ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತ !

೧. ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತ !

ಬರೇಲಿ (ಉತ್ತರಪ್ರದೇಶ) ಜಿಲ್ಲೆಯ ಹಾಜಿಯಾಪುರದಲ್ಲಿ ಹೋಳಿ ಆಚರಿಸಲು ಯೋಜಿಸುತ್ತಿದ್ದ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನ ಯುವಕರು ದಾಳಿ ಮಾಡಿದರು. ‘ಹೋಳಿ ಆಚರಿಸಿದರೆ, ಶವಗಳ ರಾಶಿ ಬೀಳಿಸುತ್ತೇವೆ’ ಎಂದು ಅವರು ಬೆದರಿಕೆ ಹಾಕಿದರು.

೨. ಈ ಪರಿಸ್ಥಿತಿ ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ !

ಅಜ್ಮೇರ್‌ ಬಳಿಯ ಬ್ಯಾವರ್‌ ಪ್ರದೇಶದಲ್ಲಿ ಮುಸಲ್ಮಾನರ ಗುಂಪೊಂದು ಶಾಲೆಯಲ್ಲಿ ಓದುತ್ತಿರುವ ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಲೈಂಗಿಕ ಶೋಷಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದ ನಂತರ ರಾಜಸ್ಥಾನ ವಿಧಾನಸಭೆಯ ಸಭಾಪತಿ ಅವರು ಅಜ್ಮೇರ್‌ನಿಂದ ೨೫೦ ಕ್ಕೂ ಹೆಚ್ಚು ಹಿಂದೂ ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.

೩. ಇಂತಹವರಿಗೆ ಯಾವಾಗ ಗಲ್ಲು ಶಿಕ್ಷೆ ಆಗುತ್ತದೆ ?

ಸ್ವಾರಗೇಟ್‌ (ಪುಣೆ) ಬಸ್‌ ನಿಲ್ದಾಣದಲ್ಲಿ ಪರವೂರಿಗೆ ಹೋಗಲು ಕಾಯುತ್ತಿದ್ದ ಯುವತಿಯನ್ನು ‘ನಾನು ಗಾಡಿಯಲ್ಲಿ ಕುಳಿತುಕೊಳ್ಳಲು ಸಹಾಯ ಮಾಡುತ್ತೇನೆ’ ಎಂದು ಮಧುರವಾಗಿ ಮಾತನಾಡಿ, ಬದಿಯಲ್ಲಿದ್ದ ಶಿವಶಾಹಿ ಬಸ್ಸಿನೊಳಗೆ ಕರೆದುಕೊಂಡು ಹೋದನು. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ಆರೋಪಿ ದತ್ತಾತ್ರೇಯ ಗಾಡೆಯನ್ನು ಪೋಲಿಸರು ಹುಡುಕುತ್ತಿದ್ದಾರೆ.

೪. ಇದು ಭಾರತೀಯರಿಗೆ ಲಜ್ಜಾಸ್ಪದ ಸಂಗತಿ !

ದೇಶದಲ್ಲಿ ಕ್ರೂರ ಮೊಘಲ್‌ ದೊರೆ ಔರಂಗಜೇಬನ ಹೆಸರಿನಲ್ಲಿ ಕಡಿಮೆಯೆಂದರೂ ೧೭೭ ನಗರಗಳು ಮತ್ತು ಗ್ರಾಮಗಳಿವೆ. ದೇಶಾದ್ಯಂತ ೬೩ ನಗರಗಳು ಅಥವಾ ಗ್ರಾಮಗಳನ್ನು ‘ಔರಂಗಾಬಾದ್’ ಎಂದು ಕರೆಯಲಾಗುತ್ತದೆ.

೫. ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಹಿಂದೂದ್ವೇಷವನ್ನು ತಿಳಿಯಿರಿ !

ಶ್ರೀರಾಮಸೇನೆ ಅಧ್ಯಕ್ಷರಾದ ಶ್ರೀ.  ಪ್ರಮೋದ ಮುತಾಲಿಕ್‌ ಅವರು ‘ಲವ್‌ ಜಿಹಾದ್’ ಪುಸ್ತಕ ಬಿಡುಗಡೆಗೆ ಶಿವಮೊಗ್ಗಕ್ಕೆ ಬಂದಾಗ ಪೊಲೀಸರು ಅವರನ್ನು ತಡೆದು ಮರಳಿ ಕಳುಹಿಸಿದರು.  ಶ್ರೀ.  ಮುತಾಲಿಕ್‌ ಇತರ ಧರ್ಮಗಳ ಬಗ್ಗೆ ದ್ವೇಷಯುತ ಭಾಷಣ ಮಾಡುತ್ತಾರೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

೬. ಕಾಂಗ್ರೆಸ್‌ ಈ ರೀತಿ ಇತರ ಧರ್ಮದವರಲ್ಲಿ ಏಕೆ ಕೇಳುವುದಿಲ್ಲ?

ಉಚಿತ ಉಡುಗೊರೆ ವಿತರಣೆಯಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರಕಾರ, ಎರಡು ಸರಕಾರಿ ಯೋಜನೆಗಳನ್ನು ನಡೆಸಲು ದೇವಾಲಯಗಳಿಂದ ಹಣ ಕೋರಿ ರಾಜ್ಯದ ಪ್ರಮುಖ ದೇವಾಲಯಗಳಿಗೆ ಪತ್ರ ಬರೆದಿದೆ.

೭. ಇನ್ನು ಅದನ್ನು ಏಕೆ ಹೇಳಬೇಕಾಗುತ್ತಿದೆ ?

 ‘ಛಾವಾ’ ಚಲನಚಿತ್ರ ನೋಡಿದ ನಂತರ ಕೆಲ ಯುವಕರು ದೆಹಲಿಯ ಅಕ್ಬರ್‌ ರಸ್ತೆ ಮತ್ತು ಹುಮಾಯೂಂ ರಸ್ತೆಗೆ ತೆರಳಿ ಹೋರ್ಡಿಂಗ್ಸ್ ಫಲಕಗಳಿಗೆ ಮಸಿ ಬಳಿದು  ವಿದ್ರೂಪಗೊಳಿಸಿದ್ದಾರೆ.  ಈ ರಸ್ತೆಗಳ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.  ಫಲಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರ ಅಂಟಿಸಿದರು.