ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂತರ ರಕ್ಷಣೆಯ ಕಾರ್ಯ ಮಾಡುತ್ತದೆ ! – ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಶಸ್ತ್ರಗಳ ಅಗತ್ಯವಿದೆ ಎಂದು ಸ್ಪಷ್ಟ ಪಡಿಸಿದರು !

ಚಿತ್ರಕೂಟ (ಉತ್ತರಪ್ರದೇಶ) – ಸಂತರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತುಂಬಾ ವ್ಯತ್ಯಾಸವಿಲ್ಲ. ಸಂತರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ ಹಾಗೂ ಸಂಘದ ಕಾರ್ಯಕರ್ತರು ಹೊರಗೆ ಉಳಿದು ಅವರ ಸುರಕ್ಷತೆಯಲ್ಲಿ ತೊಡಗಿರುತ್ತಾರೆ. ಸಂತರ ಕಾರ್ಯದಲ್ಲಿ ಯಾವುದೇ ಅಡಚಣೆ ಬರಬಾರದು, ಆದ್ದರಿಂದ ಕೈಯಲ್ಲಿ ದಂಡ ಹಿಡಿದು ಸಂತರ ಸಂರಕ್ಷಣೆ ಮಾಡುವುದು, ಇದು ಸಂಘದ ಕೆಲಸವಾಗಿದೆ. ನಮಗೆ ಶಸ್ತ್ರಗಳ ಅಗತ್ಯವಿದೆ. ಇದಲ್ಲದೆ ಅದನ್ನು ಉಪಯೋಗಿಸುವ ವಿಚಾರ ಕೂಡ ರಾಮನದೇ ಆಗಿರಬೇಕು, ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಇಲ್ಲಿಯ ಒಂದು ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಮಾಡಿದರು.

ಪ.ಪೂ. ಸರಸಂಘಚಾಲಕರು ಮಾತು ಮುಂದುವರೆಸಿ,

೧. ಯಾವಾಗ ಸತ್ಯದ ಸಮಯ ಬರುತ್ತದೆ, ಆಗ ಸಂತರು ಧೈರ್ಯದಿಂದ ಮಾತನಾಡುತ್ತಾರೆ. ಸಂತರ ದೈವಿ ವಿಚಾರ ಕೇಳಿದ ನಂತರ ಅವರ ಶಬ್ದಗಳು ಕಹಿಯಾದ ಪುಡಿಯಂತೆ ಇದ್ದರೂ ಜೀವನ ಸುಧಾರಿಸುತ್ತದೆ.

೨. ಕೆಲವು ಶಕ್ತಿಗಳು ಭಾರತದಲ್ಲಿ ದಬ್ಬಾಳಿಕೆಯ ಪ್ರಯತ್ನ ಮಾಡುತ್ತಿವೆ; ಆದರೆ ಸತ್ಯವನ್ನು ಎಂದಿಗೂ ಹತ್ತಿಕ್ಕಲು ಸಾಧ್ಯವಿಲ್ಲ.

೩. ಸನಾತನ ಧರ್ಮದ ಅನುಯಾಯಿಗಳು ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ವಿದೇಶದಲ್ಲಿ ಕೂಡ ಸನಾತನ ಧರ್ಮವನ್ನು ಗೌರವಿಸುತ್ತಾರೆ. ಕರ್ತವ್ಯದ ಮಾರ್ಗಕ್ಕೆ ಅಂಟಿಕೊಂಡಿರಿ ಮತ್ತು ಸತ್ಯಕ್ಕಾಗಿ ಕಾರ್ಯನಿರತವಾಗಿರಿ. ಅಸತ್ಯ ಕೆಲವು ಕಾಲ ಗೊಂದಲ ಸೃಷ್ಟಿಸಬಹುದು; ಆದರೆ ವಿಜಯ ಸತ್ಯದ್ದೇ ಆಗುವುದು.

೪. ಪ್ರತಿಯೊಂದು ಕುಟುಂಬದಲ್ಲಿ ರಾಷ್ಟ್ರವಾದ ಮತ್ತು ಐಕ್ಯತೆಯ ಭಾವನೆ ಜಾಗೃತಗೊಳಿಸಿದರೆ ದೇಶ ಸುದೃಢವಾಗುವುದು ಎಂದು ಹೇಳಿದರು.