ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಬಾಲಕರು ಎಂದರೆ ಮುಂಬರುವ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಚರಣದಾಸ ರಮಾನಂದ ಗೌಡ ಇವನು ಈ ಪೀಳಿಗೆಯಲ್ಲಿನ ಒಬ್ಬನಾಗಿದ್ದಾನೆ !
‘ಕು. ಚರಣದಾಸ ರಮಾನಂದ ಗೌಡ ಇವನು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿದ್ದು ಅವನ ಆಧ್ಯಾತ್ಮಿಕ ಮಟ್ಟ ಶೇ. ೫೬ ರಷ್ಟಿದೆ’ ಎಂದು ೨೦೧೯ ನೇ ಇಸವಿಯಲ್ಲಿ ಘೋಷಿಸಲಾಗಿತ್ತು. ೨೦೨೨ ರಲ್ಲಿ ಅವನ ಆಧ್ಯಾತ್ಮಿಕ ಮಟ್ಟವು ಶೇ. ೫೭ ರಷ್ಟಾಗಿದೆ. ಈಗ ಅವನಲ್ಲಿನ ಭಾವ, ಸಾಧನೆಯ ತಳಮಳ ಮತ್ತು ಪಾಲಕರು ಮಾಡಿದ ಯೋಗ್ಯ ಸಂಸ್ಕಾರಗಳಿಂದ ಅವನ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆ. – (ಪರಾತ್ಪರ ಗುರು) ಡಾ. ಆಠವಲೆ |
೧. ಸೇವಾಭಾವ
ಚರಣದಾಸನು ಆಶ್ರಮ ಸೇವೆ ಮಾಡುತ್ತಾನೆ. ಅವನು ಭೋಜನಗೃಹದಲ್ಲಿರುವ ಟಬ್ ಸ್ವಚ್ಛತೆ ಮಾಡುತ್ತಾನೆ. ಸಾಧಕರಿಗೆ ಸಾಮೂಹಿಕ ಸ್ವಚ್ಛತೆಯ ಸೇವೆಯಲ್ಲಿ ಸಹಾಯ ಮಾಡುತ್ತಾನೆ ಮತ್ತು ಯಾರಾದರೂ ಸಾಧಕರು ಭಾರದ ವಸ್ತುವನ್ನು ತೆಗೆದುಕೊಂಡು ಹೋಗುತ್ತಿದ್ದರೆ, ಅವರಿಗೆ ಅದನ್ನು ಎತ್ತಲು ಸಹಾಯ ಮಾಡುತ್ತಾನೆ. ಅವನ ಶಾರೀರಿಕ ಕ್ಷಮತೆ ಇಲ್ಲದಿದ್ದರೂ, ಅವನು ಸೇವೆಯನ್ನು ಮಾಡಲು ಪ್ರಯತ್ನಿಸುತ್ತಾನೆ. ಆ ಸಮಯದಲ್ಲಿ ‘ಅವನಲ್ಲಿ ಆಶ್ರಮದ ಬಗ್ಗೆ ಮತ್ತು ಸೇವೆಯ ಬಗ್ಗೆ ಎಷ್ಟು ಭಾವವಿದೆ ?’, ಎಂದು ಕಲಿಯಲು ಸಿಗುತ್ತದೆ.
೨. ತತ್ತ್ವನಿಷ್ಠತೆ
ಒಂದು ಸಲ ಓರ್ವ ಬಾಲಸಾಧಕ ನನ್ನೊಂದಿಗೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದನು. ಆಗ ಚರಣದಾಸನು ಅವನಿಗೆ, “ನಾವು ಹಿರಿಯರೊಂದಿಗೆ ದೊಡ್ಡ ಸ್ವರದಲ್ಲಿ ಮಾತನಾಡುವುದು ತಪ್ಪಾಗಿದೆ. ಆದುದರಿಂದ ನೀನು ಅವರಲ್ಲಿ ಕ್ಷಮಾಯಾಚನೆ ಮಾಡು”, ಎಂದು ಹೇಳಿದನು. ಇದರಿಂದ ಚರಣದಾಸನಲ್ಲಿನ ತತ್ತ್ವನಿಷ್ಠತೆ ಕಲಿಯಲು ಸಿಕ್ಕಿತು.
೩. ಆಜ್ಞಾಪಾಲನೆ
ಚರಣದಾಸನಿಂದ ಏನಾದರೂ ತಪ್ಪಾದರೆ, ಪೂ. ರಮಾನಂದಅಣ್ಣಾ ಇವರು ಅವನಿಗೆ ‘ಧ್ಯಾನಮಂದಿರದಿಂದ ಅಥವಾ ಕೋಣೆಯಿಂದ ೨ ಗಂಟೆ ಹೊರಗೆ ಬರಬಾರದು’, ಎಂಬ ಶಿಕ್ಷೆಯನ್ನು ವಿಧಿಸುತ್ತಾರೆ. ಪೂ. ಅಣ್ಣಾ ಇವರು ಹೇಳಿದಂತೆ ಅವನು ಕೇಳುತ್ತಾನೆ ಮತ್ತು ಆಜ್ಞಾಪಾಲನೆಯನ್ನು ಮಾಡಿ ಶಿಕ್ಷೆಯನ್ನೂ ಪೂರ್ಣಗೊಳಿಸುತ್ತಾನೆ.
೪. ಉತ್ತಮ ಆಕಲನ ಕ್ಷಮತೆ
ಅವನು ವಿವಿಧ ದೇವತೆಗಳ ಮತ್ತು ಪೌರಾಣಿಕ ಕಥೆಗಳನ್ನು ನೋಡುತ್ತಾನೆ. ಆ ಕಥೆಗಳನ್ನು ಅವನು ಊಟ ಮಾಡುವಾಗ ಅಥವಾ ಇತರ ಸಮಯದಲ್ಲಿ ಅವನೊಂದಿಗೆ ಮಾತನಾಡುವಾಗ ಬಹಳ ಚೆನ್ನಾಗಿ ಹೇಳುತ್ತಾನೆ.
೫. ಆಡುವಾಗ ಆಪತ್ಕಾಲಕ್ಕಾಗಿ ಮನೆ ಕಟ್ಟುವುದು
ಚರಣದಾಸ ಆಡುವಾಗ ತನ್ನ ಆಟಿಕೆ ಅಥವಾ ಇತರ ವಸ್ತುಗಳಿಂದ ವಿವಿಧ ರೀತಿಯ ಮನೆಗಳನ್ನು ತಯಾರಿಸುತ್ತಾನೆ. ಯಾರಾದರೂ ಆ ಬಗ್ಗೆ ಕೇಳಿದರೆ, ಅವನು, “ಆಪತ್ಕಾಲದಲ್ಲಿ ಎಲ್ಲ ಸಾಧಕರು ಇಲ್ಲಿಗೆ ಬಂದಾಗ ಅವರಿಗೆ ವಾಸಿಸಲು ಮನೆಗಳನ್ನು ಕಟ್ಟುತ್ತಿದ್ದೇನೆ”, ಎನ್ನುತ್ತಾನೆ.
೬. ದೊಡ್ಡವರ ಅನುಕರಣೆ ಮಾಡುವುದು
ಪೂ. ಅಣ್ಣನವರು ಚರಣದಾಸನ ತಾಯಿಯ ಅಥವಾ ಇತರ ಸಾಧಕರ ವ್ಯಷ್ಟಿ-ಸಮಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುತ್ತಾರೆ. ಚರಣದಾಸನೂ ಅದೇ ರೀತಿ ಅವರ ಅನುಕರಣೆಮಾಡಿ ‘ಇಂದು ನಾನು ಎಲ್ಲರ ವರದಿಯನ್ನು ತೆಗೆದುಕೊಳ್ಳುವವನಿದ್ದೇನೆ’, ಎಂದು ಹೇಳಿ ವರದಿಯನ್ನು ತೆಗೆದುಕೊಳ್ಳುತ್ತಾನೆ. ಜವಾಬ್ದಾರ ಸಾಧಕರು ಮಾತನಾಡುವ, ವರ್ತಿಸುವ ರೀತಿಯಲ್ಲಿ ಅವನು ಅವರ ಅನುಕರಣೆಯನ್ನು ಮಾಡುತ್ತಿರುತ್ತಾನೆ. ಆಗ ‘ಚರಣದಾಸನಲ್ಲಿ ಎಷ್ಟು ಪ್ರೌಢಿಮೆ ಇದೆ ?’, ಎಂದು ಗಮನಕ್ಕೆ ಬರುತ್ತದೆ.