ಸಾಧಕರಿಗೆ ಸದಾ ಆಧಾರ ನೀಡಿ ಅವರಿಂದ ಪರಿಪೂರ್ಣ ಸೇವೆ ಮಾಡಿಸುವ ಪುಷ್ಪಾ ಮೇಸ್ತ 

ಸೌ. ಪುಷ್ಪಾ ಮೇಸ್ತ ಮತ್ತು ಶ್ರೀ. ರಾಘವೇಂದ್ರ ಮೇಸ್ತ ಇವರಿಗೆ ಸನಾತನ ಪರಿವಾರದಿಂದ ವೈವಾಹಿಕ ಜೀವನದ ಪ್ರಯುಕ್ತ ಶುಭಾಶಯಗಳು

ಸೌ. ಪುಷ್ಪಾ ಮೇಸ್ತ

ಸೌ. ಪುಷ್ಪಾ ಮೇಸ್ತ ಮತ್ತು ಶ್ರೀ. ರಾಘವೇಂದ್ರ ಮೇಸ್ತ ಇವರ ವಿವಾಹವು ನವೆಂಬರ್ ೧೮ ರಂದು ನೆರವೇರಿತು. ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಾರದ ಜವಾಬ್ದಾರಿಯನ್ನು ಸೇವೆಯೆಂದು ಮಾಡುತ್ತಿದ್ದರು. ಅವರೊಂದಿಗೆ ಸೇವೆ ಮಾಡಿದ ಸಾಧಕರಿಗೆ ಗಮನಕ್ಕೆ ಬಂದ ಅವರ ಗುಣ ವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ

೧. ವ್ಯಷ್ಟಿ ಸಾಧನೆಯ ಗಾಂಭೀರ್ಯ

ಒಮ್ಮೆ ಒಂದು ಮಹತ್ವದ ಸೇವೆಯಯನ್ನು ಪೂರ್ಣ ಮಾಡಲು ತಡರಾತ್ರಿಯವರೆಗೆ  ಪುಷ್ಪಕ್ಕನವರ ಜೊತೆಗೆ ಕುಳಿತುಕೊಳ್ಳಬೇಕಾಯಿತು. ತಡರಾತ್ರಿ ತನಕ ಸೇವೆ ಮಾಡಿದ್ದರೂ ಬೆಳಗ್ಗೆ ೫ ಗಂಟೆಗೆ ಎದ್ದು ಅವರು ನಾಮಜಪ ಮಾಡುವುದು ನನ್ನ ಗಮನಕ್ಕೆ ಬಂದಿತು. ಇದರಿಂದ ಅವರ ಸಾಧನೆಯ ತಳಮಳ ಕಲಿಯಲು ಸಿಕ್ಕಿತು.

– ಕು. ಮಾಧವಿ ಪೈ, ಮಂಗಳೂರು.

೨. ಪ್ರೇಮಭಾವ

ಸ್ನೇಹಜೀವಿ, ಸದಾ ಪ್ರೀತಿಯಿಂದ ಮಾತನಾಡಿಸುತ್ತಾ, ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪೂರಕವಾಗಿ ಮನದಟ್ಟುವಂತೆ ಸುಲಭವಾದ ಸಲಹೆಗಳನ್ನು ನೀಡುತ್ತಾರೆ. ಆಶ್ರಮಕ್ಕೆ ಬಂದಾಗ ಎಲ್ಲರ ಯೋಗ ಕ್ಷೇಮವನ್ನು ವಿಚಾರಿಸುತ್ತಾರೆ. ಸಾಧಕರಿಗೆ ಸೇವೆ ಯಲ್ಲಿ ಅಡಚಣೆ ಬಂದರೆ ಅವರಿಗೆ ಆಧಾರ ಕೊಟ್ಟು ಉಪಾಯ ಯೋಜನೆಯನ್ನು ತಿಳಿಸುತ್ತಾರೆ. ವಿವಿಧ ಶಿಬಿರಗಳ ಸಮಯದಲ್ಲಿ ಅವರಿದ್ದರೆ ನಮಗೆ ಧೈರ್ಯದಿಂದ ಸೇವೆ ಮಾಡಲು ಆಗುತ್ತಿತ್ತು.

– ಶ್ರೀ. ದಾಮೋದರ, ಉಜಿರೆ.

೩. ಸಾಧಕರ ಸಾಧನೆಯ ವಿಚಾರ ಮಾಡುವುದು

ಸಾಧಕರ ಸಭೆಯು ನಡೆಯುವಾಗ ಅವರು ಎಲ್ಲರನ್ನು ಅದರಲ್ಲಿ ಸೇರಿಸಿಕೊಳ್ಳುತ್ತಾರೆ. ಸಾಧಕರಿಗೇ ವಿಷಯ ಮಂಡನೆ ಮಾಡಲು ಹೇಳುತ್ತಾರೆ ಮತ್ತು ಸಾಧಕರು ಕಡಿಮೆ ಬಿದ್ದಾಗ ಅವರನ್ನು ಅಂತರ್ಮುಖಗೊಳಿಸಿ ಅವರಿಗೆ ಪ್ರಯತ್ನ ಮಾಡಲು ಯೋಗ್ಯ ದಿಶೆಯನ್ನು ನೀಡುತ್ತಾರೆ, ಸಾಧಕರು ಮುಂದೆ ಬರಬೇಕು ಎನ್ನುವ ತಳಮಳ ಅವರಲ್ಲಿ ಇರುತ್ತದೆ.

– ಸೌ. ಆಶಾ ಬಾಲಕೃಷ್ಣನ್, ಮಡಿಕೇರಿ.

೪. ಪರಿಪೂರ್ಣ ಸೇವೆಯ ಧ್ಯಾಸ

೪ ಅ. ಶಿಬಿರಗಳ ಸಿದ್ಧತೆಯ ಸಮಯದಲ್ಲಿ ಸಹಸಾಧಕರಿಗೆ ಸೇವೆಯ ಮೂಲಕ್ಕೆ ಹೋಗಿ ಎಲ್ಲವನ್ನೂ ಪರಿಪೂರ್ಣ ಮಾಡಲು ಹೇಳುತ್ತಾರೆ ಮತ್ತು ಪ್ರತ್ಯಕ್ಷ ಅವರು ಸಹ ಅದನ್ನು ಪೂರ್ಣ ಮಾಡಲು ಬರುತ್ತಾರೆ. – ಸೌ. ವಿನಯಾ ಗೌಡ, ಉಜಿರೆ

೪ ಆ. ಪುಷ್ಪಕ್ಕನವರಲ್ಲಿ ಉತ್ತಮ ನೇತೃತ್ವ ಗುಣ ಇದೆ. ಸಾಧಕರ ಕೌಶಲ್ಯ ಮತ್ತು ಕ್ಷಮತೆ ಗುರುತಿಸಿ ಅವರಿಂದ ಆಯಾ ಸೇವೆಗಳನ್ನು ಮಾಡಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಸಮಯಮಿತಿಯೊಳಗೆ ಸೇವೆಗಳನ್ನು ಪೂರ್ಣ ಮಾಡಲು ಪಟ್ಟು ಹಿಡಿದು ಪ್ರಯತ್ನ ಮಾಡುತ್ತಾರೆ.

– ಸೌ. ಲಕ್ಷ್ಮೀ ಪೈ, ಮಂಗಳೂರು.

೫. ಭಾವ

ಸಾಧಕರಿಂದ ಪ್ರಾರ್ಥನೆ, ಭಾವಜಾಗೃತಿ ಪ್ರಯತ್ನ ಮಾಡಿಸುವಾಗ ತುಂಬಾ ಭಾವ ಅನಿಸುತ್ತದೆ, ಬೈಟಕಗಳನ್ನು ಭಾವಪೂರ್ಣ ತೆಗೆದುಕೊಂಡ ನಂತರ ಸಾಧಕರಿಗೆ ಆ ಸೇವೆಯನ್ನು ಮಾಡಲು ಮನಸ್ಸಿನಲ್ಲಿ ತಳಮಳ ನಿರ್ಮಾಣ ಆಗುತ್ತಿತ್ತು.

– ಶ್ರೀಮತಿ ವೀಣಾ, ಮಂಗಳೂರು

೬. ವಿವಾಹ ನಿಶ್ಚಿತವಾದ ನಂತರವೂ ಸಾಧನೆಗಾಗಿ ಸಮಯವನ್ನು ನೀಡಿ ತನ್ನ ಜವಾಬ್ದಾರಿಯನ್ನು ಪೂರ್ಣವಾಗಿ ನಿಭಾಯಿಸಿ ನಂತರ ಮನೆಗೆ ಹೋಗಿದ್ದರು. ಇದರಿಂದ ಅವರ ಸಾಧನೆಯ ತಳಮಳ ಹಾಗೂ ಪರಿಪೂರ್ಣ ಸೇವೆಯ ಗುಣ ಕಲಿಯಲು ಸಿಕ್ಕಿತು.

– ಸೌ. ಶೋಭಾ, ಉಡುಪಿ.