ಮತಾಂಧ ಗಲಭೆಕೋರರ ಮನವಿ ಮತ್ತು ದೆಹಲಿ ಉಚ್ಚನ್ಯಾಯಾಲಯದ ನಿಲುವು !

೧. ದೆಹಲಿಯ ಜಹಾಂಗೀರಪುರಿ ಗಲಭೆಯ ಮತಾಂಧ ಗಲಭೆಕೋರನು ತನಿಖೆ ತಪ್ಪಿಸಲು ದೆಹಲಿ ಉಚ್ಚ ನ್ಯಾಯಾಲಯಕ್ಕೆ ತನ್ನ ಕುಟುಂಬದವರಿಗೆ ತೊಂದರೆ ಕೊಡಬಾರದೆಂದು ಆದೇಶ ನೀಡುವಂತೆ ಹೇಳುವುದು

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧೬.೪.೨೦೨೨ ರಂದು ಹನುಮಾನ ಜಯಂತಿಯ ದಿನದಂದು ದೆಹಲಿಯ ಜಹಾಂಗೀರಪುರಿ ಪ್ರದೇಶದಲ್ಲಿ ನಡೆಸಲಾಗಿದ್ದ ಮೆರವಣಿಗೆಯ ಮೇಲೆ ಮತಾಂಧರು ಇಟ್ಟಿಗೆ, ಕಲ್ಲು, ಗಾಜುಗಳಿಂದ ಹಲ್ಲೆ ನಡೆಸಿದರು. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಯಿತು. ೫೦೦ ಕ್ಕಿಂತಲೂ ಹೆಚ್ಚು ಮತಾಂಧರಿಗೆ ಪ್ರಚೋದನೆ ನೀಡುವ ಮತ್ತು ಆಕ್ರಮಣದ ರೂವಾರಿ ಶೇಖ ಇಶ್ರಫಿಲನು ದೆಹಲಿಯ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದನು. ಅಲ್ಲಿ ಅವನು ಪ್ರಪ್ರಥಮವಾಗಿ ಪೊಲೀಸರು ಅವನ ವಿರುದ್ಧ ದಾಖಲಿಸಿರುವ ಪ್ರಕರಣದ ತನಿಖೆ ನಡೆಸುವಾಗ ‘ದೂರುದಾರ (ಇಶ್ರಫಿಲ್) ಮತ್ತು ಅವನ ಕುಟುಂಬದವರಿಗೆ ತೊಂದರೆ ಕೊಡಬಾರದು ಎಂದು ಆದೇಶ ನೀಡಬೇಕು’, ಎಂದು ವಿನಂತಿಸಿದನು. ‘ಪೊಲೀಸರಿಗೆ ಅಮಾಯಕ ನಾಗರಿಕರ ಮನಸ್ಸಿನಲ್ಲಿ ಭಯ ಉತ್ಪನ್ನ ಮಾಡುವ ಅಧಿಕಾರವಿಲ್ಲ; ಇದರಿಂದ ಅವರ ಮೂಲಭೂತ ಅಧಿಕಾರಗಳ ಕಗ್ಗೊಲೆಯಾಗುತ್ತದೆ’, ಎಂದು ದೂರಿನಲ್ಲಿ ಹೇಳಿದ್ದನು. ಸ್ವಲ್ಪದರಲ್ಲಿ ಈ ರೀತಿ ಮನವಿ ಮಾಡುವುದೆಂದರೆ, ಪೊಲೀಸರ ತನಿಖೆಯಲ್ಲಿ ಒಂದು ರೀತಿಯಿಂದ ಅಡ್ಡಿಯುಂಟು ಮಾಡುವುದಾಗಿದೆ.

ಈ ಪ್ರಕರಣದಲ್ಲಿ ಸರಕಾರ ಮತ್ತು ಪೊಲೀಸರ ವತಿಯಿಂದ ನ್ಯಾಯಾಲಯದ ಮುಂದೆ ಸವಿಸ್ತಾರವಾಗಿ ಮಾಹಿತಿಯನ್ನು ಮಂಡಿಸಲಾಯಿತು. ಅವರು ಹೇಳಿಕೆಯಲ್ಲಿ, ಹನುಮಾನ ಜಯಂತಿಯ ಮೆರವಣಿಗೆ ಜಹಾಂಗೀರಪುರಿ ಪ್ರದೇಶದಿಂದ ಹೋಗುತ್ತಿರುವಾಗ ಮಸೀದಿಯ ಹತ್ತಿರ ಬಂದಾಗ ದೂರುದಾರ ಮತಾಂಧನು ಹಿಂದೂಗಳ ವಿರುದ್ಧ ೫೦೦ ಜನರ ಗುಂಪನ್ನು ಪ್ರಚೋದಿಸಿದನು. ಅಲ್ಲದೇ ಕಾನೂನು ಕೈಗೆತ್ತಿಕೊಂಡು ಕಾನೂನು-ಸುವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸಿದನು. ಅವರೆಲ್ಲರೂ ಕಲ್ಲು, ಗಾಜಿನ ಬಾಟಲಿಗಳು, ಇಟ್ಟಿಗೆ, ಖಡ್ಗ, ಬಂದೂಕು ಮುಂತಾದವುಗಳಿಂದ ಹಿಂದೂಗಳ ಮತ್ತು ಪೊಲೀಸರ ಮೇಲೆ ಆಕ್ರಮಣ ನಡೆಸಿದರು, ಅಲ್ಲದೇ ಅನೇಕ ಸ್ಥಳಗಳಲ್ಲಿ ಬೆಂಕಿ ಹಚ್ಚಿದರು. ಈ ಮತಾಂಧರನ್ನು ನಿಯಂತ್ರಿಸಲು ಪೊಲೀಸರಿಗೆ ೫೨ ಸಲ ಅಶ್ರುವಾಯುವಿನ ಪ್ರಯೋಗ ಮತ್ತು ಗೋಲಿಬಾರ ನಡೆಸಬೇಕಾಯಿತು. ಇದು ಬಹುದೊಡ್ಡ ಸಂಚಾಗಿದೆ ಎಂದು ಪೊಲೀಸರು ತಿಳಿಸಿದರು.

೨. ಪೊಲೀಸರು ಗಲಭೆಕೋರರ ಮೇಲೆ ಪ್ರಕರಣ ದಾಖಲಿಸುವುದು

ಗಲಭೆಯ ತನಿಖೆ ನಡೆಸುವಾಗ ಪೊಲೀಸರಿಗೆ ಮತಾಂಧ ಗಲಭೆಕೋರರ ಮನೆಯ ಮೇಲ್ಛಾವಣಿಯ ಮೇಲೆ ಕಲ್ಲು, ಗಾಜಿನ ಬಾಟಲಿ ಮತ್ತು ಇತರ ಸಾಮಗ್ರಿಗಳನ್ನು ಸಂಗ್ರಹಿಸಿರುವುದು ಕಂಡು ಬಂದಿದೆ. ಈ ಸಾಮಗ್ರಿಗಳು ದೂರುದಾರನ ಮನೆಯಲ್ಲಿಯೂ ಸಿಕ್ಕಿದೆ. ಈ ಮತಾಂಧನು ಕಳೆದ ಅನೇಕ ದಿನಗಳಿಂದ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನು. ಈ ಗಲಭೆಯ ಪ್ರಕರಣದಲ್ಲಿ ಪೊಲೀಸರು ಮತಾಂಧನ ವಿರುದ್ಧ ‘ಗಲಭೆ ನಡೆಸುವುದು, ಸರಕಾರಿ ನೌಕರರ ಕರ್ತವ್ಯದಲ್ಲಿ ವ್ಯತ್ಯಯ ಉಂಟು ಮಾಡುವುದು, ಗಂಭೀರ ನೋವು ಮಾಡುವುದು, ಸಂಚು ರಚಿಸುವುದು, ಬೆಂಕಿ ಹಚ್ಚುವುದು, ಮನೆಗಳನ್ನು ಸುಡುವುದು, ಸಾರ್ವಜನಿಕ ಸ್ಥಳಗಳಿಗೆ ಹಾನಿ ಮಾಡುವುದು, ಎರಡು ಸಮಾಜದಲ್ಲಿ ದ್ವೇಷ ಹುಟ್ಟಿಸುವುದು, ಸಮೂಹವನ್ನು ಗಲಭೆಗೆ ಪ್ರಚೋದಿಸಿರುವುದು ಹಾಗೂ ‘ಆರ್ಮ್ಸ (ಶಸ್ತ್ರಾಸ್ತ್ರ)’ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

೩. ಮತಾಂಧನು ನ್ಯಾಯಾಲಯದ ಎದುರು ತನಿಖೆಯನ್ನು ಸುಳ್ಳು ಎಂದು ರೂಪಿಸಲು ಪ್ರಯತ್ನಿಸುವುದು

ಮತಾಂಧನು ತನ್ನ ದೂರಿನಲ್ಲಿ ಮುಂದಿನ ಅಂಶಗಳನ್ನು ಹೇಳಿದ್ದಾನೆ, ‘ತನ್ನ ತಂದೆಯವರು ೧೪ ಎಪ್ರಿಲ್ ರಂದು ಮೃತಪಟ್ಟರು. ಅವರ ಮರಣದ ಬಳಿಕ ಧಾರ್ಮಿಕ ವಿಧಿಗಳನ್ನು ಮಾಡಲು ಅವನು ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರು ಹೀಗೆ ೫೦೦ ಜನರೊಂದಿಗೆ ದಫನಭೂಮಿಗೆ (ಖಬ್ರಸ್ಥಾನ) ಹೋಗಿದ್ದನು. ಗಲಭೆಯಲ್ಲಿ ಅವನ ಯಾವುದೇ ಕೈವಾಡ ಇಲ್ಲದೇ ಇರುವಾಗ ಪೊಲೀಸರು ವಿನಾಕಾರಣ ತನ್ನ ಸಹೋದರನನ್ನು ಬಂಧಿಸಿದರು ಮತ್ತು ಈಗಲೂ ಇತರ ವ್ಯಕ್ತಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಆಧಾರದಲ್ಲಿ ನ್ಯಾಯಾಲಯವು ದೂರಿನ ಕುರಿತು ವಿಚಾರಣೆ ನಡೆಸಿತು. ಮತಾಂಧನು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿದ್ದಾನೆ. ಮತಾಂಧನ ಪ್ರಕ್ಷುಬ್ಧ ಗುಂಪನ್ನು ನಿಯಂತ್ರಿಸಲು ಪೊಲೀಸರಿಗೆ ೫೨ ಬಾರಿ ಅಶ್ರುವಾಯುವನ್ನು ಉಪಯೋಗಿಸಬೇಕಾಯಿತು. ಆರೋಪಿ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಬಂಧನದಿಂದ ತಪ್ಪಿಸಿಕೊಳ್ಳಲು ಪರೋಕ್ಷ್ಷವಾಗಿ ಜಾಮೀನು ಕೋರುತ್ತಿದ್ದಾನೆ. ‘ಪ್ರಕರಣದ ತನಿಖೆ ನಡೆದಿರುವುದರಿಂದ ಅವನಿಗೆ ಜಾಮೀನು ನೀಡಬಾರದು ಮತ್ತು ಅದರಲ್ಲಿ ಹಸ್ತಕ್ಷೇಪ ಮಾಡಬಾರದು’, ಎಂದು ಉಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿತು. ಸರ್ವೋಚ್ಚ ನ್ಯಾಯಾಲಯವು ನೀಡಿದ ಹಳೆಯ ತೀರ್ಪುಗಳ ಉದಾಹರಣೆಗಳನ್ನು ತೆಗೆದುಕೊಂಡು ಉಚ್ಚ ನ್ಯಾಯಾಲಯವು ಈ ಬಗ್ಗೆ ಹೇಳುತ್ತಾ, ‘ಪೊಲೀಸರು ಮತ್ತು ನ್ಯಾಯ ವ್ಯವಸ್ಥೆಗಳು ಪರಸ್ಪರರ ಸಹಕಾರದೊಂದಿಗೆ ಪೂರಕವಾಗಿ ನಾಗರಿಕರ ಮೂಲಭೂತ ಅಧಿಕಾರ ಮತ್ತು ಕಾನೂನು-ಸುವ್ಯವಸ್ಥೆಯ ರಕ್ಷಣೆ ಮಾಡುತ್ತದೆ. ತನಿಖೆ ನಡೆಸುವುದು, ಪೊಲೀಸರ ಮಹತ್ವದ ಅಧಿಕಾರವಾಗಿವೆ. ಆದುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅವರಿಗೆ ತನಿಖೆ ನಡೆಸಲು ಅನುವು ಮಾಡಿಕೊಡುವುದು ಆವಶ್ಯಕವಾಗಿದೆಯೆಂದು ನ್ಯಾಯಾಲಯವು ಗಮನಿಸಿತು.

೪. ಪೊಲೀಸರ ತನಿಖೆಯಲ್ಲಿ ಎದುರಾಗುವ ಅಡಚಣೆಯನ್ನು ದೂರಗೊಳಿಸಲು ದೆಹಲಿ ಉಚ್ಚನ್ಯಾಯಾಲಯವು ಮತಾಂಧನ ಅರ್ಜಿಯನ್ನು ಸಮ್ಮತಿಸದಿರುವುದು

ಈ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ನ್ಯಾಯಾಲಯವು ಮತಾಂಧನ ದೂರಿಗೆ ಅಸಮ್ಮತಿ ವ್ಯಕ್ತಪಡಿಸಿತು. ಅದರಲ್ಲಿ ಒಮ್ಮೆ ಅಲ್ಲ, ಅನೇಕ ಬಾರಿ ನಮೂದಿಸಿದೆ, ‘ದೂರುದಾರ (ಮತಾಂಧ)’ ನು ಸಮುದಾಯದ ೫೦೦ ಜನರ ಸಹಾಯದಿಂದ ಆಕ್ರಮಣ ಮಾಡುತ್ತಿದ್ದನು. ಇದರಿಂದ ಈ ಸಂದರ್ಭದಲ್ಲಿ ನ್ಯಾಯಾಲಯವು ಪೊಲೀಸರ ತನಿಖೆಯಲ್ಲಿ ಅಡ್ಡಿಯನ್ನುಂಟು ಮಾಡಲು ಇಚ್ಛಿಸುವುದಿಲ್ಲ. ಕೇವಲ ತನಿಖೆಯಲ್ಲಿ ಅಡ್ಡಿ ತರುವುದು ಮತ್ತು ಅದನ್ನು ಸ್ಥಗಿತಗೊಳಿಸುವುದೇ ಅವನ ಉದ್ದೇಶವಾಗಿದೆ. ಮೂಲಭೂತ ಅಧಿಕಾರದ ಹೆಸರಿನಲ್ಲಿ ಪೊಲೀಸರಿಗೆ ತನಿಖೆ ನಡೆಸಲು ಬಿಡದೇ ಇರುವುದು ಸೂಕ್ತವಲ್ಲ. ಮೊದಲು ಗಲಭೆಯಲ್ಲಿ ಭಾಗವಹಿಸುವುದು ಮತ್ತು ಬಳಿಕ ಮೂಲಭೂತ ಅಧಿಕಾರಗಳ ಕಗ್ಗೊಲೆಯಾಗುತ್ತಿದೆಯೆಂದು ಹೇಳುವುದು ಸರಿಯಲ್ಲ. ಮತಾಂಧರು ತಮ್ಮ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಪಾಲಿಸಬೇಕು. ಈ ಕಾರಣದಿಂದ ನಾವು ದೂರನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಿಲ್ಲ, ಎಂದು ಹೇಳಿ ನ್ಯಾಯಾಲಯವು ದೆಹಲಿ ಪೊಲೀಸರ ವಿರುದ್ಧದ ಮತಾಂಧನ ದೂರಿಗೆ ಅಸಮ್ಮತಿ ವ್ಯಕ್ತಪಡಿಸಿತು.

ಶ್ರೀಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು, ಮತ್ತು ನ್ಯಾಯವಾದಿ ಮುಂಬೈ ಉಚ್ಚ ನ್ಯಾಯಾಲಯ (೪.೬.೨೦೨೨)