ಪುಕ್ಕಟೆ ಮಾತುಗಳು

 

ಉತ್ತರಪ್ರದೇಶದ ಬರೆಲಿಯ ಮೌಲಾನಾ ತೌಕೀರ ರಝಾ ಇವರು ಭಾಜಪದ ಮಾಜಿ ವಕ್ತಾರರಾದ ನೂಪುರ ಶರ್ಮಾ ಇವರ ಹೇಳಿಕೆಯನ್ನು ಖಂಡಿಸಲು ಜೂನ್ ೨೦ ರಂದು ಒಂದು ಸಭೆಯನ್ನು ತೆಗೆದುಕೊಂಡರು. ಕೇವಲ ಒಂದೂವರೆ ಸಾವಿರ ಜನರಿಗೆ ಅನುಮತಿ ಇರುವಾಗ ಸಾವಿರಗಟ್ಟಲೇ ಮುಸಲ್ಮಾನರು ಈ ಸಭೆಗೆ ಬಂದರು. ಇದನ್ನು ಕಂಡು ಉತ್ತೇಜಿತರಾದಂತೆ ಮೌಲಾನಾರು ಈ ಸಭೆಯಲ್ಲಿ ವಿಷಕಾರಿದರು. ಈ ಸಮಯದಲ್ಲಿ ಅವರು ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು. ಅವುಗಳ ಪೈಕಿ ಒಂದು ಆಕ್ಷೇಪಾರ್ಹ ಹೇಳಿಕೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಇತ್ತು. ಈ ಸಭೆಯಲ್ಲಿ ಅವರು ಪ್ರಧಾನಮಂತ್ರಿಯವರಿಗೆ ಮುಸಲ್ಮಾನರಾಗಬೇಕೆಂದು ಕರೆ ನೀಡಿದರು. ಬಹುಸಂಖ್ಯಾತ ಹಿಂದೂಗಳಿರುವ ದೇಶದ ಹಿಂದುತ್ವನಿಷ್ಠ ಪಕ್ಷದ ಪ್ರಧಾನಮಂತ್ರಿಗಳಿಗೆ ಈ ರೀತಿ ಕರೆ ನೀಡಿ ಅವರು ಕೋಟಿಗಟ್ಟಲೇ ಹಿಂದೂಗಳಿಗೆ ಅಣಕಿಸಿದ್ದಾರೆ. ‘ನರೇಂದ್ರ ಮೋದಿ ಮತ್ತು ಅಮಿತ ಶಹಾ’ ಇವರು ಮುಸಲ್ಮಾನರಾದರೆ ನಾವು ಅವರನ್ನು ತಲೆಯ ಮೇಲೆ ಹೊತ್ತುಕೊಳ್ಳುವೆವು. ಈ ರೀತಿ ಜಂಭದ ಹೇಳಿಕೆಯನ್ನು ನೀಡುವ ಧೈರ್ಯ ಮೌಲಾನಾರಿಗಿರುವುದು, ಇದು ಕಳೆದ ೫೫ ವರ್ಷಗಳಲ್ಲಿ ಕಾಂಗ್ರೆಸ್‌ನ ಮುಸಲ್ಮಾನರನ್ನು ಓಲೈಸಿದುದರ ಫಲವಾಗಿದೆ. ಕಾಂಗ್ರೆಸ್ ಮತ್ತು ಸಾಮ್ಯವಾದಿಗಳು, ಹಿಂದುತ್ವನಿಷ್ಠ ಪಕ್ಷಗಳ ಮುಖಂಡರು ಮತ್ತು ಸಂಘಟನೆಗಳು ‘ದೇಶವನ್ನು ಇಬ್ಬಾಗ ಮಾಡಲು ಹೊರಟಿದ್ದಾರೆ’ ಎಂದು ನಿರಂತರವಾಗಿ ಆರೋಪಿಸುತ್ತಿರುತ್ತಾರೆ. ಈಗ ಪ್ರಧಾನಮಂತ್ರಿಗಳಿಗೆ ಈ ರೀತಿ ಬಹಿರಂಗ ಕರೆ ನೀಡುವ ಮೌಲಾನಾರ ಬಗ್ಗೆ ಇವರು ಏನು ಹೇಳಲಿದ್ದಾರೆ.

ಮುಸಲ್ಮಾನರ ದೇಶವಿರೋಧಿ ನಾಯಕರು !

ಮೌಲಾನಾರ ಈ ಸಭೆಯಲ್ಲಿ ಕೊವಿಡ್ ಮತ್ತು ಧ್ವನಿಮಾಲಿನ್ಯದ ನಿಯಮಗಳ ಪಾಲನೆಯಾಗಲಿಲ್ಲ. ಭಾರತದಲ್ಲಿ ಕೊರೊನಾ ಹರಡಲು ಕಾರಣರಾದ ಮತ್ತು ದೆಹಲಿ ಗಲಭೆಯ ಸಂದರ್ಭದಲ್ಲಿ ಆರೋಪವಿರುವ ತಬಲಿಗಿ ಸಮುದಾಯದ ಮುಖ್ಯಸ್ಥ ಮೌಲಾನಾ ಸಾದ್ ಇವರು ಪರಾರಿಯಾದ ನಂತರ ಅಪರಾಧ ಇಲಾಖೆಯ ಪೊಲೀಸರು ಅವರನ್ನು ಬೆನ್ನತ್ತಿದ್ದರು. ದೇಶದಲ್ಲಿನ ಮುಸ್ಲಿಂ ಸಮುದಾಯವನ್ನು ದೇಶದ ಮುಖ್ಯವಾಹಿನಿಗೆ ಬರದಂತೆ ತಡೆಗಟ್ಟಲು ಮುಸಲ್ಮಾನರ ಇಂತಹ ಮೌಲಾರಂತಹ ನಾಯಕರೂ ಇದ್ದಾರೆ ಎಂದರೆ ತಪ್ಪಾಗಲಾರದು. ಮುಸಲ್ಮಾನರನ್ನು ಒಗ್ಗೂಡಿಸಿ ಅವರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಮೂಲಕ ಇವರ ಕುಟಿಲತಂತ್ರದ ಉದ್ದೇಶ ಈಡೇರುತ್ತದೆ. ಆದುದರಿಂದ ವಿವಿಧ ಫತವಾಗಳನ್ನು ಹೊರಡಿಸುವುದು, ಶುಕ್ರವಾರದ ನಮಾಜಿನ ನಂತರ ಭಾಷಣ ಮಾಡಿ ಅವರಿಗೆ ಗಲಭೆಗೆ ಪ್ರಚೋದನೆ ನೀಡುವಂತಹ ಕೃತಿಗಳನ್ನು ಮಾಡಿ ದೇಶದ ವಾತಾವರಣವನ್ನು ಯಾವಾಗಲೂ ಧಗಧಗಿಸುವಂತೆ ಮಾಡಲು ಮುಸಲ್ಮಾನರ ಧಾರ್ಮಿಕ ನಾಯಕರು ಪ್ರಯತ್ನಿಸುತ್ತಿರುತ್ತಾರೆ.

‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ಭುಗಿಲ್ಲೆದ್ದಿರುವ ಗಲಭೆಗಳಲ್ಲಿ ಮತಾಂಧರು ಪಾಲ್ಗೊಂಡಿರುವುದು ಬೆಳಕಿಗೆ ಬರುತ್ತಿದೆ. ಯೋಜನೆಗೆ ವಿರೋಧಿಸುವ ಆಂದೋಲನದಲ್ಲಿ ಓರ್ವ ಮತಾಂಧನನ್ನು ರೈಲು ಬೋಗಿಗೆ ಬೆಂಕಿ ಇಡುವಾಗ ಓರ್ವ ಪೊಲೀಸರು ಪುರಾವೆಸಹಿತ ಹಿಡಿದಾಗ, ಅವನು ಕೇವಲ ೩ನೇ ತರಗತಿಯ ವರೆಗೆ ಕಲಿತಿದ್ದು ಇನ್ನೋರ್ವ ಮತಾಂಧನು ಅವನಿಗೆ ೧ ಸಾವಿರ ರೂಪಾಯಿಗಳನ್ನು ಮತ್ತು ಕೇಸರಿ ‘ಟಿ ಶರ್ಟ್’ ನೀಡಿ ರೈಲಿಗೆ ಬೆಂಕಿ ಇಡಲು ಹೇಳಿದನು ಎಂದು ಗಮನಕ್ಕೆ ಬಂತು. ಇವೆಲ್ಲವನ್ನು ಮತಾಂಧರಿಗೆ ಮಾಡಲು ಯಾರು ಉದ್ಯುಕ್ತ ಮಾಡಿದರು ? ಮೇಲಿನ ಸಭೆಯಲ್ಲಿ ಮೌಲಾನಾ ತೌಕೀರ ರಝಾ ಇವರು ‘ಅಗ್ನಿಪಥ’ ಯೋಜನೆಯ ಬಗ್ಗೆಯೂ ಟೀಕಿಸಿದರು. ‘ಸರಕಾರ ಯುವಕರ ಜೀವನವನ್ನು ಹಾಳು ಮಾಡುವ ಗುತ್ತಿಗೆ ತೆಗೆದುಕೊಂಡಿದೆ’ ಎಂದು ಅವರು ಹೇಳಿದರು. ಮೇಲಿನ ಉದಾಹರಣೆಯಿಂದ ಯುವಕರ ಜೀವನವನ್ನು ಯಾರು ಹಾಳು ಮಾಡುತ್ತಿದ್ದಾರೆ ? ಎಂಬುದನ್ನು ಯಾರೂ ಹೇಳಬಹುದು. ದೇಶದ ವಿರುದ್ಧ ಮುಸಲ್ಮಾನರನ್ನು ಪ್ರಚೋದಿಸಲು, ಭಯೋತ್ಪಾದನೆ ಮಾಡಲು, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯನ್ನುಂಟು ಮಾಡುವ ಕೆಲಸವನ್ನು ಮುಸ್ಲಿಮ್‌ರ ಧಾರ್ಮಿಕ ಮುಖಂಡರೇ ಮಾಡುತ್ತಾರೆ ಎಂಬುದು ಕೆಲವು ಪ್ರಕರಣಗಳಿಂದ ಬಹಿರಂಗವಾಗುತ್ತದೆ. ಅಗ್ನಿಪಥ ಯೋಜನೆಗೆ ಮೌಲಾನಾರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿರೋಧವಾಗುವುದನ್ನು ನೋಡಿದಾಗ ಈ ಯೋಜನೆ ದೇಶದಲ್ಲಿ ಗಲಭೆಯನ್ನೆಬ್ಬಿಸುವ ಮತಾಂಧರ ಬಂದೋಬಸ್ತಿಗಾಗಿ ಎಷ್ಟು ಆವಶ್ಯಕವಾಗಿದೆ, ಎಂಬುದು ಪರೋಕ್ಷವಾಗಿ ಸಿದ್ಧವಾಗುತ್ತದೆ.

ಹಿಂದೂಗಳ ದೇಶದ ನಾಯಕರು – ಮೋದಿ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಕಾರ್ಯವೈಖರಿ ಮತ್ತು ನಾಯಕತ್ವದಿಂದ ಎಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆಂದರೆ, ಕೇವಲ ದೇಶದ ಹಿಂದೂಗಳಷ್ಟೇ ಅಲ್ಲ, ಆದರೆ ವಿದೇಶದ ಹಿಂದೂಗಳು ಮತ್ತು ಅಂತರರಾಷ್ಟ್ರೀಯ ನಾಯಕರೂ ಅವರನ್ನು ಕೊಂಡಾಡುತ್ತಾರೆ, ಎಂದು ಹೇಳಿದರೆ ತಪ್ಪಾಗಲಾರದು. ಗೋಧ್ರಾ ಪ್ರಕರಣದ ನಂತರ ಮೋದಿಯವರ ಗುಜರಾತ್‌ನ ಆಡಳಿತಾವಧಿಯಲ್ಲಿ ಒಂದೂ ಗಲಭೆ ನಡೆದಿಲ್ಲ. ಮೋದಿಯವರು ರಾಮಮಂದಿರದ ನಿರ್ಮಿತಿಯನ್ನು ಕಾನೂನಿನ ಸತ್ವಪರೀಕ್ಷೆಯನ್ನು ನೀಡಿ ಪೂರ್ಣಗೊಳಿಸಿ ಆ ಕಾರ್ಯವನ್ನು ಪೂರ್ಣತ್ವಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರು ಜಮ್ಮು-ಕಾಶ್ಮೀರದಲ್ಲಿ ‘ಕಲಮ್ ೩೭೦’ಅನ್ನು ರದ್ದು ಗೊಳಿಸುವ ದಿಟ್ಟ ನಿರ್ಣಯವನ್ನು ತೆಗೆದುಕೊಂಡರು, ಅದು ಹಿಂದೂಗಳ ಹಿತಕ್ಕಾಗಿಯೇ ಇದೆ. ಮುಂಬರುವ ಹಿಂದೂಗಳ ಪೀಳಿಗೆಗೆ ಹಿಂದೂಗಳ ನಿಜವಾದ ಇತಿಹಾಸ, ತಿಳಿಯಬೇಕೆಂದು ಹಿಂದೂದ್ರೋಹಿ ಅಭ್ಯಾಸಕ್ರಮವನ್ನು ಬದಲಿಸಿ ಹಿಂದೂಗಳ ಪರಾಕ್ರಮದ ಸತ್ಯ ಇತಿಹಾಸವನ್ನು ಅವರೆದುರು ಇಡುವ ಪ್ರಯತ್ನವು ಮೋದಿಯವರ ಆಡಳಿತಾವಧಿಯಲ್ಲಿ ಆರಂಭವಾಗಿದೆ. ಕಾಶೀ ವಿಶ್ವೇಶ್ವರ ಕಾರಿಡಾರ್ ಯೋಜನೆಯು  ಹಿಂದೂ ಧಾರ್ಮಿಕ ಸ್ಥಳಗಳ ಪುನರ್ಸ್ಥಾಪನೆಗೆ ಅಡಿಪಾಯ ಹಾಕಿದೆ. ೫೦೦ ವರ್ಷಗಳ ಹಿಂದೆ ಮತಾಂಧರು ವಶಪಡಿಸಿಕೊಂಡ ಗುಜರಾತಿನ ಮಹಾಕಾಳಿ ದೇವಾಲಯದ ಮೇಲೆ ಇತ್ತೀಚೆಗಷ್ಟೇ ಮೋದಿಯವರು ಹಿಂದೂ ಧ್ವಜವನ್ನು ಹಾರಿಸಿದರು. ವಿಶೇಷವೆಂದರೆ ಈ ದೇವಾಲಯದ ಮೇಲೆ ಕಟ್ಟಲಾದ ದರ್ಗಾದ ಜನರು ಅವರಿಗೆ ಹಸ್ತಾಂತರ ಮಾಡಿದರು. ಇದೇ ರೀತಿ ದೇಶದಲ್ಲಿ ದೇವಾಲಯಗಳನ್ನು ವಶಪಡಿಸಿಕೊಂಡ ಮಸೀದಿಗಳ ಪ್ರಮುಖರು ಮಾಡಿದರೆ, ಹಿಂದೂಗಳಿಗೆ ತಮ್ಮ  ದೇವಾಲಯಗಳನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ, ಆದರೆ ಈ ಅಡಿಪಾಯ ಹಾಕಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಪ್ರಧಾನಿ ಯಾವ ರಾಜ್ಯ ಅಥವಾ ದೇಶಕ್ಕೆ ಹೋಗುತ್ತಾರೆಯೋ, ಅಲ್ಲಿನ ಹಿಂದೂಗಳ ದೇವಾಲಯಗಳಿಗೆ ತಪ್ಪದೇ ತೆರಳಿ ಅಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ. ಪ್ರಧಾನಮಂತ್ರಿ ಮೋದಿಯವರು ಧಾರ್ಮಿಕ ಹಿಂದೂವಾಗಿದ್ದಾರೆ, ಎಂಬುದನ್ನು ವಿಶೇಷವಾಗಿ ಹೇಳುವ ಆವಶ್ಯಕತೆ ಇಲ್ಲ. ಹೀಗಿರುವಾಗ ಮೌಲಾನಾರಂತಹ ವ್ಯಕ್ತಿಗಳು ಸಾವಿರಾರು ಮತಾಂಧರೆದುರು ಅವರ ಹೆಸರು ಉಚ್ಚರಿಸಿ ಈ ರೀತಿ ಹಿಂದೂಗಳ ಅಪಮಾನ ಮಾಡಿದರೆ ಅವರು ಕಠಿಣ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ಹಿಂದೂಗಳಿಗೆ ಅನಿಸುತ್ತದೆ. ಕಾಂಗ್ರೆಸ್ ಮಾಡಿದ ಮುಸಲ್ಮಾನರ ಓಲೈಕೆಯ ನಂತರ ಹಿಂದೂಹಿತದ ಕಾರ್ಯ ಮಾಡುವ ನಾಯಕರು ದೇಶದ ಪ್ರಧಾನಿಯಾಗುವುದು ಹಿಂದೂಗಳಿಗಾಗಿ ಭರವಸೆಯ ವಿಷಯವಾಗಿದೆ. ಹೀಗಿರುವಾಗ ಈ ರೀತಿ ಹೇಳಿಕೆ ನೀಡಿ ಹಿಂದೂಗಳನ್ನು ಪ್ರಚೋದಿಸುವ ಕೆಲಸವನ್ನು ಮೌಲಾನಾ ರಝಾ ಇವರು ಮಾಡಿದ್ದಾರೆ. ಭಾರತದೊಂದಿಗೆ ವಿದೇಶದಲ್ಲಿಯೂ ‘ಮೋದಿ ಮೋದಿ’ ಹೆಸರು ಮೊಳಗುತ್ತಿರುವಾಗ ‘ಇಂತಹ ನಾಯಕ ಮುಸಲ್ಮಾನರಿಗೂ ಸಿಗಬೇಕು’ ಎಂದು ರಝಾ ಇವರಿಗೆ ಅನಿಸುತ್ತಿದ್ದರೆ ಸಭೆಗೆ ಬಂದ ಎಲ್ಲ ಮುಸಲ್ಮಾನರೊಂದಿಗೆ ಅವರು ಸಹ ಹಿಂದೂ ಆಗಬೇಕು !