ಇಮ್ರಾನ್ ಖಾನ್ ಗೆ 14 ವರ್ಷ ಮತ್ತು ಪತ್ನಿ ಬುಶ್ರಾಗೆ 7 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್ (ಪಾಕಿಸ್ತಾನ) – ‘ಅಲ್ ಖಾದಿರ್ ಟ್ರಸ್ಟ್’ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇಮ್ರಾನ್ ಖಾನ್‌ಗೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇವರಿಬ್ಬರ ಮೇಲೆ ರಾಷ್ಟ್ರೀಯ ಖಜಾನೆಗೆ 500 ಕೋಟಿ ಪಾಕಿಸ್ತಾನಿ ರೂಪಾಯಿಗಳ ನಷ್ಟ ಆಗಿರುವ ಆರೋಪವಿದೆ. ಇಮ್ರಾನ್ ಖಾನ್ ಅವರನ್ನು ಆಗಸ್ಟ್ 2023 ರಿಂದ ಅದಯಾಲಾ ಜೈಲಿನಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ಜೈಲಿನಲ್ಲಿ ತಾತ್ಕಾಲಿಕ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ.