ಮನೆಯಲ್ಲಿನ ಹಿರಿಯರ ಮಹತ್ವವನ್ನು ಅರಿಯದಿರುವ ಯುವ ಪೀಳಿಗೆ !

ಪರಾತ್ಪರ ಗುರು ಡಾ. ಜಯಂತ ಆಠವಲೆ

‘ಬಳಸಿರಿ ಮತ್ತು ಎಸೆಯಿರಿ (Use and Throw)’ ಇದು ಯಾವ ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಯಾಗಿದೆಯೋ, ಅದನ್ನು ಈಗ ನಮ್ಮ ಅನೇಕ ಯುವಕರೂ ಮೈಗೂಡಿಸಿಕೊಂಡಿದ್ದಾರೆ. ಇದರಿಂದ ಯಾವ ತಾಯಿ-ತಂದೆ ಜನ್ಮ ನೀಡಿದರು, ಜನ್ಮದಿಂದ ಹಿಡಿದು ಸ್ವಾವಲಂಬಿ ಆಗುವವರೆಗೆ ಎಲ್ಲ ರೀತಿಯಿಂದ ಕಾಳಜಿಯನ್ನು ವಹಿಸಿದರು, ಉದಾ. ಕಾಯಿಲೆ ಬಿದ್ದಾಗ ಎಲ್ಲವನ್ನು ಮಾಡಿದರು, ಶಿಕ್ಷಣವನ್ನು ನೀಡಿದರು, ಅವರ ಬಗ್ಗೆ ಕೃತಜ್ಞತೆ ಅನಿಸದೇ ಇಂದಿನ ಆಂಗ್ಲಮಾನಸಿಕತೆಯ ಯುವಕರು ತಾಯಿ-ತಂದೆಯರನ್ನು ಅವರ ವೃದ್ಧಾಪ್ಯದಲ್ಲಿ ‘ಬಳಸಿರಿ ಮತ್ತು ಎಸೆಯಿರಿ’ ಈ ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಗನುಸಾರ ವೃದ್ಧಾಶ್ರಮದಲ್ಲಿ ಕಳುಹಿಸುತ್ತಿದ್ದಾರೆ ಅಥವಾ ಅವರನ್ನು ದುರ್ಲಕ್ಷಿಸುತ್ತಿದ್ದಾರೆ. ಇದರ ಪಾಪವನ್ನು ಅವರಿಗೆ ಅನೇಕ ಜನ್ಮಗಳ ವರೆಗೆ ಭೋಗಿಸಲೇ ಬೇಕಾಗುವುದು.’ – (ಪರಾತ್ಪರ ಗುರು) ಡಾ. ಆಠವಲೆ)

ಮಾನವನ ಗುಣಗಳು ತಮ್ಮ ಗುರುತನ್ನು ಮೂಡಿಸಿವೆ !

ಕಾಲದ ಅಖಂಡ ಮಹಾಪ್ರವಾಹದಲ್ಲಿ ಯಾವ ವಿಷಯಗಳು ನಿರ್ವಿವಾದವಾಗಿ ತಮ್ಮ ಅವಿಸ್ಮರಣೀಯ ಗುರುತನ್ನು ಮೂಡಿಸಿ ಹೋಗಿವೆಯೋ, ಅವುಗಳೆಂದರೆ ಮಾನವನ ಗುಣಗಳು ! ವಿಚಾರಗಳ ಪ್ರಾಮಾಣಿಕತೆ, ಅದರಂತೆ ಆಚಾರ, ಎಲ್ಲರ ಹಿತವನ್ನು ಗಮನದಲ್ಲಿಟ್ಟು ನಿರ್ಧರಿಸಿದ ‘ಶಿಷ್ಟಾಚಾರಗಳ’ ಮೇಲೆ ದೃಢ ಶ್ರದ್ಧೆ ಮತ್ತು ಸ್ಖಲನಶೀಲದಂತಹ ನೈಸರ್ಗಿಕ ಪ್ರವೃತ್ತಿಯ ಜೊತೆಗೆ ಸತತವಾಗಿ ಹೊರಾಡುವ ವೃತ್ತಿ ಈ ಎಲ್ಲ ಮಾನವನ ಗುಣಗಳು ಎಲ್ಲಿ ಒಟ್ಟಿಗೆ ಇರುತ್ತವೆಯೋ, ಅಲ್ಲಿ ಓರ್ವ ನಿಜವಾದ ಮನುಷ್ಯನು ಸಾಕಾರವಾಗುತ್ತಾನೆ !  ಅವನಿಗೆ ತನ್ನದೇ ಆದ ಒಂದು ವ್ಯಕ್ತಿತ್ವ ಮತ್ತು ಆ ವ್ಯಕ್ತಿಮತ್ವದಲ್ಲಿ ಪರಿಸ್ಥಿತಿಯ ಮೇಲೆ ಜಯಸಾಧಿಸುವ ಸಾಮರ್ಥ್ಯವಿರುತ್ತದೆ ! – ಶ್ರೀ. ರವೀಂದ್ರ ಪರೆತಕರ (ಸಂದರ್ಭ : ತ್ರೈಮಾಸಿಕ ‘ಪ್ರಜ್ಞಾಲೋಕ’)

ಈಗ ಯುವಕರಿಗೆ ಮನೆಯಲ್ಲಿರುವ ಹಿರಿಯರ ಮಹತ್ವವನ್ನು ಗಮನಕ್ಕೆ ತಂದುಕೊಡುವ ಸಮಯ ಬಂದಿದೆ !

ವಿಭಕ್ತ ಕುಟುಂಬದಿಂದ ಮಕ್ಕಳ ಮೇಲೆಯೂ ವಿಪರೀತ ಪರಿಣಾಮವಾಗಿದೆ. ಅದು ನಮ್ಮ ದೇಶದ ಭಾವೀ ಪೀಳಿಗೆಯ ಮೇಲೆ ಆಗಿದೆ. ಮನೆಯಲ್ಲಿ ಅಜ್ಜಿ-ಅಜ್ಜ ಇತರ ಸಂಬಂಧಿಕರು ಇರುವುದಿಲ್ಲ ಅಥವಾ ಅಲ್ಪ ಪ್ರಮಾಣದಲ್ಲಿರುತ್ತಾರೆ. ಯುವ ಮಕ್ಕಳಿಗೂ ತಂದೆ-ತಾಯಿ ಮನೆಯಲ್ಲಿ ಬೇಡವಾದ ವಸ್ತುಗಳಾಗಿರುತ್ತಾರೆ ಅಥವಾ ಬೇಡವೆನಿಸುತ್ತಾರೆ. ದೊಡ್ಡವರು (ಹಿರಿಯರು) ಮನೆಯಲ್ಲಿರುವುದರಿಂದ ಯಾವ ಸಂಯಮದಿಂದ ನಡೆದುಕೊಳ್ಳಬೇಕಾಗುತ್ತದೆಯೋ, ಬಂಧನದಲ್ಲಿ ಇರಬೇಕಾಗುತ್ತದೆಯೋ, ಅದು ಅವರಿಗೆ ಬೇಡಾಗಿದೆ. ಮದುವೆಯ ಸಮಯದಲ್ಲಿ ಕೆಲವು ಹುಡುಗಿಯರು, ‘ಮನೆಯಲ್ಲಿ ಡಸ್ಟಬಿನ್ (ಕಸದ ಬುಟ್ಟ್ಟಿಗಳು) ಎಷ್ಟಿವೆ ?’ ಎಂದು ಕೇಳುತ್ತಾರೆ. ‘ಡಸ್ಟಬಿನ್’ ಅಂದರೆ ವೃದ್ಧರು ! ಇತ್ತೀಚಿನ ಹುಡುಗಿಯರಿಗೆ ಮನೆಯಲ್ಲಿ ಅತ್ತೆ-ಮಾವ ಬೇಡವಾಗಿರುತ್ತಾರೆ. ಮಕ್ಕಳಿಗೂ ಸಂಸಾರದಲ್ಲಿ ತಾಯಿ-ತಂದೆ ಬೇಡವಾಗಿರುತ್ತಾರೆ. ಅವರ ಅನುಭವದ ಲಾಭ, ಮನೆಯಲ್ಲಿರುವುದರ ದೊಡ್ಡ ಆಧಾರ, ಅವರ ಪ್ರೀತಿ, ಮೊಮ್ಮಕ್ಕಳ ಮೇಲಾಗುವ ಸಂಸ್ಕಾರಗಳು ಇವೆಲ್ಲವೂಗಳನ್ನು ಯುವ ಪೀಳಿಗೆಯು ಕಳೆದುಕೊಳ್ಳುತ್ತಿದೆ. ಸದ್ಯದ ಯುವಪೀಳಿಗೆಗೆ ಪಾಲಕರ ಬಗ್ಗೆ ತಮ್ಮ ಏನಾದರೂ ಕರ್ತವ್ಯಗಳಿವೆ ಎಂಬ ಅರಿವೇ ಇಲ್ಲ. ಇಂತಹ ಸಂಸ್ಕಾರಗಳನ್ನು ಮಾಡಲು ಬಹುಶಃ ಅವರ ಪಾಲಕರೇ ಕಡಿಮೆ ಬೀಳುತ್ತಿದ್ದಾರೆ !