‘ನನಗೆ ಶ್ರೀ ಮಹಾಕಾಳಿ ಮಾತೆ ಎಂದರೆ ಮಾಂಸವನ್ನು ಪ್ರೀತಿಸುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆ ! (ಅಂತೆ)

ತೃಣಮೂಲ ಕಾಂಗ್ರೆಸ ಸಂಸದ ಮಹುವಾ ಮೊಯಿತ್ರಾನಿಂದ ‘ಕಾಳಿ’ ಭಿತ್ತಿಚಿತ್ರಗೆ ಬೆಂಬಲ !

ಕೊಲಕಾತಾ (ಬಂಗಾಳ) – ನನಗೆ ಶ್ರೀ ಮಹಾಕಾಳಿಮಾತೆ ಮಾಂಸವನ್ನು ಪ್ರಿತಿಸುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆಯಾಗಿದೆ. ನಿಮ್ಮ ಅಭಿಪ್ರಾಯ ಭಿನ್ನವಾಗಿರಬಹುದು. ಅದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ದೇವಿಯ ಅನೇಕ ರೂಪಗಳಿವೆ. ಆದ್ದರಿಂದ ಕಾಳಿ ರೂಪದ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ, ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದ ಮಹುವಾ ಮೊಯಿತ್ರಾ ಇವರು ‘ಕಾಳಿ’ ಈ ಸಾಕ್ಷ್ಯ ಚಿತ್ರವನ್ನು ಉಲ್ಲೇಖಿಸಿ ಭಿತ್ತಿಪತ್ರದಲ್ಲಿ ದೇವಿಯ ವೇಷಧರಿಸಿದ ನಟಿಯನ್ನು ಸಿಗರೇಟ್ ಸೇದುತ್ತಿರುವಂತೆ ತೋರಿಸಿದ ಭಾವಚಿತ್ರವನ್ನು ಬೆಂಬಲಿಸಿದ್ದಾರೆ. ಮೊಯಿತ್ರಾ ‘ಇಂಡಿಯಾ ಟುಡೆ’ ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಂಸದೆ ಮೊಯಿತ್ರಾ ತಮ್ಮ ಮಾತನ್ನು ಮುಂದುವರೆಸುತ್ತಾ, ದೇವರನ್ನು ಹೇಗೆ ನೊಡುತ್ತಿರಿ ಎಂಬುದು ಮುಖ್ಯ ಒಂದು ವೇಳೆ ನೀವು ಭೂತಾನ, ಸಿಕ್ಕಿಂಗೆ ಹೋದರೆ ಅಲ್ಲಿ ಬೆಳಗಿನ ಪೂಜೆಯ ವೇಳೆ ದೇವರಿಗೆ ‘ವಿಸ್ಕಿ’ ಸಮರ್ಪಿಸುತ್ತಾರೆ; ಆದರೆ ಉತ್ತರಪ್ರದೇಶಕ್ಕೆ ಹೋಗಿ ದೇವಸ್ಥಾನದಲ್ಲಿ ಪ್ರಸಾದವೆಂದು ‘ವಿಸ್ಕೀ’ ನೀಡಿದರೆ, ಅಲ್ಲಿಯ ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವಿರಿ. ಒಂದುವೇಳೆ ನೀವು ತಾರಾಪೀಠಕ್ಕೆ ಹೋದರೆ ಅಲ್ಲಿ ಕಾಳಿ ಮಾತೆಯ ದೇವಸ್ಥಾನದಲ್ಲಿ ಸಾಧುಗಳು ಧೂಮಪಾನ ಮಾಡುವುದನ್ನು ನೋಡುತ್ತೀರಿ ಮತ್ತು ಅವರೇ ಕಾಳಿ ಮಾತೆಯನ್ನು ಪೂಜಿಸುತ್ತಾರೆ. ನಾನು ಹಿಂದೂವಾಗಿದ್ದರೂ ಕಾಳಿಮಾತೆಯನ್ನು ನೋಡುವ ಸ್ವಾತಂತ್ರ್ಯ ನನಗಿದೆ ಮತ್ತು ಜನರಿಗೂ ಇರಬೇಕು. ನೀವು ಬಯಸಿದಂತೆ ನಿಮ್ಮ ದೇವತೆಯನ್ನು ಪೂಜಿಸುವ ಸ್ವಾತಂತ್ರ್ಯ ನಿಮಗೆ ಇರಬೇಕು. ಪೂಜೆಯ ಹಕ್ಕು ವೈಯಕ್ತಿಕವಾಗಿರಬೇಕು. ನಾನು ಎಲ್ಲಿಯವರೆಗೆ ನಿಮ್ಮ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವದಿಲ್ಲವೋ ಅಲ್ಲಿಯವರೆಗೆ ನನಗೆ ಸ್ವಾತಂತ್ರ್ಯ ಇರಬೇಕು ಎಂದು ಹೇಳಿದರು.

ದೆಹಲಿ, ಉತ್ತರಪ್ರದೇಶ ಮತ್ತು ಮುಂಬಯಿಯಲ್ಲಿ ಅಪರಾಧ ದಾಖಲು

ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಭಿತ್ತೀಪತ್ರವನ್ನು ಪ್ರಕಟಿಸಿದ್ದರಿಂದ ಹೊಸ ದೆಹಲಿ, ಉತ್ತರಪ್ರದೇಶ ಮತ್ತು ಮುಂಬಯಿ ಪೊಲೀಸ ಠಾಣೆಗಳಲ್ಲಿ ಕಾಳಿ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದ ಲೀನ ಮಣಿಮೇಕಲೈ ಇವರ ವಿರುದ್ಧ ಅಪರಾಧಗಳು ದಾಖಲಾಗಿವೆ. ಅವರನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ತಾಂತ್ರಿಕರು ನಡೆಸುವ ಶ್ರೀ ಮಹಾಕಾಳಿ ಮಾತೆಯ ಪೂಜೆಯಲ್ಲಿ ಮಾಂಸ ಮತ್ತು ಮದ್ಯವನ್ನು ಬಳಸಲಾಗುತ್ತದೆ. ಈ ಕುರಿತು ಧರ್ಮಶಾಸ್ತ್ರವನ್ನು ಅರಿಯದೆ ಶ್ರೀ ಮಹಾಕಾಳಿಮಾತೆಯನ್ನು ‘ಮಾಂಸ ಪ್ರೇಮಿ’ ಮತ್ತು ‘ಮದ್ಯ ಸ್ವೀಕರಿಸುವ’ ಎಂದು ಸಂಬೊಧಿಸಿ ಹಿಂದೂಗಳ ಗಾಯಕ್ಕೆ ಉಪ್ಪು ಸವರಿದ ಹಿಂದೂದ್ರೋಹಿ ಮಹುವಾ ಮೊಯಿತ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಹಿಂದೂಗಳ ಮೇಲೆ ಅತ್ಯಾಚಾರ ಮಾಡುವ, ಹಿಂದೂ ವಿರೋಧಿ ನಿರ್ಧಾರವನ್ನು ಕೈಗೊಳ್ಳುವ ಮತ್ತು ಹಿಂದೂದ್ರೋಹದ ಸಮುಚ್ಚವಾಗಿರುವ ತೃಣಮೂಲ ಕಾಂಗ್ರೆಸ್‌ನಂತಹ ಪಕ್ಷ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಖೇದಕರವಾಗಿದೆ !