ನವದೆಹಲಿ – ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಮಸೂದೆಯನ್ನು ಚರ್ಚಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಅಕ್ಟೋಬರ್ 14 ರಂದು ನಡೆದ ಸಭೆಯಲ್ಲಿ ಪ್ರಚಂಡ ಗದ್ದಲವಾಯಿತು. ಈ ಸಭೆಯಲ್ಲಿ ಹಿಂದೂ ಸಂಘಟನೆಯ ಪ್ರತಿನಿಧಿಗಳು ಉಪಸ್ಥಿತರಿದ್ದ ಕಾರಣ, ವಿರೋಧ ಪಕ್ಷಗಳು ಇದಕ್ಕೆ ಆಕ್ಷೇಪಿಸಿದ್ದರಿಂದ ಗದ್ದಲವಾಯಿತು. ತದನಂತರ ವಿರೋಧಿಗಳು ಸಭೆಯನ್ನು ಬಹಿಷ್ಕರಿಸಿದರು. ಪ್ರತಿಭಟನಾಕಾರರು ಲೋಕಸಭೆ ಅಧ್ಯಕ್ಷರಾದ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಜಂಟಿ ಸಮಿತಿ ಅಧ್ಯಕ್ಷರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಲಿದ್ದಾರೆ.
ಮೂಲಗಳು ನೀಡಿದ ಮಾಹಿತಿ ಪ್ರಕಾರ, ಸಭೆಯಲ್ಲಿ ಸಂಸದ ಮಹಮ್ಮದ್ ಜಾವೇದ್ ಮತ್ತು ಅಸಾದುದ್ದೀನ್ ಓವೈಸಿ ಅವರು ಸಮಿತಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಹಿಂದೂ ಸಂಘಟನೆಯನ್ನು ಕರೆದಿರುವುದಕ್ಕೆ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದರು. ಅವರು, ವಕ್ಫ್ ಬೋರ್ಡ್ ಸಭೆಯಲ್ಲಿ ಹಿಂದೂ ಸಂಘಟನೆಯ ಪಾತ್ರವೇನು ? ಎಂದು ಪ್ರಶ್ನಿಸಿದರು. ಸಮಿತಿಯು ವಕ್ಫ್ ಕಾಯ್ದೆಯ ಸಂದರ್ಭದಲ್ಲಿ ಮಾಹಿತಿಯನ್ನು ಮಂಡಿಸಿದ ಬಗ್ಗೆ ಕರ್ನಾಟಕ ಅಲ್ಪಸಂಖ್ಯಾತರ ಸಮಿತಿಯ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಕರ್ನಾಟಕ ಸರಕಾರವನ್ನು ಟೀಕಿಸಿದರು. ಹಾಗೂ ‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಕ್ಫ್ ಬೋರ್ಡ್‌ನ ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡರು’, ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಅವರು ಸಭೆಯನ್ನು ಬಹಿಷ್ಕರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಹಿಂದೂ ಸಂಘಟನೆಯ ಪ್ರತಿನಿಧಿಗಳು !
ಸಭೆಗೆ ನಾಸಿಕ್‌ನ ಕಾಳಾರಾಮ ಮಂದಿರದ ಮಹಂತ ಸುಧೀರದಾಸ ಮಹಾರಾಜ್, ಹಿಂದೂ ಜನಜಾಗೃತಿ ಸಮಿತಿಯ ನ್ಯಾಯವಾದಿ ಅಮೃತಾ ಸಚದೇವ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ ಮತ್ತು ಧರ್ಮ ಪ್ರಚಾರಕ ಅಭಯ ವರ್ತಕ ಮುಂತಾದವರು ಉಪಸ್ಥಿತರಿದ್ದರು. ಹಾಗೆಯೇ ಸರ್ವೋಚ್ಚ ನ್ಯಾಯಾಲಯದ ಪೂ.(ನ್ಯಾಯವಾದಿ) ಹರಿಶಂಕರ ಜೈನ್, ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮತ್ತು ನ್ಯಾಯವಾದಿ ಅಶ್ವಿನಿ ಉಪಾಧ್ಯಾಯರನ್ನು ಆಹ್ವಾನಿಸಲಾಗಿತ್ತು.
ಸಂಪಾದಕೀಯ ನಿಲುವುಸಭೆಯಲ್ಲಿ ಯಾರನ್ನು ಆಹ್ವಾನಿಸಬೇಕು ಮತ್ತು ಯಾರನ್ನು ಇಲ್ಲ ಎಂಬುದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರಕಾರ ನೇಮಿಸಿರುವ ಸಂಸದೀಯ ಸಮಿತಿಗೆ ಇರುವುದರಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ತಪ್ಪಾಗಿದೆ ! |