ಭಗವಂತನ ಬಗ್ಗೆ ಭಾವಪೂರ್ಣ ಅನುಸಂಧಾನ ಮಾಡಿಸುವ ನಾಮಜಪ

ನಾಮವಿಲ್ಲದೇ ಈಶ್ವರನ ಅನುಭೂತಿ ಬರುವುದಿಲ್ಲ. ಈಶ್ವರಪ್ರಾಪ್ತಿ ಮಾಡಿಸುವ ವಿವಿಧ ಸಾಧನಾಮಾರ್ಗಗಳಿವೆ. ಇಂದಿನ ದೈನಂದಿನ ಬಿಡುವಿಲ್ಲದ ಜಗತ್ತಿನಲ್ಲಿರುವ ಸರ್ವಸಾಮಾನ್ಯ ಸಂಸಾರಿಯು ಆಚರಣೆಗೆ ತರಲು ಸುಲಭವಾಗಿರುವ, ಶುಚೀರ್ಭೂತ, ಸ್ಥಳ ಕಾಲ ಮುಂತಾದ ಬಂಧನರಹಿತವಾದಂತಹ ಮತ್ತು ಭಗವಂತನೊಂದಿಗೆ ಸತತ ಅನುಸಂಧಾನವನ್ನಿಟ್ಟುಕೊಡುವ, ಅಂದರೆ ಸಾಧನೆ ಅಖಂಡವಾಗಿ ನಡೆಸುವಂತಹ ಏಕೈಕ ಸಾಧನಾಮಾರ್ಗ ಎಂದರೆ ನಾಮಯೋಗ. ಹುಲ್ಲು ಮತ್ತು ಅಗ್ನಿ ಒಟ್ಟಿಗೆ ಬಂದರೆ, ಹುಲ್ಲು ಸುಡುತ್ತದೆ ಮತ್ತು ಸುಟ್ಟು ಅಗ್ನಿರೂಪವಾಗುತ್ತದೆ, ಭಗವಂತನ ನಾಮವನ್ನು ಉಚ್ಚರಿಸಿದರೆ ನಾಮವು ಎಲ್ಲ ಪಾಪಗಳನ್ನು ಸುಟ್ಟು ಹಾಕುತ್ತದೆ ಮತ್ತು ಭಕ್ತನು ಭಗವಂತನೊಂದಿಗೆ ಏಕರೂಪನಾಗುತ್ತಾರೆ, ಇಷ್ಟು ಅಸಾಧಾರಣ ಮಹತ್ವವಿರುವ ಭಗವಂತನ ನಾಮದಲ್ಲಿ ಮಗ್ನವಾಗುವುದೇ ಹಿತಕಾರಿ !