‘ಜಮೀಯತ್ ಉಲೇಮಾ-ಎ-ಹಿಂದ್’ ಹೇಳಿಕೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಶ್ರೀ. ಆನಂದ ಜಖೋಟಿಯಾ, ಹಿಂದೂ ಜನಜಾಗೃತಿ ಸಮಿತಿ

‘ದೇಶವನ್ನು ಛಿದ್ರಗೊಳಿಸಲು ಜಮೀಯತ್ ಉಲೇಮಾ-ಎ-ಹಿಂದ್ ಪ್ರಯತ್ನಿಸುತ್ತಿದೆಯೇ ?’ ಎಂಬ ವಿಷಯದ ಕುರಿತು ವಿಶೇಷ ಸಂವಾದ !

ಶ್ರೀ. ಆನಂದ ಜಖೋಟಿಯಾ

೧೯೧೯ ರಲ್ಲಿ ಸ್ಥಾಪನೆಯಾದ ‘ಜಮಿಯತ್ ಉಲೇಮಾ-ಎ-ಹಿಂದ್’ ಈ ಸಂಘಟನೆಯು ಭಾರತದ ವಿಭಜನೆ ಮತ್ತು ಪಾಕಿಸ್ತಾನದ ನಿರ್ಮಾಣವನ್ನು ಬಹಿರಂಗವಾಗಿ ಬೆಂಬಲಿಸಿತ್ತು. ನಂತರ ಪಾಕಿಸ್ತಾನ ನಿರ್ಮಿತಿಯಾದ ನಂತರ ಇದೇ ‘ಜಮೀಯತ್ ಉಲೇಮಾ-ಎ-ಹಿಂದ್’ ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲಿಯೇ ಇದ್ದು ಇಂದು ಹಿಂದೂಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡುತ್ತಿದೆ. ಮುಸ್ಲಿಂ ಭಯೋತ್ಪಾದಕರಿಗೆ ನೆರವು ನೀಡುವ ‘ಜಮಿಯತ್ ಉಲೇಮಾ-ಎ-ಹಿಂದ್’ ಪ್ರತಿ ವರ್ಷ ಲಕ್ಷಾಂತರ ಯುವಕರ ಸೈನ್ಯವನ್ನು ನಿರ್ಮಿಸುತ್ತಿದೆ ಎಂಬ ವಾರ್ತೆಗಳು ಪತ್ರಿಕೆಗಳಲ್ಲಿ ಬರುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ‘ಜಮೀಯತ್ ಉಲೇಮಾ-ಎ-ಹಿಂದ್’ ಮತ್ತು ಇತರ ಸಂಘಟನೆಗಳ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಆನಂದ ಜಖೋಟಿಯಾ ಆಗ್ರಹಿಸಿದ್ದಾರೆ. ‘ದೇಶವನ್ನು ಛಿದ್ರಗೊಳಿಸಲು ಜಮೀಯತ್ ಉಲೇಮಾ-ಎ-ಹಿಂದ್ ಪ್ರಯತ್ನಿಸುತ್ತಿದೆಯೇ ?’ ಈ ಕುರಿತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಆನ್‌ಲೈನ್’ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

೧೯೪೭ ರಲ್ಲಿ ಆದಂತೆ ದೇಶದ ವಿಭಜನೆ ಆಗಲು ಬಿಡುವುದಿಲ್ಲ ! – ಶ್ರೀ. ವಿನೋದ ಬನ್ಸಾಲ್, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್

ಶ್ರೀ. ವಿನೋದ ಬನ್ಸಲ್

‘ಜಮೀಯತ್ ಉಲೇಮಾ-ಎ-ಹಿಂದ್’ನಂತಹ ಸಂಘಟನೆಗಳು ಒಂದೆಡೆ ‘ಈ ದೇಶ ನಮ್ಮದು ಎಂದು ಇತರರಿಗೆ ತೋರಿಸಲು ಹೇಳುತ್ತವೆ; ಆದರೆ ಮತ್ತೊಂದೆಡೆ, ಈ ದೇಶದ ಕಾನೂನು ಮತ್ತು ಸಂವಿಧಾನವನ್ನು ಪರಿಗಣಿಸದೆ ಷರಿಯಾ ಕಾನೂನು, ತ್ರಿವಳಿ ತಲಾಕ, ಹಲಾಲಾ ಇತ್ಯಾದಿಗಳನ್ನು ಅವರಿಗೆ ಮುಂದುವರಿಸಬೇಕಿದೆ. ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ವಿರೋಧಿಸಲಾಗುತ್ತಿದೆ. ದೇಶ ವಿಭಜನೆಯನ್ನು ಬೆಂಬಲಿಸುವವರು ಈಗ ಮತ್ತೆ ದೇಶ ವಿಭಜನೆಯ ಬಗ್ಗೆ ಮಾತನಾಡುತ್ತಿದ್ದರೂ, ಇದು ೧೯೪೭ ರ ವರ್ಷವಲ್ಲ, ರಾಷ್ಟ್ರೀಯವಾದಿ ಸಿದ್ಧಾಂತದ ಬಲಿಷ್ಠ ಭಾರತ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು.

ಅಲ್ಪಸಂಖ್ಯಾತರ ದ್ವಂದ್ವ ನಿಲುವು – ಶ್ರೀ. ಅಮಿತ ಚಿಮನಾನಿ, ಸಿಂಧಿ ಸಮುದಾಯದ ಅಧ್ಯಕ್ಷರು, ಛತ್ತೀಸ್‌ಗಡ

ಶ್ರೀ. ಅಮಿತ ಚಿಮನಾನಿ

‘ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ; ಆದರೆ ಶಾಹಿನಬಾಗ್‌ನಲ್ಲಿ ಆಂದೋಲನ ಮಾಡಿ ರಸ್ತೆಗಳನ್ನು ತಡೆಗಟ್ಟುತ್ತಾರೆ. ಈ ದೇಶದಲ್ಲಿ ಸಂವಿಧಾನ ಮತ್ತು ಕಾನೂನುಗಳನ್ನು ಒಪ್ಪುವುದಿಲ್ಲ ಮತ್ತು ಇನ್ನೊಂದೆಡೆ ನಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಕೂಗಾಡುತ್ತಿದ್ದಾರೆ. ಇದನ್ನು ಖಂಡಿಸಬೇಕು’.