
೧. ಪ್ರತಿಯೊಬ್ಬ ಧರ್ಮದ್ರೋಹಿಗೂ ಶಿಕ್ಷೆಯಾಗಬೇಕು !
ಮನುಸ್ಮೃತಿಯನ್ನು ಟೀಕಿಸಿದ ರಾಹುಲ್ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸುವ ಪ್ರಸ್ತಾಪವನ್ನು ಪ್ರಯಾಗರಾಜನ ಧರ್ಮಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಪ್ರಸ್ತಾಪವನ್ನು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಮಂಡಿಸಿದರು.
೨. ಈ ಅತಿಕ್ರಮಣವನ್ನು ಸಮರೋಪಾದಿಯಲ್ಲಿ ತೆಗೆದುಹಾಕಿ !
ರಕ್ಷಣಾ ಇಲಾಖೆಯು ದೇಶಾದ್ಯಂತ ೧೮ ಲಕ್ಷ ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ ೧೦ ಸಾವಿರದ ೩೫೪ ಎಕರೆ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ರಕ್ಷಣಾ ರಾಜ್ಯ ಸಚಿವ ಸಂಜಯ ಸೇಠ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
೩. ಇಂತಹವರಿಗೆ ಮರಣದಂಡನೆ ವಿಧಿಸಬೇಕು !
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಜಾಮಿಯಾ ನಗರದಲ್ಲಿ, ಮುಸಲ್ಮಾನ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ‘ಆಪ್’ ಶಾಸಕ ಅಮಾನತುಲ್ಲಾ ಖಾನ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಇದರಿಂದ ಆರೋಪಿಯು ಪರಾರಿಯಾದನು. ‘ನಾನು ನಿಮ್ಮನ್ನು ಇಲ್ಲಿಯೇ ಮುಗಿಸುತ್ತೇನೆ’, ಎಂದು ಪೊಲೀಸರಿಗೆ ಖಾನ್ ಬೆದರಿಕೆ ಹಾಕಿದರು.
೪. ಅಂತಹ ಮತಾಂಧರನ್ನು ಜೈಲಿಗೆ ಹಾಕಿ !
ಪ್ರಯಾಗರಾಜದ ಸಂಗಮ ತೀರದಲ್ಲಿ ಸ್ನಾನ ಮಾಡುವುದರಿಂದ ಮಾನವನ ಪಾಪಗಳು ತೊಳೆಯಲ್ಪಡುತ್ತವೆ. ಈಗ ಯಾರೂ ನರಕದಲ್ಲಿ ವಾಸಿಸುವುದಿಲ್ಲ ಮತ್ತು ‘ಸ್ವರ್ಗವು ‘ಹೌಸ್‌ಫುಲ್’ ಆಗುವುದು’ ಎಂದು ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಹೇಳಿಕೆ ನೀಡಿದ್ದಾರೆ.
೫. ಹಿಂದೂಗಳ ವಿಷಯದಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸಿ !
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಆಸ್ಪತ್ರೆಯಲ್ಲಿ ನಿಯೋಜಿತರಾಗಿದ್ದ ಹಿಜಾಬ್ ಧರಿಸಿದ ನರ್ಸ್ ಸಾರಾ ಅಬು ಲೆಬೆದಾ ಅವರು ಇಸ್ರೇಲಿ ರೋಗಿಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾಳೆ.
೬. ಭಯೋತ್ಪಾದಕರೊಂದಿಗೆ ನಂಟಿರುವವರನ್ನು ಗಲ್ಲಿಗೇರಿಸಿ !
ಭಯೋತ್ಪಾದಕರೊಂದಿಗೆ ನಂಟಿದ್ದ ಒಬ್ಬ ಪೊಲೀಸ್ ಹವಾಲ್ದಾರ ಸೇರಿದಂತೆ ಮೂವರು ಸರಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲರು ವಜಾಗೊಳಿಸಿದ್ದಾರೆ. ಆಗಸ್ಟ್ ೨೦೧೯ ರಿಂದ ಇಂತಹ ಕ್ರಮಕ್ಕೆ ಒಳಗಾದ ಸರಕಾರಿ ನೌಕರರ ಸಂಖ್ಯೆ ಈಗ ೬೯ ಕ್ಕೆ ತಲುಪಿದೆ.