ಮತಾಂಧನಿಗೆ ಗೋಶಾಲೆಯಲ್ಲಿ ಸೇವೆ ಮಾಡುವ ಶಿಕ್ಷೆ ನೀಡುವ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪು !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಗೋವಿನ ಕಳ್ಳತನ ಮಾಡಿರುವ ಪ್ರಕರಣದಲ್ಲಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯದಿಂದ ಮತಾಂಧನಿಗೆ ೧ ಲಕ್ಷ ರೂಪಾಯಿ ದಂಡ ಹಾಗೂ ಗೋಶಾಲೆಯಲ್ಲಿ ಸೇವೆ ಮಾಡುವ ಶಿಕ್ಷೆ 

ಸಲೀಂ ಉರ್ಫ ಕಾಲಿಯಾ ಹೆಸರಿನ ಆರೋಪಿ ಯನ್ನು ೩.೮.೨೦೨೧ ರಂದು ಗೋಮಾತೆಯ ಕಳ್ಳತನ, ಭಾರತೀಯ ದಂಡಸಂಹಿತೆ ಮತ್ತು ಗೋಹತ್ಯೆ ಪ್ರತಿಬಂಧಕ ಕಾನೂನು ೧೯೫೫ ರ ಕಲಂ ಅಡಿ ಭೋಜಿಪುರ, ಬರೇಲಿ(ಉತ್ತರಪ್ರದೇಶ) ಪೊಲೀಸ ಠಾಣೆಯಲ್ಲಿ ಬಂಧಿಸಲಾಯಿತು. ಉತ್ತರಪ್ರದೇಶ ಉಚ್ಚ ನ್ಯಾಯಾಲಯವು ಅವನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಕೆಲವು ತಿಂಗಳ ಕಾರಾಗೃಹ ವಾಸದ ಉಳಿದ ಬಳಿಕ ಆರೋಪಿಯು ಜಾಮೀನಿಗಾಗಿ ಮರಳಿ ಅರ್ಜಿ ಸಲ್ಲಿಸಿದನು. ಅವನು ಅದರಲ್ಲಿ, ‘ಕಳೆದ ೧೦ ತಿಂಗಳಿನಿಂದ ನಾನು ಕಾರಾಗೃಹದಲ್ಲಿದ್ದು, ಪ್ರಕರಣ ತೀರ್ಮಾನವಾಗುವ ಸಾಧ್ಯತೆಯಿಲ್ಲ. ನಾನು ಗೋಶಾಲೆಗೆ ೧ ಲಕ್ಷ ರೂಪಾಯಿಗಳನ್ನು ಭರಿಸಲು ಸಿದ್ಧನಿದ್ದೇನೆ. ಆದುದರಿಂದ ನನಗೆ ಜಾಮೀನಿನ ಮೇಲೆ ಬಿಡಬೇಕು ಎಂದು ಮನವಿ ಮಾಡಿದನು. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು, ಕಾರಾಗೃಹದಿಂದ ಬಿಡುಗಡೆ ಹೊಂದಿದ ಬಳಿಕ ಆರೋಪಿಯು ಒಂದು ತಿಂಗಳಲ್ಲಿ ೧ ಲಕ್ಷ ರೂಪಾಯಿಗಳನ್ನು ಯಾವುದಾದರೂ ನೊಂದಾಯಿತ ಗೋಶಾಲೆಗೆ ಕೊಡಬೇಕು. ಹಾಗೆಯೇ ೧ ತಿಂಗಳ ವರೆಗೆ ಗೋಶಾಲೆಯಲ್ಲಿ ಸ್ವತಃ ಸೇವೆ ಮಾಡಲು ಸಮಯವನ್ನು ನಿಗದಿಪಡಿಸಿಕೊಳ್ಳಬೇಕು ಎಂದು ಹೇಳಿದೆ. ನ್ಯಾಯಾಲಯದ ಎದುರಿಗೆ ಉಪಸ್ಥಿತರಾಗುವ ದೃಷ್ಟಿಯಿಂದ ನ್ಯಾಯಾಲಯವು ಅವನಿಗೆ ಇನ್ನಿತರ ಷರತ್ತುಗಳನ್ನು ಕೂಡ ಹಾಕಿದೆ.

೨. ಮತಾಂಧನು ಗೋಶಾಲೆಯಲ್ಲಿ ಸೇವೆ ಮಾಡಬೇಕೆಂಬ ಆಶ್ಚರ್ಯಕರ ಷರತ್ತು !

‘ಆರೋಪಿಗೆ ಯಾವ ಷರತ್ತುಗಳನ್ನು ಹಾಕಿ ಜಾಮೀನು ನೀಡಬೇಕು ?, ಎಂಬುದರ ಅಧಿಕಾರ ನ್ಯಾಯಾಲಯ ಕ್ಕಿದೆ. ಮತಾಂಧ ಆರೋಪಿಯು ಗೋಶಾಲೆಯಲ್ಲಿ ಸೇವೆ ಮಾಡ ಬೇಕು ಎನ್ನುವ ಈ ಶಿಕ್ಷೆ ಸ್ವಲ್ಪ ವಿಚಿತ್ರವೆನಿಸುತ್ತಿದೆ; ಏಕೆಂದರೆ ಮತಾಂಧರಿಗೆ ಯಾವತ್ತೂ ಗೋಮಾತೆಯು ಪೂಜನೀಯವೆಂದು ಅನಿಸುವುದಿಲ್ಲ. ಬದಲಾಗಿ ಅವರು ಅದರ ಹತ್ಯೆ ಮಾಡುತ್ತಾರೆ. ಅವರು ಗೋವುಗಳನ್ನು ಅತಿ ಚಿಕ್ಕ ವಾಹನದಲ್ಲಿ ನಿರ್ದಯವಾಗಿ  ತುರುಕುತ್ತಾರೆ, ಅದನ್ನು ವಧಿಸುವ ಮೊದಲು ಅವುಗಳನ್ನು ಉಪವಾಸವಿಡುತ್ತಾರೆ ಮತ್ತು ಹಸುಗಳು ಬಹಳ ಯಾತನೆ ಅನುಭವಿಸಬೇಕಾಗುತ್ತದೆ. ಇದು ಎಲ್ಲರೂ ತಿಳಿದಿರುವ  ವಿಷಯ ವಾಗಿದೆ. ಇದರಿಂದ ಇಂತಹ ಷರತ್ತುಗಳನ್ನು ಹಾಕುವುದು ಹಾಸ್ಯಾಸ್ಪದವೆನಿಸುವುದಿಲ್ಲವೇ ? ಈ ಅವಕಾಶದ ಲಾಭವನ್ನು ಪಡೆದು ಮತಾಂಧನು ಗೋಮಾತೆಯ ಜೀವಕ್ಕೆ ಅಪಾಯ ಮಾಡುವುದಿಲ್ಲವಲ್ಲ ? ಎಂಬುದರ ವಿಚಾರವಾಗಬೇಕು ಎಂದು ಗೋಭಕ್ತರಿಗೆ ಅನಿಸಿದರೆ, ಅದರಲ್ಲಿ ತಪ್ಪೇನಿದೆ ?

೩. ನ್ಯಾಯಾಲಯವು ಹಿಂದೂದ್ವೇಷಿಗಳಿಗೆ ಭಾವನೆಯ ಭರದಲ್ಲಿ ಷರತ್ತುಗಳನ್ನು ಹಾಕುವುದು ಆತ್ಮಘಾತಕವಾಗಬಹುದು

ನ್ಯಾಯಮೂರ್ತಿ ಶೇಖರ ಯಾದವ ಇವರ ತೀರ್ಪುಗಳು ಬಹಳ ಉತ್ತಮವಾಗಿರುತ್ತವೆ. ಅವರು ಪ್ರಕರಣಗಳ ತೀರ್ಪು ನೀಡುವಾಗ ದೇವರು, ಧರ್ಮ, ಪುರಾಣಗಳು, ಗ್ರಂಥಗಳ ಸಂದರ್ಭವನ್ನು ನೀಡಿ ತೀರ್ಪು ನೀಡುತ್ತಾರೆ. ಅವರ ವಿಶ್ವಾಸಾರ್ಹತೆಯ ಬಗ್ಗೆ ಯಾವುದೇ ಸಂಶಯವಿಲ್ಲ. ಪ್ರಶ್ನೆ ಕೇವಲ ಮತಾಂಧರ ನೈತಿಕತೆಯ ಬಗ್ಗೆ ಇದೆ. ಅವರು  ಯಾವಾಗಲೂ ಹಿಂದೂಗಳ ಗೌರವಚಿಹ್ನೆ, ಸಂತರು, ದೇವತೆಗಳು ಮತ್ತು ಹಿಂದೂ ಸಂಸ್ಕೃತಿ ವಿಷಯದಲ್ಲಿ ಅತಿಯಾದ ಸಿಟ್ಟು ಇಟ್ಟುಕೊಂಡು ಅದನ್ನು ನಷ್ಟಗೊಳಿಸಲು ಪ್ರಯತ್ನಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇದರಿಂದ ಭಾವನೆಗೆ ಬಲಿಯಾಗಿ ಇಂತಹ  ಷರತ್ತುಗಳನ್ನು ಹಾಕುವುದು ಆತ್ಮಘಾತಕ ಮತ್ತು ಸಂಕಷ್ಟಕ್ಕೆ ಎಡೆ ಮಾಡಿಕೊಡುವುದಿಲ್ಲವೇ ? ಎಂಬುದರ ವಿಚಾರವಾಗುವುದು ಬಹಳ ಆವಶ್ಯಕವಿದೆಯೆಂದು ಅನಿಸುತ್ತದೆ.

ಶ್ರೀಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ, ಹಿಂದೂ ವಿಧೀಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ (೬.೬.೨೦೨೨)