ದ್ವಿತೀಯ ಪಿಯುಸಿ. ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀ. ಪಾರ್ಥ ಪೈ ಇವರ ಸುಯಶಸ್ಸು

ಶ್ರೀ. ಪಾರ್ಥ ಪೈ

ಮಂಗಳೂರು – ಇಲ್ಲಿನ ಯುವ ಸಾಧಕ ಕು. ಪಾರ್ಥ್ ಪೈ ಇವರು ದ್ವಿತೀಯ ಪಿ.ಯು.ಸಿ.ಯ ವಿಜ್ಞಾನ ಶಾಖೆಯ ಪರೀಕ್ಷೆಯ ಮೂರು ವಿಷಯಗಳಲ್ಲಿ ಶೇಕಡಾ ೧೦೦ ಮತ್ತು ಎರಡು ವಿಷಯಗಳಲ್ಲಿ ಶೇಕಡಾ ೯೮ ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಕು. ಪಾರ್ಥ್ ಇವರು ಇಲ್ಲಿನ ಸಾಧಕರಾದ ಶ್ರೀ. ಪುಂಡಲೀಕ್ ಪೈ ಇವರ ದ್ವಿತೀಯ ಪುತ್ರರಾಗಿದ್ದಾರೆ. ‘ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡಿದ್ದರಿಂದಲೇ ತನಗೆ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತವಾಗಿದೆ’, ಎಂದು ಹೇಳಿ ಕು. ಪಾರ್ಥ್ ಇವರು ಶ್ರೀಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.