ಕಾಶ್ಮೀರದ ಹಿಂದೂಗಳನ್ನು ಸುರಕ್ಷಿತ ಸ್ಥಾನಕ್ಕೆ ಸ್ಥಳಾಂತರಿಸಿ !

  • ಕಾಶ್ಮೀರಿ ಹಿಂದೂ ಸಂಘಟನೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಲಯದಲ್ಲಿ ಅರ್ಜಿ

  • ಕೇಂದ್ರ ಸರಕಾರ ಮತ್ತು ರಾಜ್ಯ ಆಡಳಿತ ಕಾಶ್ಮೀರಿ ಹಿಂದೂಗಳ ರಕ್ಷಣೆ ಮಾಡುವದರಲ್ಲಿ ವಿಫಲವಾಗಿದೆ ಎಂಬ ಆರೋಪ

ಜಮ್ಮು(ಜಮ್ಮು ಮತ್ತು ಕಾಶ್ಮೀರ) – ಕಾಶ್ಮೀರಿ ಹಿಂದೂ ಸಂಘಟನೆಯಾದ ‘ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು’ ಜಮ್ಮು – ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ. ಕಾಶ್ಮೀರ ಕಣಿವೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಭಯೋತ್ಪಾದಕರಿಂದ ಬೆದರಿಕೆಗೆ ಒಳಗಾಗಿದ್ದಾರೆ. ಆದ್ದರಿಂದ ಅವರನ್ನು ಸುತಕ್ಷಿತ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಗಿದೆ. ಜುಲೈ ೪ ರಂದು ಈ ಬಗ್ಗೆ ವಿಚಾರಣೆ ನಡೆಯಲಿದೆ. ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು ಕಾಶ್ಮೀರದ ೨೭೨ ಹಳ್ಳಿಗಳಲ್ಲಿ ವಾಸಿಸುವ ೮೦೮ ಕುಟುಂಬಗಳ ಗುಂಪಾಗಿದೆ. ೧೯೯೦ರಲ್ಲಿ ಜಿಹಾದಿ ಭಯೋತ್ಪಾದಕ ಚಟುವಟಿಕೆಗಳ ನಂತರವೂ ಈ ಕುಟುಂಬಗಳು ಕಾಶ್ಮೀರ ಕಣಿವೆಯಿಂದ ಪಲಾಯನ ಮಾಡಲಿಲ್ಲ. ಸಂಜಯ ಟಿಕ್ಕು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರ ಜೀವರಕ್ಷಣೆಯಲ್ಲಿ ಕೇಂದ್ರ ಸರಕಾರ ವಿಫಲ!

ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು ಸಲ್ಲಿಸಿರುವ ಅರ್ಜಿಯಲ್ಲಿ ಭಯೋತ್ಪಾದನೆ ಹೆಚ್ಚುತ್ತಿರುವ ಕಾರಣ ಕಾಶ್ಮೀರದಿಂದ ಸ್ಥಳಾಂತರಗೊಳ್ಳಲು ಸರಕಾರ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದೆ. ಸರಕಾರ ಇದರ ಬಗ್ಗೆ ಅಸಂವೇದನಶೀಲವಾಗಿದೆ. ಭಯೋತ್ಪಾದಕರು ಭಿತ್ತಿಪತ್ರ ಮತ್ತು ಪತ್ರಗಳನ್ನು ಹಂಚುವ ಮೂಲಕ ಕಾಶ್ಮೀರದಲ್ಲಿರುವ ಹಿಂದೂಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ಜೀವ ರಕ್ಷಣೆಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಆಡಳಿತ ವಿಫಲವಾಗಿದೆ.

 

ಸಂಪಾದಕೀಯ ನಿಲುವು

ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ? ಸರಕಾರಕ್ಕೆ ಇದು ಸ್ವತಃ ಎಕೆ ತಿಳಿಯುವದಿಲ್ಲ?