ನ್ಯಾಯವ್ಯವಸ್ಥೆಯ ಏಳ್ಗೆಯಾಗಬೇಕು !

ಭಾರತದ ೪೯ ನೇ ಮುಖ್ಯನ್ಯಾಯಾಧೀಶರೆಂದು ಉದಯ ಉಮೇಶ ಲಳಿತ ಇವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ವಕೀಲರ ಹಂತದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿರುವ ಹಾಗೂ ಅನಂತರ ಮುಖ್ಯ ನ್ಯಾಯಾಧೀಶರಾದ ಅವರು ಎರಡನೆಯ ವ್ಯಕ್ತಿಯಾಗಿದ್ದಾರೆ. ಲಳಿತ ಇವರ ಮೊದಲು ದಿವಂಗತ ನ್ಯಾಯಾಧೀಶ ಎಸ್.ಎಮ್. ಸಿಕ್ರಿ ಇವರು ಬಾರ್‌ದಿಂದ `ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ’ರೆಂದು ನೇಮಕವಾಗಿದ್ದರು ಹಾಗೂ ಅವರು ಮುಂದೆ ಮುಖ್ಯನ್ಯಾಯಾಧೀಶರಾದರು.

ಆಗಸ್ಟ್ ೨೦೧೭ ರಲ್ಲಿ ಮುಸಲ್ಮಾನ ಮಹಿಳೆಯರಿಗೆ ಅನ್ಯಾಯ ಮಾಡುವ ತ್ರಿವಳಿ ತಲಾಕ್ ಅನಧಿಕೃತವಾಗಿದೆ ಎಂದು ನಿರ್ಣಯ ನೀಡುವ ವಿಭಾಗೀಯ ಪೀಠದಲ್ಲಿ ನ್ಯಾಯಾಧೀಶ ಲಳಿತ ಇವರು ಕೂಡ ಇದ್ದರು. ನ್ಯಾಯಾಧೀಶ ಉದಯ ಲಳಿತ ಇವರು ಕೇರಳ ಉಚ್ಚ ನ್ಯಾಯಾಲಯದ ನಿರ್ಣಯವನ್ನು ತಿರುಗಿಸಿ ತ್ರಾವಣಕೋರದ ವರ್ಮಾ ರಾಜಮನೆತನದವರಿಗೆ ಶ್ರೀ ಪದ್ಮನಾಭಸ್ವಾಮಿ ಮಂದಿರದ ವ್ಯವಸ್ಥಾಪನೆಯ ಅಧಿಕಾರವನ್ನು ನೀಡಿದ್ದರು. ನ್ಯಾಯಾಧೀಶ ಪುಷ್ಪಾ ಗನೇಡಿವಾಲಾ ಇವರು ನೀಡಿರುವ `ಲೈಂಗಿಕ ಹಿಂಸಾಚಾಚಾರದಲ್ಲಿ `ಸ್ಕಿನ್ ಟು ಸ್ಕಿನ್’ ಸ್ಪರ್ಶ ಅನಿವಾರ್ಯವಾಗಿದೆ’, ಎಂಬ ವಿವಾದಾತ್ಮಕ ನಿರ್ಣಯವನ್ನು ನ್ಯಾಯಾಧೀಶ ಉದಯ ಲಳಿತ ಇವರು ರದ್ದುಪಡಿಸಿದ್ದರು. ಇಷ್ಟು ಮಾತ್ರವಲ್ಲ, ಭಾರತೀಯ ಸಭ್ಯತೆ ಹಾಗೂ ಸಂಸ್ಕೃತಿಯ ಅತ್ಯಂತ ವಿಪರೀತವಾಗಿರುವ ಈ ನಿರ್ಣಯವನ್ನು ನೀಡಿದ ಪುಷ್ಪಾ ಗನೇಡಿವಾಲಾ ಇವರನ್ನು ಮುಂಬಯಿ ಉಚ್ಚ ನ್ಯಾಯಾಲಯದ ನಿಯಮಿತ ನ್ಯಾಯಾಧೀಶರನ್ನಾಗಿ ನೇಮಕ ಮಾಡುವ ಶಿಫಾರಸನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ನ್ಯಾಯಾಧೀಶರಲ್ಲಿ ನ್ಯಾಯಾಧೀಶ ಉದಯ ಲಳಿತ ಇವರು ಕೂಡ ಇದ್ದರು. ೨೦೧೪ ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗೆ ನೇಮಕ ಆಗುವ ಮೊದಲು ನ್ಯಾಯಾಧೀಶ ಲಳಿತ ಇವರು ಸೊಹರಾಬುದ್ದೀನ ಶೇಖ್ ಪ್ರಕರಣದಲ್ಲಿ ಕೇಂದ್ರೀಯ ಗೃಹಸಚಿವ ಅಮಿತ ಶಾಹ ಇವರ ಪ್ರತಿನಿಧಿತ್ವವನ್ನೂ ಮಾಡಿದ್ದಾರೆ. ಈ ರೀತಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿನ ತೀರ್ಪಿನಲ್ಲಿ ಉದಯ ಲಳಿತ ಇವರ ಒಂದಲ್ಲ ಒಂದು ರೀತಿಯಲ್ಲಿ ಸಹಭಾಗವಿತ್ತು. ಅನೇಕ ಕ್ಲಿಷ್ಟ ವಿಷಯಗಳಲ್ಲಿನ ತತ್ತ್ವನಿಷ್ಠ ನಿರ್ಣಯಗಳನ್ನು ಅವರು ಅತ್ಯಂತ ಸಹಜವಾಗಿ ನೀಡಿದ್ದಾರೆ. ಆದ್ದರಿಂದ ಇಂದು ನ್ಯಾಯಕ್ಷೇತ್ರದಲ್ಲಿ ಅವರ ಹೆಸರನ್ನು ಗೌರವಿಸಲಾಗುತ್ತದೆ. ಇಂತಹ ವ್ಯಕ್ತಿ ಮುಖ್ಯ ನ್ಯಾಯಾಧೀಶರ ಹುದ್ದೆಗೆ ನೇಮಕವಾಗುವುದು ನಿಜವಾಗಿಯೂ ಸಂತೋಷದ ವಿಷಯವಾಗಿದೆ. ಇನ್ನು ಮುಂದೆಯೂ ಅವರಿಂದ ಹೀಗೆಯೆ ಯೋಗ್ಯವಾದ ಕಾರ್ಯಗಳು ನಡೆಯಬಹುದೆಂಬ ಅಪೇಕ್ಷೆಯಿದೆ. ಮುಖ್ಯ ನ್ಯಾಯಾಧೀಶ ಉದಯ ಲಳಿತ ಇವರ ತಂದೆ ಉಮೇಶ ಲಳಿತ ಇವರು ನಿವೃತ್ತ ನ್ಯಾಯಾಧೀಶರಾಗಿದ್ದರು. ಇಂದಿರಾ ಗಾಂಧಿ ಇವರು ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಿದಾಗ ಉಮೇಶ ಲಳಿತ ಇವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಹೆಚ್ಚುವರಿ ನ್ಯಾಯಾಧೀಶರೆಂದು ಕಾರ್ಯನಿರತರಾಗಿದ್ದರು. ಆಗ ತುರ್ತುಪರಿಸ್ಥಿತಿಯ ಕಾಲದಲ್ಲಿ ಅನೇಕರ  ಮೇಲೆ ಅನಾವಶ್ಯಕ ಅಪರಾಧವನ್ನು ದಾಖಲಿಸಿದ ನಿರಪರಾಧಿಗಳಿಗೆ ಜಾಮೀನು ನೀಡಿ ಸೆರೆಮನೆಯಿಂದ ಹೊರಗೆ ತರುವ ಕಾರ್ಯವನ್ನು ಉಮೇಶ ಲಳಿತ ಇವರು ಧೈರ್ಯದಿಂದ ಮಾಡಿದ್ದರು. ಇದರ ದ್ವೇಷವನ್ನಿಟ್ಟುಕೊಂಡು ಇಂದಿರಾ ಗಾಂಧಿ ಯವರು ಅವರ ಸ್ಥಾಯಿ (ನಿಯಮಿತ) ನ್ಯಾಯಾಧೀಶರ ಹುದ್ದೆಗೆ ನೇಮಕವಾಗದಂತೆ ಮಾಡಿದರು. ರಾಷ್ಟçಹಿತಕ್ಕಾಗಿ ಕಾರ್ಯವನ್ನು ಮಾಡಿದ ನ್ಯಾಯಾಧೀಶರಿಗೆ ಈ ರೀತಿಯಲ್ಲಿ ಅನ್ಯಾಯವೇ ಆಗಿದೆ. `ಮುಖ್ಯ ನ್ಯಾಯಾಧೀಶ ಉದಯ ಲಳಿತ ಇವರ ನೇಮಕದಿಂದ ರಾಷ್ಟ್ರಹಿತಕ್ಕಾಗಿ ಕಾರ್ಯ ಮಾಡುವ ಕರ್ತವ್ಯನಿಷ್ಠ ಮನೆತನಕ್ಕೆ ಅವಕಾಶವನ್ನು ನೀಡಲಾಗುತ್ತಿದೆ’, ಎಂದು ಹೇಳಬೇಕಾಗುತ್ತದೆ.

ಬಹಳಷ್ಟು ಬದಲಾವಣೆಗಳ ನಿರೀಕ್ಷೆ !

ಇಂದು ಮುಖ್ಯನ್ಯಾಯಾಧೀಶರೆಂದು ಉದಯ ಲಳಿತ ಇವರ ಕೈಗೆ ಭಾರತೀಯ ನ್ಯಾಯವ್ಯವಸ್ಥೆಯ ಹೊಣೆಗಾರಿಕೆ ಬರುತ್ತಿದೆ, ಇದರಿಂದ ಅವರ ಮುಂದೆ ಬಹಳಷ್ಟು ಸವಾಲುಗಳಿವೆ. ಭಾರತದ ವಿವಿಧ ನ್ಯಾಯಾಲಯಗಳಲ್ಲಿ ೪ ಕೋಟಿ ೭೦ ಲಕ್ಷಗಳಿಗಿಂತಲೂ ಹೆಚ್ಚು ಖಟ್ಲೆಗಳು ನೆನೆಗುದಿಯಲ್ಲಿವೆ. ಖಟ್ಲೆಗಳ ತೀರ್ಪು ಹೊರಬರಲು ತಾರೀಕಿನ ಮೇಲೆ ತಾರೀಕು ಬರುವುದೇ ಅದರ ಹಿಂದಿನ ದೊಡ್ಡ ಕಾರಣವಾಗಿದೆ. ಕೌಟುಂಬಿಕ ಅಸ್ತಿಗಳ ವಿಭಜನೆಯಂತಹ ಅತ್ಯಂತ ವೈಯಕ್ತಿಕ ಸ್ತರದ ಖಟ್ಲೆಗಳೂ ಪೀಳಿಗೆಯಿಂದ ಪೀಳಿಗೆಗೆ ನಡೆಯುತ್ತಿರುವುದನ್ನು ಭಾರತೀಯರು ನೋಡಿದ್ದಾರೆ. ಇಂದು ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಸಮಯಮಿತಿಯ ಬಂಧನವಿದೆ. ಶಿಕ್ಷಣದಂತಹ ಪ್ರಾಥಮಿಕ ವಿಷಯವನ್ನೂ ನಿರ್ಧಿಷ್ಠ ವರ್ಷಗಳಲ್ಲಿಯೇ ಪೂರ್ಣಗೊಳಿಸಬೇಕಾಗುತ್ತದೆ. ಯಾರು ಕೂಡ ವರ್ಷಗಟ್ಟಲೆ ಒಂದೇ ತರಗತಿಯ ಪರೀಕ್ಷೆಯನ್ನು ಕೊಡಲು ಸಾಧ್ಯವಿಲ್ಲ. ಔದ್ಯೋಗಿಕ ಕ್ಷೇತ್ರದಲ್ಲಿಯೂ ತನ್ನಿಚ್ಛೆಯಂತೆ ಒಂದೇ ಉತ್ಪಾದನೆಗಾಗಿ ಖರ್ಚು ಮಾಡಲು ಸಾಧ್ಯವಿಲ್ಲ. ನಿರ್ದಿಷ್ಠ ಸಮಯಮಿತಿಯಲ್ಲಿ ಉತ್ಪಾದನೆಯನ್ನು ಪಡೆದುಕೊಂಡರೆ ಮಾತ್ರ ಉತ್ಪಾದಕರಿಗೆ ಲಾಭವಾಗುತ್ತದೆ. ಸರಕಾರಿ ಖಾತೆಯಲ್ಲಿನ ಕೆಲಸ ಹಾಗೂ ನ್ಯಾಯಾಲಯದ ಖಟ್ಲೆಗಳ ಕ್ಷೇತ್ರಗಳು ಹೇಗಿವೆ ಯೆಂದರೆ, ಅವುಗಳು ಯಾವಾಗ ಆರಂಭವಾಗಬೇಕು ಹಾಗೂ ಯಾವಾಗ ಮುಗಿಯಬೇಕು, ಎಂಬುದಕ್ಕೆ ಯಾವುದೇ ನಿಯಮ ಗಳಿಲ್ಲ. ರಾಷ್ಟಿçÃಯ ಹೆದ್ದಾರಿ ಅಗಲೀಕರಣದ ಕೆಲಸಗಳು ಹೇಗೆ ವರ್ಷಗಟ್ಟಲೆ ನಡೆಯುತ್ತಿರುತ್ತವೆ. ಗುಡಿಸಲುಗಳ ಪುನ ರ್ವಿಕಾಸ ಹೇಗೆ ರಾಜಕಾರಣಿಗಳ ಪೀಳಿಗೆಗಳನ್ನೇ ಪೋಷಣೆ ಮಾಡುವ ಒಂದು ಉತ್ಪನ್ನದ ಹಕ್ಕಿನ ಮಾರ್ಗವಾಗುತ್ತದೋ, ಅದೇ ರೀತಿ ನ್ಯಾಯಾಲಯಗಳ ಖಟ್ಲೆಗಳ ಚಿತ್ರಣವೂ ನಿರ್ಮಾಣವಾಗಿದೆ. ಯಾವುದೇ ಒಂದು ಪ್ರಕರಣಕ್ಕೆ ಎಷ್ಟು ಸಮಯದಲ್ಲಿ ತೀರ್ಪು ನೀಡಬೇಕು ? ಎಷ್ಟು ತಾರೀಕುಗಳಲ್ಲಿ ತರ್ಕವನ್ನು ಪೂರ್ಣಗೊಳಿಸಬೇಕು ? ಎಂಬುದಕ್ಕೆ ಏನಾದರೂ ನಿರ್ಬಂಧ ಹೇರುವುದು; ನ್ಯಾಯವ್ಯವಸ್ಥೆಯು ಸಾಮಾನ್ಯರಿಗೆ ತಮ್ಮದೆಂದು ಅನಿಸಬೇಕು, ಎಂಬುದಕ್ಕಾಗಿ ಆ ಪ್ರಕ್ರಿಯೆಯನ್ನು ಸುಲಭ ಗೊಳಿಸುವುದು, ವಕೀಲರಿಂದ ಪಕ್ಷಕಾರರಿಗಾಗುವ ಮೋಸಗಾರಿಕೆ ಹಾಗೂ ಅಡ್ಡಿಅಡಚಣೆಗಳನ್ನು ತಪ್ಪಿಸುವುದು, ಕೇವಲ ನಿರ್ಣಯವನ್ನು ಕೊಡದೆ, ಪೀಡಿತರಿಗೆ ನಿಜವಾದ ನ್ಯಾಯ ವನ್ನು ದೊರಕಿಸಿಕೊಡುವುದು, ಇಂತಹ ಅಮೂಲ್ಯವಾದ ಬದಲಾವಣೆಗೆ ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ತುಂಬಾ ಅವಕಾಶವಿದೆ. ಹೊಸತಾಗಿ ನೇಮಕವಾದ ಮುಖ್ಯ ನ್ಯಾಯಾಧೀಶರಿಂದ ಇಂತಹ ಬದಲಾವಣೆಯ ಅಪೇಕ್ಷೆ ಮಾಡಬಹುದು; ಏಕೆಂದರೆ, ಕಳೆದ ಕೆಲವು ದಿನಗಳ ಹಿಂದೆಯೇ ಅವರು ಹಾಗೆ ಸಂಕೇತವನ್ನೂ ನೀಡಿದ್ದರು. `ಚಿಕ್ಕ ಮಕ್ಕಳು ಬೆಳಗ್ಗೆ ೭ ಗಂಟೆಗೆ ಶಾಲೆಗೆ ಹೋಗಲು ಸಾಧ್ಯವಿದೆ ಎಂದಾದರೆ ನ್ಯಾಯಾಧೀಶರು ಮತ್ತು ವಕೀಲರು ಬೆಳಿಗ್ಗೆ ೯ ಗಂಟೆಗೆ ಕೆಲಸ ಆರಂಭಿಸಲು ಏಕೆ ಸಾಧ್ಯವಿಲ್ಲ ?’, ಎಂದು ಜುಲೈ ೨೦೨೨ ರಲ್ಲಿ ಒಂದು ಆಲಿಕೆಯ ಸಂದರ್ಭದಲ್ಲಿ ಪ್ರಶ್ನಿಸಿದ್ದರು. `ಸರ್ವೋಚ್ಚ ನ್ಯಾಯಾಲಯ ಬೆಳಿಗ್ಗೆ ೯ ಗಂಟೆಗೆ ಕೆಲಸವನ್ನು ಆರಂಭಿಸಬೇಕು’, ಎಂದು ಅವರು ಸೂಚಿಸಿದ್ದರು. `ಅವರು ಸ್ವತಃ ಪೀಠಾಸೀನರಾಗುವರು, ಆಗ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನು ಖಚಿತವಾಗಿ ಇಡುವರು’, ಎಂಬ ವಿಶ್ವಾಸವಿದೆ.

ಕಾರ್ಯದ ವೇಗವನ್ನು ಹೆಚ್ಚಿಸುವ ಅವಶ್ಯಕತೆಯಿದೆ !

ನ್ಯಾಯಾಲಯದ ಚಟುವಟಿಕೆಯ ಸಮಯವನ್ನು ಹೆಚ್ಚಿಸುವುದರೊಂದಿಗೆ ವಕೀಲರು ಮತ್ತು ನ್ಯಾಯಾಧೀಶರ ಕೆಲಸದ ವೇಗ ಮತ್ತು ಫಲಶ್ರುತಿಯನ್ನು ಹೆಚ್ಚಿಸಲು ಸನ್ಮಾನ್ಯ ಮುಖ್ಯನ್ಯಾಯಾಧೀಶರು ಮನಸ್ಸು ಮಾಡಿದರೆ ಅದು ಭಾರತೀಯ ನ್ಯಾಯವ್ಯವಸ್ಥೆಯಲ್ಲಿನ ಒಂದು ಮೈಲುಗಲ್ಲಾಗುವುದು ! ನೆನೆಗುದಿಯಲ್ಲಿರುವ ಖಟ್ಲೆಗಳ ವಿಷಯ ಬರುವಾಗ ಪ್ರತಿಸಲ ನ್ಯಾಯಾಧೀಶರ ಖಾಲಿ ಇರುವ ಸ್ಥಾನಗಳ ಗಣನೆ ಆಗಿಯೇ ಆಗುತ್ತದೆ ! ಪ್ರತ್ಯಕ್ಷವಾಗಿ ಇರುವ ವ್ಯವಸ್ಥೆಯಲ್ಲಿಯೇ ಗುಣಾತ್ಮಕತೆಯನ್ನು ಹೆಚ್ಚಿಸಲು ಆಗ್ರಹಿಸಿದರೆ, ಇರುವ ಸ್ಥಿತಿಯಲ್ಲಿಯೇ ಖಟ್ಲೆಗಳ ಸಂಖ್ಯೆಯು ನಿಯಂತ್ರಣವಾಗಿ ಪೀಡಿತರಿಗೆ ತ್ವರಿತಗತಿಯಲ್ಲಿ ನ್ಯಾಯ ಸಿಗುವುದು ! ಕೇವಲ ಖಟ್ಲೆಗೆ ತೀರ್ಪು ಕೊಡುವುದೆಂದರೆ ಇದು ಇತರ ಉತ್ಪಾದಕರ `ಸ್ಟಾಕ್ ಕ್ಲಿಯರೆನ್ಸ್ ಸೇಲ್’ (ಬಾಕಿಯಿರುವ ಉತ್ಪಾದನೆಯನ್ನು ಮುಗಿಸಲು ಯೋಜನೆ) ಮಾಡುವ ಹಾಗೆ  ನೋಡಬಾರದು. ಕೋಟಿಗಟ್ಟಲೆ ಜನರ ಜೀವನದ ದುಃಖವನ್ನು ದೂರಗೊಳಿಸುವಷ್ಟು ಅದು ಮಹತ್ವದ್ದಾಗಿದೆ. ಆದ್ದರಿಂದ ಆಡಳಿತ ಹಾಗೂ ನ್ಯಾಯಾಂಗದಂತಹ ಎಲ್ಲ ಸ್ತರಗಳಲ್ಲಿ ಸುಧಾರಣೆ ಮಾಡುವುದು ಈಗ ಹೊಸ ಭಾರತಕ್ಕೆ ಅನಿವಾರ್ಯವಾಗಿದೆ. ಹಾಗೆ ಮಾಡುವಂತಹದ್ದು ತುಂಬಾ ಇದೆ; ಆದರೆ ಮುಖ್ಯ ನ್ಯಾಯಾಧೀಶ ಲಳಿತ ಇವರಿಗೆ ಕೇವಲ ೭೪ ದಿನ ಗಳ ಅವಧಿ ಸಿಕ್ಕಿದೆ. ಆ ಪ್ರತಿಯೊಂದು ದಿನದ ಲಾಭವನ್ನು ಪಡೆದು ಅವರು ಭಾರತೀಯ ನ್ಯಾಯವ್ಯವಸ್ಥೆಗೆ ಏಳ್ಗೆಯನ್ನು ಪ್ರಾಪ್ತಿ ಮಾಡಿ ಕೊಡಬೇಕು, ಅದಕ್ಕಾಗಿ ಅವರಿಗೆ ಶುಭಾಶಯಗಳು !