‘ಕುಂಭಮೇಳ ಮೂಢನಂಬಿಕೆ’ ಎಂದು ಹೇಳುವುದರ ಹಿಂದೆ ನಾಸ್ತಿಕರ ಪಿತೂರಿ ! – ಸುನಿಲ್ ಘನವಟ್, ಹಿಂದೂ ಜನಜಾಗೃತಿ ಸಮಿತಿ

ಸಂತರನ್ನು ವಿರೋಧಿಸುವವರನ್ನು ತಡೆಯಲು ಆಡಳಿತ ಕ್ರಮ ಕೈಗೊಳ್ಳಬೇಕು !

ಪ್ರಯಾಗರಾಜ್, ಜನವರಿ 17 (ಸುದ್ದಿ.) – ನಾಸ್ತಿಕರು ಮತ್ತು ಜಾತ್ಯತೀತರು ಕುಂಭಮೇಳಕ್ಕೆ ಬಂದು ಕೋಟ್ಯಂತರ ಹಿಂದೂ ಭಕ್ತರ ಶ್ರದ್ಧೆಯನ್ನು ಅವಮಾನಿಸುತ್ತಿದ್ದಾರೆ. ಅವರು ದೇವರುಗಳನ್ನು ಗೇಲಿ ಮಾಡುತ್ತಿದ್ದಾರೆ. ಕೋಟ್ಯಂತರ ಭಕ್ತರು ಅಮೃತ ಸ್ನಾನ ಮಾಡಲು ಇಲ್ಲಿಗೆ ಬರುವಾಗ, ನಾಸ್ತಿಕರು ಹಿಂದೂ ವಿರೋಧಿ ಪ್ರಚಾರವನ್ನು ಹರಡಲು ಇಲ್ಲಿಗೆ ಬರಲು ಎಷ್ಟು ಧೈರ್ಯ ಹೇಗೆ ಬರುತ್ತದೆ ? ಇದು ಪಿತೂರಿಯಲ್ಲವೇ? ಕುಂಭಮೇಳದಲ್ಲಿ ಗೊಂಧಲ ಸೃಷ್ಟಿಸಲು ಅವರು ಏನಾದರೂ ಯೋಜನೆ ಮಾಡಿದ್ದಾರೆಯೇ ? ಕುಂಭಮೇಳ ಆಡಳಿತವು ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ಅವರಿಗೆ ಇಲ್ಲಿ ಇರಲು ಅವಕಾಶ ನೀಡಬಾರದು. ನಾಗಾ ಸಾಧುಗಳು ತಮ್ಮದೇ ಆದ ರೀತಿಯಲ್ಲಿ ನಾಸ್ತಿಕರನ್ನು ವಿರೋಧಿಸಿದ್ದಾರೆ; ಆದರೆ, ಸಂತರನ್ನು ವಿರೋಧಿಸುವ ಸಮಯ ಬರದಂತೆ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ್ ರಾಜ್ಯಗಳ ಸಂಘಟಕ ಶ್ರೀ. ಸುನಿಲ್ ಘನವಟ್ ಇವರು ಹೇಳಿದರು.

ಸಧ್ಯ ತೀರ್ಥರಾಜ್ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಜನವರಿ 16 ರಂದು ನಾಸ್ತಿಕರು ಕುಂಭಮೇಳವು ಮೂಢನಂಬಿಕೆ ಎಂದು ಪ್ರಚಾರ ಮಾಡುತ್ತಿದ್ದರು. ಇದು ಗಮನಕ್ಕೆ ಬಂದ ತಕ್ಷಣ, ನಾಗಾ ಸಾಧುಗಳು ನಾಸ್ತಿಕರನ್ನು ಥಳಿಸಿದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಶ್ರೀ. ಸುನಿಲ್ ಘನವಟ್ ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, “ಮಹಾಕುಂಭಮೇಳವು ಕೋಟ್ಯಂತರ ಭಕ್ತರ ಶ್ರದ್ಧಾಸ್ಥಾನವಾಗಿದೆ.” ಹೀಗಿರುವಾಗ ಯಾರೋ ಒಬ್ಬರು ಇಲ್ಲಿಗೆ ಬಂದು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಕುಂಭಮೇಳವು ಮೂಢನಂಬಿಕೆ ಎಂದು ಅವರು ಹೇಳುತ್ತಿದ್ದಾರೆ. ಇದನ್ನು ಹೇಳಿದ ನಂತರ, ನಾಗಾ ಸಾಧುಗಳು ಮತ್ತು ಇಲ್ಲಿನ ಇತರ ಸಂತರು ಇದನ್ನು ತಮ್ಮದೇ ಆದ ರೀತಿಯಲ್ಲಿ ವಿರೋಧಿಸಿದ್ದಾರೆ. ಪ್ರಶ್ನೆ ಏನೆಂದರೆ, ಕೋಟ್ಯಂತರ ಭಕ್ತರು ಭಾಗವಹಿಸುವ ಕುಂಭಮೇಳವನ್ನು ಮೂಢನಂಬಿಕೆ ಎಂದು ಹೇಗೆ ಹೇಳಲು ಸಾಧ್ಯ ? ಬಕ್ರಿ ಈದ್ ದಿನದಂದು ಅಲ್ಲಿಗೆ ಹೋಗಿ ಯಾರೂ ಬಕ್ರಿ ಈದ್ ಒಂದು ಮೂಢನಂಬಿಕೆ ಎಂದು ಹೇಳುವುದಿಲ್ಲ. ಕ್ರಿಸ್‌ಮಸ್ ದಿನದಂದು ಮೇಣದಬತ್ತಿಯನ್ನು ಬೆಳಗಿಸಿದ ನಂತರ ಯಾರೂ “ಇದು ಮೂಢನಂಬಿಕೆ” ಎಂದು ಹೇಳುವುದಿಲ್ಲ; ಆದರೆ ಕುಂಭಮೇಳಕ್ಕೆ ಬಂದು ಹಿಂದೂ ಧರ್ಮದ ವಿರುದ್ಧ ವಿಷಕಾರುತ್ತಿದ್ದಾರೆ.” ಎಂದು ಹೇಳಿದರು.