ಮಹರ್ಷಿಗಳು ಸಪ್ತರ್ಷಿ ಜೀವನಾಡಿಪಟ್ಟಿಯಿಂದ ಆಪತ್ಕಾಲ ಮತ್ತು ಮೂರನೇ ಮಹಾಯುದ್ಧದ ಬಗ್ಗೆ ಸಾಧಕರನ್ನು ಜಾಗೃತಗೊಳಿಸುವುದು

ನಾಡಿವಾಚಕ ಪೂ. ಡಾ. ಓಂ ಉಲಗನಾಥ

ಕಳೆದ ಕೆಲವು ವರ್ಷಗಳಿಂದ ಭಾರತ ಭೂಮಿಯಲ್ಲಿನ ಸಂತ ಮಹಾತ್ಮರು, ಸಿದ್ಧಪುರುಷರು, ಜ್ಯೋತಿಷ್ಯಾಸ್ತ್ರಬಲ್ಲವರು, ನಾಡಿಪಟ್ಟಿ ವಾಚಕರು ಹಾಗೆಯೇ ಕೆಲವು ದೃಷ್ಟಾರರು ‘ವರ್ಷ ೨೦೨೦ ರಿಂದ ವರ್ಷ ೨೦೨೫ ರ ವರೆಗಿನ ಕಾಲವು ಎಷ್ಟು ಭಯಾನಕವಾಗಿರುವುದು’ ಎಂಬುದರ ಸಂಕೇತವನ್ನು ನೀಡಿದ್ದಾರೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರೂ ಸಹ ಮೇಲಿಂದ ಮೇಲೆ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಮಾಡಿದ ಮಾರ್ಗದರ್ಶನದಿಂದ ಈ ವಿಷಯದ ಬಗ್ಗೆ ಸಾಧಕರನ್ನು ಎಚ್ಚರಿಸಿದ್ದಾರೆ. ಧರ್ಮ ಮತ್ತು ಈಶ್ವರನ ಮೇಲೆ ಶ್ರದ್ಧೆಯಿರುವ ಸಾಧಕರು ಸಂತರ ಸಂತವಾಣಿಗನುಸಾರ ಕೃತಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ದಿವ್ಯಪುರುಷರು ಮುಂಬರುವ ಭೀಕರ ಆಪತ್ಕಾಲದ ಬಗ್ಗೆ ಸಾಧಕರಿಗೆ ಹೇಳಿದ್ದರಿಂದ ಅವರ ಈಶ್ವರನ ಮೇಲಿನ ಭಕ್ತಿ ಹೆಚ್ಚಾಗಲು ಸಹಾಯವಾಗುತ್ತಿದೆ ಮತ್ತು ಸಾಧಕರ ರಕ್ಷಣೆಯೂ ಆಗುತ್ತಿದೆ. ವರ್ಷ ೨೦೧೫ ರಿಂದ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಕೃಪೆಯಿಂದ ಸಾಧಕರಿಗೆ ಸಪ್ತರ್ಷಿ ಜೀವನಾಡಿಪಟ್ಟಿಯ ಮೂಲಕ ಋಷಿಲೋಕದಲ್ಲಿನ ಜ್ಞಾನವೂ ಸಿಗುತ್ತಿದೆ. ಸಪ್ತರ್ಷಿಗಳು ಸಪ್ತರ್ಷಿ ಜೀವನಾಡಿಪಟ್ಟಿಯಿಂದ ಮುಂಬರುವ ಆಪತ್ಕಾಲ ಮತ್ತು ಮೂರನೆಯ ಮಹಾಯುದ್ಧದ ಬಗ್ಗೆ ಸಾಧಕರಿಗಾಗಿ ಹೇಳಿದ ಕೆಲವು ಅಂಶಗಳನ್ನು ಮುಂದೆ ಕೊಟ್ಟಿದ್ದೇವೆ. – ಶ್ರೀ. ವಿನಾಯಕ ಶಾನಭಾಗ ಚೆನ್ನೈ (೭-೫-೨೦೨೨)

೧. ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೧೯೦ (೨೧.೧೦.೨೦೨೧) ರಲ್ಲಿ ಸಪ್ತರ್ಷಿಗಳು ನೈಸರ್ಗಿಕ ಆಪತ್ತಿಗಳ ಬಗ್ಗೆ ಹೇಳಿದ ಕಾರಣಗಳು

೧ ಅ. ಚೈತನ್ಯವಿರುವ ಸ್ಥಳಗಳೇ ಕಾಲದ ಪ್ರವಾಹದಲ್ಲಿ ಉಳಿಯುವವು ! : ‘ತಾಂತ್ರಿಕರು ತಮ್ಮ ಇಷ್ಟದೇವತೆಯ ದೇವಾಲಯಗಳನ್ನು ಕಟ್ಟುತ್ತಾರೆ. ಕೆಲವು ಕಾಲಗಳಲ್ಲಿ ಇಂತಹ ದೇವಾಲಯಗಳು ಪ್ರಸಿದ್ಧವಾಗುತ್ತವೆ; ಆದರೆ ಕಾಲದ ಪ್ರವಾಹದಲ್ಲಿ ಇಂತಹ ದೇವಾಲಯಗಳು ಉಳಿಯುವುದಿಲ್ಲ. ಮುಂದೆ ಯಾವ ದೇವಾಲಯಗಳಲ್ಲಿ ಚೈತನ್ಯವಿದೆಯೋ, ಆ ಸ್ಥಳಗಳೇ ಉಳಿಯುವವು.

೧ ಆ. ದೇವರ ಮೇಲೆ ಶ್ರದ್ಧೆ ಇಲ್ಲದವರಿಗೆ ಆಸ್ಪತ್ರೆಗಳ ಮತ್ತು ಯಮಲೋಕದ ಬಾಗಿಲುಗಳನ್ನು ತೆರೆದಿಡಲಾಗುವುದು ! : ಯಾವ ಮನುಷ್ಯನು ಭಗವಂತನ ದೇವಾಲಯದ ಪ್ರವೇಶದ್ವಾರದ ವರೆಗೆ ಹೋಗಿ ದೇವರ ದರ್ಶನವನ್ನು ಪಡೆದುಕೊಳ್ಳುವುದಿಲ್ಲವೋ, ಅಂದರೆ ಯಾರಿಗೆ ದೇವರಲ್ಲಿ ಶ್ರದ್ಧೆಯಿಲ್ಲವೋ, ಅಂತಹವರಿಗಾಗಿ ಆಸ್ಪತ್ರೆಗಳ ಮತ್ತು ಯಮಲೋಕದ ಪ್ರವೇಶದ್ವಾರಗಳನ್ನು ತೆರೆದಿಡಲಾಗುವುದು.

೧ ಇ. ಕೊರೊನಾದ ನಂತರ ಈ ಜಗತ್ತಿನಲ್ಲಿ ಇನ್ನೊಂದು ದೊಡ್ಡ ರೋಗ ಬರಲಿದೆ. ಈ ರೋಗವೂ ವಿದೇಶದಲ್ಲಿಯೇ ಪ್ರಾರಂಭವಾಗಲಿದೆ.

೧ ಈ. ವಾಮಾಚಾರದಿಂದ ಅಶುದ್ಧವಾದ ಭೂಮಿಯನ್ನು ನಿಸರ್ಗವೇ ಶುದ್ಧ ಮಾಡುವುದು ! : ಕೇರಳ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ನಿಸರ್ಗದ ಪ್ರಕೋಪವು ತುಂಬಾ ಹೆಚ್ಚಾಗಿದೆ. ‘ಅಕಾಲಿಕ ಮಳೆ ಬರುವುದು,  ಬೆಟ್ಟ ಕುಸಿಯುವುದು, ಪ್ರವಾಹ ಬರುವುದು, ಅನೇಕ ಪ್ರಯತ್ನಗಳನ್ನು ಮಾಡಿಯೂ ಕೊರೊನಾದಂತಹ ರೋಗಗಳು ಕಡಿಮೆಯಾಗದಿರುವುದು’, ಹೀಗೆ ಅನೇಕ ತೊಂದರೆಗಳನ್ನು ಅಲ್ಲಿನ ಜನರು ಭೋಗಿಸುತ್ತಿದ್ದಾರೆ. ಇದರ ಕಾರಣವೆಂದರೆ ಅಲ್ಲಿ ವಾಮಾಚಾರವು (ವೇದಗಳಿಗೆ ಮಾನ್ಯವಿಲ್ಲದ ಆಚಾರ) ದೊಡ್ಡ ಪ್ರಮಾಣದಲ್ಲಿ ನಡೆದಿದೆ. ವಾಮಾಚಾರ ಮತ್ತು ಗೋವಿನ ರಕ್ತವು ಬಹಳಷ್ಟು ಪ್ರಮಾಣದಲ್ಲಿ ಭೂಮಿಯ ಮೇಲೆ ಬಿದ್ದುದರಿಂದ ಅಲ್ಲಿಯ ಭೂಮಿಯು ಅಶುದ್ಧವಾಗಿದೆ. (ಕೇರಳದಲ್ಲಿ ಎಲ್ಲಕ್ಕಿಂತ ಹೆಚ್ಚು ಗೊಮಾಂಸ ತಿನ್ನುತ್ತಾರೆ. – ಸಂಕಲನಕಾರರು) ಈಗ ನಿಸರ್ಗವೇ ಆ ಭೂಮಿಯ ಶುದ್ಧಿಯನ್ನು ಮಾಡುತ್ತಿದೆ.

೧ ಉ. ದೊಡ್ಡ ಪ್ರಮಾಣದಲ್ಲಾಗುವ ಭೂಕಂಪ ಮತ್ತು ಚಂಡಮಾರುತಗಳು ! :  ಮುಂಬರುವ ಕಾಲದಲ್ಲಿ ಎತ್ತರದ ಕಟ್ಟಡಗಳು ನೃತ್ಯವನ್ನು ಮಾಡುವವು (ಭೂಕಂಪದಿಂದ ಅಲುಗಾಡುವವು). ಇಲ್ಲಿಯ ವರೆಗೆ ಜನರು ಕೆಳಗಿರುವ ಮನೆಗಳಲ್ಲಿ ಮತ್ತು ಮಾರ್ಗದಲ್ಲಿ ಪ್ರವಾಹ ಮತ್ತು ಸುಂಟರಗಾಳಿಯಿಂದ ನೀರು ಬಂದಿರುವುದನ್ನು ನೋಡಿದ್ದಾರೆ. ಈಗ ಜನರ ಎತ್ತರದ ಕಟ್ಟಡಗಳಲ್ಲಿ ಪ್ರವಾಹದ ಮತ್ತು ಬಿರುಗಾಳಿಯ ನೀರು ಬರಲಿದೆ.

೧ ಉ. ಸಮುದ್ರದ ಕೆಳಗಿರುವ ಜಗತ್ತಿನ ವಿನಾಶವನ್ನು ಮಾಡುವ ಜ್ವಾಲಾಮುಖಿಗಳು ಜಾಗೃತವಾಗುವವು : ಸಮುದ್ರದ ಕೆಳಗೆ ಅನೇಕ ಅಗ್ನಿ ಪರ್ವತಗಳಿವೆ (ಜ್ವಾಲಾಮುಖಿಗಳಿವೆ). ಮುಂಬರುವ ಕಾಲದಲ್ಲಿ ಅವು ಸ್ಫೋಟವಾಗುವವು. ಸಮುದ್ರದ ಕೆಳಗೆ ಅಗ್ನಿ, ಎಣ್ಣೆ, ರತ್ನ ಮತ್ತು ವನಸ್ಪತಿಗಳಿವೆ. ವನಸ್ಪತಿಗಳಿಂದ ನಮಗೆ ಔಷಧಿಗಳು ಸಿಗುವವು; ಆದರೆ ಅದೇ ಸಮುದ್ರದ ಕೆಳಗೆ ಜ್ವಾಲಾಮುಖಿಗಳಿವೆ, ಅವು ಜಗತ್ತಿನ ವಿನಾಶವನ್ನು ಮಾಡುವವು.

೧ ಎ. ವಿನಾಶಕಾರಿ ಜಾಗತಿಕ ಮಹಾಯುದ್ಧ ಆಗುವುದಿದೆ : ಮುಂಬರುವ ಕಾಲದಲ್ಲಿ ಅಗ್ನಿಯ ಮಳೆಯಾಗುವುದು, ಅಂದರೆ ಜಾಗತಿಕ ಮಹಾಯುದ್ಧವಾಗುವುದು. ಮುಂಬರುವ ದಿನಗಳಲ್ಲಿ ಭೂತಲದ ಮೇಲಿನ ಜನರು ಭಗವಂತನಿಗೆ ‘ರಕ್ಷಿಸು, ರಕ್ಷಿಸು’ ಎಂದು ಕರೆಯುವರು. (ತುಂಬಾ ಭಯಾನಕ ಸ್ಥಿತಿ ಇರುವುದು, ಎಂದು ಮಹರ್ಷಿಗಳು ಹೇಳುತ್ತಿದ್ದಾರೆ, – ಸಂಕಲನಕಾರರು)

೧ ಏ. ಮನುಷ್ಯನು ಅಧರ್ಮದಿಂದ ನಡೆದುಕೊಳ್ಳತೊಡಗಿದರೆ ದೇವರು ಅವನ ನಾಶ ಮಾಡುತ್ತಾರೆ ! : ಭೂಮಿ ಎಂದರೆ ‘ಶಕ್ತಿ’ ಮತ್ತು ಆಕಾಶ ಎಂದರೆ ‘ಶಿವ’ ! ಮನುಷ್ಯನು ಭೂಮಿಯ, ಅಂದರೆ ಶಕ್ತಿಯ ತೊಡೆಯ ಮೇಲೆ ವಾಸ ಮಾಡುತ್ತಿದ್ದಾನೆ ಮತ್ತು ಆಕಾಶದ ಅಂದರೆ ಶಿವನ ಛಾಯೆಯಲ್ಲಿ ಇರುತ್ತಿದ್ದಾನೆ; ಆದರೆ ಯಾವಾಗ ಮನುಷ್ಯನು ಅಧರ್ಮದಿಂದ ನಡೆದುಕೊಳ್ಳಲು ಪ್ರಾರಂಭಿಸುತ್ತಾನೆಯೋ, ಆಗ ಭೂಮಿ ಮತ್ತು ಆಕಾಶಕ್ಕೆ ಮಾನವನನ್ನು ನಾಶ ಮಾಡಲು ಕೆಲವೇ ಕ್ಷಣಗಳು ಸಾಕಾಗುವವು.

೧ ಒ. ಮುಂಬರುವ ಕಾಲದಲ್ಲಿ ಜನರು ಇರುವೆ-ಹುಳಗಳಂತೆ ಸಾಯುವರು.

೨. ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೧೯೪ (೧೫.೧೨.೨೦೨೧) ರಲ್ಲಿ ಸಪ್ತರ್ಷಿಗಳು ಭೂಕಂಪ, ಜ್ವಾಲಾಮುಖಿ, ಪ್ರವಾಹ ಮತ್ತು ರೋಗಗಳ ಬಗ್ಗೆ ಹೇಳಿರುವ ಅಂಶಗಳು

ಅ. ಭೂಮಿಯಿಂದ ಮಹಾಭಯಂಕರ ಶಬ್ದಗಳು ಕೇಳಿ ಬರಲಿವೆ. (ಮಹಾಭಯಂಕರ ಭೂಕಂಪಗಳಾಗುವವು. – ಸಂಕಲನಕಾರರು)

ಆ. ಪೃಥ್ವಿಯ ಮೇಲೆ ಅಗ್ನಿಯ ನದಿಗಳು ಹರಿಯುವವು. (ದೊಡ್ಡ ಪ್ರಮಾಣದಲ್ಲಿ ಜ್ವಾಲಾಮುಖಿಗಳು ಸಿಡಿಯುವವು ಮತ್ತು ಲಾವಾರಸವು ಅಗ್ನಿಯ ನದಿಗಳ ಹಾಗೆ ಹರಿಯುವುದು. – ಸಂಕಲನಕಾರರು)

ಇ. ಮುಂಬರುವ ಕಾಲದಲ್ಲಿ  ಪ್ರವಾಹವು ಕೇವಲ ಪ್ರವಾಹವಾಗಿರದೆ, ಅದು ಇಡೀ ಸಮುದ್ರವೇ ಭೂಮಿಯ ಮೇಲೆ ಬಂದ ಹಾಗಿರುವುದು.

ಈ. ಯುದ್ಧದ ಸಮಯದಲ್ಲಿ ಮಾಡಲಾಗುವ ಅಸ್ತ್ರಗಳ ಉಪಯೋಗದಿಂದ ಆಕಾಶದಲ್ಲಿ ವಿಚಿತ್ರ ದೃಶ್ಯ ಕಾಣಿಸುವುದು. ಒಂದು ಕಡೆಯಿಂದ ಕ್ಷಿಪಣಿಗಳು ಬರುವುದು ಮತ್ತು ಇನ್ನೊಂದು ಕಡೆಯಿಂದ ವಿಮಾನಗಳು ಈ ಕಡೆಯಿಂದ ಆ ಕಡೆಗೆ ಹೋಗುವ ದೃಶ್ಯಗಳು ಕಾಣಿಸುವವು.

ಉ. ಈಗ ‘ಒಮಿಕ್ರಾನ್’ ಎಂಬ ಹೆಸರಿನ ವಿಷಾಣು ಬಂದಿದೆ; ಆದರೆ ಅದರಲ್ಲಿ ಅಷ್ಟು ಶಕ್ತಿ ಇಲ್ಲ. ಕೆಲವು ದಿನಗಳ ನಂತರ ಇನ್ನೊಂದು ರೋಗ ಬರಲಿದೆ. ಆ ಒಂದೇ ರೋಗದಲ್ಲಿ ೫ ಪ್ರಕಾರದ ಬೇರೆ ಬೇರೆ ರೋಗಗಳು ಒಟ್ಟಿಗೆ ಇರುವವು. ಆ ರೋಗದಿಂದ ಜಗತ್ತಿನಲ್ಲಿ ಹಾಹಾಕಾರ ಕೇಳಿ ಬರುವುದು.

೩. ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೧೯೬ (೩.೨.೨೦೨೨) ರಲ್ಲಿ ಮುಂದೆ ಸಾಧಕರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಪ್ರತಿಯೊಂದು ವಾಕ್ಯದ ಅನುಭವ ಬರಲಿದೆ ಎಂದು ಸಪ್ತರ್ಷಿಗಳು ಹೇಳುವುದು

ಅ. ಜಗತ್ತಿನಲ್ಲಿ ಮಹಾಯುದ್ಧವಾಗಲಿದೆ. ಈ ಯುದ್ಧವು ಯಾವ ಕ್ಷಣದಲ್ಲೂ ಆರಂಭವಾಗಬಹುದು. ಜಾಗತಿಕ ಮಟ್ಟದಲ್ಲಿ ಆ ರೀತಿಯ ಸ್ಥಿತಿ ನಿರ್ಮಾಣವಾಗುತ್ತಿದೆ.

ಆ. ಆಕಾಶದಿಂದ ಆಕಸ್ಮಿಕವಾಗಿ ದೊಡ್ಡ ಪ್ರಮಾಣದಲ್ಲಿ ಸಿಡಿಲುಗಳು ಬೀಳುವವು, ಅದರಿಂದ ಅನೇಕ ಜನರು ಸಾಯುವರು, ಅನೇಕ ಪ್ರಾಣಿಗಳು ಸಾಯುವವು, ಮತ್ತು ದೊಡ್ಡ ಪ್ರಮಾಣದಲ್ಲಿ ಮನೆಗಳು ಧ್ವಂಸವಾಗುವವು.

ಇ. ಸಮುದ್ರದ ಕೆಳಗಿರುವ ಜ್ವಾಲಾಮುಖಿಗಳ ಸ್ಫೋಟವಾಗುವುದು.

. ಸಮುದ್ರವು ಯಾವಾಗ ಬೇಕಾದರೂ ಅದರ ಮಿತಿಯನ್ನು ಬಿಡಬಹುದು. ಅನೇಕ ಸ್ಥಳಗಳಲ್ಲಿ ಸಮುದ್ರವು ಭೂಮಿಯನ್ನು ನುಂಗುವುದು (ಸಮುದ್ರದ ನೀರು ಭೂಮಿಯ ಮೇಲೆ ಬರುವುದು).

. ಮುಂಬರುವ ೫ ವರ್ಷಗಳ ಕಾಲದಲ್ಲಿ ಈಗ ‘ಹೊಸ ಯುಗ ಆರಂಭವಾಗಲಿದೆಯೇ ?’ ಎಂದು ಅನಿಸುವುದು. ಪೃಥ್ವಿಯ ಮೇಲೆ ಪ್ರಳಯದಂತಹ ಸ್ಥಿತಿ ನಿರ್ಮಾಣವಾಗುವುದು.

. ಭಗವಂತನು ಜನ್ಮ ನೀಡಿದ ಪ್ರತಿಯೊಂದು ಜೀವವು ಜನ್ಮದಿಂದ (ಹುಟ್ಟಿನಿಂದ) ಹಿಂದೂ ಆಗಿರುತ್ತದೆ. ಆ ಜೀವದ ಮೇಲಾಗುವ ವಿರುದ್ಧ ಸಂಸ್ಕಾರಗಳಿಂದ ಆ ಜೀವವು ಮತಾಂತರಗೊಳ್ಳುತ್ತದೆ. ಮುಂಬರುವ ಕಾಲದಲ್ಲಿ ಮತಾಂತರ ಮಾಡುವವರು ಮತ್ತು ಮತಾಂತರಕ್ಕೆ ಪ್ರೋತ್ಸಾಹ ನೀಡುವ ದೇಶಗಳು ನಷ್ಟವಾಗುವವು.

ಎ. ಬಹಳಷ್ಟು ಸಾಧಕರು ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ಹೇಳಿದ ಹಾಗೆ ಆಪತ್ಕಾಲದ ಸಿದ್ಧತೆಯನ್ನು ಮಾಡಿದ್ದಾರೆ. ಕೆಲವು ಸಾಧಕರು ಸ್ಥಳಾಂತರಗೊಂಡಿದ್ದಾರೆ. ಮುಂದೆ ಸಾಧಕರಿಗೆ ಗುರುದೇವರ ಪ್ರತಿಯೊಂದು ವಾಕ್ಯದ ಅನುಭವ ಬರುವುದು.

೪. ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೧೯೭ (೭.೩.೨೦೨೨) ರಲ್ಲಿ ಮುಂದೆ ಆಗುವ ಮಹಾಯುದ್ಧ ಮತ್ತು ಅದರಿಂದ ಉದ್ಭವಿಸುವ ಕೆಟ್ಟ ಪರಿಸ್ಥಿತಿಯ ಬಗ್ಗೆ ಹೇಳಿದ ಅಂಶಗಳು

೪. ಅ. ಯುಕ್ರೇನ ಮತ್ತು ರಶಿಯಾ ಇವುಗಳ ನಡುವಿನ ಯುದ್ಧವು ನ್ಯಾಯಸಮ್ಮತ ಯುದ್ಧವಲ್ಲ : ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ಅನೇಕ ವರ್ಷಗಳಿಂದ ಮಹಾಯುದ್ಧದ ಬಗ್ಗೆ ಹೇಳಿದ್ದಾರೆ. ನಾವು ಸಪ್ತರ್ಷಿಗಳು ನಾಡಿಪಟ್ಟಿಯಲ್ಲಿ ಅನೇಕ ಬಾರಿ ಇದರ ಉಲ್ಲೇಖವನ್ನು ಮಾಡಿದ್ದೇವೆ. ಈಗ ಅಂತಹ ಕಾಲವು ಹತ್ತಿರ ಬಂದಿದೆ. ರಶಿಯಾ ಯುಕ್ರೇನ ಮೇಲೆ ಮಾಡಿದ ಆಕ್ರಮಣದಿಂದ ‘ಯುಕ್ರೇನಿನಲ್ಲಿನ ಅನೇಕ ಜನರಿಗೆ ಮನೆಗಳನ್ನು ಬಿಡಬೇಕಾಯಿತು, ಲಕ್ಷಗಟ್ಟಲೆ ಜನರಿಗೆ ತಿನ್ನಲು ಆಹಾರ ಸಿಗುತ್ತಿಲ್ಲ, ಕುಡಿಯುವ ನೀರು ಸಿಗುತ್ತಿಲ್ಲ’, ಇಂಹ ದೃಶ್ಯವು ನೋಡಲು ಸಿಗುತ್ತಿದೆ. ರಾಜಕಾರಣಿಗಳ ಅಹಂಕಾರದಿಂದ ರಶಿಯಾ ಮತ್ತು ಯುಕ್ರೇನ ಇವರಲ್ಲಿ ಯುದ್ಧ ಆರಂಭವಾಗಿದೆ. ಇದು ಧರ್ಮಯುದ್ಧ ಅಥವಾ ನ್ಯಾಯಸಮ್ಮತ ಯುದ್ಧವಲ್ಲ. ಆನೆಯು ಆನೆಯ ಜೊತೆಗೆ ಯುದ್ಧವನ್ನು ಮಾಡಿದರೆ ಸರಿಯಿದೆ; ಆದರೆ ಆನೆಯು ಇರುವೆಯ ಜೊತೆಗೆ ಯುದ್ಧ ಮಾಡಿದರೆ ಅದು ಯೋಗ್ಯವಾಗಿದೆಯೇ ?

೪ ಆ. ಯುದ್ಧವು ಹಂತಹಂತವಾಗಿ ಬೆಳೆಯುತ್ತಾ ಹೋಗಲಿದ್ದು ದೇಶಭಕ್ತರಿಗೆ ಅಧರ್ಮದ ಬಗ್ಗೆ ಸಿಟ್ಟು ಬರುವುದು, ಆಗ ಅವರು ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಕೈಜೋಡಿಸುವರು : ಸದ್ಯ ರಶಿಯಾ ಮತ್ತು ಯುಕ್ರೇನ ಇವುಗಳ ನಡುವೆ ಯುದ್ಧ ಪ್ರಾರಂಭವಾಗಿದೆ. ಈಗ ಶ್ರೀಕೃಷ್ಣನು ರಥಾರೂಢನಾಗಿ ಹೊರಟಿದ್ದಾನೆ. ಬೇಗನೆ ಜಗತ್ತಿನಲ್ಲಿ ಮಹಾಯುದ್ಧ ಆರಂಭವಾಗಲಿದೆ. ಜಗತ್ತಿನಲ್ಲಿ ಕೆಲವು ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿದೆ ಮತ್ತು ಕೆಲವು ರಾಷ್ಟ್ರಗಳಲ್ಲಿ ಯುದ್ಧಜನ್ಯ ಸ್ಥಿತಿ ಇದೆ. ಮುಂದೆ ಯುದ್ಧವು ಹಂತಹಂತವಾಗಿ ಹೆಚ್ಚಾಗುತ್ತಾ ಹೋಗುವುದು. ದೇವರ ಭಕ್ತರಿಗೆ ಅಧರ್ಮದ ಬಗ್ಗೆ ಸಿಟ್ಟು ಬಂದ ನಂತರವೇ ಅವರಿಂದ ಧರ್ಮಕ್ಕಾಗಿ ನಿಜವಾದ ಕಾರ್ಯವು, ಅಂದರೆ ಧರ್ಮಸಂಸ್ಥಾಪನೆಯ ಕಾರ್ಯವು ನಡೆಯುವುದು.

೪ ಇ. ವಿದೇಶದಲ್ಲಿನ ಭಾರತೀಯರು ವಿದೇಶವನ್ನು ಬಿಟ್ಟು ಭಾರತಕ್ಕೆ ಬರುವರು, ಆಗ ವಿದೇಶಗಳಲ್ಲಿ ಹಾಹಾಕಾರವಾಗುವುದು  : ಭಾರತೀಯರು ಅನೇಕ ದೇಶಗಳಲ್ಲಿ ನೆಲೆಸಿದ್ದಾರೆ. ಯುದ್ಧ ಆರಂಭವಾದ ಮೇಲೆ ಅವರಿಗೆ ಭಾರತದ ಮಹತ್ವವು ಗಮನಕ್ಕೆ ಬರುವುದು. ‘ಭಾರತದಲ್ಲಿ ನಮ್ಮ ಊರಲ್ಲಿ ನಮ್ಮದೊಂದು ಮನೆ ಇರಬೇಕಾಗಿತ್ತು’, ಎಂದು ಅವರಿಗೆ ಅನಿಸುವುದು. ಇಂತಹ ಭಾರತೀಯರು ವಿದೇಶವನ್ನು ಬಿಟ್ಟು ಭಾರತಕ್ಕೆ ಬಂದ ಮೇಲೆ ವಿದೇಶಗಳಲ್ಲೂ ಹಾಹಾಕಾರವಾಗುವುದು; ಏಕೆಂದರೆ ಆ ಎಲ್ಲ ದೇಶಗಳಲ್ಲಿ ಭಾರತೀಯರು ಮಹತ್ವದ ಕೆಲಸಗಳನ್ನು ಮಾಡುತ್ತಿದ್ದಾರೆ.

೪ ಈ. ಆರ್ಥಿಕ ಸ್ಥಿತಿಯು ಬಹಳ ಕೆಡುವುದು : ಮುಂದೆ ಸರಕಾರಿ ಕೆಲಸಗಾರರಿಗೆ ಸಂಬಳವನ್ನು ಕೊಡಲು ಸರಕಾರದ ಬಳಿ ಹಣ ಇರಲಾರದು. ಇಷ್ಟೇ ಅಲ್ಲ, ನಿವೃತ್ತಿಯ ನಂತರ ಕೊಡುವ ನಿವೃತ್ತಿ ವೇತನವನ್ನೂ ಸರಕಾರ ಕೊಡುವುದಿಲ್ಲ. ‘ಪ್ರಾವಿಡಂಟ್ ಫಂಡಿನ’ ಹಣವೂ ಸಿಗುವುದಿಲ್ಲ. ಸರಕಾರದ ಬಳಿಯೇ ಹಣ ಇಲ್ಲವಾದಾಗ, ಅದು ಜನರಿಗೆ ಎಲ್ಲಿಂದ ಹಣ ಕೊಡುವುದು ?’

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ)

ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೧೯೫ (೨೦.೧೨.೨೦೨೧) ರಲ್ಲಿ ಸಪ್ತರ್ಷಿಗಳು ಮುಂಬರುವ ಆಪತ್ಕಾಲದ ಬಗ್ಗೆ ಹೇಳಿರುವ ಅಂಶಗಳು

ಅ. ಜಗತ್ತಿನಲ್ಲಿ ಎಷ್ಟೋ ದೇಶಗಳು ತಮ್ಮನ್ನು ಶಕ್ತಿಶಾಲಿ ಎಂದು ತಿಳಿದುಕೊಳ್ಳುತ್ತವೆ; ಆದರೆ ಮುಂಬರುವ ಕಾಲದಲ್ಲಿ ನೈಸರ್ಗಿಕ ಆಪತ್ತುಗಳಿಂದ ಅನೇಕ ದೇಶಗಳು ನಾಶವಾಗುವವು. ಮುಂಬರುವ ಆಪತ್ಕಾಲದಲ್ಲಿ ಕಣ್ಣುಮುಚ್ಚಿ ತೆರೆಯುವುದರೊಳಗೆ ಲಕ್ಷಗಟ್ಟಲೆ ಜನರು ಸಾಯುವರು.

ಆ. ಹಿಂದೂ ರಾಷ್ಟ್ರ ಬರುವ ಮೊದಲು ಶ್ರೀಕೃಷ್ಣನು ಎಲ್ಲ ಕಡೆಗೆ ಯುದ್ಧದ ಪ್ರಸಂಗಗಳನ್ನು ನಿರ್ಮಿಸುವನು ಮತ್ತು ಭಗವಾನ ಶಿವನು ಎಲ್ಲ ಕಡೆಗೆ ರೋಗಗಳನ್ನು ತರುವವನಿದ್ದಾನೆ. ಯುದ್ಧ ಮತ್ತು ರೋಗ ಇವುಗಳಿಂದ ದುರ್ಜನರ ನಾಶವಾದ ಮೇಲೆ ಹಿಂದೂ ರಾಷ್ಟ್ರ ಬರುವುದು.

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ)

ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೧೯೮ (೧೫.೪.೨೦೨೨) ರಲ್ಲಿ ಸಪ್ತರ್ಷಿಗಳು ಶ್ರೀಲಂಕಾದಲ್ಲಿ ಎದುರಾಗಿರುವ ಆಪತ್ಕಾಲದ ಬಗ್ಗೆ ಹೇಳಿದ ಅಂಶಗಳು

ಅ. ‘ಈಗ ರಾವಣನ ನಗರ ಶ್ರೀಲಂಕಾದ ಸ್ಥಿತಿ ಏನಾಗಿದೆ ?’, ಎಂಬುದು ನಿಮಗೆ ಗೊತ್ತೇ ಇದೆ. ಅವರ ವರ್ತಮಾನ ಮತ್ತು ಭವಿಷ್ಯ ಎರಡೂ ಕತ್ತಲಿನಲ್ಲಿದೆ.

ಆ. ಅಲ್ಲಿ ಅಡಿಗೆಯನ್ನು ಮಾಡಲು ಅಡಿಗೆಯ ಸಾಮಾನುಗಳು ಸಿಗುವುದಿಲ್ಲ. ವಾಹನಗಳಿವೆ, ಆದರೆ ವಾಹನಗಳಿಗೆ ಬೇಕಾಗುವ ಇಂಧನವಿಲ್ಲ. ಸುಖಸೌಲಭ್ಯಗಳನ್ನು ಒದಗಿಸುವ ಯಂತ್ರಗಳು ಮತ್ತು ಮನೆಗಳಿವೆ; ಆದರೆ ಗಂಟೆಗಟ್ಟಲೆ ವಿದ್ಯುತ್ ಇರುವುದಿಲ್ಲ. ಈ ರೀತಿಯ ದೃಶವು ಮುಂದೆ ಎಲ್ಲ ಕಡೆಗೆ ಕಾಣಿಸಲಿದೆ.

– ಸಪ್ತರ್ಷಿ (ಪೂ. ಡಾ. ಓಂ. ಉಲಗನಾಥನ್ ಇವರ ಮಾಧ್ಯಮದಿಂದ)