ದೇಶದ ಭದ್ರತೆಗೆ ನಿರ್ಮಾಣವಾಗಿರುವ ಅಪಾಯವನ್ನು ತಿಳಿಯಿರಿ !

೧. ಜಾತ್ಯತೀತರು ಈಗೇಕೆ ಮೌನವಾಗಿದ್ದಾರೆ ?

ಗಾಯಕಿ ಫರಮಾನಿ ನಾಝ ಇವರು, ಕಾವಡ ಯಾತ್ರೆಗಾಗಿ ಭಗವಾನ ಶಿವನ ‘ಹರ ಹರ ಶಂಭೊ’ ಎಂಬ ಭಜನೆ ಹಾಡಿದ್ದರಿಂದ ದೇವಬಂದನ ಉಲೇಮಾ ಅವರು ಟೀಕಿಸುತ್ತಾ, ‘ಅದು ಶರಿಯಾದ ವಿರುದ್ಧವಿದೆ. ಆದ್ದರಿಂದ ಫರಮಾನಿಯವರು ಅಂತಹ ವಿಷಯಗಳನ್ನು ತ್ಯಜಿಸಬೇಕು’, ಎಂದು ಹೇಳಿದ್ದಾರೆ.

೨. ಆದರೆ ಭಾರತದಲ್ಲಿ ನಮಾಜ್‌ಗಾಗಿ ಶುಕ್ರವಾರ ರಜೆ ಸಿಗುತ್ತದೆ !

ಬಾಂಗ್ಲಾದೇಶದ ಶಿಕ್ಷಣ ಸಚಿವಾಲಯವು ಶಾಲಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ದುರ್ಗಾಪೂಜೆ ವೇಳೆ ಪರೀಕ್ಷೆ ನಡೆಸಲು ಯೋಜಿಸಲಾಗಿದೆ.

೩. ದೇಶದ ಭದ್ರತೆಗೆ ನಿರ್ಮಾಣವಾಗಿರುವ ಅಪಾಯವನ್ನು ತಿಳಿಯಿರಿ !

ಉತ್ತರಪ್ರದೇಶ ಮತ್ತು ಅಸ್ಸಾಂನ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇ.೩೨ ರಷ್ಟು ಹೆಚ್ಚಳವಾಗಿದೆ.

೪. ಇಂತಹವರನ್ನು ದೇಶಭಕ್ತರೆಂದು ಕರೆಯಬಹುದೇ ?

ತ್ರಿವರ್ಣ ಧ್ವಜ ಇದು ದೇಶದ ಧ್ವಜವಾಗಿದೆ. ಈ ದೇಶದ ನಾಗರಿಕರು ಅದನ್ನು ಏರಿಸುತ್ತಾರೆ; ಹಾಗಾದರೆ ಅದನ್ನು ಮನೆಗಳ ಮೇಲೆ ಏಕೆ ಹಾಕಬೇಕು? ಧ್ವಜ ಹಾಕುವ ಮೂಲಕ ದೇಶಭಕ್ತಿ ಸಿದ್ಧವಾಗುತ್ತದೆಯೇ ? – ಸಮಾಜವಾದಿ ಪಕ್ಷದ ಸಂಸದ ಶಫೀಕುರ್ ರಹಮಾನ್ ಬಕ್

೫. ಸಂಬಂಧ ಪಟ್ಟವರನ್ನು ಜೈಲಿಗೆ ತಳ್ಳಿರಿ !

ಪ್ರಸಿದ್ಧ ವಾರಪತ್ರಿಕೆ ‘ದಿ ವೀಕಿ’ದು ಭಗವಾನ್ ಶಂಕರ ಮತ್ತು ಕಾಳಿಮಾತೆಯ ಅತ್ಯಂತ ನಿಂದನೀಯ ಚಿತ್ರವನ್ನು ಪ್ರಕಟಿಸಿದೆ. ಇದರ ವಿರುದ್ಧ ಭಾಜಪ ಮುಖಂಡ ಪ್ರಕಾಶ ಶರ್ಮಾ ಇವರು ಕಾನ್ಪುರದಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

೬. ಮತಾಂತರ ತಡೆ ಕಾನೂನನ್ನು ಜಾರಿಗೊಳಿಸಿ !

ಡಹಾನು(ಮಹಾರಾಷ್ಟ್ರ) ಎಂಬಲ್ಲಿ ಹಿಂದೂ ಮಹಿಳೆಯನ್ನು ಆಕೆಯ ಮನೆಯಲ್ಲಿ ಮತಾಂತರಿಸುವ ಪ್ರಯತ್ನವನ್ನು ಹಿಂದುತ್ವನಿಷ್ಠ ಮಹಿಳೆಯೊಬ್ಬರು ಗ್ರಾಮಸ್ಥರ ಸಹಾಯದಿಂದ ವಿಫಲಗೊಳಿಸಿದರು. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ೪ ಕ್ರೈಸ್ತ ಮಿಶನರಿಗಳನ್ನು ಬಂಧಿಸಿದ್ದಾರೆ.

೭. ಮಹಂತರಿಗೆ ಬೆದರಿಕೆಯೊಡ್ಡುವವರಿಗೆ ಗಲ್ಲು ಶಿಕ್ಷೆ ವಿಧಿಸಿ !

ಮೌಲಾನಾ ಮುಶ್ತಾಕ ಖಾನನು ಉತ್ತರ ಪ್ರದೇಶದ ‘ಬಡಿ ಸಂಗತ ಸಂಪ್ರದಾಯದ ಮಹಂತ ಬಜರಂಗ ಮುನಿ ಇವರಿಗೆ ಸಂಚಾರವಾಣಿಯಿಂದ ‘ಸಿರ್ ತನ್ ಸೆ ಜುದಾ’ದ ಬೆದರಿಕೆಯೊಡ್ಡಿದ್ದಾನೆ. ೧ ವರ್ಷದ ಮೊದಲು ಕೆಲವು ಮುಸಲ್ಮಾನರು ಮಹಂತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

ಹಿಂದುತ್ವದ ಬದಲಾಗಿ ಭಾರತಿಯತ್ವವಿರುವುದರಿಂದ ಹಿಂದೂ ಅಸ್ಮಿತಾಶೂನ್ಯ, ಪುರುಷಾರ್ಥಹೀನ ಹಾಗೂ ಹೇಡಿಯಾಗುವುದು

ಇಂದು ದೊಡ್ಡ ದೊಡ್ಡವರಿಗೆ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ; ಹಾಗಾಗಿ ನಮ್ಮ ಬಾಂದವರು ನಮ್ಮ ಮೇಲೆಯೇ ತಿರುಗಿ ಬೀಳುತ್ತಾರೆ ನಂತರ ಭಾರತೀಯರೆಂದು ಸಂಭೋಧಿಸಲಾರಂಭಿಸುತ್ತಾರೆ. ಈಗ ಹಿಂದುತ್ವದ ಬದಲು ಭಾರತೀಯತ್ವವು ಬಂದಿದೆ. ವೈದಿಕ ಅಥವಾ ಸನಾತನ ಹಿಂದೂ ಸಂಸ್ಕೃತಿಯಲ್ಲ, ಆಧುನಿಕ ಭಾರತೀಯ ಸಂಸ್ಕೃತಿ ಎಂದು ಹೇಳುತ್ತಾರೆ. ಗಂಗಾ-ಯಮುನಾ ಸಂಸ್ಕೃತಿಯೆಂದರೆ ಕಲಬೆರಕೆಯ ಸಂಸ್ಕೃತಿಯೆಂದು ತಿಳಿದಿದ್ದಾರೆ. ಇದು ನಮ್ಮ ಪರಾಕೋಟಿಯ ಮಾನಸಿಕ ಅಧಃಪತನವಾಗಿದೆ. ಇಂದು ಹಿಂದೂ ಅಸ್ಮಿತಾಶೂನ್ಯ, ಪುರುಷಾರ್ಥಹೀನ, ಹೇಡಿಯಾಗುತ್ತಿದ್ದಾನೆ ಹಾಗೂ ಹುಳ-ಇರುವೆಗಳಂತೆ ಸಾಯುತ್ತಿದ್ದಾನೆ.

– (ಕೃಪೆ : ಮಾಸಿಕ ಘನಗರ್ಜಿತ, ಜನವರಿ ೨೦೨೦)