ಬೀಚಿಂಗ್ (ಚೀನಾ) – ಲಡಾಖನಲ್ಲಿ ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಚೀನಾದ ಸೈನ್ಯಗಳ ನಡುವೆ ಬಿಗುವಿನ ವಾತಾವರಣವಿತ್ತು. ಚೀನಾ ಪ್ರತ್ಯಕ್ಷ ಗಡಿ ರೇಖೆಯ ಮೇಲೆ ತನ್ನ ಸೈನ್ಯ ನೇಮಕಗೊಳಿಸಿರುವುದರಿಂದ ಭಾರತ ಕೂಡ ಅದಕ್ಕೆ ಪ್ರತ್ಯುತ್ತರವೆಂದು ತನ್ನ ಸೈನ್ಯ ನೇಮಕಗೊಳಿಸಿತ್ತು. ಈ ಸಮಯದಲ್ಲಿ ಎರಡು ಸೈನ್ಯದ ಹಿರಿಯ ಅಧಿಕಾರಿ ಮಟ್ಟದ ಸಭೆಗಳು ನಡೆಯುತ್ತಿದ್ದವು. ೧೬ ನೇ ಸಭೆಯ ನಂತರ ಚೀನಾ ಪ್ರತ್ಯಕ್ಷ ನಿಯಂತ್ರಣ ರೇಖೆಯ ಮೇಲಿನ ತನ್ನ ಸೈನ್ಯ ಹಿಂಪಡೆಯಲು ಸಮ್ಮತಿಸಿದ ನಂತರ ಅಲ್ಲಿನ ಪೆಟ್ರೋಲ್ ಪಾಯಿಂಟ್ ೧೫ (ಗೋಗರಾ – ಹಾಟಸ್ಪ್ರಿಂಗ್ಸ್) ಇಲ್ಲಿಂದ ತನ್ನ ಸೈನ್ಯವನ್ನು ಹಿಂಬಡೆಯಲು ಪ್ರಾರಂಭಿಸಿದೆ. ಭಾರತವೂ ಕೂಡ ತನ್ನ ಸೈನ್ಯ ಹಿಂಪಡೆಯಲು ಪ್ರಾರಂಭಿಸಿದೆ. ಚೀನಾವು, ‘ಸೈನ್ಯ ಹಿಂಪಡೆಯುವುದು ಭಾರತ ಮತ್ತು ಚೀನಾ ಗಡಿಯ ಮೇಲೆ ಶಾಂತಿಗಾಗಿ ಅನುಕೂಲವಾಗಿದೆ’ ಎಂದು ಹೇಳಿದೆ.
Indian, Chinese troops begin disengagement at Gogra-Hot Springs in eastern Ladakh. @ShivAroor with details#IndiaFirst #India #China @gauravcsawant pic.twitter.com/iUZCnxSLXn
— IndiaToday (@IndiaToday) September 8, 2022
ಶಾಂಘಾಯ ಶಿಖರ ಸಮ್ಮೇಳನ ಮುಂದಿನ ತಿಂಗಳಿನಲ್ಲಿ ಉಜಬೇಕಿಸ್ತಾನದಲ್ಲಿ ನಡೆಯುವುದು. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ರಾಷ್ಟ್ರ ಅಧ್ಯಕ್ಷ ಶೀ ಜಿನಪಿಂಗ ಸಹಭಾಗಿ ಆಗುವವರು. ಅಲ್ಲಿ ಇವರಿಬ್ಬರು ಭೇಟಿಯಾಗುವ ಸಾಧ್ಯತೆ ಇದೆ. ಈ ಮೊದಲೇ ಸೈನ್ಯ ಹಿಂಬಡೆಯಲಾಗುತ್ತಿದೆ.
ಸಂಪಾದಕೀಯ ನಿಲುವುಚೀನಾ ಭಾರತದ ಗಡಿಯಿಂದ ಸೈನ್ಯ ಹಿಂಪಡೆಯುತ್ತಿದ್ದರೂ ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದೆ ಇರುವುದರಿಂದ ಭಾರತ ಜಾಗರೂಕವಾಗಿರುವುದು ಅವಶ್ಯಕವಾಗಿದೆ ! |