ಭಾವ ಹೇಗೆ ಇಡಬೇಕು ? ಈ ಕುರಿತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಾರ್ಗದರ್ಶನ
‘ಅಧ್ಯಾತ್ಮದಲ್ಲಿನ ಕೃತಿಯನ್ನು ಮಾಡುವಾಗ ಭಾವವು ಮಹತ್ವದ್ದಾಗಿರುತ್ತದೆ. ಪ್ರಾರ್ಥನೆ, ನಾಮ ಜಪಗಳೊಂದಿಗೆ ದೇವತೆಗಳ ಮತ್ತು ಗುರುಗಳ ಪೂಜೆಯನ್ನು ಭಾವಪೂರ್ಣ ಮಾಡಿದರೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಲಾಭವಾಗುತ್ತದೆ. ದೇವತೆಗೆ ಶ್ರದ್ದಾಯುಕ್ತ ಅಂತಃಕರಣದಿಂದ ಶಾಸ್ತ್ರೋಕ್ತವಾಗಿ ಮಾಡಿದ ಉಪಚಾರ ಸಮರ್ಪಣೆ ಎಂದರೆ ದೇವರ ಪೂಜೆ. ದೇವತೆಯ ಪ್ರತಿಮೆ ಅಥವಾ ಮೂರ್ತಿಗಳ ಶಾಸ್ತ್ರೋಕ್ತ ರೀತಿಯಿಂದ ಮಾಡುವ ಪೂಜೆಯು ದೇವತೆಗೆ ಅಪೇಕ್ಷಿತವಿದ್ದಂತೆಯಾದರೆ (ಇಷ್ಟವಾದರೆ) ಅದು ನಿಜವಾಗಿಯೂ ‘ಪೂಜೆ’ಯಾಗುತ್ತದೆ. ಅದೇ ರೀತಿ ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿನ ಧ್ಯಾನಮಂದಿರದಲ್ಲಿ ಅಥವಾ ಮನೆಯಲ್ಲಿರುವ ದೇವರಕೋಣೆಯಲ್ಲಿ ಪೂಜೆಯನ್ನು ಮಾಡುವಾಗ ‘ದೇವತೆಗಳು, ಸಂತರು ಅಥವಾ ಗುರುಗಳು ಇಲ್ಲಿ ಪ್ರತ್ಯಕ್ಷ ಇದ್ದಾರೆ’, ಎಂಬ ಭಾವವನ್ನಿಟ್ಟು ಅವರ ಪೂಜೆಯನ್ನು ಮಾಡಬೇಕು. ಭಾವಪೂರ್ಣ ಪೂಜೆಯಿಂದ ಚೈತನ್ಯವು ಪ್ರಕ್ಷೇಪಿತವಾಗಿ ಪೂಜೆ ಮಾಡುವವರಿಗೆ ಮತ್ತು ಆ ವಾಸ್ತುವಿನಲ್ಲಿನ ಎಲ್ಲರಿಗೂ ಅದರ ಲಾಭವಾಗುತ್ತದೆ. ದೇವತೆಗಳ ಮತ್ತು ಗುರುಗಳ ಆಶೀರ್ವಾದವು ಲಭಿಸುತ್ತದೆ, ಹಾಗೆಯೇ ವಾತಾವರಣದಲ್ಲಿನ ಸಕಾರಾತ್ಮಕ ಊರ್ಜೆ ಹಾಗೂ ಸಾತ್ತ್ವಿಕತೆ ಹೆಚ್ಚುತ್ತದೆ ಮತ್ತು ಆಧ್ಯಾತ್ಮಿಕ ಸ್ತರದ ಅನುಭೂತಿಗಳೂ ಬರುತ್ತವೆ; ಆದರೆ ಪೂಜೆಯನ್ನು ಭಾವಪೂರ್ಣ ಮಾಡದಿದ್ದರೆ ದೇವರ ಅವಕೃಪೆಯಾಗಿ ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭವಾಗುವುದಿಲ್ಲ, ಹಾಗೆಯೇ ವಾತಾವರಣದಲ್ಲಿನ ನಕಾರಾತ್ಮಕ ಊರ್ಜೆ ಹೆಚ್ಚುತ್ತದೆ ಮತ್ತು ವಾಸ್ತುವಿನಲ್ಲಿನ ಚೈತನ್ಯವೂ ಕಡಿಮೆಯಾಗುತ್ತದೆ. ಆದುದರಿಂದ ಮನೆಯಲ್ಲಿನ ಇತರ ಕೆಲಸಗಳಂತೆ ಪೂಜೆಯೂ ಒಂದು ಕೆಲಸವೆಂದು ಅಥವಾ ಕೇವಲ ಒಂದು ನಿತ್ಯಕರ್ಮವೆಂದು ಮುಗಿಸಬಾರದು. ಎಲ್ಲರ ಪಾಲನೆ ಪೋಷಣೆಯ ಕಾಳಜಿಯನ್ನು ತೆಗೆದುಕೊಳ್ಳುವ ಆ ಭಗವಂತನ ಪೂಜೆಯನ್ನು ಈ ರೀತಿ ‘ಮಾಡಿದರೆ’, ಅದಕ್ಕೆ ದೇವರ ಪೂಜೆ ಎಂದು ಹೇಳಬಹುದೇ ? ಹೀಗೆ ಮಾಡಿದರೆ ಭಗವಂತನು ನಮ್ಮ ಮೇಲೆ ಏಕೆ ದಯೆ ತೋರಿಸಬೇಕು ? ಎಂಬುದನ್ನು ಗಮನದಲ್ಲಿಟ್ಟು ದೇವತೆಗಳ ಮತ್ತು ಗುರುಗಳ ಅನನ್ಯ ಭಕ್ತಿಭಾವದಿಂದ ಪೂಜೆಯನ್ನು ಮಾಡಿದರೆ, ಆಗಲೇ ಅವರು ಪ್ರಸನ್ನರಾಗಿ ನಮ್ಮ ಮೇಲೆ ಆಶೀರ್ವಾದದ ಮಳೆಗರೆಯುವರು.’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೬.೭.೨೦೨೧)
‘ಭಾ + ವ = ಭಾವ’. ಇದರಲ್ಲಿನ ‘ಭಾ’ ಅಂದರೆ ತೇಜ ಮತ್ತು ‘ವ’ ಅಂದರೆ ವೃದ್ಧಿಸುವವನು. ಯಾವುದರ ಜಾಗೃತಿಯಿಂದ ನಮ್ಮಲ್ಲಿ ತೇಜತತ್ತ್ವದ ವೃದ್ಧಿಯಾಗುತ್ತದೆಯೋ ಅದು ‘ಭಾವ’. (ಇಲ್ಲಿ ತೇಜತತ್ತ್ವವೆಂದರೆ ಪರಮೇಶ್ವರತತ್ತ್ವ ಎಂದು ತಿಳಿದುಕೊಳ್ಳಬೇಕು.) ಆಧಾರ : ಸನಾತನ ನಿರ್ಮಿತ ಗ್ರಂಥ ‘ಭಾವದ ವಿಧಗಳು ಮತ್ತು ಜಾಗೃತಿ’ |