ಇಸ್ಲಾಂ ವಿರುದ್ದ ಮಾಹಿತಿ ತೋರಿಸಿದರೆ ಕ್ರಮ !

ಮುಸ್ಲಿಂ ದೇಶಗಳಿಂದ ನೆಟಫ್ಲಿಕ್ಸ ಆಪ್‌ಗೆ ಎಚ್ಚರಿಕೆ !

ರಿಯಾಧ (ಸೌದಿ ಅರೇಬಿಯಾ) – ‘ನೆಟ್ ಫ್ಲಿಕ್ಸ್’ ಈ ಆಪ್ ಮೇಲೆ ಇಸ್ಲಾಂ ವಿರುದ್ಧ ವಿರುವ ಮಾಹಿತಿ ಪ್ರಸಾರ ಮಾಡುವುದನ್ನು ಸ್ಥಗಿತಗೊಳಿಸಬೇಕು ಇಲ್ಲವಾದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಎಂದು ಎಚ್ಚರಿಕೆಯನ್ನು ನೀಡಿ, ‘ಗಲ್ಫ ಕೋಆಪರೇಶನ’ ದೇಶಗಳಲ್ಲಿ ಸಹಭಾಗಿಯಾಗಿರುವ ದೇಶಗಳು ಅಧಿಕೃತ ಮನವಿಯನ್ನು ಹೊರಡಿಸಿದೆ. ಈ ದೇಶಗಳಲ್ಲಿ ಸೌದಿ ಅರೇಬಿಯಾ, ಸಂಯುಕ್ತ ಅರಬ ಆಮಿರಾತ, ಬಹರೀನ, ಕುವೈತ, ಒಮಾನ ಮತ್ತು ಕತಾರ ಇವುಗಳ ಸಮಾವೇಶವಿದೆ. ಈ ಪ್ರಕರಣದಲ್ಲಿ ನೆಟಫ್ಲಿಕ್ಸ ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

೧. ೨೦೨೨ ರಲ್ಲಿ ‘ಡಿಝನಿ’ ಮತ್ತು ‘ಹಾಟ್ ಸ್ಟಾರ’ ಇವರ ‘ಲೈಟ ಇಯರ’ ಧಾರಾವಾಹಿ ಪ್ರಸಾರವನ್ನು ನಿರ್ಬಂಧಿಸಲಾಗಿತ್ತು. ಇದರಲ್ಲಿ ಇಬ್ಬರು ಸಮಲೈಂಗಿಕರು ಚುಂಬಿಸುತ್ತಿರುವುದನ್ನು ತೋರಿಸಲಾಗಿತ್ತು. ಮುಸ್ಲಿಂ ದೇಶಗಳಲ್ಲಿ ಸಮಲೈಂಗಿಕ ಸಂಬಂಧವು ಅಪರಾಧವಾಗಿದೆ.

೨. ೨೦೧೯ ರಲ್ಲಿ ‘ನೆಟ್ ಫ್ಲಿಕ್ಸ’ ಮೇಲಿನ ಒಂದು ಮಾಲಿಕೆಯಲ್ಲಿ ಸೌದಿ ಅರೇಬಿಯಾ ಸರಕಾರವನ್ನು ಟೀಕಿಸಿದ ಬಳಿಕ ಈ ಮಾಲಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ಸಂಪಾದಕೀಯ ನಿಲುವು

‘ಹಿಂದೂ ಧರ್ಮ ಮತ್ತು ದೇವತೆಗಳ ವಿರುದ್ಧ ಮಾಹಿತಿ ತೋರಿಸಿದರೆ ಕ್ರಮ’, ಎಂದು ಭಾರತ ಸರಕಾರ ಯಾವಾಗ ಹೇಳುವುದು ?, ಎನ್ನುವ ಪ್ರಶ್ನೆ ಎಲ್ಲ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ !