ಹಣದ ಬಲದಿಂದ ಅಲ್ಲ, ಭಾವ ಇದ್ದವರಿಗೆ ದೇವ ದರ್ಶನ ಸಿಗಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ.ರಮೇಶ ಶಿಂದೆ

ದೇವಸ್ಥಾನಕ್ಕೆ ಬರುವ ಅರ್ಪಣೆಯ ವಿನಿಯೋಗ ಮಾಡುವ ವ್ಯವಸ್ಥೆ ಪಾರದರ್ಶಕವಾಗಿರಬೇಕು. ದೇವಸ್ಥಾನದಲ್ಲಿನ ಹಣದ ಉಪಯೋಗ ಧರ್ಮ ಪ್ರಚಾರಕ್ಕಾಗಿ ಆಗಬೇಕು. ದೇವಸ್ಥಾನದ ಮೂಲಕ ವೇದ ಪಾಠಶಾಲೆ ನಡೆಸಬೇಕು, ದೇವಸ್ಥಾನದಲ್ಲಿ ಗ್ರಂಥಾಲಯ ಇರಬೇಕು, ಅದರ ಮೂಲಕ ದೇವಸ್ಥಾನದ ಇತಿಹಾಸ, ಹಾಗೂ ನಮ್ಮ ಹಿಂದೂ ಸಂಸ್ಕೃತಿಯ ಮಾಹಿತಿ ನೀಡಬೇಕು. ಕೆಲವು ದೇವಸ್ಥಾನಗಳಲ್ಲಿ ದರ್ಶನಕ್ಕಾಗಿ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಹಣದ ಬಲದಿಂದಲ್ಲ, ಭಾವ ಇರುವವರಿಗೆ ದೇವರ ದರ್ಶನ ಸಿಗಬೇಕು.