ಲೈಂಗಿಕ ಶಿಕ್ಷಣ ಪಶ್ಚಿಮಾತ್ಯರ ಪರಿಕಲ್ಪನೆ ಅಲ್ಲ ! – ಸರ್ವೋಚ್ಚ ನ್ಯಾಯಾಲಯ

ಈ ಶಿಕ್ಷಣದಿಂದ ಯುವಕರಲ್ಲಿ ಅನೈತಿಕತೆ ಹೆಚ್ಚುವುದಿಲ್ಲ ಎಂದು ಕೂಡ ನ್ಯಾಯಾಲಯದ ನಿರೀಕ್ಷಣೆ !

ನವ ದೆಹಲಿ – ಲೈಂಗಿಕ ಶಿಕ್ಷಣವನ್ನು ಪಾಶ್ಚಿಮಾತ್ಯರ ಪರಿಕಲ್ಪನೆ ಎಂದು ತಿಳಿಯುವುದು ಅಯೋಗ್ಯವಾಗಿದೆ. ಇದರಿಂದ ಯುವಕರಲ್ಲಿ ಅನೈತಿಕತೆ ಹೆಚ್ಚುವುದಿಲ್ಲ. ಇದರ ಶಿಕ್ಷಣವನ್ನು ಭಾರತದಲ್ಲಿ ನೀಡುವುದು ಬಹಳ ಆವಶ್ಯಕವಾಗಿದೆ, ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿಕೆ ನೀಡಿದೆ. ನ್ಯಾಯಾಲಯವು, ಲೈಂಗಿಕ ಶಿಕ್ಷಣ ಇದು ಭಾರತೀಯ ಮೌಲ್ಯದ ವಿರುದ್ಧವಾಗಿದೆ ಎಂದು ಜನರು ನಂಬುತ್ತಾರೆ. ಇದರಿಂದ ಅನೇಕ ರಾಜ್ಯಗಳಲ್ಲಿ ಇದರ ಶಿಕ್ಷಣದ ಮೇಲೆ ನಿಷೇಧ ಇದೆ. ಇದರ ಪರಿಣಾಮ ಯುವಕರಿಗೆ ನಿಖರವಾದ ಮಾಹಿತಿ ದೊರೆಯದೆ ಇರುವುದರಿಂದ ಇಂಟರ್ನೆಟ್ ಮೂಲಕ ಬಹಳಷ್ಟು ಬಾರಿ ದಾರಿ ತಪ್ಪುವ ಮಾಹಿತಿ ಪಡೆಯುತ್ತಾರೆ.

ಒಂದು ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು,

೧. ಒಂದು ಸಂಶೋಧನೆಯ ಅಡಿಯಲ್ಲಿ ಮಹಾರಾಷ್ಟ್ರದಲ್ಲಿನ ೯೦೦ ಕ್ಕೂ ಹೆಚ್ಚಿನ ಕಿಶೋರ ವಯಸ್ಸಿನ ಮಕ್ಕಳ ಅಧ್ಯಯನ ಮಾಡಿದಾಗ, ಯಾವ ವಿದ್ಯಾರ್ಥಿಗಳಿಗೆ ಪ್ರಜನನ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಮಾಹಿತಿ ದೊರೆಯುವುದಿಲ್ಲ, ಅವರು ಬೇಗನೆ ದೈಹಿಕ ಸಂಬಂಧ ಇಡುವ ಸಾಧ್ಯತೆ ಹೆಚ್ಚಾಗಿತ್ತು.

೨. ಚಿಕ್ಕ ಹುಡುಗರ ಮೇಲಿನ ಅಪರಾಧ ಕೇವಲ ಲೈಂಗಿಕ ಶೋಷಣೆಗೆ ಸೀಮಿತವಾಗುವುದಿಲ್ಲಾ. ಅದರ ವಿಡಿಯೋ ಮತ್ತು ಛಾಯಾಚಿತ್ರ ಇದರ ಮಾಧ್ಯಮದಿಂದ ಕೂಡ ಈ ಶೋಷಣೆ ಮುಂದುವರಿಯುತ್ತದೆ. ಈ ವಿಷಯ ಇಂಟರ್ನೆಟ್ ನಲ್ಲಿ ಯಾರಿಗೆ ಬೇಕಾದರೂ ಸುಲಭವಾಗಿ ಲಭ್ಯವಾಗುತ್ತದೆ. ಇದರಿಂದ ಮಕ್ಕಳಿಗೆ ಬಹಳಷ್ಟು ನಷ್ಟವಾಗುತ್ತದೆ. ಮಕ್ಕಳ ಗೌರವದ ಮತ್ತು ಅಧಿಕಾರದ ಉಲ್ಲಂಘನೆ ಮಾಡಲಾಗುತ್ತದೆ. ಒಂದು ಸಮಾಜ ಎಂದು ನಾವು ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

೩. ನಾವು ಸಂಸತ್ತಿಗೆ ‘ಪೋಕ್ಸೋ’ ಕಾನೂನಿನಲ್ಲಿ ಸುಧಾರಣೆ ಮಾಡುವ ಮತ್ತು ‘ಚೈಲ್ಡ್ ಪೋರ್ನೋಗ್ರಾಫಿ’ ಈ ಶಬ್ದದ ಬದಲು ‘ಬಾಲ ಲೈಂಗಿಕ ಅತ್ಯಾಚಾರ ಮತ್ತು ಶೋಷಣೆ ಸಾಮಗ್ರಿ’ ಎಂದೂ ಬದಲಾಯಿಸಲು ಸೂಚಿಸುತ್ತಿದ್ದೇವೆ. ಇದಕ್ಕಾಗಿ ಸುತ್ತೋಲೆ ಕೂಡ ಹೊರಡಿಸಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇದರ ಜೊತೆಗೆ ಸನ್ಮಾನ್ಯ ನ್ಯಾಯಾಲಯವು ದೇಶದಲ್ಲಿನ ಹೆಚ್ಚುತ್ತಿರುವ ಅನೈತಿಕತೆ, ‘ಲಿವ್ ಇನ್ ರಿಲೇಶನಶಿಪ್’ ಇಂತಹ ಪಶ್ಚಿಮಾತ್ಯರ ಕೆಟ್ಟ ಪದ್ಧತಿಗಳ ಬಗ್ಗೆ ಕೂಡ ಛೀಮಾರಿ ಹಾಕುತ್ತಾ ಸರಕಾರಕ್ಕೆ ಇದರ ಕುರಿತು ಕಡಿವಾಣ ಹಾಕುವುದಕ್ಕಾಗಿ ಮೂಲಭೂತ ಉಪಾಯಯೋಜನೆಗಳ ಕುರಿತು ಆದೇಶ ನೀಡಬೇಕು, ಎಂದು ಸೂಕ್ಷ್ಮ ಮತ್ತು ಸುಸಂಸ್ಕೃತ ಜನರಿಗೆ ಅಪೇಕ್ಷೆ ಇದೆ !