ನ್ಯಾಯವಾದಿ ಯೋಗೇಶ ಜಲತಾರೆ : ‘ಪೂ. ಅಜ್ಜಿಯವರ (ಸನಾತನದ ೯೫ ನೇ (ವ್ಯಷ್ಟಿ) ಸಂತರಾದ ಪೂ. (ಶ್ರೀಮತಿ) ಕುಸುಮ ಜಲತಾರೆ ಅಜ್ಜಿಯವರ) ಮುಖ ಕೆಲಮೊಮ್ಮೆ ತುಂಬಾ ಗಂಭೀರವಾಗಿರುತ್ತದೆ; ಆದರೆ ಆ ಸಮಯದಲ್ಲಿ ಯಾರಾದರು ಸಾಧಕರು ಮಾತನಾಡಲು ಬಂದರೆ ಅವರು ಎಷ್ಟೊಂದು ಸುಂದರವಾಗಿ ಸ್ಪಂದಿಸಿ ಮಧುರವಾಗಿ ನಗುತ್ತಾರೆಂದರೆ, ಅವರನ್ನು ನೋಡಿ ನನಗೆ ‘ಕೆಲವು ಸಮಯದ ಹಿಂದೆ ಗಂಭೀರವಾಗಿರುವ ಪೂ. ಅಜ್ಜಿ ಇವರೇನಾ ?’, ಎಂಬ ಪ್ರಶ್ನೆ ಬರುತ್ತದೆ.ಅವರು ಗಂಭೀರವಾಗಿರುವಾಗ ಅವರ ಕಣ್ಣುಗಳು ಶೂನ್ಯದಲ್ಲಿರುತ್ತವೆ ಮತ್ತು ಅವರು ನಿರ್ವಿಚಾರ ಸ್ಥಿತಿಯಲ್ಲಿರುತ್ತಾರೆ. ಇತರ ಸಮಯದಲ್ಲಿ ಪೂ. ಅಜ್ಜಿಯವರು ಸತತವಾಗಿ ಭಾವಾವಸ್ಥೆಯಲ್ಲಿರುತ್ತಾರೆ. ಅವರಿಗೆ ಸಾಧಕರ ಬಗ್ಗೆ ತುಂಬಾ ಪ್ರೇಮ ಅನಿಸುತ್ತದೆ. ಸಾಧಕರಿಗೇನಾದರೂ ಒಳ್ಳೆಯದಾದರೆ ಪೂ. ಅಜ್ಜಿಯವರಿಗೆ ಹೆಚ್ಚು ಆನಂದವಾಗುತ್ತದೆ. ಅವರಿಗೆ ಯಾವುದರ ಬಗ್ಗೆಯೂ ಕಾಳಜಿ ಅನಿಸುವುದಿಲ್ಲ. ಅವರು ಈಗ ಕುಟುಂಬವರಿಂದ ಅಲಿಪ್ತರಾಗಿದ್ದಾರೆ.
ಸದ್ಗುರು ಡಾ. ಮುಕುಲ ಗಾಡಗೀಳ : ಪೂ. ಜಲತಾರೆ ಅಜ್ಜಿಯವರು ಸಾಧಕರಿಗಾಗಿ ಪ್ರಾರ್ಥನೆ, ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುತ್ತಿರುವುದರಿಂದ ಅವರಲ್ಲಿನ ಮಾರಕ ಭಾವ ಪ್ರಕಟವಾಗಿದ್ದಾಗ ಅವರ ಮುಖ ಗಂಭೀರವಾಗಿರುತ್ತದೆ; ಆದರೆ ಸಾಧಕರು ಮಾತನಾಡಲು ಬಂದಾಗ ಅವರಲ್ಲಿನ ಪ್ರೀತಿಯಿಂದ ಅವರ ಮುಖ ನಗುಮುಖವಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಅವರ ಮುಖ ಏಕೆ ಗಂಭೀರವಾಗಿರುತ್ತದೆ’, ಎಂಬುದು ಈಗ ತಿಳಿಯಿತಲ್ಲ ? ಅದು ಸಾಧಕರಿಗಾಗಿ ಅಲ್ಲ, ಅವರ ಸಮಷ್ಟಿ ಆಧ್ಯಾತ್ಮಿಕ ತೊಂದರೆ ದೂರವಾಗಲು ಗಂಭೀರವಾಗುತ್ತದೆ.’ (ಪೂ. ಅಜ್ಜಿಯವರನ್ನು ಉದ್ದೇಶಿಸಿ) ನೀವು ಎಷ್ಟೊಂದು ಶೀಘ್ರಗತಿಯಲ್ಲಿ ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಿ ಕೊಳ್ಳುತ್ತಿದ್ದೀರಿ ? ನನ್ನ ಕಾಳಜಿ ಮುಗಿಯಿತು. ನಿಮ್ಮ ಪ್ರಗತಿ ಚೆನ್ನಾಗಿ ಆಗುತ್ತಿದೆ.
ಪೂ. (ಶ್ರೀಮತಿ) ಜಲತಾರೆಅಜ್ಜಿ : ಎಲ್ಲವನ್ನು ಭಗವಂತನೇ ಮಾಡುತ್ತಾನೆ. ಅವನಿಂದಲೇ ಎಲ್ಲವೂ ಆಗುತ್ತಿದೆ. ನನಗೆ ಏನು ಮಾಡಲು ಬರುವುದಿಲ್ಲ.’
– ನ್ಯಾಯವಾದಿ ಯೋಗೇಶ ಜಲತಾರೆ (ಪೂ. (ಶ್ರೀಮತಿ) ಜಲತಾರೆಅಜ್ಜಿಯವರ ಸುಪುತ್ರ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧.೨೦೨೪)