೨೦೨೨ ರ ಗುರುಪೂರ್ಣಿಮೆಯ ದಿನ ಆಶ್ರಮದ ಪ್ರವೇಶದ್ವಾರದ ಬಳಿ ಬಿಡಿಸಲಾದ ಶ್ರೀ ಗುರುಪಾದುಕೆಗಳ ರಂಗೋಲಿಯ ಆಧ್ಯಾತ್ಮಿಕ ಭಾವಾರ್ಥ !

೨೦೨೨ ನೇ ಇಸ್ವಿಯಲ್ಲಿ ಸನಾತನದ ರಾಮನಾಥಿ ಆಶ್ರಮದ ಪ್ರವೇಶದ್ವಾರದಲ್ಲಿ ಬಿಡಿಸಿದ ರಂಗೋಲಿ

೨೦೨೨ ರ ‘ಗುರುಪೂರ್ಣಿಮೆಯ ದಿನ ರಾಮನಾಥಿ ಆಶ್ರಮದ ಪ್ರವೇಶದ್ವಾರ ಬಳಿ ಒಂದು ಅರಳಿದ ಕಮಲದ ಎಸಳುಗಳ ಮಧ್ಯಭಾಗದಲ್ಲಿ ಶ್ರೀ ಗುರುಪಾದುಕೆಗಳ ಬಣ್ಣದ ರಂಗೋಲಿಯನ್ನು ಬಿಡಿಸಲಾಗಿತ್ತು. ಈ ರಂಗೋಲಿಯನ್ನು ನೋಡುವಾಗ ಅದರ ಬಗ್ಗೆ ನನಗೆ ಅರಿವಾದ ಭಾವಾರ್ಥ ಮುಂದಿನಂತಿದೆ.

೧. ರಂಗೋಲಿಯಲ್ಲಿ ಗುರುಪಾದುಕೆಗಳ ಆಧ್ಯಾತ್ಮಿಕ ಮಹತ್ವ

ರಂಗೋಲಿಯಲ್ಲಿನ ಪಾದುಕೆಗಳ ಸ್ಥಳದಲ್ಲಿ ಶ್ರೀ ಅನಂತಾನಂದ ಸಾಯೀಶರ ಪಾದುಕೆಗಳಿರುವುದು ಅರಿವಾಯಿತು. ಈ ಪಾದುಕೆಗಳಿಂದ ಚೈತನ್ಯಮಯ ಜ್ಞಾನದ ತಿಳಿಹಳದಿ ಬಣ್ಣದ ಲಹರಿಗಳು ವಾಯುಮಂಡಲದಲ್ಲಿ ಪಸರಿಸುತ್ತಿದ್ದವು. ಈ ಪಾದುಕೆಗಳು ಪ್ರತ್ಯಕ್ಷ ಅಲ್ಲಿವೆ ಹಾಗೂ ಅವುಗಳ ಚಲನವಲನದ ಅರಿವಾಯಿತು.

ಕು. ಮಧುರಾ ಭೋಸಲೆ

೨. ಶ್ರೀಗುರುಪಾದುಕೆಗಳ ಸುತ್ತಲೂ ಇರುವ ಹಳದಿ ಬಣ್ಣದ ವಲಯದ ಆಧ್ಯಾತ್ಮಿಕ ಭಾವಾರ್ಥ 

ಶ್ರೀ ಗುರುಪಾದುಕೆಗಳ ಸುತ್ತಲೂ ಉತ್ಪನ್ನವಾದ ಜ್ಞಾನಮಯ ತೇಜದ ವಲಯವನ್ನು ರಂಗೋಲಿಯಲ್ಲಿ ಹಳದಿ ಬಣ್ಣದ ವಲಯದ ಸ್ವರೂಪದಲ್ಲಿ ತೋರಿಸಲಾಗಿದೆ.

೩. ಕಮಲದ ೧೨ ಎಸಳುಗಳ ೨ ಆಕೃತಿಗಳ ಆಧ್ಯಾತ್ಮಿಕ ಭಾವಾರ್ಥ

ಹಳದಿ ಬಣ್ಣದ ವಲಯದ ಹೊರಗೆ ಕಮಲದ ೧೨ ಎಸಳುಗಳ ೨ ಆಕೃತಿಗಳಿವೆ. ದ್ವಾದಶ (೧೨) ಪಕಳೆಗಳ ೨ ಕಮಲಗಳು ‘ಜ್ಞಾನಕಮಲದ ಪ್ರತೀಕವಾಗಿವೆ. ಒಳಗಿನ ಎಸಳುಗಳ ಮೊದಲನೆಯ ಕಮಲವು ‘ಶ್ರೀ ಗುರುಗಳ ಕೃಪೆಯಿಂದ ಸಾಧಕರ ಅಥವಾ ಶಿಷ್ಯರ ಜ್ಞಾನಕಮಲ ಅರಳಿ ಅವರಿಗೆ ಆತ್ಮಜ್ಞಾನದ ಅನುಭೂತಿ ಬರುತ್ತದೆ, ಎಂಬ ದಿವ್ಯ ಘಟನೆಯ ಪ್ರತೀಕವಾಗಿದೆ. ಹೊರಗಿನ ಇನ್ನೊಂದು ೧೨ ಪಕಳೆಗಳ ಕಮಲವು ‘ಶ್ರೀ ಗುರುಗಳ ಕೃಪೆಯಿಂದ ಸಾಧಕರ ಅಥವಾ ಶಿಷ್ಯರ ಜ್ಞಾನಕಮಲವು ಅರಳಿ ಅವರಿಗೆ ಬ್ರಹ್ಮಜ್ಞಾನದ ಅನುಭೂತಿ ಬರುತ್ತದೆ, ಎಂಬ ದಿವ್ಯ ಘಟನೆಯ ಪ್ರತೀಕವಾಗಿದೆ.

೪. ನೀಲಿ ಬಣ್ಣದ ವಲಯದ ಆಧ್ಯಾತ್ಮಿಕ ಭಾವಾರ್ಥ

ಇದರ ಹೊರಗೆ ತಿಳಿನೀಲಿ ಬಣ್ಣದ ವಲಯವಿದೆ. ಇದು ಭಕ್ತಿಯ ವಲಯವಾಗಿದೆ. ಯಾವ ಸಾಧಕನ ಹೃದಯದಲ್ಲಿ ಶ್ರೀಗುರುಗಳ ಬಗ್ಗೆ ಭಕ್ತಿಯು ಜಾಗೃತವಾಗುತ್ತದೆಯೋ, ಅವರ ಮೇಲೆ ಶ್ರೀಗುರುಗಳ ದಿವ್ಯ ಕೃಪೆಯಾಗಿ ಅವರ ಹೃದಯದಲ್ಲಿ ಶ್ರೀ ಗುರುಪಾದುಕೆಗಳು ಸೂಕ್ಷ್ಮದಿಂದ ಸ್ಥಾಪನೆಯಾಗುತ್ತವೆ. ಈ ಗುರುಪಾದುಕೆಗಳ ನಿತ್ಯಸ್ಮರಣೆ, ಪೂಜೆ ಮತ್ತು ವಂದನೆ ಮಾಡುವುದರಿಂದ ಈ ಪಾದುಕಾರೂಪಿ ನಿರ್ಗುಣ-ಸಗುಣ ಗುರುತತ್ತ್ವದಿಂದ ಸಾಧಕನ ಮೇಲೆ ಕೃಪೆಯ ಸುರಿಮಳೆಯಾಗಿ ಅವನ ಜ್ಞಾನಕಮಲವು ಅರಳುತ್ತದೆ. ಅದರಿಂದ ಅವನಿಗೆ ಮೊದಲು ಆತ್ಮಜ್ಞಾನ (ಆತ್ಮದ ಜ್ಞಾನ) ಮತ್ತು ನಂತರ ಬ್ರಹ್ಮಜ್ಞಾನ (ಅಖಿಲ ಬ್ರಹ್ಮಾಂಡದ ಅಂದರೆ ಚರಾಚರ ಸೃಷ್ಟಿಯ ಜ್ಞಾನ) ಪ್ರಾಪ್ತವಾಗುತ್ತದೆ. ಈ ರೀತಿ ಶ್ರೀ ಗುರುಪಾದುಕೆಗಳು ಸಾಧಕನ ಹೃದಯದಲ್ಲಿ ಸ್ಥಾಪನೆಯಾದ ನಂತರ ಅವನ ಹೃದಯದಲ್ಲಿ ಸಾಕ್ಷಾತ್ ಶ್ರೀ ಗುರುಗಳದ್ದೇ ದಿವ್ಯ ಮತ್ತು ಚೈತನ್ಯದಾಯಕ ಸ್ಥಾನವು ನಿರ್ಮಾಣವಾಗಿ ಸಾಧಕನಿಗೆ ಆತ್ಮಜ್ಞಾನದ ಮತ್ತು ನಂತರ ಬ್ರಹ್ಮಜ್ಞಾನದ ಪ್ರಾಪ್ತಿಯಾಗುತ್ತದೆ. ಹಾಗಾಗಿ ಈ ರಂಗೋಲಿಯ ಕೆಳಗೆ ಬರೆದ ‘ನಮಸ್ಕಾರ ಸಾಷ್ಟಾಂಗ ಗುರುಪಾದುಕಾನಾ (ಗುರುಪಾದುಕೆಗಳಿಗೆ ಸಾಷ್ಟಾಂಗ ನಮಸ್ಕಾರ) ಎಂಬ ವಾಕ್ಯದಿಂದ ಶ್ರೀ ಗುರುಗಳ ಮಹಾತ್ಮೆಯು ತಿಳಿಯುತ್ತದೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೭.೨೦೨೨)