ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಸಂವಾದ !
ಹುಬ್ಬಳ್ಳಿಯಲ್ಲಿ ಹಿಂದೂಗಳ ಭೂಮಿ ಇರುವಾಗ ಅಲ್ಲಿ ಹಿಂದೂಗಳು ಗಣೇಶೋತ್ಸವ ಆಚರಿಸಲು ಮುಸಲ್ಮಾನರಿಂದ ತೀವ್ರ ವಿರೋಧವಿದೆ. ಬೆಂಗಳೂರಿನಲ್ಲೂ ಇದೇ ರೀತಿ ನಡೆಯುತ್ತಿದೆ. ಹುಬ್ಬಳ್ಳಿಯ ಮೈದಾನದಲ್ಲಿ ರಾಷ್ಟ್ರ ಧ್ವಜವನ್ನು ಏರಿಸಲು ಮುಸಲ್ಮಾನರೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲೂ ಇಲ್ಲಿ ರಾಷ್ಟ್ರಧ್ವಜ ಏರಿಸುವ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಸಾವನ್ನಪ್ಪಿದ್ದರು. ಹಿಂದೂ ಮಠವು ಮುಸಲ್ಮಾನರಿಗೆ ವರ್ಷಕ್ಕೆ ಎರಡು ಬಾರಿ ಮಾತ್ರ ಪ್ರಾರ್ಥನೆ ಮಾಡಲು ಅನುಮತಿ ನೀಡಿರುವಾಗ ಹುಬ್ಬಳ್ಳಿಯ ಸ್ಥಳವನ್ನು ಕಬಳಿಸಲು ಇದೊಂದು ‘ಲ್ಯಾಂಡ್ ಜಿಹಾದ್’ ಆಗಿದೆ. ಹಿಂದೂಗಳ ಸ್ಥಳದಲ್ಲಿ ಹಿಂದೂಗಳ ಉತ್ಸವಗಳಿಗೆ ವಿರೋಧಿಸುವವರು ‘ಗಂಗಾ-ಜಮುನಿ ತಹಜೀಬ್’ (ಸಂಸ್ಕೃತಿ) ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಿಂದೂಗಳು ತಮ್ಮ ಧರ್ಮದ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ’, ಎಂದು ‘ಶ್ರೀರಾಮ ಸೇನೆ’ಯ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ಶ್ರೀ. ಗಂಗಾಧರ ಕುಲಕರ್ಣಿ ಇವರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ಗಣೇಶೋತ್ಸವ : ಮುಸಲ್ಮಾನ ಸಮಾಜದ ಅನುಮತಿ ಏಕೆ ?’ ಎಂಬ ವಿಷಯದ ಕುರಿತು ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.
‘ಭಾರತ ವಾಯ್ಸ್’ನ ಸಂಸ್ಥಾಪಕಿ ಗಾಯತ್ರಿ ಎನ್. ಇವರು ಮಾತನಾಡುತ್ತಾ ಮುಸಲ್ಮಾನರ ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಸರಕಾರಿ ಮತ್ತು ಸಾರ್ವಜನಿಕ ಸ್ಥಳಗಳನ್ನು ಅಡ್ಡಗಟ್ಟಿ ಆಡಳಿತಕ್ಕೆ ಸಂಚಾರವನ್ನು ನಿರ್ಬಂಧಿಸಲು ಅನಿವಾರ್ಯಗೊಳಿಸಲಾಗುತ್ತದೆ, ಹೀಗಿರುವಾಗ ಕೊಯಮತ್ತೂರಿನಲ್ಲಿ ಗಣೇಶೋತ್ಸವ ಆಚರಿಸಲು ಮುಸಲ್ಮಾನರ ಅನುಮತಿ ಏಕೆ ಪಡೆಯಬೇಕು ? ಇದು ಭಾರತೀಯ ಪ್ರಜಾಪ್ರಭುತ್ವ ಮತ್ತು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ. ಹೀಗೆಯೇ ಮುಂದುವರಿದರೆ ಭಾರತ ಶೀಘ್ರದಲ್ಲೇ ‘ದಾರ್-ಉಲ್-ಇಸ್ಲಾಂ’ ಆಗಲಿದೆ. ಭಾರತವು ‘ಸೆಕ್ಯುಲರ್’ ದೇಶವಾಗಿರುವಾಗ, ಹಿಂದೂಗಳ ಉತ್ಸವಗಳನ್ನು ಆಚರಿಸಲು ಮುಸಲ್ಮಾನರ ಅನುಮತಿ ಏಕೆ ಬೇಕು ? ಮುಸಲ್ಮಾನರು ಮತ್ತು ಕ್ರೈಸ್ತರು ತಮ್ಮ ಉತ್ಸವಗಳಿಗೆ ಎಂದಾದರೂ ಹಿಂದೂಗಳಿಂದ ಅನುಮತಿ ಪಡೆಯುತ್ತಾರೆಯೇ ? ಎಂದು ಖಂಡತುಂಡವಾಗಿ ಪ್ರಶ್ನಿಸಿದರು.
ಈ ವೇಳೆ ಕರ್ನಾಟಕದ ವಕೀಲೆ ಶುಭಾ ನಾಯ್ಕ್ ಇವರು ಮಾತನಾಡುತ್ತಾ, ಒಂದು ಸ್ಥಳದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಿದ್ದಾರೆಂದು ಹಿಂದೂಗಳಿಗೆ ಗಣೇಶೋತ್ಸವ ಆಚರಿಸಲು ಅವಕಾಶ ಸಿಗುವುದಿಲ್ಲ. ಒಟ್ಟಿನಲ್ಲಿ ದೇಶದಲ್ಲಿ ಹಿಂದೂಗಳ ಸ್ಥಿತಿ ಹದಗೆಟ್ಟಿದೆ. ಇದೇ ರೀತಿ ಮುಂದುವರಿದರೆ ನಾಳೆ ಆ ಸ್ಥಳಕ್ಕೆ ಪ್ರವೇಶಿಸಲು ಮುಸಲ್ಮಾನರ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ಶ್ರೀರಾಮನವಮಿ, ಹಿಂದೂಗಳ ಹೊಸ ವರ್ಷಾಚರಣೆ, ನವರಾತ್ರಿ ಮುಂತಾದ ಹಬ್ಬ-ಉತ್ಸವಗಳಂದು ಮತಾಂಧರಿಂದ ದೇಶಾದ್ಯಂತ ಕಲ್ಲು ತೂರಾಟ, ಬೆಂಕಿ ಹಚ್ಚಲಾಯಿತು. ಇದರಲ್ಲಿ ಹಿಂದೂಗಳ ಹತ್ಯೆಯೂ ಆಯಿತು. ಇದು ಹೀಗೆಯೇ ಮುಂದುವರಿದರೆ ಕಾಶ್ಮೀರದಲ್ಲಿ ನಡೆದದ್ದೇ ದೇಶದೆಲ್ಲೆಡೆ ನಡೆಯುತ್ತದೆ. ವರ್ಷಕ್ಕೆ ಎರಡು ಬಾರಿ ನಮಾಜುಪಠಣ ಮಾಡಲಾಗುತ್ತದೆಯೆಂದು ಹುಬ್ಬಳ್ಳಿಯ ಮೈದಾನವನ್ನು ಹಿಂದೂಗಳಿಗೆ ಗಣೇಶೋತ್ಸವವನ್ನು ಆಚರಿಸಲು ನೀಡಲಾಗುತ್ತಿಲ್ಲ. ಇದರ ಮೇಲೆ ಮುಸಲ್ಮಾನರ ಮತ್ತು ವಕ್ಫ್ ಬೋರ್ಡ್ ತಮ್ಮ ಹಕ್ಕನ್ನು ಸಾಧಿಸುತ್ತದೆ. ನಾಳೆ ರಸ್ತೆಯಲ್ಲಿ ನಮಾಜುಪಠಣ ಮಾಡುತ್ತಾರೆಂದು ಆ ರಸ್ತೆಯೂ ವಕ್ಫ್ ಆಸ್ತಿ ಎಂದು ಮುಸಲ್ಮಾನರು ಹೇಳಿಕೊಳ್ಳಬಹುದು. 2012 ರಲ್ಲಿ ಕಾಂಗ್ರೆಸ್‌ನ ಮನಮೋಹನ ಸಿಂಗ ಸರಕಾರವು ವಕ್ಫ್ ಕಾಯಿದೆಯಲ್ಲಿ ನೀಡಿದ್ದ ಪೈಶಾಚಿಕ ಅಧಿಕಾರದಿಂದಾಗಿ ವಕ್ಫ್ ಮಂಡಳಿಯು ದೇಶಾದ್ಯಂತ 6.5 ಲಕ್ಷ ಎಕರೆಗೂ ಹೆಚ್ಚು ಭೂಮಿಯ ಒಡೆತನ ಹೊಂದಿದೆ. ಈ ಅಕ್ರಮ ಕಾನೂನಿನಿಂದ ದೇಶವೇ ಇವರ ಹಿಡಿತಕ್ಕೆ ಹೋಗುವ ಅಪಾಯವಿದೆ. ಆದ್ದರಿಂದ ಕೇಂದ್ರ ಸರಕಾರವು ಈ ಕಾನೂನನ್ನು ರದ್ದುಪಡಿಸಬೇಕು ಎಂದು ಹೇಳಿದರು.