ಮಹಾಕುಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಭೇಟಿ

ಪ್ರಯಾಗರಾಜ್, ಜನವರಿ 17 (ಸುದ್ದಿ.) – ದೇವಾಲಯ ಸರಕಾರಿಕರಣ, ಕ್ಷೀಣಿಸುತ್ತಿರುವ ಹಿಂದೂ ಜನಸಂಖ್ಯೆ, ವಕ್ಫ್ ಮಂಡಳಿ, ಬಾಂಗ್ಲಾದೇಶಿ ಒಳನುಸುಳುವಿಕೆ ಮುಂತಾದ ಹಿಂದೂ ಧರ್ಮದ ಮೇಲಿನ ಆಘಾತಗಳ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಶ್ರೀ. ಮಿಲಿಂದ್ ಪರಾಂಡೆ ವ್ಯಕ್ತಪಡಿಸಿದರು. ಹಿಂದೂ ಧರ್ಮ ಎದುರಿಸುತ್ತಿರುವ ಈ ಗಂಭೀರ ಪರಿಸ್ಥಿತಿಯನ್ನು ಬದಲಾಯಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಪ್ರಯಾಗರಾಜ್‌ನಲ್ಲಿ ವಿಹಿಂಪ ಆಯೋಜಿಸಿದ್ದ ಪ್ರದರ್ಶನಕ್ಕೆ ಹಿಂದೂ ಜನಜಾಗೃತಿ ಸಮಿತಿಯ ನಿಯೋಗವೊಂದು ಇತ್ತೀಚೆಗೆ ಭೇಟಿ ನೀಡಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಂಘಟಕರಾದ ಶ್ರೀ. ಸುನಿಲ್ ಘನವಟ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ಸಮನ್ವಯಕ ಶ್ರೀ. ಆನಂದ್ ಜಖೋಟಿಯಾ. ಸಮಿತಿಯ ಶ್ರೀ. ಸತೀಶ ಸೋನಾರ್ ಮತ್ತು ಶ್ರೀ. ರಾಜೇಶ್ ಉಮರಾಣಿ ಉಪಸ್ಥಿತರಿದ್ದರು.