ಸಾಧಕರ ಶ್ರದ್ಧೆಯ ಪರೀಕ್ಷೆಯಾಗಿರುವ ಮತ್ತು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅವತಾರಿ ಕಾರ್ಯದ ಸರ್ವೋತ್ಕೃಷ್ಟ ಕೊನೆಯ ಹಂತ !

ಶ್ರೀ. ವಿನಾಯಕ ಶಾನಭಾಗ

ಕಳೆದ ಕೆಲವು ತಿಂಗಳುಗಳಲ್ಲಿ ಸನಾತನದ ಎಲ್ಲ ಕಡೆಗಿನ ಸಾಧಕರಿಗೆ ಸಾಧನೆಯಲ್ಲಿ ಅನೇಕ ಅಡಚಣೆಗಳು ಬರುತ್ತಿವೆ. ಉದಾ. ಅನೇಕ ಸಾಧಕರಿಗೆ ಕೌಟುಂಬಿಕ ಅಡಚಣೆಗಳು ಬರುವುದು, ಸಾಧಕರ ಮಾಯೆಯ ಕಡೆಗಿನ ಆಸಕ್ತಿ ಹೆಚ್ಚಾಗುವುದು, ಸಾಧಕರ ವಿವಾಹದ ನಂತರ ಕೌಟುಂಬಿಕ ವಿಷಯಗಳ ಕಡೆಗೆ ಆಸಕ್ತಿ ಹೆಚ್ಚಾಗಿ ಸಾಧನೆಯಲ್ಲಿ ಉತ್ಸಾಹ ಕಡಿಮೆಯಾಗುವುದು, ಶಾರೀರಿಕ ಅನಾರೋಗ್ಯ ಹೆಚ್ಚಾಗುವುದು, ಸರಳವಾಗಿ ನಡೆದ ಜೀವನದಲ್ಲಿ ಅನಪೇಕ್ಷಿತ ಪ್ರಸಂಗಗಳು ಸಂಭವಿಸುವುದು, ಪರಿವಾರದಲ್ಲಿ ಜಗಳಗಳಾಗುವುದು, ನಕಾರಾತ್ಮಕತೆ ಮತ್ತು ವಾಸನೆಗಳ ವಿಚಾರಗಳು ಹೆಚ್ಚಾಗುವುದು. ಇವೆಲ್ಲವನ್ನು ನೋಡಿದಾಗ ಶ್ರೀ ಗುರುಗಳ ಕೃಪೆಯಿಂದ ಹೊಳೆದ ಕೆಲವು ವಿಚಾರಗಳನ್ನು ಇಲ್ಲಿ ಎಲ್ಲ ಸಾಧಕರೆದುರು ಮಂಡಿಸುತ್ತಿದ್ದೇನೆ.

೧. ೨೦೨೨ ನೇ ಇಸವಿ ಇದು ಎಲ್ಲ ಸಾಧಕರ ಶ್ರದ್ಧೆಯ ಸತ್ವಪರೀಕ್ಷೆಯ ಕಾಲವಾಗಿದ್ದು ಸಾಧಕರಿಗೆ ಶ್ರೀ ಗುರುಗಳು (ಪರಾತ್ಪರ ಗುರು ಡಾ. ಆಠವಲೆ) ತೆಗೆದುಕೊಳ್ಳುತ್ತಿರುವ ಪರೀಕ್ಷೆಯನ್ನು ನೀಡಬೇಕಾಗುವುದು

೨೦೨೨ ನೇ ಇಸವಿ ಆರಂಭವಾಗಿ ೫ ತಿಂಗಳುಗಳು ಕಳೆದಿವೆ. ಕಾಲದ ವೇಗವನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ೨೦೨೨ ನೇ ಇಸವಿಯು ಎಲ್ಲ ಸಾಧಕರ ಶ್ರದ್ಧೆಯ ಸತ್ವ್ವಪರೀಕ್ಷೆಯ ವರ್ಷವಾಗಿದೆ. ‘ಮಾಯೆ’ ಮತ್ತು ‘ಕೆಟ್ಟ ಶಕ್ತಿಗಳು’ ಸಾಧಕರನ್ನು ಸಾಧನೆಯಿಂದ ದೂರ ಕರೆದೊಯ್ಯುತ್ತಿವೆಯೇ ?’, ಎಂಬ ಪ್ರಶ್ನೆಯು ಉದ್ಭವಿಸುವಂತಹ ಪ್ರಸಂಗಗಳು ಸಂಭವಿಸುವವು. ಗುರುಗಳು ತಮ್ಮ ಶಿಷ್ಯನಿಗೆ ‘ಮಾಯೆ ಮತ್ತು ಕೆಟ್ಟ ಶಕ್ತಿಗಳಿಂದ ಹೇಗೆ ಜಾಗರೂಕರಾಗಿರಬೇಕು ? ಮತ್ತು ಅವುಗಳೊಂದಿಗೆ ಹೇಗೆ ಹೋರಾಡಬೇಕು ?’, ಎಂಬುದನ್ನು ಜೀವನದಾದ್ಯಂತ ಕಲಿಸುತ್ತಾರೆ; ಆದರೆ ಶಿಷ್ಯನಿಗೆ ಒಮ್ಮೆಯಾದರೂ ಅದರ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ಇಂದಿನ ಕಾಲವು ಈ ಪರೀಕ್ಷೆಯದ್ದಾಗಿದೆ.

೨. ‘ಅವತಾರಿ ಗುರುಗಳು ತೆಗೆದುಕೊಂಡ ಪರೀಕ್ಷೆಯಲ್ಲಿ ಉತ್ತಮ ಶಿಷ್ಯನು ಹೇಗೆ ವಿಜಯಿಯಾಗುತ್ತಾನೆ ?’, ಎಂಬ ಬಗೆಗಿನ ಎರಡು ಪ್ರಸಂಗಗಳನ್ನು ಮುಂದೆ ನೀಡಲಾಗಿದೆ.

೨ ಅ. ಪ್ರಸಂಗ ೧ : ಸದ್ಗುರು ಡಾ. ಮುಕುಲ ಮಾಧವ ಗಾಡಗೀಳ ಇವರ ಕಿವಿಯ ಶಸ್ತ್ರಚಿಕಿತ್ಸೆ ನಿಗದಿಯಾದ ನಂತರ ಶಸ್ತ್ರಚಿಕಿತ್ಸೆ ನಡೆಯುವ ಎರಡು ದಿನ ಮೊದಲೇ ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದೈವೀ ಪ್ರವಾಸಕ್ಕೆ ಹೋಗಲು ಹೇಳುವುದು : ೨೩.೧.೨೦೨೨ ಈ ದಿನದಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಸದ್ಗುರು ಡಾ. ಮುಕುಲ ಮಾಧವ ಗಾಡಗೀಳ ರಾಮನಾಥಿ ಆಶ್ರಮದಿಂದ ಸಾಂಗಲಿಗೆ ಹೋಗಿದ್ದರು. ಸದ್ಗುರು ಡಾ. ಮುಕುಲ ಮಾಧವ ಗಾಡಗೀಳ ಇವರಿಗೆ ಕಳೆದ ಅನೇಕ ವರ್ಷಗಳಿಂದ ಒಂದು ಕಿವಿ ಕೇಳಿಸುವುದಿಲ್ಲ. ಇನ್ನೊಂದು ಕಿವಿಯಿಂದ ಸ್ವಲ್ಪ ಕೇಳಿಸುತ್ತದೆ. ಅವರ ಕಿವಿಗಳ ಪರೀಕ್ಷೆ ಮಾಡಿದಾಗ ಸಾಂಗಲಿಯ ಓರ್ವ ಖ್ಯಾತ ಆಧುನಿಕ ಕಿವಿತಜ್ಞರು, “ಶಸ್ತ್ರಚಿಕಿತ್ಸೆಯನ್ನು ಮಾಡಿದರೆ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಕೇಳಿಸುವುದು”, ಎಂದು ಹೇಳಿದರು. ಅದರಂತೆ ಅವರ ಕಿವಿಯ ಶಸ್ತ್ರಚಿಕಿತ್ಸೆಯನ್ನು ಮಾಡಬೇಕೆಂದು ನಿರ್ಧರಿಸಲಾಯಿತು.

೨ ಅ ೧. ಪರಾತ್ಪರ ಗುರು ಡಾ. ಆಠವಲೆಯವರ ಮೇಲಿರುವ ದೃಢ ಶ್ರದ್ಧೆಯಿಂದ ಶಸ್ತ್ರಚಿಕಿತ್ಸೆಯ ಮೊದಲೇ ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶಾಂತ ಮನಸ್ಸಿನಿಂದ ದೈವೀ ಪ್ರವಾಸಕ್ಕೆ ಹೋಗುವುದು : ಶಸ್ತ್ರಚಿಕಿತ್ಸೆ ನಿಗದಿಯಾದ ದಿನಾಂಕದ ಎರಡು ದಿನ ಮೊದಲೇ ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದೈವೀ ಪ್ರವಾಸಕ್ಕೆ ಹೋಗಲು ಹೇಳಿದರು. ಸದ್ಗುರು ಡಾ. ಮುಕುಲ ಗಾಡಗೀಳ ಇವರದ್ದು ಮಹತ್ವದ ಶಸ್ತ್ರಚಿಕಿತ್ಸೆಯಾಗಿತ್ತು; ಆದರೆ ಇಬ್ಬರ ಮನಸ್ಸಿನಲ್ಲಿಯೂ ಯಾವುದೇ ವಿಚಾರ ಬರಲಿಲ್ಲ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, “ಇಂದಿನವರೆಗೆ ಗುರುದೇವರೇ (ಪರಾತ್ಪರ ಗುರು ಡಾ. ಆಠವಲೆಯವರೇ) ಸದ್ಗುರು ಡಾ. ಮುಕುಲ ಗಾಡಗೀಳ ಇವರನ್ನು ಸಂರಕ್ಷಿಸಿದ್ದಾರೆ ಮತ್ತು ಮುಂದೆಯೂ ಅವರೇ ಸಂರಕ್ಷಿಸಲಿದ್ದಾರೆ”, ಎಂದು ಹೇಳಿದರು. ಗುರುದೇವರ ಬಗ್ಗೆ ದೃಢ ಶ್ರದ್ಧೆ ಇದ್ದುದರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶಸ್ತ್ರಚಿಕಿತ್ಸೆ ನಡೆಯುವ ಎರಡು ದಿನ ಮೊದಲೇ ಮಹರ್ಷಿಗಳ ಆಜ್ಞೆಯಂತೆ ದೈವೀ ಪ್ರವಾಸಕ್ಕೆ ಹೋದರು. ನಂತರ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಶಸ್ತ್ರಚಿಕಿತ್ಸೆಯಾಯಿತು. ಅದು ಯಶಸ್ವಿಯಾಗಿ ಅವರಿಗೆ ಕೇಳಿಸಲೂ ಆರಂಭವಾಯಿತು.

೨ ಆ. ಪ್ರಸಂಗ ೨ : ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಕುಟುಂಬದವರ ಶಾರೀರಿಕ ತೊಂದರೆಗಳಲ್ಲಿ ಬಹಳ ಹೆಚ್ಚಳವಾಗುವುದು : ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಪತಿ ಪೂ. ನೀಲೇಶ ಸಿಂಗಬಾಳ ಇವರು ಕಳೆದ ೧೭ ವರ್ಷಗಳಿಂದ ಧರ್ಮಪ್ರಸಾರದ ಸೇವೆಗಾಗಿ ಗೋವಾದಿಂದ ದೂರವಿರುವ ವಾರಣಾಸಿಯಲ್ಲಿ ಸೇವಾನಿರತರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣಗಳು ಹೆಚ್ಚಾದುದರಿಂದ ಅವರಿಗೆ ಅನೇಕ ಶಾರೀರಿಕ ತೊಂದರೆಗಳು ಆಗುತ್ತಿವೆ ಮತ್ತು ಅದರ ಕಾರಣವೂ ಗೊತ್ತಾಗುತ್ತಿಲ್ಲ. ಅವರ ಮಗ ಶ್ರೀ. ಸೋಹಮ್ ಸಿಂಗಬಾಳ ಇವರಿಗೂ ಕಳೆದ ಕೆಲವು ವರ್ಷಗಳಿಂದ ಅನೇಕ ಶಾರೀರಿಕ ತೊಂದರೆಗಳಾಗುತ್ತಿವೆ. ಹಾಗೆಯೇ ಅವರ ಅತ್ತೆಯವರು ಪೂ. (ಶ್ರೀಮತಿ) ಸಿಂಗಬಾಳ ಅಜ್ಜಿಯವರಿಗೂ ವಯಸ್ಸಿಗನುಸಾರ ಶಾರೀರಿಕ ರೋಗಗಳಿವೆ.

೨ ಆ ೧. ಪರಾತ್ಪರ ಗುರು ಡಾ. ಆಠವಲೆಯವರ ಮೇಲಿನ ಶ್ರದ್ಧೆಯಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಶಾಂತ ಮತ್ತು ಸ್ಥಿರ ಚಿತ್ತದಿಂದ ರಾಮನಾಥಿ ಆಶ್ರಮದಲ್ಲಿ ಅಖಂಡ ಸೇವಾನಿರತರಾಗಿರುವುದು : ದಿನವಿಡಿ ಅನೇಕ ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಳಿಗೆ ತಮ್ಮ ಸಾಧನೆಯಲ್ಲಿನ ಅಡಚಣೆಗಳಿಗೆ ಪರಿಹಾರ ಪಡೆಯಲು ಬರುತ್ತಾರೆ. ಅವರು ಪ್ರತಿಯೊಬ್ಬ ಸಾಧಕನ ಸಮಸ್ಯೆಗೆ ಮಹತ್ವ ಮತ್ತು ಪ್ರಾಧಾನ್ಯತೆ ನೀಡಿ ಅವರ ಸಮಸ್ಯೆಯನ್ನು ದೂರ ಮಾಡುತ್ತಾರೆ; ಆದರೆ ಅವರ ಮುಖದ ಮೇಲೆ ಎಂದಿಗೂ ತಮ್ಮ ಕುಟುಂಬದವರ ಬಗ್ಗೆ ಚಿಂತೆ ಕಾಣಿಸುವುದಿಲ್ಲ. ‘ಪರಾತ್ಪರ ಗುರು ಡಾ. ಆಠವಲೆಯವರು ಕುಟುಂಬದವರ ಕಾಳಜಿ ವಹಿಸುವವರೇ ಇದ್ದಾರೆ’, ಎಂಬ ದೃಢ ಶ್ರದ್ಧೆಯಿಂದ ಅವರು ಕುಟುಂಬದವರ ಚಿಂತೆ ಮಾಡುವುದಿಲ್ಲ. ಎಷ್ಟಿದೆ ಈ ಶ್ರೀ ಗುರುಗಳ ಬಗೆಗಿನ (ಪರಾತ್ಪರ ಗುರು ಡಾ. ಆಠವಲೆಯವರ ಬಗೆಗಿನ) ಶ್ರದ್ಧೆ !

೩. ಸಾಧಕರು ‘ಶ್ರದ್ಧೆ ಮತ್ತು ತಾಳ್ಮೆ’ ಎಂಬ ದೋಣಿಯಲ್ಲಿ ಕುಳಿತು ಮಾಯೆಯ ಸಮುದ್ರವನ್ನು ದಾಟಿ ಗುರುಚರಣರೂಪಿ ದಡವನ್ನು ತಲುಪಬೇಕಾಗಿರುವುದು

ಈ ಸಂವತ್ಸರವು ‘ಶುಭಕೃತ’ ಹೆಸರಿನ ಸಂವತ್ಸರವಾಗಿದ್ದು, ಇದು ಸಾಧಕರಿಗೆ ಪರೀಕ್ಷೆಯ ಕಾಲವಾಗಿದೆ. ಎಲ್ಲ ಸಾಧಕರಿಗೆ ಇಂತಹ ಕಠಿಣ ಪ್ರಸಂಗಗಳನ್ನು ಎದುರಿಸಲೇಬೇಕಾಗುವುದು. ಈ ಸಮಸ್ಯೆಗಳಿಂದ ಬಿಡಿಸಿಕೊಳ್ಳಲು ಸುಲಭಮಾರ್ಗವಿಲ್ಲ ಮತ್ತು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಳ್ಳದಾರಿಯಿಲ್ಲ !

ಹಾಗಾದರೆ ಸಾಧಕರಿಗೆ ಯಾವ ಮಾರ್ಗವಿದೆ ? ಯಾವ ಈಶ್ವರನು ಸಮಸ್ಯೆಗಳನ್ನು ನಿರ್ಮಿಸುವನೋ, ಅವನೇ ಅದಕ್ಕೆ ಪರಿಹಾರವನ್ನೂ ನೀಡುತ್ತಾನೆ. ಸಾಧಕರ ಎದುರಿಗಿರುವ ಎಲ್ಲ ಸಮಸ್ಯೆಗಳಿಗೆ ಒಂದೇ ಉಪಾಯವಿದೆ ಮತ್ತು ಅದು ಎಂದರೆ ‘ಶ್ರದ್ಧೆ ಮತ್ತು ತಾಳ್ಮೆ’ ! ಸಾಧಕರು ‘ಶ್ರದ್ಧೆ ಮತ್ತು ತಾಳ್ಮೆ’ ರೂಪಿ ದೋಣಿಯಲ್ಲಿ ಕುಳಿತು ಮಾಯಾರೂಪಿ ಸಮುದ್ರವನ್ನು ದಾಟಿ ಗುರುಚರಣರೂಪಿ ದಡವನ್ನು ತಲುಪಬೇಕಾಗಿದೆ.

೪. ಪರಾತ್ಪರ ಗುರು ಡಾ. ಆಠವಲೆಯವರ ಕೊನೆಯ ಹಂತದ ಅವತಾರಿ ಕಾರ್ಯದ ಆರಂಭ  !

೪ ಅ. ಪರಾತ್ಪರ ಗುರು ಡಾ. ಆಠವಲೆಯವರ ಅವತಾರಿ ಕಾರ್ಯವು ಈಗ ಕೊನೆಯ ಹಂತಕ್ಕೆ ಪ್ರವೇಶಿಸುತ್ತಿದ್ದು ಇದು ಅವರ ಅವತಾರಿ ಕಾರ್ಯದ ಸರ್ವೋತ್ಕೃಷ್ಟ(ಅತ್ಯುತ್ತಮ) ಕಾಲವಾಗಿರುವುದು :

ನಾವು ಯಾವುದಾದರೊಂದು ನಾಟಕ ಅಥವಾ ಸಿನೆಮಾ ನೋಡುತ್ತೇವೆ. ಅದರಲ್ಲಿ ಕೊನೆಯ ಕೆಲವು ನಿಮಿಷಗಳು ಅತ್ಯಂತ ಮಹತ್ವದ್ದಾಗಿರುತ್ತವೆ. ಆ ಕೊನೆಯ ಕೆಲವು ನಿಮಿಷಗಳಲ್ಲಿ ಆ ಪೂರ್ಣ ಕಥೆಗೆ ಒಂದು ಅರ್ಥಪೂರ್ಣ ಅಂತ್ಯವಿರುತ್ತದೆ. ಅದರಿಂದ ಪೂರ್ಣ ಕಥೆಯ ಅನೇಕ ಆಯಾಮಗಳು ನಮ್ಮೆದುರು ಬಹಿರಂಗವಾಗುತ್ತವೆ. ಅವತಾರಿ ಕಾರ್ಯದ್ದು ಸಹ ಹಾಗೆ ಇದೆ.

ಶ್ರೀರಾಮಾವತಾರದ ಕಾರ್ಯವು ಶ್ರೀರಾಮನ ಜನ್ಮದಿಂದ ಆರಂಭವಾಯಿತು. ಶ್ರೀರಾಮ-ರಾವಣರ ನಡುವಿನ ಯುದ್ಧದ ನಂತರ ಪ್ರಜೆಗಳು ರಾಮರಾಜ್ಯವನ್ನು ಅನುಭವಿಸಿದರು. ಕೃಷ್ಣಾವತಾರದ ಕಾರ್ಯವು ಶ್ರೀಕೃಷ್ಣನ ಜನ್ಮದಿಂದಲೇ ಆರಂಭವಾಯಿತು. ಮಹಾಭಾರತ ಯುದ್ಧದ ನಂತರ ಅನ್ಯಾಯವು ಕೊನೆಗೊಂಡು ಪುಣ್ಯಕಾಲವು ಆರಂಭವಾಯಿತು. ಅದರಂತೆ ಶ್ರೀಮನ್ನಾರಾಯಣರ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಅವತಾರಿ ಕಾರ್ಯದ ಕೊನೆಯ ಹಂತವು ಆರಂಭವಾಗಿದ್ದು ಮೂರನೇಯ ಜಾಗತಿಕ ಮಹಾಯುದ್ಧದ ನಂತರ ಜಗತ್ತಿನಲ್ಲಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯಾಗಲಿದೆ; ಏಕೆಂದರೆ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯೇ ಅವರ ಸರ್ವೋತ್ಕೃಷ್ಟ ಅವತಾರಿ ಕಾರ್ಯವಾಗಿದೆ.

೪ ಆ. ‘ಪರಾತ್ಪರ ಗುರು ಡಾ. ಆಠವಲೆಯವರ ಈ ಅವತಾರಿ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ಸೇವೆ ಮಾಡುವುದು’, ಇದು ಸಾಧಕರ ಜವಾಬ್ದಾರಿ ಮತ್ತು ಕರ್ತವ್ಯವಾಗಿರುವುದು :

ನಾವೆಲ್ಲ ಸಾಧಕರು ಗುರುದೇವರ ಅವತಾರಿ ಕಾರ್ಯದ ಕೊನೆಯ ಹಂತದಲ್ಲಿ ಪ್ರವೇಶಿಸಿದ್ದೇವೆ. ಈ ಕೊನೆಯ ಕೆಲವು ವರ್ಷಗಳು ಗುರುದೇವರ ಅವತಾರಿ ಕಾರ್ಯದ ಸರ್ವೋತ್ಕೃಷ್ಟ ಕಾಲವಾಗಿರಲಿದೆ. ಇಂತಹ ಸಮಯದಲ್ಲಿ ನಾವೆಲ್ಲ ಸಾಧಕರು ‘ಮಾಯೆ’ಯನ್ನು ತ್ಯಜಿಸಿ ಗುರುದೇವರ ಕಾರ್ಯದಲ್ಲಿ ಕೈಜೋಡಿಸಬೇಕು. ಅದಕ್ಕಾಗಿ ‘ಅಳಿಲಿನಂತೆ ಸಾಧ್ಯವಿದ್ದಷ್ಟು ಸೇವೆ ಮಾಡುವುದು’, ಇದು ಎಲ್ಲ ಸಾಧಕರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ.

ಈ ಅವತಾರವೇ (ಪರಾತ್ಪರ ಗುರು ಡಾ. ಆಠವಲೆಯವರೇ) ನಮ್ಮೆಲ್ಲ ಸಾಧಕರನ್ನು ಇಂತಹ ಒಂದು ಪ್ರದೇಶದಲ್ಲಿ, ಇಂತಹ ಒಂದು ಪರಿವಾರದಲ್ಲಿ ಮತ್ತು ಇಂತಹ ಗುಣಗಳನ್ನು ನೀಡಿ ಜನ್ಮಕ್ಕೆ ಹಾಕಿದ್ದಾರೆ ಇದುವೇ ಶಾಶ್ವತ ಸತ್ಯವಾಗಿದೆ. ಹಾಗಾದರೆ ಅವತಾರಿ ಗುರುಗಳ ಕೃಪೆಯಿಂದ ಜನ್ಮಕ್ಕೆ ಬಂದ ಸಾಧಕರ ಜನ್ಮವು ಮಾಯೆಯಲ್ಲಿನ ವಿಷಯಗಳಿಗಾಗಿ ಆಗಿದೆಯೇ ? ಇಲ್ಲವಲ್ಲ ! ಅದು ಕೇವಲ ಅವತಾರಿ ಗುರುದೇವರ ಸೇವೆಗಾಗಿಯೇ ಆಗಿದೆ. ಇದರ ಅರ್ಥ ‘ಯಾವ ಸಾಧಕರ ಮನಸ್ಸು ಮಾಯೆಯ ಕಡೆಗೆ ಸೆಳೆಯಲ್ಪಡುತ್ತಿದೆಯೋ, ಅವರು ಪುನಃ ತಮ್ಮ ಮನಸ್ಸನ್ನು ಗುರುಚರಣಗಳ ಕಡೆಗೆ ತಿರುಗಿಸಬೇಕಾಗಿದೆ ಮತ್ತು ಯಾವ ಸಾಧಕರಿಗೆ ‘ಮಾಯೆಯಲ್ಲಿ ಇದ್ದುದರಿಂದ ಗುರುಚರಣಗಳಿಂದ ದೂರ ಹೋಗಿದ್ದೇನೆ’, ಎಂಬ ವಿಚಾರ ಬರುತ್ತದೋ, ಅವರು ಎಲ್ಲವನ್ನು ಮರೆತು ಪುನಃ ಹೊಸ ಉತ್ಸಾಹದಿಂದ ಸಾಧನೆಯನ್ನು ಆರಂಭಿಸಬೇಕಾಗಿದೆ. ಈ ಕಾಲದಲ್ಲಿ ನಮಗೆ ಗುರುದೇವರ ಚರಣಗಳನ್ನು ಗಟ್ಟಿಯಾಗಿ ಹಿಡಿದು ಇರಬೇಕಿದೆ. ಅವು ಶ್ರೀಮನ್ನಾರಾಯಣನ ‘ವಿಷ್ಣುಪಾದ’ಗಳಾಗಿದ್ದು ಅವು ಮೋಕ್ಷದಾಯಿಯಾಗಿವೆ. ಗುರುದೇವರು ತಮ್ಮ ಅವತಾರಿ ಕಾರ್ಯದಲ್ಲಿ ನಮ್ಮೆಲ್ಲರಿಗಾಗಿ ನೀಡಿದ ಅಳಿಲಿನ ಪಾಲಿನ ಅಮೂಲ್ಯ ಸೇವೆಯ ಕ್ಷಣಗಳ ಲಾಭವನ್ನು ನಾವು ಪಡೆದುಕೊಳ್ಳೋಣ !

೬. ನಿರ್ವಿಕಾರ ಮತ್ತು ಅವಿನಾಶಿಯಂತಹ ಅವತಾರದ ಚರಣಗಳಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ !

ಅವತಾರವು ಅವಿನಾಶಿಯಾಗಿರುತ್ತದೆ. ಮಾಯೆಯು ಅಶಾಶ್ವತ ಮತ್ತು ನಾಶವಾಗುತ್ತದೆ. ಅವತಾರವು ಶುದ್ಧ, ಸತ್ಯ ಮತ್ತು ಸದಾವಿಜಯಿಯಾಗಿದೆ. ಅವತಾರವು ಸದಾ ಆನಂದಿ, ಸರ್ವಜ್ಞ ಮತ್ತು ಸರ್ವಶಕ್ತಿಶಾಲಿಯಾಗಿದೆ. ಅವತಾರಕ್ಕೆ ‘ನಮ್ಮ’ ಆವಶ್ಯಕತೆ ಇಲ್ಲ; ಆದರೆ ನಮಗೆ ‘ಅವತಾರ’ದ ಆವಶ್ಯಕತೆ ಇದೆ. ಪಾಂಡವರು ಮತ್ತು ವಾನರರು ಕಠಿಣ ಪ್ರಸಂಗದಲ್ಲಿಯೂ ಅವತಾರದ ಜೊತೆಯನ್ನು ಬಿಡಲಿಲ್ಲ. ಅವತಾರವು ಅವರಿಗೆ ಬಹಳಷ್ಟು ಕೊಟ್ಟಿತು. ಈಗ ನಮ್ಮೆಲ್ಲ ಸಾಧಕರಿಗೂ ಇದೇ ರೀತಿ ಬಹಳಷ್ಟು ಸಿಗಲಿದೆ. ಎಲ್ಲಿ ಷಡ್‌ರಿಪುಗಳಿವೆಯೋ, ಅಲ್ಲಿ ಮಾಯೆ ಇದೆ ಮತ್ತು ಯಾವುದು ನಿರ್ವಿಕಾರವಾಗಿದೆಯೋ, ಅದುವೇ ಅವತಾರವಾಗಿದೆ. ಆದುದರಿಂದ ಷಡ್ರಿಪುಗಳಿಗೆ(ಮಾಯೆಗೆ) ಬಲಿ ಬೀಳದೇ ನಿರ್ವಿಕಾರವಾದಂತಹ ಅವತಾರಿ ಶ್ರೀ ಗುರುಗಳ ಚರಣಗಳಲ್ಲಿ ಸಮರ್ಪಿತರಾಗೋಣ !

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬), ದೆಹಲಿ (೧೨.೩.೨೦೨೨)