ರಾಷ್ಟ್ರೀಯ ಸ್ವಯಂಸೇವಕ ಸಂಘದ ೧೩ ಸ್ವಯಂಸೇವಕರು ನಿರ್ದೋಷ ಸಾಬೀತು !

ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣ

ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು!

ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತ ವಿಷ್ಣು

ತಿರುವನಂತಪುರಮ (ಕೇರಳ) – ೨೦೦೮ ಏಪ್ರಿಲ ೦೧ ರಂದು ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತ ವಿಷ್ಣು ಎಂಬವನ ಹತ್ಯೆ ಪ್ರಕರಣದಲ್ಲಿ ಕೇರಳ ಉಚ್ಚ ನ್ಯಾಯಾಲಯವು ರಾಷ್ಟ್ರೀಯ ಸ್ವಯಂಸೇವಕ ಸಂಘದ ೧೩ ಸ್ವಯಂಸೇವಕರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ. ಸತ್ರ ನ್ಯಾಯಾಲಯವು ೨೦೧೬ ರಲ್ಲಿ ಈ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರ ವಿರುದ್ಧ ಅವರು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣಾ ಅಧಿಕಾರಿಗಳು ಕಥೆಯಂತೆ ಘಟನೆಯನ್ನು ನಿರೂಪಿಸಿ ಸಾಕ್ಷ್ಯ ಮತ್ತು ಸಾಕ್ಷಿಗಳನ್ನು ಸಂಗ್ರಹಿಸಿದರು. ಇಡೀ ಪ್ರಕರಣ ರಾಜಕೀಯ ಸೇಡಿನ ಉದಾಹರಣೆ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಆರೋಪಿಗಳನ್ನು ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಲಾಗಿದ್ದು ಸಾಕ್ಷಿ ಹೇಳುವಾಗ ಸಾಕ್ಷಿಗಳಿಗೆ ಏನು ಹೇಳಬೇಕೆಂದು ತಿಳಿಸಿ ಹೇಳಲಾಗಿತ್ತು. ಈ ಮೂಲಕ ಈ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಹತ್ಯೆಯ ಸಮಯದಲ್ಲಿ ಹಂತಕರ ಮುಖಗಳು ಮುಚ್ಚಲಾಗಿತ್ತು. ಆದರೆ ತನಿಖಾಧಿಕಾರಿ ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡಿರುವದಿಲ್ಲ. ಅವರು ಕಥೆಯನ್ನು ಹೇಳಿದಂತೆ ಘಟನೆಯನ್ನು ಹೇಳಲು ಪ್ರಯತ್ನಿಸಿದರು ಮತ್ತು ಅದಕ್ಕೆ ಅನುಗುಣವಾಗಿ ಸಾಕ್ಷ್ಯ ಮತ್ತು ಸಾಕ್ಷಿಗಳನ್ನು ಸಂಗ್ರಹಿಸಿದರು. (ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನ್ಯಾಯಾಲಯ ಆದೇಶಿಸಬೇಕು ಎಂದು ಜನರಿಗೆ ಅನಿಸುತ್ತದೆ ! ಅಮಾಯಕರು ಕಳೆದ ೧೪ ವರ್ಷಗಳಲ್ಲಿ ಅನುಭವಿಸಿದ ನಷ್ಟಕ್ಕೆ ಪರಿಹಾರ ನೀಡಬೆಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಲೇ ಕಾನೂನು ರೂಪಿಸಬೇಕು! – ಸಂಪಾದಕರು)