ಮಾಯೆಯ ಮಾಯೆ, ಎಂದರೆ ವಾಸ್ತವದಲ್ಲಿ ಸರ್ವವ್ಯಾಪಿ ಪ್ರೇಮ; ಆದರೆ ಮಾಯೆಯಿಂದ ಅನಿರೀಕ್ಷಿತ ವಾಗಿ ಮಾಯಾವಿತನಾ ನಿರ್ಮಾಣವಾಗುತ್ತದೆ ಮತ್ತು ಸರ್ವನಾಶವಾಗುತ್ತದೆ. ಸದ್ಗುರು ಮಾಯೆಯ ಮುಳ್ಳನ್ನು ತಮ್ಮ ಶಿಷ್ಯನ ಅಂತಃಕರಣದಿಂದ ತೆಗೆದು ಹಾಕುತ್ತಾರೆ. ಅದಕ್ಕಾಗಿ ಸದ್ಗುರುಗಳ ಮುಖ್ಯ ಕಾರ್ಯ ಎಂದರೆ ಶಿಷ್ಯನ ಅಂತಃಕರಣದಲ್ಲಿ ಶಾಂತಿ ಮತ್ತು ಸಮಾಧಾನದ ಸ್ಥಾಪನೆ ಮಾಡುವುದೇ ಆಗಿರುತ್ತದೆ. ಆದ್ದರಿಂದ ಬಹಿರ್ಮುಖ ಪ್ರವೃತ್ತಿಗೆ ಒಳಗಿನಿಂದಲೇ ತಡೆಯೊಡ್ಡಲ್ಪಡುತ್ತದೆ. ಶಾಂತಿ ಮತ್ತು ಸಮಾಧಾನದ ಜರಡಿಯಿಂದ ಹೊರಗೆ ಬಂದಿರುವ ವಾಸನೆಯ ವಿಕಾರ ಪ್ರಬಲವಾಗಲು ಸಾಧ್ಯವಿಲ್ಲ. ಆಗ ಉಳಿಯುವುದು ಸಾಮಾನ್ಯ ಇಚ್ಛೆ ಮಾತ್ರ. ಅದರಲ್ಲಿ ಮಾಯೆ ಇರುವುದಿಲ್ಲ. ಉಳಿದಿರುವ ಮಾಯೆ ಹಾನಿಕರ ಇರಲ್ಲ, ತದ್ವಿರುದ್ಧ ಸಹಾಯಕವಾಗಿ ಇರುತ್ತದೆ.
– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರ)