ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ‘ವ್ಹೀಡಿಯೋ’ ಪ್ರಸಾರವಾಗುತ್ತಿದೆ. ಅದರಲ್ಲಿ ಓರ್ವ ತೀರಾ ಚಿಕ್ಕ ವಯಸ್ಸಿನ ವಿದ್ಯಾರ್ಥಿ ಅಳುತ್ತಾ ತನ್ನ ಶಿಕ್ಷಕಿಗೆ, ‘ನನ್ನ ತಂದೆ ಪೊಲೀಸ್ ಇಲಾಖೆಯಲ್ಲಿದ್ದಾರೆ’ ಎಂದು ಹೇಳುತ್ತಿದ್ದಾನೆ. ಅದಕ್ಕೆ ಶಿಕ್ಷಕಿ ಅವನನ್ನು, ‘ನಿನ್ನ ತಂದೆ ಪೊಲೀಸ್ ಇಲಾಖೆಯಲ್ಲಿದ್ದರೆ, ಏನು ಮಾಡಬೇಕು’ ಎಂದು ಕೇಳಿದರು. ಅದಕ್ಕೆ ಅವನು ಶಿಕ್ಷಕಿಗೆ ಉತ್ತರ ನೀಡುತ್ತಾನೆ, “ಅವರು ನಿಮ್ಮ ಮೇಲೆ ಗುಂಡು ಹಾರಿಸುವರು, ಬಂದೂಕ್ ಅನ್ನು ಪೆಟ್ಟಿಗೆಯ ಮೇಲೆ ಇಟ್ಟಿದ್ದಾರೆ !”
ಈ ರೀತಿ ಆ ಚಿಕ್ಕ ವಿದ್ಯಾರ್ಥಿ ತುಂಬಿದ ತರಗತಿಯಲ್ಲಿ ತನ್ನ ತಂದೆ ಪೊಲೀಸ್ ಇರುವುದಾಗಿ ಹೇಳಿ ಶಿಕ್ಷಕಿಗೆ ಅಳುತ್ತಾ ಹೇಳಿದರೂ; ಬೆದರಿಸುವಂತೆ ಕಾಣಿಸುತ್ತದೆ ! ಇದರಿಂದ ಸದ್ಯದ ಪೀಳಿಗೆಯ ಮಾನಸಿಕತೆ ಹೇಗೆ ಆಗಿದೆ ? ಎಂಬುದು ಗಮನಕ್ಕೆ ಬರುತ್ತದೆ. ಬಹುಶಃ ಆ ಶಿಕ್ಷಕಿ ಅವನಿಗೆ ಕೂಗಾಡಿರಬಹುದು; ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಈ ರೀತಿಯ ಮನಃಸ್ಥಿತಿ ಇದ್ದರೆ ಮುಂದೆ ಈ ಮಕ್ಕಳು ಹೇಗಾಗಬಹುದು ? ಈ ಹಿಂಸ್ರ ಮಾನಸಿಕತೆ ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಇದಕ್ಕೆ ಸಕಾಲದಲ್ಲಿ ಕಡಿವಾಣ ಹಾಕುವುದು ಆವಶ್ಯಕವಾಗಿದೆ.
ಪ್ರಚಿಲಿತ ಶಿಕ್ಷಣವ್ಯವಸ್ಥೆಯಲ್ಲಿ ವಿದ್ಯಾಥಿಗಳು ಮಾನಸಿಕ ರೋಗಿಗಳಾಗುತ್ತಿದ್ದಾರೆ. ಈ ಸತ್ಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಗಂಭೀರ ಮತ್ತು ಚಿಂತಾಜನಕವಾಗಿದೆ. ಮೊದಲು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬದಲಾವಣೆ ತರಲು ಬೆತ್ತದಿಂದ ಹೊಡೆಯುತ್ತಿದ್ದರು. ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಆ ಬಗ್ಗೆ ಏನೂ ಅನಿಸುತ್ತಿರಲಿಲ್ಲ; ತದ್ವಿರುದ್ಧ ತಮ್ಮ ಮಕ್ಕಳಲ್ಲಿ ಬದಲಾವಣೆ ತರಲು ಪಾಲಕರು ಶಿಕ್ಷಕರಿಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು, ಆದರೆ ಈಗ ವಿದ್ಯಾರ್ಥಿಗಳನ್ನು ಹೊಡೆದರೆ ಶಿಕ್ಷಕರ ಮೇಲೆ ಅಪರಾಧ ದಾಖಲಿಸಲಾಗುತ್ತದೆ. ಆದುದರಿಂದ ಶಿಕ್ಷಕರೂ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವುದರಿಂದ ಮಕ್ಕಳಿಗೆ ಶಿಸ್ತು ಕಲಿಸುವುದು, ಸಂಸ್ಕಾರ ಮಾಡುವುದು ಈ ಕಡೆಗೆ ಅವರು ತಳಮಳದಿಂದ ಗಮನ ಕೊಡುವುದಿಲ್ಲ; ಅಷ್ಟೇ ಅಲ್ಲದೇ ಅವರು ಆ ವಿಚಾರವನ್ನೇ ಬಿಟ್ಟು ಬಿಡುತ್ತಾರೆ. ಮೇಲಿನ ಪ್ರಸಂಗದಲ್ಲಿ ನಿಜವಾಗಿಯೂ ಆ ಶಿಕ್ಷಕಿ ಆ ಹುಡುಗನಿಗೆ ಯೋಗ್ಯ-ಅಯೋಗ್ಯ ಇವುಗಳ ಅರಿವು ಮಾಡಿಕೊಡುವುದು ಅಪೇಕ್ಷಿತವಿದೆ; ಆದರೆ ಆ ಶಿಕ್ಷಕಿಯೂ ಪ್ರಾಯಶಃ ಆ ಚಿಕ್ಕ ವಿದ್ಯಾರ್ಥಿ ಹುಡುಗನ ಉತ್ತರ ಕೇಳಿ ಹತಾಶಳಾಗಿರಬಹುದು ಮತ್ತು ಅವಳು ಸದ್ಯದ ಆಧುನಿಕ ಸಂಪ್ರದಾಯಕ್ಕನುಸಾರ ಈ ಘಟನೆಯ ವಿಡಿಯೋ ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರಬಹುದು.
ಈ ಧಾವಂತದ ಯುಗದಲ್ಲಿ ಸಂಸ್ಕಾರಕ್ಷಮ ಪೀಳಿಗೆ ಸೃಷ್ಟಿಯಾಗದಿರಲು ಅನೇಕ ಕಾರಣಗಳಿವೆ. ತಾಯಿ-ತಂದೆಯರಿಗೆ ತಮ್ಮ ನೌಕರಿಯಿಂದಾಗಿ ಮಕ್ಕಳ ಕಡೆಗೆ ಗಮನ ನೀಡಲು ಸಮಯವೇ ಇಲ್ಲ. ವಿಭಕ್ತ ಕುಟುಂಬಪದ್ಧತಿಯಿಂದಾಗಿ ಮನೆಯಲ್ಲಿ ಸಂಸ್ಕಾರ ಮಾಡುವ ಅಜ್ಜಿ-ಅಜ್ಜರೇ ಇಲ್ಲ. ಆದುದರಿಂದ ಮಕ್ಕಳು ಚಿಕ್ಕವರಾಗಿದ್ದರೆ ಶಿಶುವಿಹಾರದಲ್ಲಿ ಇಡಲಾಗುತ್ತದೆ. ಅಲ್ಲಿ ಅವರಿಗೆ ಒಳ್ಳೆಯ-ಕೆಟ್ಟ ಎಂದು ಹೇಳುವವರು ಯಾರೂ ಇರುವುದಿಲ್ಲ. ಅದರಲ್ಲಿ ಈಗ ಕೇಬಲ್ ಟಿವಿ. ಇಂಟರನೆಟ್, ‘ವಿಡಿಯೋ ಗೆಮ್, ‘ಒಟಿಟಿ’ಯಲ್ಲಿನ ಚಲನಚಿತ್ರ, ವಾಹಿನಿಗಳಲ್ಲಿನ ಮಾಲಿಕೆಗಳು, ಹಿಂದಿ ಅಥವಾ ಆಂಗ್ಲ ಚಲನಚಿತ್ರಗಳು ಮನೆಮನೆಗಳಲ್ಲಿ ಬಂದುದರಿಂದ ಈ ಆಧುನಿಕ ಸಾಧನಗಳೇ ಮಕ್ಕಳ ಎಳೆ ಮನಸ್ಸಿನ ಮೇಲೆ (ಕು)ಸಂಸ್ಕಾರವನ್ನು ಸೃಷ್ಟಿಸುತ್ತಿವೆ. ಎಳೆ ವಯಸ್ಸಿನಲ್ಲಿ ಬೇಡದ ಸಂಗತಿಗಳಿಗೆ ಒಳಗಾಗಿ ಮಕ್ಕಳ ಮನಸ್ಥಿತಿ ವಿಕೃತವಾಗುತ್ತಿದೆ. ಪಾಲಕರು ಮಕ್ಕಳಿಗೆ ಶಿಕ್ಷಕರು ಮತ್ತು ದೊಡ್ಡವರನ್ನು ಗೌರವಿಸುವುದು, ಅವರೊಂದಿಗೆ ವಿನಯದಿಂದ ವರ್ತಿಸುವುದು, ಅವರ ಮಾತುಗಳನ್ನು ಕೇಳುವುದು ಮುಂತಾದ ವಿಷಯಗಳನ್ನು ಕಲಿಸುವುದು ಆವಶ್ಯಕವಾಗಿದೆ, ಅಂದರೆ ಮಾತ್ರ ಭವಿಷ್ಯದಲ್ಲಿ ನೀತಿವಂತ ಪೀಳಿಗೆ ತಯಾರಾಗಬಹುದು !
– ಸೌ. ಅಪರ್ಣಾ ಜಗತಾಪ, ಪುಣೆ