ಆಷಾಢ ಹುಣ್ಣಿಮೆ; ಅಂದರೆ ಸಾಧಕರು ಮತ್ತು ಶಿಷ್ಯರು ಅತ್ಯಂತ ಆತುರದಿಂದ ಕಾಯುತ್ತಾ ಇರುವಂತಹ ಗುರುಪೂರ್ಣಿಮೆಯ ಶುಭದಿನ ! ಶಿಷ್ಯನ ಪೂರ್ಣ ಜೀವನವನ್ನು ವ್ಯಾಪಿಸಿಕೊಂಡಿರುವ ಸರ್ವಶಕ್ತಿಶಾಲಿ ಹಾಗೂ ಸರ್ವಜ್ಞರಾದ ಗುರುಗಳ ಚರಣಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು, ಸಾಧನೆಯ ಮುಂದಿನ ಧ್ಯೇಯವನ್ನು ನಿರ್ಧರಿಸಲು ಸಾಧಕರ ಮತ್ತು ಶಿಷ್ಯರ ದೃಷ್ಟಿಯಲ್ಲಿ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಗುರುಗಳ ಕೃಪೆಯಿಂದ ಶಿಷ್ಯನ ಉದ್ಧಾರವಾಗುತ್ತದೆ, ಅಂದರೆ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಗುರು ಶಿಷ್ಯನಿಗೆ ಅವನ ಆಧ್ಯಾತ್ಮಿಕ ಉನ್ನತಿಯ ಪ್ರವಾಸದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತ್ಯಕ್ಷ, ಪರೋಕ್ಷ, ಸೂಕ್ಷ್ಮದಿಂದ ಹೀಗೆ ವಿವಿಧ ಮಾಧ್ಯಮಗಳಿಂದ ಸತತ ಮಾರ್ಗದರ್ಶನ ಮಾಡುತ್ತಾ ಇರುತ್ತಾರೆ, ಕಲಿಸುತ್ತಾ ಇರುತ್ತಾರೆ ಹಾಗೂ ಆ ಮಾರ್ಗದರ್ಶನವನ್ನು ಅರ್ಥೈಸಿಕೊಂಡೇ ಶಿಷ್ಯನು ಮುಂದಿನ ಹೆಜ್ಜೆಯನ್ನಿಡುತ್ತಾನೆ. ಗುರುಗಳ ಮನಸ್ಸಿನಲ್ಲಿ ಶಿಷ್ಯನ ಉನ್ನತಿಯಾಗಬೇಕು, ಎನ್ನುವ ವಿಚಾರ ಬಂದು ಆ ಕೃಪೆಯ ಆಧಾರದಲ್ಲಿ ಶಿಷ್ಯನು ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುತ್ತಾನೆ. ಗುರುಗಳು ಶಿಷ್ಯನ ಮೇಲೆ ಸಂಪೂರ್ಣ ಕೃಪೆ ಮಾಡಿದಾಗ ಶಿಷ್ಯನಿಗೆ ಜೀವನದಲ್ಲಿ ಯಾವುದೇ ಕೊರತೆ ಆಗುವುದಿಲ್ಲ, ತದ್ವಿರುದ್ಧ ಅವನು ಇತರರಿಗೆ ನೀಡಲು ಸಮರ್ಥನಾಗುತ್ತಾನೆ.
ಮಾಹಿತಿ ಮತ್ತು ಆತ್ಮಜ್ಞಾನ !
ಒಬ್ಬ ವ್ಯಕ್ತಿ ಶಾಲೆ, ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಮುಂದೆ ಪದವಿ ಮತ್ತು ಪದವಿಯೇತರ ಶಿಕ್ಷಣ ಪೂರ್ಣಗೊಳಿಸಿ ಯಾವುದಾದರೊಂದು ವಿಷಯದಲ್ಲಿ ಪ್ರಾವೀಣ್ಯವನ್ನು ಪಡೆಯುತ್ತಾನೆ. ಗುರುಗಳ ಕೃಪೆಯಿಂದ ಶಿಷ್ಯನಿಗೆ ಈ ಎಲ್ಲ ಮಾಹಿತಿಗಳ ಆಚೆಗಿನ ಆತ್ಮಜ್ಞಾನ ಸಿಗುತ್ತದೆ ಹಾಗೂ ಅದೇ ನಿಜವಾದ ಜ್ಞಾನವಾಗಿರುತ್ತದೆ. ಇದರ ಹೊರತು ವ್ಯಾವಹಾರಿಕ ಭಾಷೆಯಲ್ಲಿ ಯಾವುದಕ್ಕೆ ಜ್ಞಾನವೆನ್ನುತ್ತೇವೋ, ಅದು ನಿಜವಾಗಿಯೂ ಯಾವುದಾದರೊಂದು ವಿಷಯದ ಮಾಹಿತಿ ಆಗಿರುತ್ತದೆ ಹಾಗೂ ಅದರಲ್ಲಿನ ಸೂಕ್ಷ್ಮತ್ವವೆಂದರೆ ಅದು ಬುದ್ಧಿಯಿಂದ ತಿಳಿದುಕೊಂಡಿರುವ ವಿಶ್ಲೇಷಣೆಯಾಗಿದೆ. ಆತ್ಮಜ್ಞಾನವು ಇದರ ಆಚೆಗಿನದ್ದಾಗಿದೆ. ಹಿಂದಿನ ಕಾಲದಲ್ಲಿ ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು ಆಯಾ ವಿದ್ಯೆಯ ಶಿಕ್ಷಣ ಪಡೆಯುತ್ತಿರುವಾಗ ಇವುಗಳ ನಡುವೆಯೇ ಆಶ್ರಮಸೇವೆ, ಗುಣವೃದ್ಧಿ, ಆದರ್ಶ ಆಚರಣೆಗಳ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತಿತ್ತು. ಶಿಷ್ಯನ ಕ್ಷಮತೆಗನುಸಾರ ಅವನಿಗೆ ವಿದ್ಯೆಯು ಅಂಗೀಕೃತವಾಗುತ್ತದೆ; ತನ್ನ ಸಾಧನೆಯಿಂದ ಹಾಗೂ ಆಚರಣೆಯಿಂದ ಗುರುಗಳ ಮನಸ್ಸನ್ನು ಗೆದ್ದೊಡನೆ, ಆಗುವ ಆತ್ಮಜ್ಞಾನವು ಸರ್ವೋಚ್ಚವಾಗಿರುತ್ತದೆ. ಶಿಷ್ಯನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಜೋಡಿಸಲ್ಪಡುತ್ತಿದ್ದ ಕಾರಣ ಅವನಿಗೆ ವ್ಯಾವಹಾರಿಕ ದೃಷ್ಟಿಯಲ್ಲಿ ಯಾವುದೇ ವಿಷಯದ ಸಂಪೂರ್ಣ ಮಾಹಿತಿ ಇರಲಿ ಅಥವಾ ಇಲ್ಲದಿದ್ದರೂ, ಅವನಿಗೆ ಅದು ವಿಶ್ವಬುದ್ಧಿಯಿಂದ ಸಹಜವಾಗಿ ಪ್ರಾಪ್ತಿಯಾಗಬಲ್ಲದು. ಅಂದರೆ ವ್ಯಾವಹಾರಿಕ ಶಿಕ್ಷಣ ಪಡೆಯಲು ಸಮಯ ಕಳೆಯುವ ಬದಲು ಗುರುಗಳ ಕೃಪೆಯನ್ನು ಸಂಪಾದಿಸಲು, ಗುರುಗಳ ಮನಸ್ಸನ್ನು ಗೆಲ್ಲಲು ಸಮಯ ನೀಡಿದರೆ ಗುರುಗಳು ಅವನ ಮುಂದೆ ವಿಶ್ವದ ಜ್ಞಾನಭಂಡಾರವನ್ನೇ ತೆರೆದಿಡಬಲ್ಲರು. ಇಷ್ಟು ಸಾಮರ್ಥ್ಯ ಗುರುಗಳಲ್ಲಿರುತ್ತದೆ. ಇದುವೇ ಗುರುಕುಲದ ಮಹತ್ವವಾಗಿತ್ತು, ಆಗಿದೆ ಮತ್ತು ಮುಂದೆಯೂ ಇರಲಿದೆ. ಈ ಗುರುಶಿಷ್ಯ ಹಾಗೂ ಗುರುಕುಲ ಪರಂಪರೆಗನುಸಾರವೇ ಜ್ಞಾನಗಂಗೆಯು ಮುಂದಿನ ಪೀಳಿಗೆಯ ವರೆಗೆ ಪ್ರವಹಿಸುತ್ತಿತ್ತು. ಹೀಗೆ ಯುಗಯುಗಾಂತರಗಳಿಂದ ನಡೆಯುತ್ತಿದ್ದ ಕಾರಣ ಭಾರತೀಯ ಸಭ್ಯತೆ, ಪರಂಪರೆ, ಸಂಸ್ಕೃತಿ, ವೇದ, ಪೃಥ್ವಿ ಮತ್ತು ಸಂಪೂರ್ಣ ಮನುಕುಲ ಉಳಿದುಕೊಂಡಿದೆ. ಬ್ರಿಟಿಷರು ಇದನ್ನು ಗಮನಿಸಿ ಗುರುಕುಲ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾದಾಗ ಮಾತ್ರ ಭಾರತೀಯರ ನಿಜವಾದ ಅವನತಿ ಪ್ರಾರಂಭವಾಯಿತು. ಇಂದು ಅದು ತನ್ನ ಕೊನೆಯ ಹಂತವನ್ನು ತಲಪಿದೆ.
ಗುರು-ಶಿಷ್ಯ ಪರಂಪರೆಯ ಮಹತ್ವ !
ಯಾವಾಗ ಭಾರತದ ಮೇಲೆ ಭೀಕರ ಸಂಕಟಗಳು ಬಂದುವೋ, ಆಗ ಬೇರೆ ಯಾರೂ ಅಲ್ಲ, ಗುರುಪರಂಪರೆಯೇ ಭಾರತ ಮತ್ತು ಹಿಂದೂಗಳ ರಕ್ಷಣೆ ಮಾಡಿದೆ. ಮಹಾಭಾರತದ ಕಾಲದಲ್ಲಿ ಅನೇಕ ಅಸುರೀ ಶಕ್ತಿಗಳು ಪೃಥ್ವಿಯ ಮೇಲೆ ಉಪಟಳ ನೀಡುತ್ತಿರುವಾಗ ಶ್ರೀಕೃಷ್ಣ ಮತ್ತು ಅರ್ಜುನ, ದಬ್ಬಾಳಿಕೆ ನಡೆಸುತ್ತಿದ್ದ ಅತ್ಯಾಚಾರಿ ಧನಾನಂದನ ಆಡಳಿತವನ್ನು ಕೊನೆಗೊಳಿಸಿದ ಚಂದ್ರಗುಪ್ತ ಮತ್ತು ಅವನ ಗುರು ಆಚಾರ್ಯ ಚಾಣಕ್ಯ, ಮೊಗಲರ ಆಕ್ರಮಣದಿಂದ ಹಿಂದೂ ಸಮಾಜವು ನರಳುತ್ತಿರುವಾಗ ಹಿಂದವೀ ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಗುರು ಸಮರ್ಥ ರಾಮದಾಸಸ್ವಾಮಿ; ದಕ್ಷಿಣದಲ್ಲಿ ಮೊಗಲರನ್ನು ಸದೆಬಡಿದು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಹರಿಹರ ಮತ್ತು ಬುಕ್ಕರಾಯ ಮತ್ತು ಅವರ ಗುರು ವಿದ್ಯಾರಣ್ಯಸ್ವಾಮಿ, ಬ್ರಿಟಿಷರ ಆಡಳಿತದಲ್ಲಿ ಹಿಂದೂ ಧರ್ಮವು ನಾಲ್ಕೂ ದಿಕ್ಕುಗಳಿಂದ ಸಂಕಟದಲ್ಲಿರುವಾಗ ಸಪ್ತಸಮುದ್ರದಾಚೆಗೆ ಹೋಗಿ ಹಿಂದೂ ಧರ್ಮದ ಧ್ವಜವನ್ನು ಹಾರಿಸಿದ ಸ್ವಾಮಿ ವಿವೇಕಾನಂದರು ಮತ್ತು ಅವರ ಗುರು ರಾಮಕೃಷ್ಣ ಪರಮಹಂಸ ಮುಂತಾದ ಗುರುಶಿಷ್ಯ ಪರಂಪರೆಯ ಉದಾಹರಣೆಗಳಿವೆ. ಇಂದಿನ ಪರಿಸ್ಥಿತಿಯನ್ನು ವಿಚಾರ ಮಾಡಿದರೆ, ಭಾರತ, ಹಿಂದೂಗಳ ಮತ್ತು ಸಂಪೂರ್ಣ ವಿಶ್ವದ ಮುಂದೆ ಭಯದ ವಾತಾವರಣವಿದೆ. ಮತಾಂಧರು, ಸಾಮ್ಯವಾದಿಗಳು, ಜಾತ್ಯತೀತರು ಮುಂತಾದವರಿಂದಾಗಿ ಹಿಂದೂಗಳು, ಹಿಂದೂ ಧರ್ಮ ಮತ್ತು ಭಾರತ ಸಂಕಟಕ್ಕೀಡಾಗಿದೆ. ಲವ್ ಜಿಹಾದ್, ಅಪಹರಣ, ಅತ್ಯಾಚಾರ ಇತ್ಯಾದಿಗಳಿಂದಾಗಿ ಹಿಂದೂ ಯುವತಿಯರ-ಮಹಿಳೆಯರ ಶೀಲಹರಣವಾಗುತ್ತಿದೆ. ಗಲಭೆ, ಹಿಂದೂಗಳ ಮೇಲಿನ ಆಕ್ರಮಣಗಳು, ಹಾಡುಹಗಲೇ ನಡೆಯುವ ಹತ್ಯೆಗಳಿಂದಾಗಿ ಎಲ್ಲೆಡೆ ಅಸುರಕ್ಷಿತತೆ, ಅಶಾಂತಿ ಹರಡಿದೆ. ಪೊಲೀಸರು ಮತ್ತು ಆಡಳಿತದವರು ಹಿಂದೂಗಳು ಮತ್ತು ಸಂಪೂರ್ಣ ಭಾರತೀಯ ಸಮಾಜವನ್ನು ರಕ್ಷಣೆ ಮಾಡಲು ಅಸಮರ್ಥರಾಗುತ್ತಿದ್ದಾರೆ. ಅದರ ಜೊತೆಗೆ ನೆರೆಹಾವಳಿ, ಭೂಕಂಪದ ಆಘಾತವಾಗುತ್ತಿದೆ, ಅತಿವೃಷ್ಟಿಯನ್ನು ಎದುರಿಸಬೇಕಾಗುತ್ತಿದೆ. ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡಗಳು ಕವಿದಿವೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಸಂಪೂರ್ಣ ಸಮಾಜವನ್ನು ಶಾಂತಗೊಳಿಸಲು ಗುರು-ಶಿಷ್ಯ ಪರಂಪರೆಯೇ ಅವತಾರ ತಾಳಿದೆ ಹಾಗೂ ಅದು ಕಾರ್ಯವನ್ನು ಆರಂಭಿಸಿದೆ. ಆ ಶ್ರೇಷ್ಟ ಗುರು-ಶಿಷ್ಯ ಜೋಡಿಯೇ ಪ.ಪೂ. ಭಕ್ತರಾಜರು ಮತ್ತು ಅವರ ಶಿಷ್ಯೋತ್ತಮ ಡಾ. ಜಯಂತ ಆಠವಲೆ ! ಭಾರತೀಯ ಈ ಶಬ್ದದಲ್ಲಿನ ‘ಭಾ ಎಂದರೆ ತೇಜ ಹಾಗೂ ತೇಜದ ಉಪಾಸನೆ ಯಲ್ಲಿ ಮಗ್ನರಾಗಿರುವವರು ಭಾರತೀಯರು ! ಈ ತೇಜದ ಉಪಾಸನೆಯೆಂದರೆ ಸಾಧನೆಯಾಗಿದೆ. ಭಾರತೀಯರಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಈ ಸಾಧನೆಯ ವಿಷಯವನ್ನು ಮರೆತು ಹೋಗಿರುವುದರಿಂದ ‘ಜೀವನದಲ್ಲಿ ಮಾತ್ರವಲ್ಲ, ರಾಷ್ಟ್ರ ಹಾಗೂ ಧರ್ಮದ ಸಮಸ್ಯೆಯೂ ನಿವಾರಣೆಯಾಗುವಂತಹ ಮಹತ್ವಪೂರ್ಣ ಬೋಧನೆಯನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನೀಡಿದ್ದಾರೆ. ಮಾನವನಿಗೆ ತನ್ನ ಭವಿಷ್ಯ ಭಯಾನಕ ಹಾಗೂ ಭೀಕರವಾಗಿರುವಾಗ ‘ಮನುಕುಲಕ್ಕೆ ಆನಂದವನ್ನು ನೀಡುವ, ಎಲ್ಲರನ್ನೂ ಉದ್ಧಾರ ಮಾಡುವ ಹಿಂದೂ ರಾಷ್ಟ್ರ ಶೀಘ್ರಗತಿಯಲ್ಲಿ ಸ್ಥಾಪನೆಯಾಗಲಿಕ್ಕಿದೆ, ಎಂದು ಅವರು ಆಶ್ವಾಸನೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲ, ಅವರು ಹಿಂದುತ್ವನಿಷ್ಠರಿಗೆ ಪ್ರೇರಣೆ ನೀಡಿ ಸಾಧನೆಗಾಗಿ ಕೃತಿಶೀಲರನ್ನಾಗಿ ಮಾಡಿದ್ದಾರೆ. ಗುರುಪೂರ್ಣಿಮೆಯ ಪ್ರಯುಕ್ತ ಈ ಗುರು-ಶಿಷ್ಯ ಪರಂಪರೆಗೆ ಶರಣಾಗೋಣ ಹಾಗೂ ಭೀಕರ ಆಪತ್ಕಾಲವನ್ನು ಎದುರಿಸುತ್ತಿರುವ ಮನುಕುಲಕ್ಕೆ ಯೋಗ್ಯವಾದ ದೃಷ್ಟಿಕೋನ ನೀಡಿದ್ದಕ್ಕಾಗಿ ಪುನಃ ಪುನಃ ಕೃತಜ್ಞತೆಯನ್ನು ಸಲ್ಲಿಸೋಣ !