ಸಾಧಕನನ್ನು ಮಾಯೆ ಮತ್ತು ಅಹಂನ ಜಾಲದಿಂದ ಹೊರತೆಗೆದು ಪರಮಾರ್ಥದ ಪ್ರಗತಿ ಪಥದತ್ತ ಕರೆದೊಯ್ಯುವ ಏಕಮೇವಾಧ್ವಿತೀಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ

ಕಳೆದ ೩೩ ವರ್ಷಗಳಿಂದ ನಾನು ಪರಾತ್ಪರ ಗುರು ಡಾ. ಆಠವಲೆಯವರ ಆಶ್ರಯದಲ್ಲಿ ಸಾಧನೆ ಮಾಡುತ್ತಿದ್ದೇನೆ. ಅವರು ನನ್ನನ್ನು ‘ಅಧ್ಯಾತ್ಮ’ದ ಕಡೆಗೆ ತಿರುಗಿಸಿದರು ಮತ್ತು ಅದನ್ನು ಕಲಿಸುವುದಲ್ಲದೆ, ಅದನ್ನು ಬದುಕುವಂತೆ ಮಾಡಿದರು. ಮಹರ್ಷಿ ನಾರದಮುನಿಯು ಬೇಡನನ್ನು ಮಾಯೆಯಿಂದ ಹೊರತೆಗೆದು ತಪಸ್ಸು ಮಾಡಿಸಿದಂತೆ ನನ್ನಿಂದಲೂ ಮಾಡಿಸಿಕೊಂಡರು. ಅದೇ ರೀತಿ ಪರಾತ್ಪರ ಗುರು ಡಾಕ್ಟರರು ಮೊದಲ ಹಂತದಲ್ಲಿ ನನ್ನನ್ನು ಮಾಯೆಯಿಂದ ಹೊರತಂದು ಸಾಧನೆ ಮಾಡಿಸಿದರು. ಸಂತ ಮುಕ್ತಾಬಾಯಿ ಅವರು ಯೋಗದಿಂದ ಅಹಂಕಾರವನ್ನು ತೊಡೆದುಹಾಕುವ ಮೂಲಕ ಚಾಂಗದೇವ ಮಹಾರಾಜರನ್ನು ರಕ್ಷಿಸಿದರು ಮತ್ತು ಎರಡನೇ ಹಂತದಲ್ಲಿ, ಪರಾತ್ಪರ ಗುರು ಡಾ. ಆಠವಲೆಯವರು ನನ್ನ ಸಾಧನೆಯ ಅಹಂಕಾರ ದೂರ ಮಾಡಲು ನನ್ನಿಂದ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಿಸಿಕೊಂಡು ನನ್ನ ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಂಡರು.

ಪೂ. ಶಿವಾಜಿ ವಟಕರ

೧. ನಾರದಮುನಿಯಂತೆ ಸಾಧಕನನ್ನು ಮಾಯೆಯಿಂದ ಹೊರತೆಗೆದು ಅಧ್ಯಾತ್ಮವನ್ನು ಕಲಿಸಿದ ಪರಾತ್ಪರ ಗುರು ಡಾ. ಆಠವಲೆ !

೧ ಅ. ನಾರದಮುನಿಯು ಮಾಯೆಯಿಂದ ಕೂಡಿದ ಬೇಡನಿಗೆ ಉಪದೇಶ ಮಾಡಿ ನಾಮಸಾಧನೆ ಮಾಡುವಂತೆ ಮಾಡಿದರು, ನಾಮಸಾಧನೆ ಮಾಡಿ ಬೇಡನು ವಾಲ್ಮೀಕಿಋಷಿಯಾದನು: ಬೇಡನು ಕಾಡಿನಲ್ಲಿ ದಾರಿಹೋಕರನ್ನು ದೋಚಿ ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ಒಮ್ಮೆ ನಾರದಮುನಿಯನ್ನು ಭೇಟಿಯಾದಾಗ ಹಣ ನೀಡದಿದ್ದರೆ ನಾರದಮುನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಆಗ ನಾರದಮುನಿಯು ಅವನನ್ನು ಕೇಳಿದರು, “ನೀನು ನಿನ್ನ ಕುಟುಂಬಕ್ಕೆ ದರೋಡೆ ಮತ್ತು ಕೊಲ್ಲುವ ಮೂಲಕ ಹಣವನ್ನು ನೀಡುತ್ತಿರುವೆ; ಆದರೆ ಇದರಿಂದ ನೀನು ಮಹಾ ಪಾಪವನ್ನು ಮಾಡುತ್ತಿರುವೆ. ‘ನಿಮ್ಮ ಕುಟುಂಬ ಸದಸ್ಯರು ನಿಮ್ಮ ಪಾಪದ ಪಾಲುದಾರಲಾಗಲಿದ್ದಾರೆಯೇ ?, ಕುಟುಂಬ ಸದಸ್ಯರನ್ನು ಕೇಳಿ’ ಎಂದರು. ಅದೇ ರೀತಿ ಬೇಡನು ಮನೆಗೆ ಹೋಗಿ ಕುಟುಂಬದವರನ್ನು ಕೇಳಿದಾಗ, ಕುಟುಂಬದವರು ಅವನ ಪಾಪದ ಪಾಲುದಾರರಾಗಲು ಸಿದ್ಧರಿರಲಿಲ್ಲ. ಅನಂತರ ಅವನು ‘ಮಾಯೆಯಲ್ಲಿರುವವರು ಸ್ವಾರ್ಥಿಗಳು ಮಾತ್ರ’ ಎಂಬುದನ್ನು ಅರಿತುಕೊಂಡನು. ಆದುದರಿಂದ ಅವನು ಲೂಟಿಯನ್ನು ನಿಲ್ಲಿಸಿ ನಾರದಮುನಿಯ ಉಪದೇಶವನ್ನು ಅನುಸರಿಸಿ ಕಠೋರವಾದ ನಾಮಸಾಧನೆ ಮಾಡಿ ಬೇಡನಿಂದ ‘ವಾಲ್ಮೀಕಿ ಋಷಿ’ ಆದರು.

೧ ಆ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕನನ್ನು ಮಾಯೆಯಿಂದ ಹೊರತೆಗೆದು ಆಧ್ಯಾತ್ಮಿಕತೆಯನ್ನು ಕಲಿಸಿದರು ಮತ್ತು ಸಾಧನೆ ಮಾಡಲು ಎಲ್ಲ ಸೌಕರ್ಯಗಳನ್ನು ಒದಗಿಸಿದರು : ನಾರದಮುನಿಯು ಬೇಡನನ್ನು ಮಾಯೆಯಿಂದ ಹೊರತೆಗೆದು ನಾಮಸ್ಮರಿಸಲು ಕಲಿಸಿದರು. ಹಾಗೆಯೇ ಪರಾತ್ಪರ ಗುರು ಡಾ. ಆಠವಲೆಯವರು ನನ್ನನ್ನು ಮಾಯೆಯಿಂದ ಹೊರಗೆ ತಂದರು ಮತ್ತು ಅವರು ನನ್ನಿಂದ ನಿರಂತರವಾಗಿ ಸಾಧನೆ ಮಾಡಿಸಿಕೊಳ್ಳುತ್ತಿದ್ದಾರೆ. ನಾನು ಬೇಡನಿಗಿಂತ ಹೆಚ್ಚಾಗಿ ಮಾಯೆಯಲ್ಲಿ ಸಿಕ್ಕಿಬಿದ್ದೆ. ನಾನು ಬೇಡನ ತುಲನೆಯಲ್ಲಿ ಸಾವಿರದಲ್ಲಿ ಒಂದಂಶದಷ್ಟು ತಪಸ್ಸು ಅಥವಾ ಸಾಧನೆ ಮಾಡಲಾರೆ. ನಾರದಮುನಿಯು ಬೇಡನನ್ನು ಒಮ್ಮೆ ಭೇಟಿಯಾಗಿ ಜಪ ಮಾಡಲು ಕೇಳಿದರು; ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೩ ವರ್ಷಗಳಿಂದ ನಿರಂತರವಾಗಿ ನನಗೆ ಸಾಧನೆಯನ್ನು ಕಲಿಸುತ್ತಿದ್ದಾರೆ ಮತ್ತು ಬೆಂಬತ್ತುವಿಕೆ ಮಾಡುವ ಮೂಲಕ ನನ್ನಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಬೇಡನ ಹಾಗೆ ನಾನೊಬ್ಬನೇ ಕಾಡಿನಲ್ಲಿ ತಪಸ್ಸು ಮಾಡಬೇಕಾಗಿರಲಿಲ್ಲ. ಪರಾತ್ಪರ ಗುರು ಡಾ. ಆಠವಲೆಯವರು ನನಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟರು ಮತ್ತು ಅವರು ನನ್ನಿಂದ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸೇವೆ ಮಾಡುತ್ತಿದ್ದಾರೆ. ಹಗಲಿರುಳು ನನ್ನನ್ನು ಹೂವಿನಂತೆ ಪೋಷಿಸುತ್ತಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ನನ್ನಂತಹ ಸಾವಿರಾರು ಸಾಧಕರನ್ನು ಜನನ ಮತ್ತು ಮರಣದ ಚಕ್ರಗಳಿಂದ ಮುಕ್ತಗೊಳಿಸಿದ್ದಾರೆ. ನೂರಾರು ಸಾಧಕರನ್ನು ‘ಸಂತ ಮತ್ತು ಸದ್ಗುರು’ ಸ್ಥಾನಕ್ಕೆ ತಲುಪಿಸಿದ್ದಾರೆ. ನನ್ನ ಜೀವನದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅಸಾಧಾರಣ ಪ್ರಾಮುಖ್ಯತೆ ಇದೆ ಎಂದು ನಾನು ನಿರಂತರವಾಗಿ ತಿಳಿದಿರುತ್ತೇನೆ.

೨. ಸಂತ ಜ್ಞಾನೇಶ್ವರನಂತೆ ಸಾಧನೆಯಅಹಂಕಾರ ನಾಶ ಮಾಡಿ ಆಧ್ಯಾತ್ಮಿಕ ಪ್ರಗತಿಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

೨ ಅ. ಸಾಧನೆ ಎಂಬ ಅಹಂಕಾರವನ್ನು ಬೆಳೆಸಿಕೊಂಡ ಚಾಂಗ ದೇವ ಮಹಾರಾಜರು ವಿಷಯ ತೋಚದೆ ಖಾಲಿ ಪತ್ರವನ್ನು ಜ್ಞಾನೇಶ್ವರರಿಗೆ ಕಳುಹಿಸಿದರು, ನಿವೃತ್ತಿನಾಥರ ಆದೇಶದ ಮೇರೆಗೆ ಜ್ಞಾನೇಶ್ವರರು ಪತ್ರಕ್ಕೆ ಉತ್ತರಿಸಿದರು ಮತ್ತು ಅದು ‘ಚಾಂಗ್‌ದೇವ ಪಾಷಷ್ಠಿ’ ಎಂದು ಪ್ರಸಿದ್ಧವಾಯಿತು : ಒಮ್ಮೆ ಸಂತ ಜ್ಞಾನೇಶ್ವರನ ಖ್ಯಾತಿಯು ಚಾಂಗದೇವ ಮಹಾರಾಜರ ಕಿವಿಗೆ ಬಿತ್ತು. ಆಗ ಅವರಿಗೆ ಸಂತ ಜ್ಞಾನೇಶ್ವರರನ್ನು ಭೇಟಿಯಾಗಬೇಕೆಂಬ ಉತ್ಸುಕತೆ ಮೂಡಿತು. ಸಂತ ಜ್ಞಾನೇಶ್ವರರನ್ನು ಭೇಟಿಯಾಗುವ ಮುನ್ನ ಪತ್ರ ಬರೆಯಬೇಕು’ ಎಂದು ಯೋಚಿಸಿ ಸಂತ ಜ್ಞಾನೇಶ್ವರರಿಗೆ ಪತ್ರ ಬರೆಯಲು ಮುಂದಾದರು; ಆದರೆ ‘ಏನು ಬರೆಯಲಿ?’ ಎಂಬ ಗೊಂದಲದಿಂದ ಸಂತ ಜ್ಞಾನೇಶ್ವರರಿಗೆ ಖಾಲಿ ಪತ್ರ ಕಳುಹಿಸಿದರು. ‘ಚಾಂಗದೇವ ಮಹಾರಾಜರು ಯೋಗಿಯಾಗಿದ್ದರೂ ಅವರಿಗೆ ಆತ್ಮಜ್ಞಾನ ಮತ್ತು ಗುರುಕೃಪೆಯ ಕೊರತೆಯಿದೆ’ ಎಂದು ಸಂತ ನಿವೃತ್ತಿನಾಥರು ಅರಿತುಕೊಂಡರು. ಈ ಪತ್ರಕ್ಕೆ ಉತ್ತರಿಸುವಂತೆ ಸಂತ ಜ್ಞಾನೇಶ್ವರರಿಗೆ ತಿಳಿಸಿದರು. ಅದರಂತೆ ಸಂತ ಜ್ಞಾನೇಶ್ವರರು ಬರೆದ ಉತ್ತರ ‘ಚಾಂಗದೇವ ಪಾಷಷ್ಟಿ’ ಎಂದು ಪ್ರಸಿದ್ಧವಾಯಿತು.

೨ ಅ ೧. ಚಾಂಗದೇವ ಮಹಾರಾಜರು ಹುಲಿಯ ಮೇಲೆ ಸಂತ ಜ್ಞಾನೇಶ್ವರನನ್ನು ಭೇಟಿಯಾಗಲು ಬಂದರು ಮತ್ತು ಸಂತ ಜ್ಞಾನೇಶ್ವರರ ನಾಲ್ವರು ಸಹೋದರ-ಸಹೋದರಿಯೊಂದಿಗೆ ಅವರು ಕುಳಿತಿದ್ದ ಗೋಡೆಯಿಂದಲೇ ಅಲ್ಲಿಗೆ ತಲುಪುವುದು : ಸಂತ ಜ್ಞಾನೇಶ್ವರರು ಬರೆದ ಉತ್ತರವನ್ನು ಅರ್ಥಮಾಡಿಕೊಳ್ಳದೆ, ಚಾಂಗದೇವ ಮಹಾರಾಜರು ಹುಲಿಯ ಮೇಲೆ ಕುಳಿತು ಸಂತ ಜ್ಞಾನದೇವರನ್ನು ಭೇಟಿಯಾಗಲು ಹೋದರು. ಅವರ ಕೈಯಲ್ಲಿ ಹಾವಿನ ಚಾವಟಿಯೊಂದಿಗೆ ಅವರೊಂದಿಗೆ ೧೪೦೦ ಶಿಷ್ಯರಿದ್ದರು. ಚಾಂಗದೇವ ಮಹಾರಾಜರಿಗೆ ತಮಗೆ ಪ್ರಾಣಿಗಳ ಮೇಲೂ ಹಿಡಿತವಿದೆ ಎಂಬ ಅಹಂಕಾರವಿತ್ತು. ಆ ಸಮಯದಲ್ಲಿ ಸಂತರಾದ ನಿವೃತ್ತಿನಾಥ, ಜ್ಞಾನೇಶ್ವರ, ಮುಕ್ತಾಬಾಯಿ ಮತ್ತು ಸೋಪಾನದೇವ ಅವರು ಗೋಡೆಯ ಮೇಲೆ ಕುಳಿತಿದ್ದರು. ಸಂತ ಜ್ಞಾನೇಶ್ವರರು ಆ ಗೋಡೆಗೆ ಚಾಂಗದೇವ ಮಹಾರಾಜರ ಬಳಿಗೆ ಕರೆದುಕೊಂಡು ಹೋಗಲು ಆದೇಶಿಸಿದರು. ಹಾರುವ ಗೋಡೆಯ ಮೇಲೆ ಕುಳಿತು ಜ್ಞಾನೇಶ್ವರರು ಬರುವುದನ್ನು ನೋಡಿ ಸಂತರ ಅರ್ಹತೆಯನ್ನು ಚಾಂಗದೇವ ಮಹಾರಾಜರು ಅರಿತುಕೊಂಡರು.

೨ ಅ ೨. ಚಾಂಗದೇವ ಮಹಾರಾಜರ ಅಹಂಕಾರವು ನಶಿಸಿದ ನಂತರ ಮುಕ್ತಾಬಾಯಿಯವರು ಅವರನ್ನು ಶಿಷ್ಯರಾಗಿ ಸ್ವೀಕರಿಸುವುದು : ಚಾಂಗದೇವ ಮಹಾರಾಜರು ಪತ್ರದ ಅರ್ಥವನ್ನು ವಿವರಿಸಲು ಸಂತ ಜ್ಞಾನೇಶ್ವರರಲ್ಲಿ ವಿನಂತಿಸಿದರು. ಆಗ ಸಂತ ಜ್ಞಾನೇಶ್ವರರು ಅವರಿಗೆ ಹೇಳಿದರು, “ಇದಕ್ಕಾಗಿ, ನಿಮ್ಮ ಶಿಷ್ಯರಲ್ಲಿ ಒಬ್ಬನನ್ನು ತ್ಯಾಗ ಮಾಡಬೇಕಾಗುವುದು”, ಎಂದರು. ಚಾಂಗದೇವ ಮಹಾರಾಜರು, ‘ನಮಗೆ ಬಹಳ ಶಿಷ್ಯರಿದ್ದಾರೆ. ನಿಮಗಾಗಿ ಯಾವುದೇ ಶಿಷ್ಯನು ತನ್ನ ಪ್ರಾಣವನ್ನು ಕೊಡಲು ಸಿದ್ಧರಿದ್ದಾರೆ’, ಎನ್ನುತ್ತಾ ಹಿಂತಿರುಗಿ ನೋಡಿದಾಗ ಶಿಷ್ಯರೆಲ್ಲರೂ ಪ್ರಾಣಭಯದಿಂದ ಓಡಿಹೋಗಿರುವುದು ಕಂಡರು. ಆದ್ದರಿಂದ ಅವರ ಅಹಂ ನಶಿಸಿತು. ಮುಂದೆ ಸಂತ ಜ್ಞಾನದೇವರು ಅವರಿಗೆ ಹೇಳಿದರು, “ನಮ್ಮ ಮುಕ್ತಾ ನಿಮಗೆ ಆ ಪತ್ರದ ಅರ್ಥವನ್ನು ಹೇಳುತ್ತಾಳೆ” ಮುಂದೆ, ಚಾಂಗದೇವರು ಮುಕ್ತಾಬಾಯಿಯವರನ್ನು ತನ್ನ ಗುರು ಎಂದು ಪರಿಗಣಿಸಿದರು.

೩. ಸಂತ ಜ್ಞಾನೇಶ್ವರರು ಚಾಂಗ್‌ದೇವ್ ಮಹಾರಾಜರನ್ನು ಯೋಗಾಭ್ಯಾಸದ ಅಹಂಕಾರದಿಂದ ಹೊರತಂದರು, ಅದೇ ರೀತಿ ಪರಾತ್ಪರ ಗುರು. ಡಾ. ಆಠವಲೆಯವರು ಸಾಧಕರಿಂದ ಸ್ವಭಾವದೋಷ ಮತ್ತು ಅಹಂಕಾರ ಹೋಗಲಾಡಿಸುವ ಪ್ರಕ್ರಿಯೆಯಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ವ್ಯಾವಹಾರಿಕ ಜೀವನದಲ್ಲಿ ‘ನಾನು ಬುದ್ಧಿವಂತ ವಿದ್ಯಾರ್ಥಿ ಮತ್ತು ನಂತರ ಹಿರಿಯ ಅಧಿಕಾರಿಯಾಗಿದ್ದೆ. ನನ್ನಲ್ಲಿ, ನನಗೆ ಹೆಚ್ಚು ತಿಳಿದಿದೆ. ನಾನು ಶ್ರೇಷ್ಠ. ನಾನು ಹೆಚ್ಚು ಬುದ್ಧಿವಂತ. ನನಗೆ ಗೊತ್ತಾಗುತ್ತದೆ’ ಎಂಬ ಅಹಂನ ಅಂಶಗಳು ಹೆಚ್ಚುಪ್ರಮಾಣದಲ್ಲಿದ್ದವು. ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಕಳೆದ ೩೩ ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ. ಈ ಅವಧಿಯಲ್ಲಿ ನನಗೆ ಅನೇಕ ಸಂತರು ಮತ್ತು ಮಹಾತ್ಮರ ಸತ್ಸಂಗ ಲಭಿಸಿತು. ಇದರಿಂದ ನನ್ನ ಸಾಧನೆಯ ಬಗ್ಗೆ ನನ್ನ ಅಹಂಕಾರ ಹೆಚ್ಚಾಯಿತು; ಆದರೆ ನನ್ನ ಸಾಧನೆಯ ಸ್ಥಿತಿ ಚಾಂಗದೇವ ಮಹಾರಾಜರಿಗಿಂತ ಗಂಭೀರವಾಗಿತ್ತು. ಹೀಗಿರುವಾಗ ಪರಾತ್ಪರ ಗುರು. ಡಾ. ಆಠವಲೆಯವರು ನನ್ನಿಂದ ಸ್ವಭಾವದೋಷ ಮತ್ತು ಅಹಂಕಾರವನ್ನು ನನ್ನಿಂದ ಹೋಗಲಾಡಿಸುವ ಪ್ರಕ್ರಿಯೆಯನ್ನು ನಡೆಸಿ ನನ್ನಲ್ಲಿ ಗುಣಗಳನ್ನು ಹೆಚ್ಚಿಸಿದರು. ಅವರು ನನ್ನಂತಹ ಸಾವಿರಾರು ಸಾಧಕರ ಸಾಧನೆಯ ಅಧೋಗತಿ ತಡೆದು ಅವರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಂಡರು.

೪. ಕೃತಜ್ಞತೆ

ಪರಾತ್ಪರ ಗುರು ಡಾ. ಆಠವಲೆಯವರು ನನ್ನಂತಹ ಸಾಮಾನ್ಯ ಮತ್ತು ಅತಿಕ್ಷುದ್ರ ಆತ್ಮವನ್ನು ಮಾಯೆ ಮತ್ತು ಅಹಂಕಾರದ ಹಿಡಿತದಿಂದ ಪರಮಾರ್ಥದ ಮಾರ್ಗದತ್ತ ಕರೆದೊಯ್ದರು ಮತ್ತು ನಂತರ ಸಾಧನೆ ಎಂಬ ಮಹಾನ್ ಅಹಂಕಾರದಿಂದ ಹೊರತೆಗೆದರು. ನನ್ನಂತಹ ಸಾವಿರಾರು ಸಾಧಕರು ಪರಾತ್ಪರ ಗುರು. ಡಾ. ಆಠವಲೆಯವರ ಶ್ರೇಷ್ಠತೆ, ಅವತಾರತ್ವ ಮತ್ತು ಸಮರ್ಥ ಗುರುತ್ವವನ್ನು ಅನುಭವಿಸಿದ್ದಾರೆ. ಅದಕ್ಕಾಗಿ ನಾನು ಅವರ ಸುಕೋಮಲ ಚರಣಗಳಿಗೆ ಅತ್ಯಂತ ಕೃತಜ್ಞನಾಗಿದ್ದೇನೆ.

– (ಪೂ.) ಶ್ರೀ. ಶಿವಾಜಿ ವಟಕರ ಸನಾತನ ಆಶ್ರಮ, ದೇವದ, ಪನವೇಲ. (೫.೫.೨೦೨೨)