ಜೈಪುರ, ಕಾನಪುರ, ಭೋಪಾಲ್, ಇಂದೋರ್ ಮುಂತಾದ ನಗರಗಳಲ್ಲಿ ಕ್ಯಾಂಪಸ್ !
ಲಂಡನ್ (ಇಂಗ್ಲೆಂಡ್) – ಬ್ರಿಟನ್ ಉನ್ನತ ಶಿಕ್ಷಣವನ್ನು ಒದಗಿಸಲು ಬ್ರಿಟನ್ ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಮಹಾನಗರ ಸಹಿತ ‘ಟಿಯರ್-2’ (50 ಸಾವಿರದಿಂದ 1 ಲಕ್ಷ ಜನಸಂಖ್ಯೆ ಇರುವ) ನಗರಗಳಲ್ಲಿ ಅದರ ಕ್ಯಾಂಪಸ್‌ಗಳನ್ನು ಪ್ರಾರಂಭಿಸಲಿದೆ. 24 ಬ್ರಿಟಿಷ್ ವಿಶ್ವವಿದ್ಯಾಲಯವು ಇದರಲ್ಲಿ ಸೇರ್ಪಡೆಯಾಗಿದ್ದು ಸೌತ್ಆಂಪ್ಟನ್ ವಿಶ್ವವಿದ್ಯಾಲಯ ಮೊಟ್ಟಮೊದಲು ತನ್ನ ಶಾಖೆಯನ್ನು ಭಾರತದಲ್ಲಿ ತೆರೆಯಲಿದೆ. ಈ ವಿಶ್ವವಿದ್ಯಾಲಯದಲ್ಲಿ ವಿಶ್ವವಿಖ್ಯಾತ ಆಕ್ಸಫರ್ಡ ಮತ್ತು ಕೆಂಬ್ರಿಜ ವಿಶ್ವವಿದ್ಯಾಲಯಗಳು ಸೇರಿವೆ. ದೇಶದ ಜಯಪುರ, ಕಾನಪುರ, ಭೋಪಾಲ್, ಇಂದೋರ್, ಪಾಟಲಿಪುತ್ರ ಮೊದಲಾದ ನಗರಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ ಕೇಂದ್ರ ಸರಕಾರ ಕಳೆದವಾರ ಅನುಮತಿ ನೀಡಿದೆ.
ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಗಳು `ಐಐಟಿ’ ಯೊಂದಿಗೆ ಜಂಟಿಯಾಗಿ ಸಂಶೋಧನೆ ನಡೆಸಲಿವೆಯೆನ್ನುವ ಮಾಹಿತಿಯಿದೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಫ್ಲಿಂಟ್ ಅವರ ಪ್ರಕಾರ, ಬ್ರಿಟನ್‌ನ ‘ನ್ಯಾಷನಲ್ ಗ್ರೆಫಾಯಿನ್ ಇನ್‌ಸ್ಟಿಟ್ಯೂಟ್’ ಜೊತೆಗೆ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು’ ಸೆಮಿಕಂಡಕ್ಟರ್ ಸಂಶೋಧನೆ ನಡೆಸಲಿದೆ.
ಭಾರತೀಯ ವಿದ್ಯಾರ್ಥಿಗಳು ಅರ್ಧದಷ್ಟು ವೆಚ್ಚದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ !
ಭಾರತದಲ್ಲಿ ತೆರೆಯಲಿರುವ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಅರ್ಧ ವೆಚ್ಚದಲ್ಲಿ ಪದವಿ ಪಡೆಯಲು ಸಾಧ್ಯವಾಗುತ್ತದೆ. ಸಧ್ಯಕ್ಕೆ ಒಂದು ವರ್ಷದ ಶಿಕ್ಷಣ ಪಡೆಯಲು ಬ್ರಿಟನ್‌ನಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು 25 ರಿಂದ 30 ಲಕ್ಷ ಭಾರತೀಯ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಭಾರತೀಯ ವಿದ್ಯಾರ್ಥಿಗಳಿಗೆ ಅಂದಾಜು ಶುಲ್ಕ 15 ಲಕ್ಷ ರೂಪಾಯಿಗಳಾಗುತ್ತವೆ. ಈ ಮೊತ್ತವು ಭಾರತದ ಯಾವುದೇ ಖಾಸಗಿ ವಿಶ್ವವಿದ್ಯಾಲಯದಷ್ಟೇ ಆಗಿದೆ. ಮೊದಲ ವರ್ಷದಲ್ಲಿ 10 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳುವ ನಿರೀಕ್ಷೆಯಿದೆ ಎನ್ನುವ ಮಾಹಿತಿ ಸೌತಾಂಪ್ಟನ್ ವಿಶ್ವವಿದ್ಯಾಲಯದ ವಕ್ತಾರರು ನೀಡಿದ್ದಾರೆ.
ಸಂಪಾದಕೀಯ ನಿಲುವುಈ ಮೊದಲು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ನಾಳಂದ ಮತ್ತು ತಕ್ಷಶಿಲಾ ಈ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಗುಣಮಟ್ಟದ ಶಿಕ್ಷಣಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕೆಂಪು ಹಾಸನ್ನು ಹಾಸಿ ಆಹ್ವಾನಿಸಲಾಗುತ್ತಿದೆ. ಇದು ಎಲ್ಲ ಪಕ್ಷಗಳ ಆಡಳಿತ ನಡೆಸುವವರು ವಿಫಲರಾಗಿದ್ದಾರೆ ! |