ಶಿಕ್ಷಕ ಉದ್ಯೋಗದ ದುಃಸ್ಥಿತಿ !

೫ ಸೆಪ್ಟೆಂಬರ್ ೨೦೨೨ ರಂದು ‘ರಾಷ್ಟ್ರೀಯ ಶಿಕ್ಷಕರ ದಿನವಾಗಿದೆ. ಈ ನಿಮಿತ್ತ….

‘ಶಿಕ್ಷಕರೇ ಜನತೆಯ ನಿಜವಾದ ಶಿಲ್ಪಕಾರರಾಗಿದ್ದಾರೆ. ಸ್ವತಂತ್ರ ಭಾರತದ ಹೊಸ ಮೂರ್ತಿಯನ್ನು ನಿರ್ಮಿಸುವ ಸಾಮರ್ಥ್ಯವು ಕೇವಲ ಶಿಕ್ಷಕರಲ್ಲಿಯೇ ಇದೆ, ಎಂದು ಆಚಾರ್ಯ ಅತ್ರೆಯವರು ಹೇಳುತ್ತಾರೆ. ಅತ್ರೆಯವರು ನುಡಿದ ಈ ‘ಶಿಕ್ಷಕರ ಗೌರವ ತಪ್ಪಿಲ್ಲ; ಏಕೆಂದರೆ ಆ ಕಾಲದಲ್ಲಿ ನಿಜವಾಗಿಯೂ ಆ ರೀತಿ ಸಮಾಜವನ್ನು ನಿರ್ಮಿಸುವ ಗುರುಜನರಿದ್ದರು. ದೇಶದ ಸ್ವಾತಂತ್ರ್ಯ ಚಳುವಳಿಗೆ ನಿಪುಣ ನೇತೃತ್ವವನ್ನು ಶಿಕ್ಷಕರೇ ನೀಡಿದ ಮಹಾನ ಇತಿಹಾಸವಿದೆ. ಇಂದಿಗೂ ಹೊಸ ಪೀಳಿಗೆಯನ್ನು ನಿರ್ಮಿಸುವ ‘ಅಂಶಗಳು ಶಿಕ್ಷಕರ ಕೈಯಲ್ಲಿದೆ; ಆದರೆ ಕಾರ್ಯಪ್ರವೃತ್ತ ‘ಶಕ್ತಿ-ಸಾಮರ್ಥ್ಯವುಳ್ಳ ಶಿಕ್ಷಕರೇ ಈಗ ವಿರಳರಾಗಿರುವುದು ಕಂಡು ಬರುತ್ತದೆ. ಶಿಕ್ಷಕರಲ್ಲಿನ ನೈತಿಕತೆಯ ಅಧಃಪತನವಾದುದರಿಂದ ಸಮಾಜವನ್ನು ನಿರ್ಮಿಸುವುದಕ್ಕಿಂತ ಅದನ್ನು ಹಾಳುಮಾಡುವ ಕಾರ್ಯವು ಅವರಿಂದ ಅಖಂಡವಾಗಿ ಘಟಿಸುತ್ತಿದೆ. ಈ ನಿಮಿತ್ತ ಈ ಬರವಣಿಗೆ….

ಸದ್ಯದ ಸ್ಥಿತಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಣಕ್ಷೇತ್ರ ಇವುಗಳಲ್ಲಿ ಅನೈತಿಕತೆ, ಭ್ರಷ್ಟಾಚಾರ, ಅಪರಾಧ, ವಾಸನಾಂಧತೆ ಹೆಚ್ಚಾಗುತ್ತಿದೆ, ಈ ವಾಸ್ತವವು ಮೆಕಾಲೆ ನಿರ್ಮಿಸಿದ ಶಿಕ್ಷಣ ವ್ಯವಸ್ಥೆಯ ದುಷ್ಪರಿಣಾಮವಾಗಿದೆ. ಆದುದರಿಂದ ಇಂದಿನ ಶಿಕ್ಷಕರಿಗೆ ನೀತಿ ಸಂಹಿತೆಯನ್ನು ಕೇವಲ ನೀಡುವುದಕ್ಕಿಂತ ಅವರಿಗೆ ನೈತಿಕತೆಯ ಶಿಕ್ಷಣವನ್ನು ಮತ್ತು ಧರ್ಮಶಿಕ್ಷಣವನ್ನು ನೀಡುವುದು ಅನಿವಾರ್ಯವಾಗಿದೆ. ಉತ್ತಮ ಶಿಕ್ಷಕ ಮತ್ತು ವಿದ್ಯಾರ್ಥಿಗಳನ್ನು ನಿರ್ಮಿಸಲು ಶಿಕ್ಷಣಪದ್ಧತಿಯು ಅಂದರೆ ದೇಶಕ್ಕೆ ಆವಶ್ಯಕವಾಗಿರುವ ಗುರುಕುಲ ಪದ್ಧತಿಯ ಮೂಲಕ ಶಿಕ್ಷಣ ನೀಡುವುದು ಆವಶ್ಯಕವಾಗಿದೆ. ಅದಕ್ಕಾಗಿ ದೇಶದಲ್ಲಿ ಹಿಂದೂ ರಾಷ್ಟ್ರ ಬೇಕು ! – ಸಂಪಾದಕರು

೧. ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲು ಲಂಚವನ್ನು ಬೇಡುವ ಮುಖ್ಯೋಪಾಧ್ಯಾಯಿನಿ !

ಮಹರಾಷ್ಟ್ರದ ಗೋರೆಗಾವನ ‘ಯುನಿವರ್ಸಲ್ ಹೈಸ್ಕೂಲ್ ನಲ್ಲಿ ೯ ನೇ ತರಗತಿಯ ಪರೀಕ್ಷೆಯನ್ನು ನೀಡಿದ ವಿದ್ಯಾರ್ಥಿಗೆ ತನ್ನ ಮನೆಗೆ ಫಲಿತಾಂಶ (ರಿಸಲ್ಟ್) ಬರಲಿಲ್ಲವೆಂದು ಅವನ ತಾಯಿಯು ಶಾಲೆಗೆ ಹೋದರು. ಅವರು ಆ ಬಗ್ಗೆ ಕೇಳಿದಾಗ ಅಚ್ಚರಿಯಾಯಿತು. ಅವಳ ಮಗನು ‘ಅನುತ್ತೀರ್ಣ ಆಗಿದ್ದನು ಮತ್ತು ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಅವನನ್ನು ಉತ್ತೀರ್ಣ ಮಾಡಲು ೧೨ ಸಾವಿರ ರೂಪಾಯಿಗಳನ್ನು ಕೇಳುತ್ತಿದ್ದರು. ಆ ತಾಯಿಯು ಧೈರ್ಯ ತೋರಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಿಸಿದರು ಮತ್ತು ಮರುದಿನ ೧೨ ಸಾವಿರ ರೂಪಾಯಿಗಳನ್ನು ತೆಗೆದು ಕೊಳ್ಳುವಾಗ ಕಾಂತಾತೇಗಬಹಾದ್ದರ ಸಿಂಹ ಈ ೫೫ ವರ್ಷದ ಮುಖ್ಯೋಪಾಧ್ಯಾಪಕಿಯನ್ನು ಸಾಕ್ಷಿ ಸಮೇತ ಹಿಡಿಯಲಾಯಿತು. ಹಣದ ಕೊಡುಕೊಳ್ಳುವಿಕೆ ಸಾರಾ ಸಗಟಾಗಿ ನಡೆಯುತ್ತಿದೆ. ಅನುತ್ತೀರ್ಣರಾದವರು ಉತ್ತೀರ್ಣರಾಗುತ್ತಿದ್ದಾರೆ. ಇಂದು ಈ ಪರಿಸ್ಥಿತಿ ಇನ್ನೂ ಭಯಾನಕವಾಗಿದೆ ! – ಸಂಪಾದಕರು)

೨. ಇಂದು ನೀತಿವಂತ ಶಿಕ್ಷಕರು ಸಿಗುವುದು ಅಸಾಧ್ಯ

ವಿದ್ಯಾರ್ಥಿಗಳಿಗೆ ಉಪದೇಶಿಸುವ, ಅವರನ್ನು ರೂಪಿಸುವ ಶಿಕ್ಷಕರು ಸ್ವತಃ ನೀತಿವಂತರಾಗಿರಬೇಕು. ಶೀಲವಂತರಾಗಿರಬೇಕು; ಆದರೆ ಈಗ ಶಿಕ್ಷಣ ಉದ್ಯೋಗದಲ್ಲಿ ಇಂತಹ ಅನೇಕ ನಾಮಾಂಕಿತರು ಹೊಟ್ಟೆ ತುಂಬಿಸಿಕೊಳ್ಳುವವರು, ತಮ್ಮ ನೈತಿಕ ಮೌಲ್ಯಗಳ ವೈರಿಗಳೇ ಇರುವರೆಂಬಂತೆ ಇದ್ದಾರೆ, ಎಂದು ಕಂಡು ಬರುತ್ತದೆ.

೩. ಶಿಕ್ಷಕರಿಗೆ ಹಣ ನೀಡಿ ಉತ್ತೀರ್ಣರಾಗಲು ಸಾಧ್ಯ ವಿದ್ದಾಗ, ವಿದ್ಯಾರ್ಥಿಗಳು ಅಭ್ಯಾಸ ಏಕೆ ಮಾಡುವರು ?

ಶಾಲೆಯಲ್ಲಿ ಇಂತಹ ಅನೇಕ ಕೃತ್ಯಗಳು ನಡೆಯುತ್ತವೆ, ಎಂದಾಗ ಪಾಲಕರು ನಿಜವಾಗಿಯೂ ಚಿಂತಿಸಬೇಕು. ಪ್ರಸ್ತುತ ಶಿಕ್ಷಣದ ಸಂತೆಯಾಗಿದೆ. ಹಿಂದೆಲ್ಲ ಶಿಕ್ಷಣಮಹರ್ಷಿಗಳಿರುತ್ತಿದ್ದರು. ಈಗ ಶಿಕ್ಷಣಸಾಮ್ರಾಟರಿರುತ್ತಾರೆ. ಒಂದು ವೇಳೆ ೧೦-೧೨ ಸಾವಿರ ರೂಪಾಯಿಗಳನ್ನು ನೀಡಿ ೯ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ಹೋಗಲು ಸಾಧ್ಯವಾಗುವುದಾದರೆ, ಯಾರು ಏಕೆ ಪರಿಶ್ರಮ ಪಡಬೇಕು ? ಹಣವನ್ನು ಬಿಸಾಡಿ ಬೇಕಾದ ಸ್ಥಳದಲ್ಲಿ ಪ್ರವೇಶ ಸಿಗುವಾಗ ಹಗಲು-ರಾತ್ರಿ ಕಂಠಪಾಠ ಮಾಡುವುದು ಯಾರಿಗೆ ಬೇಕಾಗಿದೆ ? (ಆಧಾರ : ದೈನಿಕ ‘ಮುಂಬಯಿ ಆಪಲಾ ವಾರ್ತಾಹಾರ, ೫.೬.೧೯೯೮)

೪. ಶಿಕ್ಷಣಕ್ಕಾಗಿ ನೀತಿಸಂಹಿತೆಯನ್ನು ಮಾಡಬೇಕಾಗಿ ಬರುವುದು ನಾಚಿಕೆಗೇಡು !

೪ ಅ. ನೀತಿನಿಯಮಗಳ ಸಂಹಿತೆಯನ್ನು ಸಿದ್ಧ ಮಾಡುವುದು : ‘ಶಿಕ್ಷಕರು ಹೇಗೆ ವರ್ತಿಸಬೇಕು, ಈ ಬಗೆಗಿನ ನೀತಿ ನಿಯಮಗಳ ಸಂಹಿತೆಯನ್ನು ತಯಾರಿಸಲಾಗಿದ್ದು ಸರಕಾರವು ಅದನ್ನು ಸ್ವೀಕರಿಸಿದರೆ, ದೇಶದಾದ್ಯಂತದ ಎಲ್ಲ ಶಿಕ್ಷಕರಿಗಾಗಿ ಅದನ್ನು ಅನ್ವಯಿಸಲಾಗುವುದು. ನಿಜವಾಗಿಯೂ ೧೯೯೭ ರಲ್ಲಿ ಈ ರೀತಿಯ ಸಂಹಿತೆಯನ್ನು ಸಿದ್ಧ ಮಾಡಲಾಗಿತ್ತು; ಆದರೆ ಅದರಲ್ಲಿ ಸಂಹಿತೆಯ ಪಾಲನೆ ಮಾಡದವರ ಮೇಲೆ ಕಾರ್ಯಾಚರಣೆ ಮಾಡುವ ವ್ಯವಸ್ಥೆ ಇರಲಿಲ್ಲ. ಹೊಸದಾಗಿ ತಯಾರಿಸಲಾದ ಸಂಹಿತೆಯಲ್ಲಿ ಮಾತ್ರ ಈ ಕೊರತೆಯನ್ನು ನೀಗಿಸಲಾಗಿದೆ. (ಆಧಾರ : ದೈನಿಕ ‘ಮುಂಬಯಿ ಆಪಲಾ ವಾರ್ತಾಹಾರ, ೫.೬.೧೯೯೮)

೪ ಆ. ಶಿಕ್ಷಕರಿಗೆ ಆಚಾರಸಂಹಿತೆಯನ್ನು ಹಾಕಿ ನೈತಿಕತೆಯನ್ನು ಕಲಿಸಬೇಕಾಗಿದ್ದಲ್ಲಿ, ಅವರಿಂದ ವಿದ್ಯಾರ್ಥಿಗಳಿಗೆ ನೈತಿಕತೆಯ ಪಾಠ ಕಲಿಸುವುದು ಅಸಾಧ್ಯ ! : ‘ಆಧುನಿಕ ವೈದ್ಯ ಅಥವಾ ನ್ಯಾಯ ವಾದಿಗಳಿಗೆ ತಮ್ಮ ವ್ಯವಸಾಯವನ್ನು ಪ್ರಾರಂಭಿಸುವ ಮೊದಲು ಆಯಾ ವ್ಯವಸಾಯದೊಂದಿಗೆ ಸಂಬಂಧಿಸಿದ ಸಂಸ್ಥೆಯಲ್ಲಿ ತಮ್ಮ ನೋಂದಣಿಯನ್ನು ಮಾಡಬೇಕಾಗುತ್ತದೆ. ನೋಂದಣಿಯಾದ ನಂತರ ಅವರಿಗೆ ನೀತಿನಿಯಮಗಳ ಸಂಹಿತೆಯ ಪ್ರತಿಯನ್ನು ಕೊಡಲಾಗುವುದು. ನೀತಿನಿಯಮಗಳ ಪಾಲನೆ ಮಾಡದವರ ಮೇಲೆ ಕಾರ್ಯಾಚರಣೆ ಮಾಡುವ ಜವಾಬ್ದಾರಿ ಈ ಸಂಸ್ಥೆಯ ಮೇಲಿರುತ್ತದೆ. ಈ ಸಂಹಿತೆಯ ವೈಶಿಷ್ಟ್ಯವೆಂದರೆ ಶಿಕ್ಷಕರ ವಿದ್ಯಾರ್ಥಿ, ಪಾಲಕರು ಮತ್ತು ಸಮಾಜ ಇವರ ಬಗ್ಗೆ ಇರುವ ಕರ್ತವ್ಯಗಳಾವವು, ಎಂಬುದನ್ನು ಸ್ಪಷ್ಟಪಡಿಸಲಾಗಿದೆ; ಆದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ದೈಹಿಕವಾಗಿ ಥಳಿಸಬಾರದು, ಲೈಂಗಿಕ ಅತ್ಯಾಚಾರ ಮಾಡಬಾರದು ಮತ್ತು ಖಾಸಗಿ ಕಲಿಸುವಿಕೆ ಮಾಡಬಾರದು, ಎಂದು ಸಹ ಈ ಸಂಹಿತೆಯಲ್ಲಿ ಹೇಳಲಾಗಿದೆ.

೪ ಇ. ಅನೀತಿವಂತ ಶಿಕ್ಷಕರಿಗೆ ಆಚಾರಸಂಹಿತೆಯನ್ನು ಹಾಕಿ ಅವರ ಅಧಃಪತನವನ್ನು ತಡೆಗಟ್ಟಲಾಗುವುದು, ಎಂಬ ಇಚ್ಛೆಯೆಂದರೆ ದುರ್ದೈವ ! : ‘ಶಿಕ್ಷಕರು ಜಾತಿ, ಧರ್ಮ, ವರ್ಣ ವಂಶ, ಲಿಂಗಭಾವ ಇಂತಹ ಭೇದವನ್ನು ಮಾಡದೇ ಎಲ್ಲ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ವರ್ತಿಸಬೇಕು. ವಿದ್ಯಾರ್ಥಿಗಳಲ್ಲಿ ಭಯ ನಿರ್ಮಾಣವಾಗುವ, ಅವರಿಗೆ ಮಾನಸಿಕ-ಭಾವನಿಕ ಸ್ತರದಲ್ಲಿ ತೊಂದರೆಯಾಗುವಂತೆ ವರ್ತಿಸಬಾರದು, ಎಂದು ಸಹ ಈ ಸಂಹಿತೆಯಲ್ಲಿ ಹೇಳಲಾಗಿದೆ. ಶಿಕ್ಷಣಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾರ್ಗದರ್ಶಕವೆನಿಸಿಕೊಳ್ಳುವ ಸಂಹಿತೆಯನ್ನು ಸಿದ್ಧ ಮಾಡುವ ಆವಶ್ಯಕತೆ ಎನಿಸುವುದು, ಇದು ನಿಜವಾಗಿಯು ದುರ್ದೈವವೇ ಆಗಿದೆ; ಈ ಅವನತಿಯ ದೂರದ ವರೆಗಿನ ದುಷ್ಪರಿಣಾಮವು ಸಂಪೂರ್ಣ ಸಮಾಜದ ಮೇಲೆಯೇ ಆಗಬಹುದು. ಅದ್ದರಿಂದ ಶಿಕ್ಷಣಕ್ಷೇತ್ರದ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಆವಶ್ಯಕವಾಗಿದೆ. ನೀತಿನಿಯಮಗಳ ಹೊಸ ಸಂಹಿತೆಯು ಅದರದೇ ಆರಂಭವಾಗಿದೆ. ಅದರಿಂದಲಾದರೂ ಶಿಕ್ಷಣಕ್ಷೇತ್ರದಲ್ಲಿ ಆಶ್ವಾಸನೆ ನೀಡುವ ಗಾಳಿಯು ಬೀಸತೊಡಗುವುದು, ಎಂಬ ಅಪೇಕ್ಷೆಯನ್ನು ಇಟ್ಟುಕೊಳ್ಳಬಹುದು. (ಆಧಾರ : ಮಹಾರಾಷ್ಟ್ರ ಟೈಮ್ಸ್, ೨೯.೧೨.೨೦೨೦)