ಭಾರತದ ಮುಸಲ್ಮಾನರು ಹೀಗೆ ಹೇಳುತ್ತಾರಾ ?

ಫಲಕ ಪ್ರಸಿದ್ಧಿಗಾಗಿ

೧. ಭಾರತದ ಮುಸಲ್ಮಾನರು ಹೀಗೆ ಹೇಳುತ್ತಾರಾ ?

ಕೆಲವು ವಾರಗಳ ಹಿಂದೆ ನನ್ನ ಡಿ.ಎನ್.ಎ. ಪರೀಕ್ಷಿಸಲಾಗಿದೆ. ಅದರಲ್ಲಿ ನನ್ನ ಡಿ.ಎನ್.ಎ. ಭಾರತೀಯ ಇರುವುದು ತಿಳಿದು ಬಂದಿದೆ ಎಂದು ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಹೇಳಿದ್ದಾರೆ.

೨. ಹಿಂದೂ ವಿದ್ಯಾರ್ಥಿಗಳ ಸಂಘಟಿತ ವಿರೋಧದ ಪರಿಣಾಮ !

ರಾಂಚಿ (ಜಾರ್ಖಂಡ್) ಇಲ್ಲಿನ ’ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ದಲ್ಲಿ ಸರಸ್ವತಿ ಪೂಜೆಯ ಆಚರಣೆಯನ್ನು ನಿಷೇಧಿಸಲಾಗಿತ್ತು. ವಿದ್ಯಾರ್ಥಿಗಳ ತೀವ್ರ ವಿರೋಧದಿಂದ ನಿಷೇಧದ ಆದೇಶವನ್ನು ಹಿಂಪಡೆಯಲಾಗಿದೆ.

೩. ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿ !

ಮಹಾರಾಷ್ಟ್ರದಲ್ಲಿ ೧೨ ನೇ ತರಗತಿಯ ಪರೀಕ್ಷೆಯು ಫೆಬ್ರವರಿ ೧೧ ರಿಂದ ಮತ್ತು ೧೦ ನೇ ತರಗತಿಯ ಪರೀಕ್ಷೆಯು ಫೆಬ್ರವರಿ ೨೧ ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ’ಬುರ್ಖಾ ಧರಿಸಿ ಪರೀಕ್ಷಾಕೇಂದ್ರಕ್ಕೆ ಪ್ರವೇಶಿಸಬಾರದು’ ಎಂದು ಮಹಾರಾಷ್ಟ್ರದ ಮೀನುಗಾರಿಕಾ ಸಚಿವ ನಿತೇಶ ರಾಣೆಯವರು ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.

೪. ’ಲವ್ ಜಿಹಾದ್’ಅನ್ನು ನಿರಾಕರಿಸುವವರು ಇದರ ಬಗ್ಗೆ ಮಾತನಾಡುತ್ತಾರೆಯೇ?

ಅಂತರ್‌ಧರ್ಮೀಯ ವಿವಾಹದಲ್ಲಿ ಪತಿ ಅಥವಾ ಪತ್ನಿ ಬಲವಂತವಾಗಿ ಇತರ ಧರ್ಮಕ್ಕೆ ಮತಾಂತರಗೊಳ್ಳಲು ಆಗ್ರಹಿಸುತ್ತಿದರೆ ಅದನ್ನು ಕ್ರೌರ್ಯ ಎಂದು ಪರಿಗಣಿಸಲಾಗುತ್ತದೆ. ಇದು ಸಂವಿಧಾನದ ವಿರುದ್ಧವೂ ಆಗಿದೆ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹಿಂದೂ ಪತ್ನಿಯನ್ನು ಮುಸಲ್ಮಾನ ಆಗಲು ಕೇಳುವ ಪ್ರಕರಣದಲ್ಲಿ ಹೇಳಿದೆ.

೫. ಬಲಿಷ್ಠ ಭಾರತವು ಪಾಕಿಸ್ತಾನವನ್ನು ನಿರ್ನಾಮ ಮಾಡುವುದು ಯಾವಾಗ ?

ವಿಶ್ವದ ಅಗ್ರ ಸೇನೆಗಳ ಶ್ರೇಯಾಂಕವನ್ನು ಪ್ರಕಟಿಸುವ ’ಗ್ಲೋಬಲ್ ಫೈರ್‌ಪವರ್ ಇಂಡೆಕ್ಸ್’ ಸಂಸ್ಥೆಯು ೨೦೨೫ ರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು ೧೨ ನೇ ಸ್ಥಾನದಲ್ಲಿದೆ.