ಪರಾತ್ಪರ ಗುರು ಡಾಕ್ಟರರು ಕಲಿಸಿದ ‘ಭಾವಜಾಗೃತಿಯ ಪ್ರಯತ್ನ’, ಈ ಪ್ರಕ್ರಿಯೆಯೇ ಆಪತ್ಕಾಲದಲ್ಲಿ ಜೀವಿಸಲಿಕ್ಕಾಗಿರುವ ಸಂಜೀವನಿ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ತನ್ನಲ್ಲಿನ ದೈವೀ ಗುಣಗಳನ್ನು ಅರಿತು ಪ್ರಯತ್ನಿಸಬೇಕು

‘ದೇವರು ಪ್ರತಿಯೊಬ್ಬರಿಗೂ ಒಂದೊಂದು ಉತ್ತಮ ಗುಣವನ್ನು ಕೊಟ್ಟಿರುತ್ತಾನೆ. ಅದನ್ನು ಯೋಗ್ಯವಾಗಿ ಉಪಯೋಗಿಸಿದರೆ ಅವನ ಸೇವೆ ಮತ್ತು ಸಾಧನೆಯ ಫಲಶೃತಿಯು ಹೆಚ್ಚುತ್ತದೆ. ‘ಅದು ಯಾವ ಗುಣವಾಗಿದೆ ?’, ಎಂಬುದನ್ನು ಸ್ವತಃ ಚಿಂತನೆ ಮಾಡಿ ಮತ್ತು ಇತರರ ಸಹಾಯವನ್ನು ಪಡೆದು ತಿಳಿದುಕೊಳ್ಳಬೇಕು ಹಾಗೂ ಅದನ್ನು ಉಪಯೋಗಿಸಿ ಉತ್ಸಾಹದಿಂದ ಪ್ರಯತ್ನಿಸಬೇಕು.

೨. ಒಂದು ಗುಣದ ಸಂಪೂರ್ಣ ಸಮರ್ಪಣೆಯಿಂದಲೇ ದೇವರ ಜಗತ್ತಿನ ಅರಿವಾಗಿ ದೇವರ ಬಗ್ಗೆ ಪ್ರೀತಿ ಹುಟ್ಟುವುದು ಮತ್ತು ಅದರಿಂದ ಭಾವನಿರ್ಮಿತಿಯಾಗುವುದು

ನಮಗೆ ಏನು ಬರುತ್ತದೆಯೋ, ಅದನ್ನೆಲ್ಲ ದೇವರಿಗೆ ಅರ್ಪಿಸಲು ಪ್ರಯತ್ನಿಸಬೇಕು. ಒಂದು ಗುಣವು ನಮಗೆ ಬಹಳಷ್ಟನ್ನು ಕಲಿಸುತ್ತದೆ. ‘ಎಷ್ಟು ಕಲಿತೆನು ?’, ಎನ್ನುವುದಕ್ಕಿಂತ ‘ಏನು ಕಲಿತೆನು ?’, ಅದಕ್ಕೆ ಹೆಚ್ಚು ಮಹತ್ವವಿದೆ. ಒಂದು ಗುಣದ ಸಂಪೂರ್ಣ ಸಮರ್ಪಣೆಯಿಂದಲೇ ದೇವರ ಜಗತ್ತು ನಮಗೆ ತಿಳಿಯತೊಡಗುತ್ತದೆ ಮತ್ತು ಸಾಧನೆಯಿಂದಾಗಿ ಅನಂತ ಗುಣಗಳಿರುವ ದೇವರ ಬಗ್ಗೆ ನಮಗೆ ಪ್ರೀತಿ ಹುಟ್ಟುತ್ತದೆ. ಇದಕ್ಕೇ ‘ದೇವರ ಬಗ್ಗೆ ಭಾವ ನಿರ್ಮಾಣವಾಗುವುದು’, ಎನ್ನುತ್ತಾರೆ.

೩. ದೈವೀತತ್ತ್ವಗಳು ಅಂಗೀಕೃತವಾಗುವುದು

ಒಮ್ಮೆ ನಮ್ಮಲ್ಲಿ ಭಾವ ನಿರ್ಮಾಣವಾದರೆ, ಸಕಲ ಸದ್ಗುಣಗಳ ಭಂಡಾರವಾಗಿರುವ ದೇವರೇ ನಮ್ಮ ಹೃದಯದಲ್ಲಿ ವಾಸಿಸುತ್ತಾನೆ. ಅವನೇ ನಮ್ಮಲ್ಲಿ ಬಂದರೆ, ತನ್ನಿಂದ ತಾನೇ ನಾವು ಅವನ ಸಕಲ ಸದ್ಗುಣಗಳೊಂದಿಗೆ ಏಕರೂಪವಾಗತೊಡಗುತ್ತೇವೆ, ಇದಕ್ಕೇ ‘ದೈವೀತತ್ತ್ವ ಅಂಗೀಕೃತವಾಗುವುದು’, ಎನ್ನುತ್ತಾರೆ.

೪. ಇತರರಲ್ಲಿ ವಿಚಾರಿಸಿ ಕೃತಿಯನ್ನು ಮಾಡುವುದರಿಂದ ದೇವರು ಪ್ರಸನ್ನನಾಗಿ ಅವನು ಸಾಧಕರನ್ನು ರಕ್ಷಿಸುವನು

‘ಕಾಲದ ವೇಗವನ್ನು ತಿಳಿದುಕೊಂಡು ವರ್ತಮಾನದಲ್ಲಿ ಮಾಡಿದ ಕರ್ಮಗಳೇ ಜೀವದ ಉದ್ಧಾರದ ಮಾನದಂಡವಾಗಿರುತ್ತವೆ; ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ‘ಕಾಲಕ್ಕನುಸಾರ ಸಾಧನೆ’ ಈ ವಚನವನ್ನು ಈ ಮೊದಲೇ ಹೇಳಿಟ್ಟಿದ್ದಾರೆ. ಯಾವತ್ತೂ ಏನನ್ನೂ ಮಾಡಬಾರದು. ಪ್ರತಿಸಲ ಉನ್ನತರಲ್ಲಿ ವಿಚಾರಿಸಿಯೇ ಕರ್ಮವನ್ನು ಮಾಡಬೇಕು. ಈ ಗುಣದಿಂದ ದೇವರು ಪ್ರಸನ್ನನಾಗಿ ನಮ್ಮನ್ನು ಕಠಿಣ ಪರಿಸ್ಥಿತಿಯಲ್ಲಿ ರಕ್ಷಿಸುತ್ತಾನೆ.

೫. ಬಾಹ್ಯ ಸಂಬಂಧಗಳ ಬದಲು ಆಂತರಿಕ ಸಂಬಂಧದಿಂದ ಮನುಷ್ಯನಲ್ಲಿನ ದೇವರಿಗೆ ಹತ್ತಿರವಾಗಬೇಕು !

ಬಾಹ್ಯ ದೇಹಕ್ಕಿಂತ ಸಾಧಕರ ಆಂತರ್ಯದಲ್ಲಿನ ದೇವರನ್ನು ನಾವು ಪ್ರೀತಿಸಬೇಕು, ಅಂದರೆ ಆ ಸಾಧಕನು ನಮ್ಮೊಂದಿಗೆ ಇಲ್ಲದಿದ್ದರೂ, ನಮಗೆ ಅವನ ವಿರಹದಿಂದ ದುಃಖವಾಗುವುದಿಲ್ಲ. ನಮ್ಮ ಮನಸ್ಸಿಗೆ ಸಾಧಕರ ದೇಹದಲ್ಲಿನ ತತ್ತ್ವವನ್ನು ಪ್ರೀತಿಸುವ ರೂಢಿಯಾಗಿ ‘ಅವನು ನಮ್ಮ ಹತ್ತಿರವೇ ಇದ್ದಾನೆ’, ಎಂದೆನಿಸುತ್ತದೆ. ಇದರಲ್ಲಿ ಒಬ್ಬಂಟಿತನದ ದುಃಖವಾಗುವುದಿಲ್ಲ ಮತ್ತು ‘ದೇವರು ಎಲ್ಲೆಡೆ ಇರುವುದರಿಂದ ಆ ಸಾಧಕನೂ ನಮ್ಮ ಹತ್ತಿರವೇ ಇದ್ದಾನೆ’, ಎಂಬ ಆನಂದದಿಂದ ನಮಗೆ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ. ‘ಆಪತ್ಕಾಲದಲ್ಲಿ ಯಾರು ಎಲ್ಲಿರುತ್ತಾರೆ ?’, ಎಂಬುದು ಗೊತ್ತಿಲ್ಲ; ಆದುದರಿಂದ ಬಾಹ್ಯ ಸಂಬಂಧದಲ್ಲಿ ಸಿಲುಕಬೇಡಿ. ಆಂತರಿಕ ಸಂಬಂಧದಿಂದ ಮನುಷ್ಯನಲ್ಲಿನ ದೇವರನ್ನು ಹತ್ತಿರ ಮಾಡಿಕೊಳ್ಳಿ. ದೇವರು ನಮ್ಮನ್ನು ಎಂದಿಗೂ ದೂರ ಇಡುವುದಿಲ್ಲ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೪.೨೦೨೦)