Britain Grooming Gang : ಪಾಕಿಸ್ತಾನಿ ಮುಸಲ್ಮಾನರ `ಗ್ರೂಮಿಂಗ ಗ್ಯಾಂಗ’ ನನ್ನ ಮೇಲೆ 1000 ಕ್ಕೂ ಹೆಚ್ಚು ಬಾರಿ ಬಲಾತ್ಕಾರ : ತನ್ನ ನೋವನ್ನು ತೋಡಿಕೊಂಡ ಬ್ರಿಟಿಷ ಸಂತ್ರಸ್ತ !

ಜಿಹಾದಿಗಳ ಕ್ರೂರ ಮತ್ತು ವಿಕೃತ ಮನಸ್ಥಿತಿ!

(ಟಿಪ್ಪಣೆ: ‘ಗ್ರೂಮಿಂಗ್ ಗ್ಯಾಂಗ್’ ಎಂದರೆ ಚಿಕ್ಕ ಹುಡುಗಿಯರು ಅಥವಾ ಯುವತಿಯರನ್ನು ತನ್ನ ಜಾಲಕ್ಕೆ ಸೆಳೆದು, ಲೈಂಗಿಕ ಕಿರುಕುಳ ನೀಡುವ ಗ್ಯಾಂಗ್ ! )

ಲಂಡನ – ಪಾಕಿಸ್ತಾನಿ ಪುರುಷರ ಒಂದು `ಗ್ರೂಮಿಂಗ ಗ್ಯಾಂಗ’ ಓರ್ವ ಬ್ರಿಟಿಶ ಹುಡುಗಿಯ ಮೇಲೆ 1 ಸಾವಿರಕ್ಕೂ ಹೆಚ್ಚು ಬಾರಿ ಬಲಾತ್ಕಾರ ಎಸಗಿದೆ. ಆಕೆಯನ್ನು ‘ಗೋರಿ ಮೇಮ್’ (ಬಿಳಿ ಮಹಿಳೆ) ಎಂದು ಕರೆದು ಕಿರುಕುಳ ನೀಡಲಾಯಿತು. ಬ್ರಿಟಿಷ್ ಸುದ್ದಿ ವಾಹಿನಿಯೊಂದು ಸಂತ್ರಸ್ತ ಹುಡುಗಿಯ ನೋವನ್ನು ವಿವರಿಸಿದೆ.

1. ಸಂತ್ರಸ್ತ ಹುಡುಗಿಯು ಕಾಲೇಜಿನಲ್ಲಿ ಓದುತ್ತಿದ್ದಾಗ, ಅವಳಿಗೆ ಆಂಡ್ರಿಯಾ ಎಂಬ ಹುಡುಗಿಯನ್ನು ಭೇಟಿಯಾದಳು. ಅವಳು ಆಕೆಗೆ ಪಾಕಿಸ್ತಾನಿ ಮುಸ್ಲಿಂ ವ್ಯಕ್ತಿಗೆ ಪರಿಚಯಿಸಿದಳು. ಆತ ಒಂದು ಕಬಾಬ್ ಅಂಗಡಿಯಲ್ಲಿ(ಮಾಂಸಾಹಾರಿ ಪದಾರ್ಥದ ಅಂಗಡಿ) ಕೆಲಸ ಮಾಡುತ್ತಿದ್ದನು. ಅವಳು ನಿಯಮಿತವಾಗಿ ಕಬಾಬ್ ಅಂಗಡಿಗೆ ಹೋಗಲು ಪ್ರಾರಂಭಿಸಿದಳು. ಅವನು ಅವಳಿಗೆ ತಿನ್ನಲು ಕಬಾಬ್ ಮತ್ತು ಕುಡಿಯಲು ಮದ್ಯವನ್ನು ಉಚಿತವಾಗಿ ನೀಡುತ್ತಿದ್ದನು. ಇದಲ್ಲದೆ, ಅವನು ಉಚಿತ ಸಿಗರೇಟ್‌ಗಳನ್ನು ಸಹ ನೀಡುತ್ತಿದ್ದನು.

2. ತದ ನಂತರ ಆಂಡ್ರಿಯಾ ಅವಳಿಗೆ ಕೆಲವು ಪಾಕಿಸ್ತಾನಿ ಕಬಾಬ್ ಮಾರಾಟಗಾರರು ಇರುವಲ್ಲಿ ಕರೆದೊಯ್ದಳು. ಅಲ್ಲಿ 5-6 ಮುಸ್ಲಿಂ ಕಬಾಬ್ ಮಾರಾಟಗಾರರು ಆಕೆಯ ಮೇಲೆ ಅತ್ಯಾಚಾರ ಮಾಡಿದರು. ನಂತರ ‘ಗ್ರೂಮಿಂಗ ಗ್ಯಾಂಗ’ ಆಕೆಯನ್ನು ವಿವಿಧ ನಗರಗಳಿಗೆ ಕರೆದೊಯ್ದು ಅತ್ಯಾಚಾರ ಮಾಡಿತು.

3. ಆ ಗ್ಯಾಂಗ್ ಆಕೆಗೆ ಬೆದರಿಕೆ ಹಾಕುತ್ತಾ, ಅವಳ ಮೇಲೆ ಅತ್ಯಾಚಾರವನ್ನು ಮುಂದುವರೆಸಿತು. ಅವರು ಅವಳನ್ನು ‘ನಾಯಿ’ ಎಂದು ಬೈಯುತ್ತಾ ನಿಂದಿಸುತ್ತಿದ್ದರು. ಅವಳ ಹಿಂದೆ ಚಾಕುಗಳನ್ನು ಹಿಡಿದ ಗೂಂಡಾಗಳನ್ನು ಕಳುಹಿಸಲಾಗುತ್ತಿತ್ತು.

4. ಈ ಘಟನೆ ಬ್ರಿಟನ್‌ನ ಟೆಲ್ಫೋರ್ಡ್ ನಗರದಲ್ಲಿ ನಡೆದಿದೆ. 2022 ರಲ್ಲಿ, ಟೆಲ್ಫೋರ್ಡ್ ನಗರದಲ್ಲಿ ಒಂದು ‘ಗ್ರೂಮಿಂಗ್ ಗ್ಯಾಂಗ್’ ಬಗ್ಗೆ ನಡೆದ ತನಿಖೆಯು ಎಲ್ಲರಿಗೂ ಆಘಾತವನ್ನುಂಟು ಮಾಡಿತು. ಈ ತನಿಖಾ ವರದಿಯು ಇಲ್ಲಿ ಅನೇಕ ವರ್ಷಗಳಿಂದ 1 ಸಾವಿರಕ್ಕೂ ಹೆಚ್ಚು ಹುಡುಗಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಬಹಿರಂಗಪಡಿಸಿದೆ.

5. ಬ್ರಿಟನ್‌ನಲ್ಲಿ ಈ ಲೈಂಗಿಕ ದೌರ್ಜನ್ಯ 1980 ರ ದಶಕದಿಂದಲೂ ನಡೆಯುತ್ತಿತ್ತು ಮತ್ತು ಪಾಕಿಸ್ತಾನಿ `ಗ್ರೂಮಿಂಗ ಗ್ಯಾಂಗ್’ ನಿರಂತರವಾಗಿ ಈ ಹುಡುಗಿಯರನ್ನು ಗುರಿಯಾಗಿಸುತ್ತಿದ್ದವು.

6. ಬ್ರಿಟನನಲ್ಲಿ ಪಾಕಿಸ್ತಾನಿ ಮುಸ್ಲಿಮರು ಬ್ರಿಟಿಷ್ ಹುಡುಗಿಯರನ್ನು ಗ್ರೂಮಿಂಗ ಮಾಡುವ ಪ್ರಕಾರ ನಿರಂತರ ಮುಂದುವರಿದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಇಲಾನ್ ಮಸ್ಕ್ ಕೂಡ ಒತ್ತಾಯಿಸಿದ್ದಾರೆ. ಆದರೂ ಕೀರ್ ಸ್ಟಾರ್ಮರ್ ಅವರ ಸರಕಾರವು `ಗ್ರೂಮಿಂಗ’ ಪ್ರಕರಣಗಳನ್ನು ತನಿಖೆ ಮಾಡಲು ನಿರಾಕರಿಸಿದೆ ಮತ್ತು ಸಂಸತ್ತಿನಲ್ಲಿ ಈ ಪ್ರಸ್ತಾಪವನ್ನು ಸಹ ತಿರಸ್ಕರಿಸಿದೆ. (ಹಾಗೆ ಮಾಡುವುದು ಜಾತ್ಯತೀತತೆಯ ವೇಷ ಧರಿಸಿರುವ ಬ್ರಿಟನ್ ದ್ರೋಹ ಮಾಡಿಕೊಂಡಂತೆ ಆಗುವುದು ! – ಸಂಪಾದಕರು)