲಾಮ್’ ಆಗುವುದು; ಆದರೆ ಅದಕ್ಕಾಗಿ ನಾವು ಸಾಧನೆಯನ್ನು ಹೆಚ್ಚಿಸಬೇಕು, ಆಗಲೇ ಈ ಕೆಟ್ಟ ಶಕ್ತಿಗಳನ್ನು ಸೋಲಿಸಲು ಸುಲಭವಾಗುವುದು; ಆದ್ದರಿಂದ ಸುಮಾರು ೨೦೦೦ ನೇ ವರ್ಷದಿಂದಲೇ ಸನಾತನ ಸಂಸ್ಥೆಯು ಸಪ್ತಪಾತಾಳದ ವಿರುದ್ಧದಲ್ಲಿ ಸೂಕ್ಷ್ಮ ಯುದ್ಧವನ್ನು ಪ್ರಾರಂಭಿಸಿದೆ. ಪರಾತ್ಪರ ಗುರು ಡಾಕ್ಟರರು ಮುಂದಿನಂತೆ ಹೇಳಿದ್ದಾರೆ, ”ಹಿಂದಿನ ಸುಮಾರು ೨೦-೨೧ ವರ್ಷಗಳಿಂದ ಹೋರಾಡುತ್ತ, ನಾವೀಗ ೭ ನೇ ಅಂದರೆ ಕೊನೆಯ ಪಾತಾಳದ ವರೆಗೆ ತಲುಪಿದ್ದೇವೆ. ದೇವತೆಗಳ ಕೃಪೆಯಿಂದ ಈ ಪಾತಾಳದ ಮೇಲೆ ಜಯವನ್ನು ಪಡೆದ ಕೂಡಲೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು. ಇದು ನಮಗೆ ಪ್ರತ್ಯಕ್ಷ ನೋಡಲು ಸಿಗುತ್ತದೆ, ಆ ದಿನ ದೂರವಿಲ್ಲ’’.

ಪರಾತ್ಪರ ಗುರು ಡಾಕ್ಟರರು ಕಲಿಸದೇ ಇದ್ದರೆ, ನಮಗೆ ‘ಸೂಕ್ಷ್ಮದಲ್ಲಿನ ಯುದ್ಧವೆಂದರೆ ಹೇಗಿರುತ್ತದೆ ?’, ಎಂಬುದು ಯಾವತ್ತೂ ತಿಳಿಯುತ್ತಿರಲಿಲ್ಲ. ‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಸೂಕ್ಷ್ಮ ಯುದ್ಧದ ಮಹತ್ವ ಎಷ್ಟು ಇದೆ ?’, ಎನ್ನುವುದನ್ನು ಗಮನಕ್ಕೆ ತಂದುಕೊಡುವ ಪರಾತ್ಪರ ಗುರು ಡಾಕ್ಟರರಂತಹ ಮಹಾನ ಅವತಾರಿ ಗುರುಗಳ ಚರಣಗಳಿಗೆ ನಮ್ಮೆಲ್ಲ ಸಾಧಕರ ಕೋಟಿಶಃ ನಮಸ್ಕಾರಗಳು.

‘ಗುರುಸೇವೆಯೆಂದು ನಾವು ಬರೆಯುತ್ತಿರುವ ಈ ಸೂಕ್ಷ್ಮ ಇತಿಹಾಸವು ಮುಂದೆ ಅನೇಕ ವರ್ಷಗಳ ವರೆಗೆ ಸೂಕ್ಷ್ಮ ಜಗತ್ತಿನಲ್ಲಿ ಆಳವಾಗಿ ಮತ್ತು ಬಹಳ ವಿಶಾಲವಾಗಿ ಗುರುದೇವರು ಮಾಡಿರುವ ಕಾರ್ಯದ ಸ್ತುತಿಯನ್ನು ಮಾಡಲಾಗುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.’ ‘ಜಯ ಗುರುದೇವ’

(ಮುಂದುವರಿಯುವುದು)

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ ತಮಿಳುನಾಡು. (೯.೨.೨೦೨೨)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.