ಹೆಚ್ಚುತ್ತಿರುವ ಬಲಾತ್ಕಾರದ ಘಟನೆಗಳಿಂದಾಗಿ ಪಾಕಿಸ್ತಾನದ ಪಂಜಾಬ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ !

ಬಲಾತ್ಕಾರದ ಘಟನೆಗಳಿಂದಾಗಿ ತುರ್ತು ಪರಿಸ್ಥಿತಿ ಹೇರಬೇಕಾಯಿತು ಎಂದು ಪಾಕಿಸ್ಥಾನವು ತೋರಿಸಿಕೊಟ್ಟಿದೆ ! ಭಾರತದಲ್ಲಿಯ ಪಾಕಿಸ್ತಾನ ಪ್ರೇಮಿ ಈ ವಿಷಯದಲ್ಲಿ ಹೇಳುವರೇ ?

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ ಪ್ರಾಂತ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೆಲೆ ಸತತವಾಗಿ ಬಲಾತ್ಕಾರದ ಘಟನೆಗಳು ಘಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪ್ರದೇಶದ ಗೃಹ ಸಚಿವ ಅತಾ ತರಾರ ಇವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಪಂಜಾಬನಲ್ಲಿ ಪ್ರತಿದಿನ ೪-೫ ಬಲಾತ್ಕಾರದ ಘಟನೆಗಳು ಬೆಳಕಿಗೆ ಬರುತ್ತಿವೆ. ಅದರ ಪರಿಹಾರದ ಬಗ್ಗೆ ವಿಚಾರವನ್ನು ಮಾಡುತ್ತಿದ್ದೇವೆ. ಸಮಾಜ ಮತ್ತು ಸರಕಾರಿ ಅಧಿಕಾರಿಗಳಿಗೆ ಇದು ಗಂಭಿರ ಸೂತ್ರವಾಗಿದೆ. ಬಲಾತ್ಕಾರ ಘಟನೆಗಳನ್ನು ತಡೆಯಲು ತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರ ಕೈಗೊಳ್ಳುವದು ನಮಗೆ ಕಡ್ಡಾಯಯವಾಗಿತ್ತು. ಇಂತಹ ಘಟನೆಗಳ ಬಗ್ಗೆ ನಾಗರಿಕರು, ಸಂಘಟನೆಗಳು, ಮಹಿಳಾ ಸಂಘಟನೆಗಳು, ಶಿಕ್ಷಕರು ಮತ್ತು ನ್ಯಾಯವಾದಿಗಳ ಸಲಹೆ ಪಡೆಯುವವರಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನವು ಇಸ್ಲಾಮಿಕ ರಾಷ್ಟ್ರವಾಗಿರುವಾಗ ಷರಿಯಾ ಕಾನೂನಿನ ಪ್ರಕಾರ ಬಲಾತ್ಕಾರ ಮಾಡುವವರನ್ನು ಸೊಂಟದವರೆಗೆ ಹೂತುಹಾಕುವ ಮತ್ತು ಅವರ ಮೇಲೆ ಕಲ್ಲು ಎಸೆದು ಕೊಲ್ಲುವ ಶಿಕ್ಷೆ ಏಕೆ ನೀಡುವುದಿಲ್ಲ ?, ಇಂತಹ ಪ್ರಶ್ನೆ ಅನೇಕರಿಗೆ ಬರಬಹುದು !