ಸೆಪ್ಟೆಂಬರ್ ೧೪ ರಂದು ಇರುವ ಕಾಶ್ಮೀರಿ ಹಿಂದೂ ಬಲಿದಾನದಿನದ ನಿಮಿತ್ತ…
ಈಗಲೂ `ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಕಾಶ್ಮೀರದ ಹಿಂದೂಗಳ ನರಮೇಧದ ವಿಷಯದ ಬಗ್ಗೆ ಈ ಚಲನಚಿತ್ರವನ್ನು ತಯಾರಿಸಲಾಗಿದೆ. ನಾನು ಉದ್ದೇಶಪೂರ್ವಕವಾಗಿಯೇ `ಕಾಶ್ಮೀರದ ಹಿಂದೂಗಳು’ ಎಂಬ ಶಬ್ದ ಪ್ರಯೋಗವನ್ನು ಮಾಡಿದ್ದೇನೆ. ಈ ರೀತಿಯ ಶಬ್ದಪ್ರಯೋಗವನ್ನು ಏಕೆ ಮಾಡಿದ್ದೇನೆ ? ಎಂಬುದರ ಕಾರಣವನ್ನು ತಿಳಿದುಕೊಳ್ಳಬೇಕು. ಕಾಶ್ಮೀರದಲ್ಲಿ ಇಲ್ಲಿಯವರೆಗೆ ನಡೆದಿರುವ ಹಿಂದೂಗಳ ನರಮೇಧವನ್ನು ಮುಖ್ಯ ಮಾಧ್ಯಮಗಳು, ಸರಕಾರಿ ಕಾರ್ಯಾಲಯಗಳು, ವಿವಿಧ ವೇದಿಕೆಗಳ ಮೇಲೆ ಮತ್ತು ಈ ನರಮೇಧದ ಬಗ್ಗೆ ಬರೆದ ಕೆಲವು ಪುಸ್ತಕಗಳಲ್ಲಿಯೂ `ಕಾಶ್ಮೀರಿ ಹಿಂದೂ ಪಂಡಿತ’ ಎಂಬ ಶಬ್ದಪ್ರಯೋಗವನ್ನೇ ಮಾಡಲಾಗಿದೆ. ಪ್ರಶ್ನೆ ಏನಿದೆ ಎಂದರೆ, ಕಾಶ್ಮೀರದಲ್ಲಿ ಕೇವಲ ಪಂಡಿತರು, ಅಂದರೆ ಬ್ರಾಹ್ಮಣರಷ್ಟೇ ಇರುತ್ತಿದ್ದರೇ ? ಜಿಹಾದಿ ಭಯೋತ್ಪಾದಕರು ಕೇವಲ ಕಾಶ್ಮೀರಿ ಬ್ರಾಹ್ಮಣರ ಹತ್ಯೆಯನ್ನಷ್ಟೇ ಮಾಡಿದ್ದರೇನು ? ಹಾಗೇನಿಲ್ಲ. ಭಯೋತ್ಪಾದಕರು ಸಾರಾಸಗಟಾಗಿ ಎಲ್ಲ ಹಿಂದೂಗಳ ಹತ್ಯೆಯನ್ನು ಮಾಡಿದ್ದಾರೆ ಮತ್ತು ಈಗಲೂ ಅವರು ಅದನ್ನೇ ಮಾಡುತ್ತಿದ್ದಾರೆ; ಏಕೆಂದರೆ ಅವರಿಗೆ ಎಲ್ಲ ಹಿಂದೂಗಳು `ಕಾಫಿರ್’ರಾಗಿದ್ದಾರೆ ಮತ್ತು ಕಾಫಿರರ ವಿರುದ್ಧವೇ ಅವರ ಜಿಹಾದ್ ನಡೆದಿದೆ. ಹಾಗಾದರೆ `ಕಾಶ್ಮೀರಿ ಹಿಂದೂಗಳ ನರಮೇಧವಾಯಿತು’, ಎಂದು ಹೇಳುವ ಬದಲು `ಕಾಶ್ಮೀರಿ ಪಂಡಿತರ ನರಮೇಧವಾಯಿತು’, ಎಂದು ಏಕೆ ಹೇಳಲಾಗುತ್ತದೆ ? ಇದರ ಬಗ್ಗೆ ಆಳವಾಗಿ ವಿಚಾರ ಮಾಡಿದರೆ ಇದರಲ್ಲಿ ದೊಡ್ಡ ಕುತಂತ್ರ ಕಾಣಿಸುತ್ತದೆ.
೧. ಕಾಂಗ್ರೆಸ್ ಮತ್ತು ಸಾಮ್ಯವಾದಿ ಪ್ರಸಾರಮಾಧ್ಯಮಗಳು `ಕಾಶ್ಮೀರಿ ಹಿಂದೂಗಳ ಬದಲು ಪಂಡಿತರ (ಬ್ರಾಹ್ಮಣರ) ಹತ್ಯೆಗಳಾದವು’, ಎಂದು ಹೇಳಿ ಹಿಂದೂಗಳಲ್ಲಿ ಒಡಕುಂಟು ಮಾಡುವುದು
ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಭಾರತದಲ್ಲಿ ಬ್ರಾಹ್ಮಣರ ವಿರುದ್ಧ ಇತರ ಹಿಂದೂ ಜಾತಿಗಳನ್ನು ರೇಗಿಸುವ ಕ್ರಮಬದ್ಧ ಪ್ರಯತ್ನಗಳು ನಡೆದಿವೆ. ಸ್ವಾತಂತ್ರ್ಯಪ್ರಾಪ್ತಿಯ ಮೊದಲಿನಿಂದಲೇ ಬ್ರಾಹ್ಮಣರು ಬಹುಜನಸಮಾಜ ಮತ್ತು ದಲಿತರ ಮೇಲೆ ಹೇಗೆ ಅತ್ಯಾಚಾರಗಳನ್ನು ಮಾಡಿದರು, ಎಂಬುದರ ಬಗ್ಗೆ ಪ್ರತಿದಿನ ನಾವು ಓದುತ್ತಿದ್ದೇವೆ. ಇಷ್ಟೇ ಅಲ್ಲದೇ ಎಷ್ಟೋ ಜನರ ರಾಜಕಾರಣವೇ ಬ್ರಾಹ್ಮಣವಿರೋಧಿ ಎಜೆಂಡಾದ ಮೇಲೆ ನಡೆಯುತ್ತದೆ ಮತ್ತು ಸ್ವಾತಂತ್ರ್ಯ ಸಿಗುವ ಮೊದಲಿನಿಂದಲೇ ಈ ರಾಜಕಾರಣವು ನಡೆಯುತ್ತಲೇ ಬಂದಿದೆ. ಈ ರಾಜಕಾರಣವು ಬಹಳಷ್ಟು ಪ್ರಮಾಣದಲ್ಲಿ ಯಶಸ್ವಿಯೂ ಆಗಿದೆ. ಬಹಳಷ್ಟು ಹಿಂದೂಗಳು ಈ ರಾಜ ಕಾರಣಕ್ಕೆ ಬಲಿಯಾಗಿ ತೀವ್ರ ಬ್ರಾಹ್ಮಣವಿರೋಧಿಗಳಾಗಿದ್ದಾರೆ. ಕೇವಲ ಬ್ರಾಹ್ಮಣವಿರೋಧಿ ಮಾತ್ರವಲ್ಲ, ಅವರು ಹಿಂದೂ ಧರ್ಮವಿರೋಧಿಗಳೂ ಆಗಿದ್ದಾರೆ.
ಕಾಂಗ್ರೆಸ್ ಮತ್ತು ಸಾಮ್ಯವಾದಿ ಪ್ರಸಾರಮಾಧ್ಯಮಗಳು ನಿರಂತರವಾಗಿ `ಕಾಶ್ಮೀರಿ ಹಿಂದೂಗಳ’ ಬದಲು `ಕಾಶ್ಮೀರಿ ಪಂಡಿತರು’ ಎಂಬ ಶಬ್ದವನ್ನು ಬಳಸಿ ಇತರ ಹಿಂದೂಗಳು ಹೇಗೆ ಬ್ರಾಹ್ಮಣರಿಗಿಂತ ಬೇರೆ ಆಗಿದ್ದಾರೆ ಮತ್ತು ಅವರು ಹೇಗೆ ಅಸುರಕ್ಷಿತರಾಗಿದ್ದಾರೆ, ಎಂಬ ಒಂದು ಮನೋವೈಜ್ಞಾನಿಕ ಪ್ರಭಾವವನ್ನು ಬ್ರಾಹ್ಮಣೇತರ ಹಿಂದೂಗಳ ಮನಸ್ಸಿನಲ್ಲಿ ಬಿಂಬಿಸಿದರು. ಇದರಿಂದಲೇ ಭಾರತ ದಾದ್ಯಂತದ ಹಿಂದೂಗಳು ಕಾಶ್ಮೀರದ ಹಿಂದೂಗಳ ಈ ದೊಡ್ಡ ನರಮೇಧದ (ನರಸಂಹಾರದ) ಪ್ರಕರಣದಲ್ಲಿ ಅಲಿಪ್ತರಾಗಿದ್ದರು. ಅವರಿಗೂ ಇದು ಎಲ್ಲ ಹಿಂದೂಗಳ ಸಮಸ್ಯೆಯಲ್ಲ ಇದು ಕೇವಲ ಕಾಶ್ಮೀರಿ ಬ್ರಾಹ್ಮಣರ ಸಮಸ್ಯೆಯಾಗಿದೆ, ಎಂದು ಅನಿಸಿತು. ಇದೇ ಕಾಂಗ್ರೆಸ್ ಮತ್ತು ಸಾಮ್ಯವಾದಿ ಪ್ರಸಾರಮಾಧ್ಯಮಗಳಿಗೆ ಬೇಕಾಗಿತ್ತು ಮತ್ತು ಅದು ಹಾಗೇ ಆಯಿತು. ಅವರು ರಚಿಸಿದ ಈ ಪಿತೂರಿಯಲ್ಲಿ ಅವರು ಯಶಸ್ವಿಯಾದರು. ಆ ಸಮಯದಲ್ಲಿ ಹಿಂದೂಗಳ ಸಮಸ್ಯೆಗಳಿಗೆ ಧ್ವನಿ ಎತ್ತುವಷ್ಟು ಸಶಕ್ತ ಮಾಧ್ಯಮಗಳು ಇರಲಿಲ್ಲ ಮತ್ತು ಕಪಟಿ ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಅವರಿಗೆ ಅಷ್ಟೊಂದು, ಜನರ ಬೆಂಬಲವೂ ಇರಲಿಲ್ಲ.
೨. `ಕಾಶ್ಮೀರದಲ್ಲಿ ನಡೆದ ನರಮೇಧವು ಹಿಂದೂಗಳದ್ದಾಗಿತ್ತು, ಅದು ಕೇವಲ ಕಾಶ್ಮೀರಿ ಪಂಡಿತರದ್ದಾಗಿರಲಿಲ್ಲ’, ಇದನ್ನು ಸ್ಪಷ್ಟವಾಗಿ ಹೇಳುವುದು ಆವಶ್ಯಕ
ಕಾಲಾಂತರದಲ್ಲಿ ರಾಮಮಂದಿರದ ಆಂದೋಲನದಿಂದ ಭಾರತದಲ್ಲಿ ಹಿಂದೂಗಳು ಜಾಗೃತವಾಗತೊಡಗಿದರು ಮತ್ತು ಅವರಲ್ಲಿ ಒಗ್ಗಟ್ಟೂ ನಿರ್ಮಾಣವಾಯಿತು. ಹಿಂದೂಪರ ಮಾಧ್ಯಮ ಗಳೂ ಸಶಕ್ತವಾಗತೊಡಗಿದವು. ಕಾಲಾಂತರದಲ್ಲಿ ಹಿಂದುತ್ವವನ್ನು ರಕ್ಷಿಸುವ ಸರಕಾರವೂ ಅಧಿಕಾರಕ್ಕೆ ಬಂದಿತು; ಆದರೂ `ಕಾಶ್ಮೀರಿ ಹಿಂದೂ’ ಎಂಬ ಶಬ್ದಪ್ರಯೋಗದ ಬದಲು `ಕಾಶ್ಮೀರಿ ಪಂಡಿತರು’ ಎಂಬ ಶಬ್ದಪ್ರಯೋಗ ಮಾತ್ರ ನಿಲ್ಲಲಿಲ್ಲ; ಏಕೆಂದರೆ ಇಲ್ಲಿಯವರೆಗೆ ಅದು ಜನರಿಗೆ ಅಭ್ಯಾಸವಾಗಿತ್ತು; ಆದರೆ ಇಂದು `ದಿ ಕಾಶ್ಮೀರ್ ಫೈಲ್ಸ್’ ಈ ಹಿಂದಿ ಚಲನಚಿತ್ರ ಪ್ರದರ್ಶನಗೊಂಡ ನಂತರವಾದರೂ ಕಾಶ್ಮೀರದಲ್ಲಿ ಯಾವ ನರಮೇಧವಾಯಿತೋ ಅದು ಕೇವಲ ಕಾಶ್ಮೀರಿ ಪಂಡಿತರದ್ದಷ್ಟೇ ಆಗಿರದೇ ಇಡೀ ಕಾಶ್ಮೀರಿ ಹಿಂದೂಗಳದ್ದಾಗಿದೆ, ಎಂಬುದು ಜನರಿಗೆ ತಲುಪುವುದು ಅತ್ಯಾವಶ್ಯಕವಾಗಿದೆ. `ಈ ನರಮೇಧ ಕೇವಲ ಕಾಶ್ಮೀರಿ ಪಂಡಿತರದ್ದಾಗಿದೆ’, ಎಂದು ತಿಳಿದು ಬಹುಸಂಖ್ಯಾತ ಹಿಂದೂಗಳು ಪುನಃ `ಈ ಸಮಸ್ಯೆ ನಮ್ಮದಾಗಿರಲಿಲ್ಲ ಮತ್ತು ಈಗಲು ಅದು ನಮ್ಮದಲ್ಲ’, ಎಂದು ಭಾವಿಸಿ ಸುಮ್ಮನಾಗುವರು. ಹೀಗಾಗಬಾರದೆಂದು ಪ್ರತಿಯೊಂದು ವೇದಿಕೆಯ ಮೇಲೆ, ಸಮಾಜಮಾಧ್ಯಮಗಳಲ್ಲಿ, ಜನರೊಂದಿಗೆ ಸಂಭಾಷಣೆ ಮಾಡುವಾಗ ಮತ್ತು ಎಲ್ಲಿ ಸಾಧ್ಯವೋ ಅಲ್ಲಿ `ಇದು ಹಿಂದೂಗಳ ನರ ಮೇಧವಾಗಿತ್ತು, ಕೇವಲ ಕಾಶ್ಮೀರಿ ಪಂಡಿತರದ್ದಾಗಿರಲಿಲ್ಲ’, ಎಂದು ಸ್ಪಷ್ಟವಾಗಿ ಹೇಳುವುದು ಅತ್ಯಾವಶ್ಯಕವಾಗಿದೆ. ಆಗ ಮಾತ್ರ ಈ ಜಿಹಾದಿ ಭಯೋತ್ಪಾದನೆಯ ವಿರುದ್ಧ ಎಲ್ಲ ಹಿಂದೂಗಳು ಒಂದಾಗ ಬಹುದು. ಕಾಂಗ್ರೆಸ್ಸಿಗರು, ಸಾಮ್ಯವಾದಿಗಳು ಮತ್ತು ತಥಾಕಥಿತ ಎಲ್ಲ ಜಾತ್ಯತೀತ ಹಿಂದೂಗಳು ಮೊದಲು ತಮ್ಮ ದೀಪದ ಕೆಳಗಿರುವ ಕತ್ತಲನ್ನು ನೋಡಬೇಕು ಮತ್ತು ನಂತರ ಹಿಂದೂ-ಮುಸಲ್ಮಾನರ ನಡುವೆ ಒಡಕನ್ನು ಯಾರು ಹುಟ್ಟಿಸಿದರು ? ಎಂಬುದರ ಬಗ್ಗೆ ಮಾತನಾಡಬೇಕು.
– ಶ್ರೀ. ಅತುಲ ಸೋಮೇಶ್ವರ ಕಾವಳೆ, ನಾಗಪುರ