ಪ್ರಯಾಗರಾಜನಲ್ಲಿ ಜನವರಿ 20 ರಂದು ‘ನದಿ ಸಂವಾದ’ ಕಾರ್ಯಕ್ರಮದ ಆಯೋಜನೆ !

ಪ್ರಯಾಗರಾಜ ಕುಂಭ ಮೇಳ 2025

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರಿಗೆ ಆಹ್ವಾನ

ಎಡದಿಂದ ಜುಗುಲ ಕಿಶೋರ ತಿವಾರಿ, ಸದ್ಗುರು ಡಾ. ಚಾರುದತ್ತ ಪಿಂಗಳೆ, ಶ್ರೀ. ಜೀವಕಾಂತ ಶ್ರೀ. ಝಾ ಮತ್ತು ಶ್ರೀ. ಅರುಣ ಸಾಂಗ

ಶ್ರೀ ಸಚಿನ್ ಕೌಲಕರ, ವಿಶೇಷ ಪ್ರತಿನಿಧಿ, ಪ್ರಯಾಗರಾಜ

ಪ್ರಯಾಗರಾಜ, ಜನವರಿ 17 (ಸುದ್ದಿ.) – ನದಿ ಜೀವಂತವಾಗಿರುತ್ತದೆ. ನದಿಯೇ ಮನುಷ್ಯನಿಗೆ ಜೀವನದಲ್ಲಿ ಸಹಾಯ ಮಾಡುತ್ತದೆ. ನದಿಗಳು ಜೀವನ ಮತ್ತು ಪರಿಸರವನ್ನು ಪೋಷಿಸುತ್ತವೆ; ಆದರೆ, ಸದ್ಯದ ಸ್ಥಿತಿಯಲ್ಲಿ ನದಿಗಳ ಅವಸ್ಥೆ ಶೋಚನೀಯವಾಗಿದೆ. ಗಂಗಾಮಾತಾ ಮತ್ತು ನರ್ಮದಾ ಈ ನದಿಗಳ ಬಗ್ಗೆ ನಮಗೆ ವಿಶೇಷ ಶ್ರದ್ಧೆ ಇದೆ. ಆದರೂ ನದಿ ಮಾಲಿನ್ಯದ ಸಮಸ್ಯೆ ಮತ್ತು ಅದರ ಉಪಾಯಗಳ ಅನುಗುಣವಾಗಿ, ಜನವರಿ 20 ರಂದು ಬೆಳಿಗ್ಗೆ 11 ಗಂಟೆಗೆ ಮಹಾಕುಂಭದ ಸೆಕ್ಟರ 2ರಲ್ಲಿ ಗಂಗಾ ಪಂಡಾಲ, ಕಿಲಾ ರೋಡ, ಪೆರೇಡ ಮೈದಾನ, ಇಲ್ಲಿ ‘ನದಿ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದರಲ್ಲಿ ಸರಕಾರದ ವಿಷಯಗಳನ್ನು ಸರಕಾರದೊಂದಿಗೆ ಮತ್ತು ಸಮಾಜದ ವಿಷಯಗಳನ್ನು ಸಮಾಜದೊಂದಿಗೆ ಮಾಡುವ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ನದಿ ಸಂವಾದ ಕಾರ್ಯಕ್ರಮದ ಆಯೋಜಕರು ಮತ್ತು ಅಗ್ನಿಶಾಮಕ ಇಲಾಖೆಯ ಪೊಲೀಸ ಉಪ ಮಹಾನಿರ್ದೇಶಕ ಶ್ರೀ. ಜುಗುಲ ಕಿಶೋರ ತಿವಾರಿ ಇವರು ‘ಸನಾತನ ಪ್ರಭಾತ’ ದಿನಪತ್ರಿಕೆಯ ವರದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿಯನ್ನು ನೀಡಿದ್ದಾರೆ.

ಶ್ರೀ. ಜುಗುಲ ಕಿಶೋರ ತಿವಾರಿ ಮಾತು ಮುಂದುವರೆಸಿ, “ನದಿಗಳಿಗೆ ನಮ್ಮೊಂದಿಗೆ ಸಂವಹನ ನಡೆಸುವ ಇಚ್ಛೆಯಿದೆ. ನದಿಗಳೇ ಮನುಷ್ಯನಿಗೆ ಜೀವನ ಮತ್ತು ವೈಭವವನ್ನು ನೀಡಿವೆ. ನದಿಗಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ ಎಂಬುದನ್ನು ಸದ್ಗುರುಗಳು ಮತ್ತು ಸಂತರಿಂದ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಈ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕು.” ಎಂದು ಹೇಳೀದರು.

ಸದ್ಗುರು ಡಾ. ಚಾರುದತ್ತ ಪಿಂಗಳೆಯವರಿಗೆ ಆಹ್ವಾನ !

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಶ್ರೀ. ಜುಗುಲ ಕಿಶೋರ ಅವರು ಜನವರಿ 16 ರಂದು ಮಹಾಕುಂಭ ನಗರಿಯ ಸೆಕ್ಟರ್ 19, ಮೋರಿ-ಮುಕ್ತಿ ಮಾರ್ಗದಲ್ಲಿ ಸನಾತನದ ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರನ್ನು ಭೇಟಿಯಾಗಿ ಅವರೊಂದಿಗೆ ಸಂವಹನ ನಡೆಸಿದರು ಮತ್ತು ಹಾಗೆಯೇ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.