Hindu Workers Killed : ಮಣಿಪುರದಲ್ಲಿ ಬಿಹಾರದ ಇಬ್ಬರು ಹಿಂದೂ ಕಾರ್ಮಿಕರ ಗುಂಡು ಹಾರಿಸಿ ಹತ್ಯೆ

ಇಂಪಾಲ (ಮಣಿಪುರ್) – ರಾಜ್ಯದಲ್ಲಿನ ಕಾಕಚಿಂಗದಲ್ಲಿ ಡಿಸೆಂಬರ್ ೧೪ ರಂದು ಸಂಜೆ ಕುಕೀ ಕ್ರೈಸ್ತ ಭಯೋತ್ಪಾದಕರು ಇಬ್ಬರು ಹಿಂದೂ ಕಾರ್ಮಿಕರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಸುನಾಲಾಲ್ ಕುಮಾರ (ವಯಸ್ಸು ೧೮ ವರ್ಷ) ಮತ್ತು ದಶರಥ ಕುಮಾರ (ವಯಸ್ಸು ೧೭ ವರ್ಷ) ಎಂದು ಈ ಕಾರ್ಮಿಕರ ಹೆಸರುಗಳಾಗಿವೆ. ಅವರು ಬಿಹಾರದ ಗೋಪಾಲಗಂಜದ ನಿವಾಸಿಗಳಾಗಿದ್ದರು. ಇನ್ನೊಂದು ಕಡೆಗೆ ತೌಬಲ್ ಇಲ್ಲಿ ಪೊಲೀಸರ ಜೊತೆಗೆ ನಡೆದಿರುವ ಭಯೋತ್ಪಾದಕ ಗುಂಪಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನು ಸಾವನ್ನಪ್ಪಿದ್ದಾನೆ ಹಾಗೂ ೬ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರಿಂದ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಪೊಲೀಸ ಶಸ್ತ್ರಾಲಯದಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿತ್ತು.

ಸಂಪಾದಕೀಯ ನಿಲುವು

ಮಣಿಪುರದಲ್ಲಿ ಕ್ರೈಸ್ತ ಭಯೋತ್ಪಾದಕರಿಂದ ಹಿಂದುಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲುತ್ತಿದ್ದಾರೆ. ಅದರ ಬಗ್ಗೆ ಭಾರತದಲ್ಲಿನ ಒಂದೇ ಒಂದು ರಾಜಕೀಯ ಪಕ್ಷ ಕೂಡ ಮಾತನಾಡುತ್ತಿಲ್ಲ, ಇದು ಖೇದಕರ !