ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

೧. ಹಿಂದೂಗಳೇ, ಮತಾಂಧರ ಸಂಚನ್ನು ತಿಳಿಯಿರಿ !

ಬಿಜನೌರ್ (ಉತ್ತರಪ್ರದೇಶ) ಜಿಲ್ಲೆಯ ಶೆರ್ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂಗಳ ಉಡುಗೆ ತೊಟ್ಟು ಮುಸಲ್ಮಾನರ ೩ ಗೋರಿಗಳನ್ನು ಧ್ವಂಸಮಾಡುವ ಮೂಲಕ ಗಲಭೆ ಸೃಷ್ಟಿಸಲು ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಕಮಾಲ್ ಎಂಬ ಇಬ್ಬರು ಮತಾಂಧರ ಪ್ರಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ.

೨. ಇದು ತಮಿಳುನಾಡಿನ ಹಿಂದೂಗಳಿಗೆ ಒಪ್ಪಿಗೆ ಇದೆಯೇ ?

‘ತಮಿಳುನಾಡಿನ ಅಭಿವೃದ್ಧಿಯಲ್ಲಿ ಕ್ರೈಸ್ತ ಮಿಶನರಿಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಅವರಿಲ್ಲದಿದ್ದರೆ ತಮಿಳುನಾಡು ಇದು ಜಂಗಲ್‌ರಾಜವಾಗಿರುವ ಬಿಹಾರದಂತೆ ಆಗುತ್ತಿತ್ತು’ ಎಂದು ತಮಿಳುನಾಡು ವಿಧಾನಸಭೆ ಸಭಾಪತಿ ಎಂ. ಅಪ್ಪಾವು ಇವರು ಖೇದಕರ ಹೇಳಿಕೆ ನೀಡಿದ್ದಾರೆ.

೩. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಬೆಳ್ಳಾರೆಯಲ್ಲಿ ಭಾಜಪ ಮುಖಂಡ ಪ್ರವೀಣ ನೆಟ್ಟಾರು ಅವರನ್ನು ಅಜ್ಞಾತ ದುಷ್ಕರ್ಮಿಗಳು ಕೊಡಲಿ ಮತ್ತು ಖಡ್ಗದಿಂದ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಜಿಹಾದಿ ಸಂಘಟನೆಯ ಜಿಹಾದಿ ಕಾರ್ಯಕರ್ತರು ಈ ಹತ್ಯೆಯ ಹಿಂದೆ ಇದ್ದಾರೆ ಎನ್ನಲಾಗುತ್ತಿದೆ.

೪. ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !

ಆಗಸ್ಟ್ ೧೫ ರಂದು, ದಕ್ಷಿಣ ಭಾರತದ ಶೃಂಗೇರಿ, ಕಾಂಚಿ ಮತ್ತು ರಾಮಚಂದ್ರಾಪುರ ಈ ೩ ದೊಡ್ಡ ಮಠಗಳ ಮೇಲೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಇವುಗಳ ೪ ಉಗ್ರರನ್ನು ಬಂಧಿಸಲಾಯಿತು.

೫. ಭಾರತದಲ್ಲಿ ಹೀಗಾಗಲು ಸಾಧ್ಯವೇ ?

ಇಸ್ರೇಲ್ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ‘ಇಸ್ರೇಲ್‌ದೊಂದಿಗೆ ನಿಷ್ಠತೆ ಇಲ್ಲದ ನಾಗರಿಕರ ಪೌರತ್ವವನ್ನು ರದ್ದು ಮಾಡಬಹುದು’ ಎಂಬ ಮಹತ್ವದ ತೀರ್ಪನ್ನು ನೀಡಿತು.

೬. ಕಾವಡ ಯಾತ್ರೆ ಭಾರತದಲ್ಲಿದೆಯೇ ಇಸ್ಲಾಮಿಕ್ ದೇಶಗಳಲ್ಲಿದೆಯೇ ?

ಉತ್ತರಪ್ರದೇಶದ ಪರಗಂವಾ ಗ್ರಾಮದಲ್ಲಿ ಕಾವಡ ಯಾತ್ರಿಕರ ಮಾರ್ಗವನ್ನು ತಡೆದು, ಅವರ ಮೇಲೆ ಹೊಲಸು ನೀರು ಮತ್ತು ಕಲ್ಲುಗಳನ್ನು ಎಸೆದ ಘಟನೆ ಜುಲೈ ೨೯ ರಂದು ನಡೆದಿದೆ. ಇದರಲ್ಲಿ ಮುಸಲ್ಮಾನ ಮಹಿಳೆಯರು ಮುಂಚೂಣಿಯಲ್ಲಿದ್ದರು.

೭. ಇಡೀ ದೇಶದಲ್ಲಿ ಇಂತಹ ಕ್ರಮ ಕೈಗೊಳ್ಳಬೇಕು!

ಅಸ್ಸಾಂನಲ್ಲಿ ಮದರಸಾಗಳಲ್ಲಿ ಜಿಹಾದಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಪಡೆದ ನಂತರ ರಾಜ್ಯ ಸರಕಾರವು ಅಂತಹ ೭೦೦ ಮದರಸಾಗಳನ್ನು ಮುಚ್ಚಿದೆ. ತನಿಖಾ ಸಂಸ್ಥೆಗಳು ೨೪ ಕ್ಕೂ ಹೆಚ್ಚು ಜಿಹಾದಿ ಗುಂಪುಗಳನ್ನು ಬಂಧಿಸಿವೆ.