Dismantle Terror Camps : ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಮುಚ್ಚದಿದ್ದರೆ, ಹುಷಾರ್ ! – ರಾಜನಾಥ ಸಿಂಗ್

ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಅಖನೂರ (ಜಮ್ಮು-ಕಾಶ್ಮೀರ) – ಪಾಕ್ ಆಕ್ರಮಿತ ಕಾಶ್ಮೀರವಿಲ್ಲದೆ ಜಮ್ಮು-ಕಾಶ್ಮೀರ ಅಪೂರ್ಣವಾಗಿದೆ. ಪಾಕಿಸ್ತಾನಕ್ಕೆ, ಪಾಕ್ ಆಕ್ರಮಿತ ಕಾಶ್ಮೀರವು ಒಂದು ‘ವಿದೇಶಿ ಪ್ರದೇಶ’ವಾಗಿದೆ. ಭಯೋತ್ಪಾದನೆಯ ವ್ಯವಹಾರ ನಡೆಸಲು ಪಾಕ್ ಆಕ್ರಮಿತ ಕಾಶ್ಮೀರದ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಉಪಯೋಗವನ್ನು ಭಯೋತ್ಪಾದಕರಿಗೆ ತರಬೇತಿ ಕೇಂದ್ರವಾಗಿ ಬಳಸಲಾಗುತ್ತಿದೆ. ಇದರ ಬಗ್ಗೆ ನಮಗೆ ಖಚಿತವಾದ ಮಾಹಿತಿ ಇದೆ. ಒಂದು ವೇಳೆ ಪಾಕಿಸ್ತಾನ ಈ ತರಬೇತಿ ಕೇಂದ್ರಗಳನ್ನು ಮುಚ್ಚದಿದ್ದರೆ… ಎನ್ನುವ ಶಬ್ದಗಳಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಅವರು 9ನೇ ಸಶಸ್ತ್ರ ಪಡೆಗಳ ಮಾಜಿ ಸೈನಿಕರ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪಾಕಿಸ್ತಾನದಿಂದ ಧರ್ಮದ ಹೆಸರಿನಲ್ಲಿ ದಾರಿತಪ್ಪಿಸುವ ಪ್ರಯತ್ನ

ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾತನಾಡುತ್ತಾ, ಪಾಕ್ ಆಕ್ರಮಿತ ಕಾಶ್ಮೀರದ ಜನರಿಗೆ ಅಲ್ಲಿನ ಸರಕಾರ ಗೌರವಾನ್ವಿತ ಜೀವನವನ್ನು ಜೀವಿಸುವುದರಿಂದ ವಂಚಿತಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಆಡಳಿತಗಾರರಿಂದ ಧರ್ಮದ ಹೆಸರಿನಲ್ಲಿ ಭಾರತದ ವಿರುದ್ಧ ದಾರಿತಪ್ಪಿಸುವ ಮತ್ತು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ.

ವಶಪಡಿಸಿಕೊಂಡ ಪ್ರದೇಶವನ್ನು ಹಿಂತಿರುಗಿಸದಿದ್ದರೆ, ಇಂದು ಭಯೋತ್ಪಾದಕರ ನುಸುಳುವಿಕೆ ಇರುತ್ತಿರಲಿಲ್ಲ !

ಹಿಂದಿನ ಸರಕಾರಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ರಾಜನಾಥ ಸಿಂಗ್ ಅವರು, ನಾವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಹಾಜಿ ಪಿರ್ ಪ್ರದೇಶವನ್ನು ನಾವು ಗೆದ್ದಿದ್ದೆವು. ಅದನ್ನು ಹಿಂತಿರುಗಿಸದಿದ್ದರೆ, ಇಂದು ಭಯೋತ್ಪಾದಕರು ಅಲ್ಲಿಂದ ನುಸುಳಲು ಸಾಧ್ಯವಾಗುತ್ತಿರಲಿಲ್ಲ’, ಎಂದು ಹೇಳಿದರು.

ಪಾಕಿಸ್ತಾನ ಪ್ರತಿಯೊಂದು ಯುದ್ಧದಲ್ಲೂ ಸೋಲುಂಡಿದೆ !

1965 ರ ಭಾರತ-ಪಾಕ್ ಯುದ್ಧವನ್ನು ಉಲ್ಲೇಖಿಸಿದ ರಾಜನಾಥ ಸಿಂಗ ಇವರು, ಯುದ್ಧಭೂಮಿಯಲ್ಲಿನ ಗೆಲುವು ಭಾರತೀಯ ಸೇನೆಯ ಶೌರ್ಯ, ಧೈರ್ಯ ಮತ್ತು ಬಲಿದಾನದ ಪರಿಣಾಮವಾಗಿತ್ತು. ನೀವು ಇತಿಹಾಸವನ್ನು ನೋಡಿದರೆ, ಪಾಕಿಸ್ತಾನವು ಭಾರತದೊಂದಿಗೆ ಹೋರಾಡಿದ ಪ್ರತಿಯೊಂದು ಯುದ್ಧದಲ್ಲೂ ಸೋತಿದೆ. 1948 ರ ಕಾಶ್ಮೀರದ ಆಕ್ರಮಣವಾಗಲಿ, 1965, 1971 ರ ಯುದ್ಧಗಳಾಗಲಿ ಅಥವಾ 1999 ರ ಕಾರ್ಗಿಲ್‌ನಲ್ಲಿ ನಡೆದ ಸೀಮಿತ ಯುದ್ಧವಾಗಲಿ, ಪಾಕಿಸ್ತಾನವು ಪ್ರತಿಯೊಂದು ಯುದ್ಧದಲ್ಲೂ ಸೋಲನ್ನು ಎದುರಿಸಿದೆ’, ಎಂದು ಹೇಳಿದರು.

ಪಾಕಿಸ್ತಾನ ಪ್ರಧಾನಿಯವರ ಹೇಳಿಕೆ ಷಡ್ಯಂತ್ರದ ಒಂದು ಭಾಗ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿ ಅನ್ವರುಲ ಹಕ್ ಇವರು, ಜಮ್ಮು-ಕಾಶ್ಮೀರದಿಂದ ಭಾರತೀಯ ಸೈನಿಕರನ್ನು ಓಡಿಸಲು ಪುನಃ ಜಿಹಾದ್ ಅನ್ನು ಪುನರುಜ್ಜೀವನಗೊಳಿಸಬೇಕೆಂದು ಕರೆ ನೀಡಿದ್ದರು. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರು, ಪಾಕ್ ಆಕ್ರಮಿತ ಕಾಶ್ಮೀರದ ಅನಧಿಕೃತ ಪ್ರಧಾನಿ ಭಾರತದ ವಿರುದ್ಧ ವಿಷ ಕಾರಿದ್ದಾರೆ. ಇದು ಪಾಕಿಸ್ತಾನದ ಷಡ್ಯಂತ್ರದ ಭಾಗವಾಗಿದೆ. ಜನರಲ ಜಿಯಾ-ಉಲ್-ಹಕ್ ಕಾಲದಿಂದಲೂ ಪಾಕಿಸ್ತಾನಿ ಆಡಳಿತಗಾರರು ಅಳವಡಿಸಿಕೊಂಡಿದ್ದ ಭಾರತ ವಿರೋಧಿ ನೀತಿಯನ್ನೇ ಅನ್ವರುಲ್ ಹಕ್ ಈ ರೀತಿಯ ಹೇಳಿಕೆಗಳ ಮೂಲಕ ಮುಂದುವರಿಸುತ್ತಿದ್ದಾರೆ’, ಎಂದು ಹೇಳಿದ್ದಾರೆ.