ಎಚ್ಚರ ! ೨೦೪೭ ರಲ್ಲಿ ‘ದಾರ-ಉಲ್-ಇಸ್ಲಾಮ್ !

ಮೂ ಲತಃ ಪಾಕಿಸ್ತಾನದ ಮತ್ತು ಕೆನಡಾದಲ್ಲಿ ನೆಲೆಸಿರುವ ಖ್ಯಾತ ಪತ್ರಕರ್ತ ಮತ್ತು ಬರಹಗಾರ ತಾರೆಕ್ ಫತೆಹ್ ಆಗಿರಲಿ ಅಥವಾ ‘ರಾಜಕೀಯ ಇಸ್ಲಾಮ್’ನ ಅಧ್ಯಯನ ಮಾಡುವ ಇತರ ತಜ್ಞರು ಹೇಳುವ ‘ಗಝವಾ-ಎ-ಹಿಂದ್’ ಎಂಬ ಪದವನ್ನು ನಾವು ಮೇಲಿಂದ ಮೇಲೆ ಕೇಳುತ್ತೇವೆ. ಈ ಇಸ್ಲಾಮಿ ಸಂಕಲ್ಪನೆಯ ಸರಳ ಅರ್ಥ ‘ಮುಸಲ್ಮಾನೇತರರನ್ನು ನಿರ್ನಾಮ ಮಾಡುವ ಮೂಲಕ ಇಡೀ ಹಿಂದೂಸ್ಥಾನವನ್ನು ಇಸ್ಲಾಮಿಕ್ ಮಾಡುವುದು ! ಇದನ್ನು ನಮೂದಿಸುವ ಹಿಂದಿನ ಕಾರಣವೆಂದರೆ ಬಿಹಾರನಲ್ಲಿ ೧೪ ಜುಲೈ ಈ ದಿನದಂದು ಮಹಮ್ಮದ ಜಲಾಲುದ್ದೀನ ಮತ್ತು ಅಥರ ಪರವೇಝ ಈ ಮತಾಂಧ ಮುಸಲ್ಮಾನರು ‘೨೦೪೭ ನೇ ಇಸವಿಯಲ್ಲಿ ಭಾರತ ವನ್ನು ಇಸ್ಲಾಮಿ ರಾಷ್ಟ್ರವನ್ನಾಗಿ ಮಾಡುತ್ತೇವೆ’, ಎಂಬ ಧ್ಯೇಯ ವನ್ನಿಟ್ಟುಕೊಂಡಿರುವುದು ಬಹಿರಂಗವಾಗಿದೆ. ಇಷ್ಟೇ ಅಲ್ಲದೇ ತಮ್ಮ ಈ ಕುತಂತ್ರವನ್ನು ಸಾಧಿಸಲು ಮಾಡಿದ ೮ ಪುಟಗಳ ಕೃತಿ ಕಾರ್ಯಕ್ರಮವೂ ಪೊಲೀಸರ ಕೈಗೆ ಸಿಕ್ಕಿದೆ. ಇದರಲ್ಲಿ ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ವು (‘ಪಿ.ಎಫ್.ಐ.’ವು) ‘ಕೇವಲ ಶೇ. ೧೦ ರಷ್ಟು ಮುಸಲ್ಮಾನರು ತನ್ನನ್ನು ಬೆಂಬಲಿಸಿದರೂ ಭಯಗ್ರಸ್ತ ಬಹುಸಂಖ್ಯಾತ ಸಮಾಜವನ್ನು ವಶಪಡಿಸಿ (ಇಸ್ಲಾಂನ) ಪುನರ್‌ವೈಭವವನ್ನು ಪಡೆಯಬಹುದು’, ಎಂದು ಹೇಳಿರುವುದೂ ಕಂಡು ಬಂತು. ಜಲಾಲುದ್ದೀನ್ ಬಿಹಾರದ ಪೊಲೀಸ್ ಮಾಜಿ ಅಧಿಕಾರಿಯಾಗಿದ್ದರೆ ಪರವೇಝ್‌ನು ನಿಷೇಧಿತ ‘ಸಿಮಿ’ ಈ ಭಯೋತ್ಪಾದನಾ ಸಂಘಟನೆಯ ಸದಸ್ಯ ! ಇವರಿಬ್ಬರೂ ‘ಪಿ.ಎಫ್.ಐ.’ ಮತ್ತು ‘ಎಸ್.ಡಿ.ಪಿ.ಐ.’ ಈ ಭಯೋತ್ಪಾದನಾ ಸಂಘಟನೆಗಳ ಸದಸ್ಯರೂ ಆಗಿದ್ದಾರೆ. ಇವರಿಬ್ಬರೂ ‘ಮಾರ್ಶಲ್ ಆಟ್ಸ್’ನ ಹೆಸರಿನಲ್ಲಿ ವಿವಿಧ ರಾಜ್ಯಗಳಲ್ಲಿ ಮುಸಲ್ಮಾನರಿಗೆ ಖಡ್ಗ ಮತ್ತು ಚಾಕೂ ನಡೆಸುವ ತರಬೇತಿಯನ್ನು ನೀಡುತ್ತಿದ್ದರು. ‘ಹಿಂದೂಗಳ ದೇಶದಲ್ಲಿ ಅವರ ಜೀವಕ್ಕೆ ಕುತ್ತು ತರುವ ಈ ಜಿಹಾದ್ ಈಗ ಎಲ್ಲಿಯವರೆಗೆ ಹೋಗಲಿದೆ’, ಎಂದು ಹೇಳಲು ಈ ಉದಾಹರಣೆ ಸಾಕಾಗುವುದಿಲ್ಲವೇ ?

ಸಾಮಾನ್ಯವಾಗಿ ಬಜರಂಗ ದಳವು ಹಿಂದೂ ಯುವಕ-ಯುವತಿಯರಿಗೆ ಸ್ವಸಂರಕ್ಷಣೆಗಾಗಿ ಖಡ್ಗ ಮುಂತಾದ ಶಸ್ತ್ರಗಳ ತರಬೇತಿಯನ್ನು ನೀಡಿದರೆ ಹೊಟ್ಟೆನೋವಿನಿಂದ ಬಳಲುವ ಪ್ರಗತಿ (ಅಧೋಗತಿ)ಪರ ಸಮೂಹ ಈಗೆಲ್ಲಿ ಅಡಗಿದೆ ? ‘ಸಂವಿಧಾನಿಕ ವಾಗಿ ಹಿಂದೂ ರಾಷ್ಟ್ರ ಸ್ಥಾಪಿಸೋಣ’, ಎಂಬ ಹಿಂದುತ್ವನಿಷ್ಠರ ಘೋಷಣೆಯ ನಂತರ ಬೊಬ್ಬೆ ಹೊಡೆಯುವ ಜಾತ್ಯತೀತವಾದಿ ಗಳು ಈಗೆಲ್ಲಿದ್ದಾರೆ ? ಅಥವಾ ಅವರಿಗೆ ಇಸ್ಲಾಮಿ ರಾಷ್ಟ್ರವನ್ನು ನಡೆಸಬೇಕಿದೆಯೇ ? ಈ ಕೃತ್ಯವೆಂದರೆ ಢೋಂಗಿ ಧರ್ಮನಿರಪೇಕ್ಷತೆ ಮತ್ತು ಹಿಂದೂಘಾತಕ ಇಬ್ಬಗೆನೀತಿಯ ಉದಾಹರಣೆಯಾಗಿದೆ !

ಮಂಜುಗಡ್ಡೆಯ ತುದಿ !

ಉದಯಪುರದ ಕನ್ಹೈಯಾಲಾಲರ ಹತ್ಯಾಕಾಂಡದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾದಳಕ್ಕೆ ಆಘಾತಕಾರಿ ಮಾಹಿತಿ ಸಿಕ್ಕಿದ್ದು ಇಬ್ಬರೂ ಹಂತಕರೂ ನಿರಂತರ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ‘ದಾವತ್-ಎ-ಸ್ಲಾಮಿ’ಯ ೧೮ ಭಯೋತ್ಪಾದಕರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿತ್ತು. ಈ ೧೮ ಜನರೊಂದಿಗೆ ‘ಭಾರತದ ೨೫ ರಾಜ್ಯಗಳಲ್ಲಿನ ೩೦೦ ಜನರೂ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಸಹ ಗುಪ್ತಚರ ವಿಭಾಗಕ್ಕೆ ಸಿಕ್ಕಿತು. ಈ ಮಾಧ್ಯಮದಿಂದ ನೂಪುರ ಶರ್ಮಾ ಇವರನ್ನು ಸಮರ್ಥಿಸುವವರನ್ನು ಹೆಕ್ಕಿ ತೆಗೆದಿದ್ದು ಅವರ ಶಿರಚ್ಛೇದ ಮಾಡುವ ನಿಯೋಜನೆ ಇದೆ. ‘ದಾವತ್-ಎ-ಇಸ್ಲಾಮಿ’ಯಿಂದ ಈ ಎಲ್ಲರಿಗೂ ‘ಆನ್‌ಲೈನ್’ ತರಬೇತಿ ನೀಡುವಾಗ ‘ಉದಯಪುರ ಸ್ಟೈಲ್ನಲ್ಲಿ ವಿಡಿಯೋ ತಯಾರಿಸಿ ಶಿರಚ್ಛೇದ ಮಾಡುವುದರ ಕಲಿಸಲಾಗಿದೆ. ಇದರಿಂದ ಎಲ್ಲ ೨೫ ರಾಜ್ಯಗಳಿಗೆ ಜಾಗರೂಕರಾಗಿರಲು ಎಚ್ಚರಿಕೆಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಘಟಿಸುವ ಭಯೋತ್ಪಾದನಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ ಅಸಂಖ್ಯಾತ ‘ಸ್ಲಿಪರ್ ಸೆಲ್ಸ್’ ಸಕ್ರಿಯರಾಗಿದ್ದು ಅವರು ಭಯೋತ್ಪಾದಕ ರಿಗೆ ಸಹಾಯ ಮಾಡುತ್ತಿರುವುದು ಬೆಳಕಿಗೆ ಬರುತ್ತಿರುತ್ತದೆ. ಇದರಿಂದ ಭಯೋತ್ಪಾದಕರಿಗೆ ಬೆಂಬಲ ನೀಡುವ ಮತಾಂಧ ಮುಸಲ್ಮಾನರ ಸಂಖ್ಯೆ ಕಡಿಮೆ ಇಲ್ಲವೆಂಬುದು ಗಮನಕ್ಕೆ ಬರುತ್ತದೆ. ಅಂದರೆ ಹಿಂದೂಗಳ ‘ಪುಣ್ಯ’ ಮತ್ತು ‘ಪಿತೃ’ ಭೂಮಿ ಈಗ ನಿಜವಾಗಿಯೂ ‘ಗಝವಾ-ಎ-ಹಿಂದ್’ನ ದಿಶೆ ಯತ್ತ ಮಾರ್ಗಕ್ರಮಣ ಮಾಡುತ್ತಿದೆ. ಇವೆಲ್ಲವೂ ಮಂಜುಗಡ್ಡೆಯ ಕೇವಲ ಒಂದು ತುದಿಯಾಗಿದೆ.

ಭಾರತವು ‘ಲೆಬೆನಾನ್’ ಆಗುವುದೇ ?

ಲೆಬೆನಾನ್ ಒಂದು ಕಾಲದಲ್ಲಿ ಮಧ್ಯಪೂರ್ವದ ಏಕೈಕ ಕ್ರೈಸ್ತ ಪ್ರಜಾಪ್ರಭುತ್ವವಾಗಿತ್ತು. ನಾಲ್ಕೂ ಬದಿಗಳಿಂದ ಇಸ್ಲಾಮಿ ರಾಷ್ಟ್ರಗಳಿಂದ ಸುತ್ತುವರಿದ, ಕ್ರೈಸ್ತ ಬಹುಸಂಖ್ಯಾತವಾಗಿರುವ ಮತ್ತು ಮಧ್ಯಪೂರ್ವದ ‘ಸ್ವಿಝರ್‌ಲೈಂಡ್’ಎಂದು ತಿಳಿದುಕೊಳ್ಳಲಾಗುವ ಲೆಬೆನಾನ್ ಇಂದು ಮುಸಲ್ಮಾನ ರಾಷ್ಟ್ರವಾಗಿದೆ. ಅದರ ಉದಾ ಹರಣೆಯಿಂದ ಭಾರತೀಯ ಹಿಂದೂಗಳು ಬಹಳಷ್ಟು ಕಲಿ ಯುವಂತಿದೆ. ೧೯೫೦ ನೇ ದಶಕದಲ್ಲಿ ಸುವರ್ಣ ದಿನಗಳನ್ನು ನೋಡಿದ ಲೆಬೆನಾನ್‌ನ ಸ್ವರೂಪ ಒಮ್ಮೆಲೇ ಬದಲಾಯಿತು. ೧೯೬೦-೭೦ ನೇ ದಶಕದಲ್ಲಿ ಅಲ್ಲಾದ ಯಾದವಿ ಯುದ್ಧದಿಂದ ಈ ಕ್ರೈಸ್ತ ಬಹುಸಂಖ್ಯಾತ ರಾಷ್ಟ್ರವು ಮುಸಲ್ಮಾನ ಅಂದರೆ ಶರಿಯತ್‌ಗನುಸಾರ ನಡೆಯುವ ರಾಷ್ಟ್ರವಾಯಿತು. ಅರೇಬಿಕ್ ಮೌಲ್ಯಗಳನ್ನು ಸಮರ್ಥಿಸುವ ಪ್ಯಾಲೆಸ್ಟೈನ್ ಸಮಾಜ ಮತ್ತು ಸಿರಿಯಾದಿಂದ ಬಂದ ಲಕ್ಷಗಟ್ಟಲೆ ನಿರಾಶ್ರಿತರಿಂದ ಅಲ್ಲಿನ ಕ್ರೈಸ್ತರ ಜೀವನವು ಕಂಗೆಟ್ಟಿದೆ. ೧೯೨೦ ನೇ ಇಸವಿಯಲ್ಲಿ ಒಟ್ಟು ಶೇ. ೭೫ ರಷ್ಟಿರುವ ಕ್ರೈಸ್ತರು ಯಾದವಿ ಯುದ್ಧದ ಸಮಯದಲ್ಲಿ ಕಡಿಮೆ ಯಾದರು ಮತ್ತು ಮುಸಲ್ಮಾನರು ಅಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು. ಲೆಬೆನಿಜ್ ಕ್ರೈಸ್ತ ಸಮುದಾಯವು ತಮ್ಮ ದೇಶವನ್ನು ಬಿಟ್ಟು ಹೋಗಬೇಕಾಗುವುದು ಎಂದು ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ. ಅದರಲ್ಲಿನ ಕೆಲವರು ಇಂದು ಸ್ವದೇಶಕ್ಕೆ ಹಿಂದಿರುಗಿದ್ದರೂ ಲೆಬೆನಾನ್‌ನ ಮುಖವು ಬದಲಾಗಿದೆ. ಭಾರತದಲ್ಲಿ ಇದಕ್ಕಿಂತ ಇದಕ್ಕಿಂತ ಭಿನ್ನ ಪರಿಸ್ಥಿತಿ ಇಲ್ಲ. ಇಂದು ಭಾರತ ಕೋಟಿಗಟ್ಟಲೆ ಬಾಂಗ್ಲಾದೇಶಿ ನುಸುಳುಕೋರರನ್ನು ಸಹಿಸಿ ಕೊಳ್ಳುತ್ತಿದೆ. ಅವರಲ್ಲಿ ಹಲವರಿಗೆ ಮತ ನೀಡುವ ಅಧಿಕಾರವು ಪ್ರಾಪ್ತವಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ನಡೆಸು ವುದರಲ್ಲಿ ಅವರದ್ದೇ ಸಿಂಹಪಾಲಿದೆ. ಕಳೆದ ಕೆಲವು ವರ್ಷಗಳ ಕಾಲವನ್ನು ನೋಡಿದರೆ ಭವಿಷ್ಯದಲ್ಲಿ ಭಾರತಕ್ಕೆ ಮತ್ತು ಪರ್ಯಾಯ ವಾಗಿ ಹಿಂದೂಗಳಿಗೆ ಏನು ಕಾದಿದೆ, ಎಂಬ ಕಲ್ಪನೆಯನ್ನು ಮಾಡಬಹುದು. ಹಿಂದೂಗಳ ಹಿತದಲ್ಲಿ ಏನೇ ಮಾಡಿದರೂ ಸಂಪೂರ್ಣ ದೇಶದಲ್ಲಿ ಹಿಂಸಾತ್ಮಕ ಕಾರ್ಯಾಚರಣೆ ನಡೆ ಯುತ್ತದೆ. ಪೌರತ್ವ ತಿದ್ದುಪಡಿ ಕಾನೂನು ಇದು ಪ್ರಸ್ತುತ ಉದಾಹರಣೆಯಾಗಿದೆ ! ಸಮಾನ ನಾಗರಿಕ ಕಾನೂನು ಇದ್ದರೆ ಏನಾಗುತ್ತದೆ, ಎಂಬುದರ ಕನಸಿನಲ್ಲಿನ ಅನುಭವವೂ ಕಲ್ಪನಾತೀತವಾಗಿದೆ. ನೂಪುರ ಶರ್ಮಾ ಇವರ ಪ್ರಕರಣದಿಂದಾದ ಗಲಭೆ ಮತ್ತು ಅನಂತರ ಸಂಭವಿಸಿದ ಹತ್ಯೆಯಿಂದ ಇಡೀ ದೇಶವು ಕಂಪಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಆಧಾರಸ್ತಂಭಗಳೂ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದು ಬಹುಸಂಖ್ಯಾತ ಹಿಂದೂಗಳು ದೇಶದಲ್ಲಿ ತಬ್ಬಲಿಯಾಗಿದ್ದಾರೆ. ಅದರಲ್ಲಿ ೨೦೪೭ ರಲ್ಲಿ ಭಾರತವನ್ನು ಇಸ್ಲಾಮಿ ಮಾಡುವ ಚಟುವಟಿಕೆಗಳು ಸಂಭವಿಸುತ್ತಿರುವಾಗ ಭಾರತ ಇದರ ವಿರುದ್ಧ ಏನೂ ಮಾಡದಿದ್ದರೆ, ‘ದಾರ-ಉಲ್-ಹರಬ್’ (ಎಲ್ಲಿ ಇಸ್ಲಾಮ್‌ನ ರಾಜ್ಯವಿಲ್ಲವೋ, ಅದು) ಆದ ಹಿಂದೂಸ್ಥಾನ ‘ದಾರ-ಉಲ್-ಇಸ್ಲಾಮ್’ (ಇಸ್ಲಾಮ್‌ನ ರಾಜ್ಯವಿರುವ ಭೂಮಿ) ಆಗಲು ಸಮಯ ತಗಲಲಾರದು ! ಹಿಂದೂಗಳೇ, ಎಚ್ಚೆತ್ತುಕೊಳ್ಳಿರಿ ಇಲ್ಲವೇ ‘ಎರಡನೇ ಲೆಬೆನಾನ್’ ನೋಡಲು ಸಿದ್ಧರಾಗಿ !