ಪಾಕಿಸ್ತಾನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗಿಲಗಿಟ – ಬಾಲ್ಟಿಸ್ತಾನ್‌ಅನ್ನು ಚೀನಾಗೆ ನೀಡುವ ತಯಾರಿಯಲ್ಲಿ !

ಸಾಲ ತೀರಿಸುವುದಕ್ಕಾಗಿ ದಿವಾಳಿಯಾಗಿರುವ ಪಾಕಿಸ್ತಾನ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ

ಇಸ್ಲಾಮಾಬಾದ (ಪಾಕಿಸ್ತಾನ) – ದೇಶದ ಮೇಲೆ ಹೆಚ್ಚುತ್ತಿರುವ ಸಾಲ ತೀರಿಸುವುದಕ್ಕಾಗಿ ಪಾಕಿಸ್ತಾನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲಗಿಟ – ಬಾಲ್ಟಿಸ್ತಾನ್ ಈ ಪ್ರದೇಶ ಚೀನಾಗೆ ಬಾಡಿಗೆಗೆ ನೀಡುವ ಸಾಧ್ಯತೆಯಿದೆ, ಎಂದು ‘ಕಾರಾಕೋರಂ ನ್ಯಾಷನಲ್ ಮೂವ್ಮೆಂಟ್’ನ ಅಧ್ಯಕ್ಷ ಮುಮ್ತಾಜ್ ಇವರು ಹೇಳಿದರು.

ಅವರು ಮಾತು ಮುಂದುವರೆಸುತ್ತಾ, ಗಿಲಗಿಟ – ಬಾಲ್ಟಿಸ್ತಾನ್ ಪ್ರದೇಶ ಭವಿಷ್ಯದಲ್ಲಿ ಯುದ್ಧಭೂಮಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪಾಕಿಸ್ತಾನವು ಚೀನಾಗೆ ಗಿಲಗಿಟ – ಬಾಲ್ಟಿಸ್ತಾನ್ ನೀಡಿದರೆ ಆಗ ಚೀನಾದಿಂದ ಪಾಕಿಸ್ತಾನಕ್ಕೆ ಹೆಚ್ಚಿನ ಸಹಾಯ ಸಿಗುವ ಸಾಧ್ಯತೆ ಇದೆ; ಆದರೆ ಈ ನಿರ್ಣಯ ಪಾಕಿಸ್ತಾನಕ್ಕೆ ತೊಂದರೆ ಆಗಬಹುದು; ಕಾರಣ ಚೀನಾದ ಪ್ರಭಾವ ಹೆಚ್ಚಾಗುವಂತಹ ಯಾವುದೇ ಘಟನೆ ಅಮೇರಿಕಾವು ಆಗಲು ಬಿಡುವುದಿಲ್ಲ. ಅಮೇರಿಕಾ ಭವಿಷ್ಯದಲ್ಲಿ ಜಾಗತಿಕ ಬ್ಯಾಂಕ, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ಅಂತರರಾಷ್ಟ್ರೀಯ ಸಂಘಟನೆಗಳ ಮೂಲಕ ಪಾಕಿಸ್ತಾನವನ್ನು ಕಪ್ಪು ಸೂಚಿಗೆ ಸೇರಿಸಬಹುದು ಎಂದು ಹೇಳಿದರು.

ಗಿಲಗಿಟ – ಬಾಲ್ಟಿಸ್ತಾನದ ಸ್ಥಿತಿ ಶೋಚನೀಯ

ಪಾಕಿಸ್ತಾನದ ಪ್ರಸಾರ ಮಾಧ್ಯಮದ ವಾರ್ತೆಯ ಪ್ರಕಾರ ಗಿಲಗಿಟ -ಬಾಲ್ಟಿಸ್ತಾನದ ಜನಸಂಖ್ಯೆಯು ಇಳಿಕೆಯಾಗುತ್ತಿದೆ. ಸಕ್ಷಮ ಜನರು ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ. ಸಂಪೂರ್ಣ ಪಾಕಿಸ್ತಾನದಲ್ಲಿ ಎಷ್ಟು ಆತ್ಮಹತ್ಯೆ ನಡೆಯುತ್ತವೆ ಅದರಲ್ಲಿ ಶೇ. ೯ ರಷ್ಟು ಆತ್ಮಹತ್ಯೆ ಗಿಲಗಿಟ – ಬಾಲ್ಟಿಸ್ಥಾನದಲ್ಲಿ ಆಗುತ್ತವೆ. ಅಲ್ಲಿ ಕೇವಲ ೨ ತಾಸು ವಿದ್ಯುತ್ ಪೂರೈಕೆ ಲಭ್ಯವಿರುತ್ತದೆ. ಜೊತೆಗೆ ಇತರ ಸೌಲಭ್ಯಗಳ ಕೊರತೆ ಇದೆ.

ಸಂಪಾದಕೀಯ ನಿಲುವು

ಹೀಗಾದರೆ ಭಾರತಕ್ಕೆ ಚೀನಾದಿಂದ ಮೊದಲೇ ಇರುವ ಅಪಾಯ ಇನ್ನೂ ಹೆಚ್ಚಾಗಬಹುದು. ಈ ರೀತಿ ಕಿತಾಪತಿ ಪಾಕಿಸ್ತಾನಕ್ಕೆ ಭಾರತ ಹೇಗೆ ಪಾಠ ಕಲಿಸುವುದು ?